ಬೆಂಗಳೂರು: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಹಮ್ಮಿಕೊಂಡಿರುವ `ಕೋವಿಡ್-19- ಮರಳಿ ಸೃಷ್ಟಿಕರ್ತನ ಕಡೆಗೆ’ ಪಾಕ್ಷಿಕ ಅಭಿಯಾನ ಪ್ರಯುಕ್ತ ರಾಜ್ಯದ ವಿವಿಧ ಧಾರ್ಮಿಕ ವಿದ್ವಾಂಸರನ್ನೊಳಗೊಂಡ ಅಂತರ್ ಧರ್ಮೀಯ ಸಂದೇಶ ಸಮಾರಂಭವು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಡಾ. ಬೆಳಗಾಮಿ ಮುಹಮ್ಮದ್ ಸಾದ್ ವಹಿಸಿಕೊಂಡಿದ್ದರು. “ಜಗತ್ತಿನಲ್ಲಿ ಉದ್ಭವಿಸಿರುವ ದೈವಿಕ ವಿಪತ್ತು ಇಡೀ ಮನುಷ್ಯ ಕುಲವನ್ನೇ ನಡುಗಿಸುವಂತೆ ಮಾಡಿದ್ದು ವೈಜ್ಞಾನಿಕ ಮತ್ತು ತಂತ್ರಜ್ಞಾನಗಳ ಅಭಿವೃದ್ಧಿಯ ನಡುವೆಯೂ …
Read More »ಬೆಂಗಳೂರು: ಉದ್ರಿಕ್ತರಿಂದ ದೇವಾಲಯವನ್ನು ