Home / ವಾರ್ತೆಗಳು (page 21)

ವಾರ್ತೆಗಳು

ಕೊರೋನ ಸಂಕಷ್ಟ ಹಿನ್ನೆಲೆ: ಮಡಿಕೇರಿಯ ಕ್ರೆಸ್ಸೆಂಟ್ ಶಾಲೆಯಿಂದ ಉಚಿತ ಶಿಕ್ಷಣ ಘೋಷಣೆ- ವಿಡಿಯೋ

ಮಡಿಕೇರಿ,ಜೂ.22: ಕೊರೋನಾ ವೈರಸ್ ಪರಿಣಾಮದಿಂದ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ ಮಡಿಕೇರಿಯ ಕ್ರೆಸ್ಸೆಂಟ್ ಶಾಲೆ ಎಲ್ಲಾ ವರ್ಗದ ಮಕ್ಕಳಿಗೆ ಈ ವರ್ಷ ಉಚಿತ ಪ್ರವೇಶಾತಿಯನ್ನು ಘೋಷಿಸಿದೆ. ಶಾಲೆಯ ಕಾರ್ಯದರ್ಶಿ ಗೋಳ್ತಮಜಲ್ ಹನೀಫ್ ರವರು ಮಲ್ನಾಡ್ ನ್ಯೂಸ್ ನೊಂದಿಗೆ ಮಾತಾನಾಡುತ್ತಾ ಶಾಲೆಯ ಶಿಕ್ಷಕರು ನಮಗೆ ಈ ನಿರ್ಣಯ ತೆಗೆದುಕೊಳ್ಳಲು ಪ್ರೋತ್ಸಾಹಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. Posted by Golthamajal Habib Mohammed Haneef on Sunday, June 21, …

Read More »

ವಿಜಯಪುರ: ಚನ್ನಮ್ಮ ವೃತ್ತಕ್ಕೆ ಕೋಟಿ ರೂ. ಬೆಲೆ ಬಾಳುವ ಆಸ್ತಿ ದಾನ ಮಾಡಿದ ಶೌಕತ್ ಅಲಿ

ವಿಜಯಪುರ, ಜೂ.16: ವಿಜಯಪುರ ಜಿಲ್ಲೆಯ ಸಿಂದಗಿಯ ಚನ್ನಮ್ಮ ವೃತ್ತಕ್ಕೆ ಶೌಕತ್ ಅಲಿ ಸುಂಬಡ್ ಎನ್ನುವವರು ತಮ್ಮ ಜಮೀನು ನೀಡಿ, ಈ ನೆಲದ ನಿಜ ಸೌಹಾರ್ದತೆ ಮೆರೆದಿದ್ದಾರೆ. ಶೌಕತ್ ಅಲಿ ಅವರು ಕೋಟಿ ಬೆಲೆ ಬಾಳುವ ಜಾಗವನ್ನು ಚನ್ನಮ್ಮ ವೃತ್ತಕ್ಕೆ ದಾನವಾಗಿ ನೀಡಿದ್ದು, ಆ ಜಾಗದಲ್ಲಿ ಕೋಟೆ ಮಾದರಿಯ ಕಟ್ಟಡದ ಜೊತೆಗೆ ಕಿತ್ತೂರು ಚನ್ನಮ್ಮಳ ಮೂರ್ತಿಯನ್ನು ಸ್ಥಾಪಿಸಲಾಗುತ್ತದೆ. ಚನ್ನಮ್ಮ ವೃತ್ತಕ್ಕೆ ಚಾಲನೆ ನೀಡಿದ ಪಂಚಮಸಾಲಿ ಪೀಠದ ಬಸವಜಯ ಮೃತ್ಯಂಜಯ ಶ್ರೀಗಳು, ಶೌಕತ್ …

Read More »

ಜೋಗಿಬೆಟ್ಟು: ಮೃತ ಯೋಧನಿಗೆ ರಿಫಾಯಿ ಜುಮಾ ಮಸೀದಿ ಎದುರು ಅಂತಿಮ ನಮನ

ಉಪ್ಪಿನಂಗಡಿ :  ಹೃದಯಾಘಾತದಿಂದ ಮೃತಪಟ್ಟ ಭಾರತೀಯ ಸೇನೆಯ ಯೋಧ ಸಂದೇಶ್ ಶೆಟ್ಟಿ (34) ಅವರಿಗೆ ರಿಫಾಯಿ ಜುಮಾ ಮಸೀದಿ ಜೋಗಿಬೆಟ್ಟು ಎದುರು ಮಸೀದಿಯ ಅಧ್ಯಕ್ಷರ ಸಮ್ಮುಖದಲ್ಲಿ ರಾಷ್ಟ್ರಧ್ವಜ ಹಿಡಿದು ಅಂತಿಮ ನಮನ ಸಲ್ಲಿಸಲಾಯಿತು. ರಜೆಯಲ್ಲಿ ಊರಿಗೆ ಬಂದಿದ್ದ ಅವರು ಸೋಮವಾರವಷ್ಟೇ ಕರ್ತವ್ಯಕ್ಕೆಂದು ಉತ್ತರ ಪ್ರದೇಶದ ಮಥುರಾಕ್ಕೆ ತೆರಳಿದ್ದರು. ಅಲ್ಲಿ ಕ್ವಾರೆಂಟೈನ್ ಕೇಂದ್ರದಲ್ಲಿ ಇರುವಾಗಲೇ ಸಂದೇಶ್ ಹೃದಯಾಘಾತವಾಗಿ ನಿಧನ ಹೊಂದಿದ್ದರು. ಕೃಪೆ: ವಾರ್ತಾ ಭಾರತಿ

Read More »

ಜಮಾಅತೆ ಇಸ್ಲಾಮೀ ಸಮಾಜ ಸೇವಾ ಘಟಕ ಉಳ್ಳಾಲ ವತಿಯಿಂದ ಮಾನವೀಯ ಸೇವೆ

ಉಳ್ಳಾಲ,ಜೂ.13: ಗ್ಯಾಂಗ್ರೀನ್(ಅಂಗ ಕೊಳೆತ) ರೋಗದಿಂದಾಗಿ ಕಾಲು ಕಳೆದುಕೊಂಡ ಉಳ್ಳಾಲದ ಸೋಮೇಶ್ವರ ನಿವಾಸಿ ಪುಷ್ಪಕಿರಣ್ ರವರ ಮನೆಗೆ ಉಳ್ಳಾಲ ಜಮಾಅತೆ ಇಸ್ಲಾಮೀ ಹಿಂದ್ ನ ಸಮಾಜ ಸೇವಾ ವಿಭಾಗದ ಸದಸ್ಯರು ದ್ವಿತೀಯ ಬಾರಿಗೆ ಭೇಟಿ ನೀಡಿದರು. ದಾನಿಗಳಿಂದ ಸಂಗ್ರಹಿಸಿದ 53000 ರೂಪಾಯಿ ಧನಸಹಾಯ ಹಾಗೂ 3000/- ರುಪಾಯಿಯ ರೇಷನ್ ಕಿಟ್‌ನ್ನು ನೀಡಿ ಸಾಂತ್ವಾನದ ಮಾತಿನ ಮೂಲಕ ಭರವಸೆಯನ್ನು ನೀಡಲಾಯಿತು. ಪುಷ್ಪಕಿರಣ್ ರವರಿಗೆ ಸಹಾಯ ನೀಡಿ ಸಹಕರಿಸಿದ ಎಲ್ಲಾ ದಾನಿಗಳಿಗೆ ಜಮಾಅತೆ ಇಸ್ಲಾಮೀ …

Read More »

ಜಮಾಅತೆ ಇಸ್ಲಾಮೀ-ಪೀಪಲ್ಸ್ ಫೌಂಡೇಶನ್ ವತಿಯಿಂದ ಕೇರಳ ಪ್ರವಾಹ ಪೀಡಿತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಸ್ವಾವಲಂಬಿ ಪಟ್ಟಣ ನಿರ್ಮಾಣ

ವಯನಾಡ್,ಜೂ.13: ಕೇರಳ ಪ್ರವಾಹದ ನಷ್ಟವನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಕೇರಳದ ಎನ್‌ಜಿಓ ಪೀಪಲ್ಸ್ ಫೌಂಡೇಶನ್, ವಯನಾಡ್ ಜಿಲ್ಲೆಯಲ್ಲಿ 1000 ಕ್ಕೂ ಹೆಚ್ಚು ಕುಟುಂಬಗಳಿನ್ನು ಪುನರ್ವಸತಿಗೊಳಿಸಲು ಯಶಸ್ವಿ ಮಾದರಿ ಪಟ್ಟಣವನ್ನು ರೂಪಿಸಿದ್ದು, ಇಂದು ಉದ್ಘಾಟನೆಗೊಂಡಿದೆ. ವಯನಾಡಿನ ಪೀಪಲ್ಸ್ ಫೌಂಡೇಶನ್‌ 2018 ಕೇರಳ ಪ್ರವಾಹ ಪೀಡಿತರಿಗೆ ಪುನರ್ವಸತಿ ಯೋಜನೆಯ ಭಾಗವಾಗಿ 25 ಮನೆಗಳು, ಪ್ರೀ-ಸ್ಕೂಲ್‌ಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಆಟದ ಮೈದಾನಗಳನ್ನು ಹೊಂದಿರುವ ‘ಪೀಪಲ್ಸ್ ವಿಲೇಜ್’ಎಂಬ ಸ್ವಾವಲಂಬಿ ಪಟ್ಟಣವನ್ನು ನಿರ್ಮಿಸಿದ್ದು,ನಿರಾಶ್ರಿತರ ಬಾಳಿಗೆ ಬೆಳಕನ್ನು …

Read More »

ಭೂಕುಸಿತದಿಂದ ತಾಯಿ, ಪತ್ನಿ-ಮಗುವನ್ನು ಕಳೆದುಕೊಂಡ ಶರತ್‌ಗೆ ಶಿಹಾಬ್ ತಂಙಳ್ ಕುಟುಂಬದಿಂದ ನೂತನ ಮನೆ ಹಸ್ತಾಂತರ

ಕೋಝೀಕೋಡ್,ಜೂ.11: ಕಳೆದ ವರ್ಷ ಆಗಸ್ಟ್‌ನಲ್ಲಿ ಇಲ್ಲಿನ ಕೊಟ್ಟಕ್ಕುನ್ನು ಎಂಬಲ್ಲಿ ನಡೆದ ಭೂ ಕುಸಿತದಲ್ಲಿ ಕುಟುಂಬ ಮತ್ತು ಮನೆಯನ್ನು ಕಳೆದುಕೊಂಡಿರುವ ಶರತ್‌ಗೆ ಪಾನಕ್ಕಾಡ್‌ನ ಪ್ರಸಿದ್ಧ ಶಿಹಾಬ್ ತಂಙಳ್ ಕುಟುಂಬವು ಬುಧವಾರ ನೂತನ ಮನೆಯನ್ನು ಹಸ್ತಾಂತರಿಸಿತು. ಶಿಹಾಬ್ ಕುಟುಂಬವು ಪನಕ್ಕಾಡ್ ಬಳಿಯ ಪಟ್ಟಾರ್ಕಡವಿನಲ್ಲಿ ನಿರ್ಮಿಸಿದ ಮನೆಯು ‘ಧಾರ್ಮಿಕ ಭಿನ್ನತೆಗಳಿಗಿಂತ ಮಾನವೀಯತೆಯೇ ಮೇಲು’ ಎಂಬ ಸುಂದರ ಕ್ಷಣಗಳಿಗೆ ಸಾಕ್ಷಿಯಾಯಿತು. ಕುಟುಂಬದ ಮುಖ್ಯಸ್ಥ ಸಯ್ಯದ್ ಹೈದರಾಲಿ ಶಿಹಾಬ್ ತಂಙಳ್, ಮನೆಯ ಕೀಲಿಯನ್ನು ಶರತ್‌ಗೆ ಹಸ್ತಾಂತರಿಸಿದರು. ದೀಪ …

Read More »

ಅಂತರ್ ಧರ್ಮೀಯ ಸಾಮರಸ್ಯಕ್ಕಾಗಿ ಇಕ್ಬಾಲ್ ಮುಲ್ಲಾರಿಗೆ ದೆಹಲಿ ಅಲ್ಪಸಂಖ್ಯಾತ ಆಯೋಗ ಪ್ರಶಸ್ತಿ

ನವದೆಹಲಿ,ಜೂ.10: ದೆಹಲಿ ಅಲ್ಪಸಂಖ್ಯಾತ ಆಯೋಗವು 2020ನೇ ಸಾಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಪ್ರಶಸ್ತಿಗಳನ್ನು ಘೋಷಿಸಿದ್ದು, ಈ ಪ್ರಶಸ್ತಿಗಳಲ್ಲಿ ಅಂತರ್ ಧರ್ಮೀಯ ಸಾಮರಸ್ಯಕ್ಕಾಗಿ ಮುಹಮ್ಮದ್ ಇಕ್ಬಾಲ್ ಮುಲ್ಲಾ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದವರಾದ ಇಕ್ಬಾಲ್ ಮುಲ್ಲಾ ಇಸ್ಲಾಮೀ ವಿದ್ಯಾರ್ಥಿ ಸಂಘಟನೆಯಾದ ಎಸ್‌ಐಓ ಇದರ ಕರ್ನಾಟಕ ಮತ್ತು ಗೋವಾ ವಲಯ ಅಧ್ಯಕ್ಷರಾಗಿ, ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ದೀರ್ಘಕಾಲದಿಂದ ಜಮಾಅತೆ ಇಸ್ಲಾಮಿ ಹಿಂದ್’ನ ರಾಷ್ಟ್ರೀಯ ಕಾರ್ಯದರ್ಶಿಯಾಗಿ …

Read More »

ಮಕ್ತೂಬ್ ಪತ್ರಕರ್ತ ಶಾಹೀನ್ ಅಬ್ದುಲ್ಲರಿಗೆ ದೆಹಲಿ ಅಲ್ಪಸಂಖ್ಯಾತ ಆಯೋಗ ಪ್ರಶಸ್ತಿ

ನವದೆಹಲಿ,ಜೂ.9: ಮಕ್ತೂಬ್ ಪತ್ರಕರ್ತ ಶಾಹೀನ್ ಅಬ್ದುಲ್ಲಾ ಅವರು ಸೋಮವಾರ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ ವಿಭಾಗದಲ್ಲಿ ದೆಹಲಿ ಅಲ್ಪಸಂಖ್ಯಾತ ಆಯೋಗ (ಡಿಎಂಸಿ) ಪ್ರಶಸ್ತಿಯನ್ನು ಗೆದ್ದಿದ್ದಾರೆ. “ಶಾಹೀನ್, ವಸ್ತುನಿಷ್ಠ ಮತ್ತು ಭರವಸೆಯ ಬದ್ಧ ಯುವ ಪತ್ರಕರ್ತ” ಎಂದು ಪ್ರಶಸ್ತಿ ಸಮಿತಿ ಹೇಳಿದೆ. ಶಾಹೀನ್ ಎಂಬ ಮಲ್ಟಿಮೀಡಿಯಾ ಪತ್ರಕರ್ತ ಎರಡು ವರ್ಷಗಳಿಂದ ಮಕ್ತೂಬ್‌ನಲ್ಲಿ ಕ್ರಿಯೇಟಿವ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಉತ್ತರ ಪ್ರದೇಶ ಮತ್ತು ದೆಹಲಿ ಪೊಗ್ರೋಮ್ನಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳ ಬಗ್ಗೆ …

Read More »

ಕೊರೋನ ಸೋಂಕಿತರಿಗೆ ಆತ್ಮೀಯತೆಯೇ ಮುಖ್ಯ ಚಿಕಿತ್ಸೆ: ಯುವ ವೈದ್ಯೆ ಡಾ. ಮರಿಯಮ್ ಶಬೀಹಾ

ಕೊರೋನ ಯೋಧರಿಗೆ ನಮ್ಮ ಸಲಾಂ…… ಮಂಗಳೂರು, ಜೂ. 9: ‘‘ವೈದ್ಯಕೀಯ ಲೋಕದಲ್ಲಿ ಸೃಷ್ಟಿಯಾಗುತ್ತಿರುವ ಹೊಸ ರೋಗಗಳಲ್ಲಿ ಒಂದು ಕೋವಿಡ್ 19. ಈ ಸೋಂಕಿನ ಬಗ್ಗೆ ಯಾವುದೇ ರೀತಿಯ ಭಯ ಅನಗತ್ಯ. ವೈದ್ಯರಾಗಿದ್ದುಕೊಂಡು ರೋಗಿಗಳ ಚಿಕಿತ್ಸೆಯೇ ನಮ್ಮ ಧರ್ಮ. ಅದರಲ್ಲೂ ಕೋವಿಡ್ ಸೋಂಕಿತರಿಗೆ ಮುಖ್ಯವಾಗಿ ಬೇಕಾಗಿರುವುದು ಆತ್ಮೀಯತೆ. ಧೈರ್ಯ ತುಂಬುವ ಮಾತುಗಳು’’ ಎನ್ನುತ್ತಾರೆ ಯುವ ವೈದ್ಯೆ ಡಾ. ಮರಿಯಮ್ ಶಬೀಹಾ. ಕೋವಿಡ್ ಆಸ್ಪತ್ರೆಯಾಗಿ ಮಾರ್ಪಟ್ಟಿರುವ ವೆನ್‌ಲಾಕ್‌ನಲ್ಲಿ ಕೋವಿಡ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ …

Read More »

ಜಾರ್ಜ್ ಫ್ಲಾಯ್ಡ್ ಹತ್ಯೆ ಖಂಡಿಸಿ ಪ್ರತಿಭಟನೆ: ನಮಾಝ್ ಮಾಡುತ್ತಿದ್ದ ಪ್ರತಿಭಟನಕಾರರನ್ನು ಇತರರು ರಕ್ಷಿಸಿದ್ದು ಹೀಗೆ…

ಸೌಹಾರ್ದ ಸಾರುವ ವಿಡಿಯೋ ವೈರಲ್ ವಾಷಿಂಗ್ಟನ್: ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕಾದಾದ್ಯಂತ ಭಾರೀ ಪ್ರತಿಭಟನೆಗಳು ಮುಂದುವರಿದಿದ್ದು, ಪ್ರತಿಭಟನೆ ವೇಳೆ ನಮಾಝ್ ಮಾಡುತ್ತಿದ್ದ ಮುಸ್ಲಿಮರನ್ನು ಮುಸ್ಲಿಮೇತರರು ಪೊಲೀಸರಿಂದ ರಕ್ಷಿಸಲು ಮಾನವಸರಪಳಿ ರಚಿಸಿದ ವಿಡಿಯೋಗಳು ವೈರಲ್ ಆಗುತ್ತಿದೆ. ಜನರ ಗುಂಪೊಂದು ನಮಾಝ್ ಮಾಡುತ್ತಿರುವುದು ಮತ್ತು ಅವರನ್ನು ಸುತ್ತುವರಿದು ಜನರು ನಿಂತು ಪೊಲೀಸರಿಂದ ರಕ್ಷಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. My entire heart ❤ …

Read More »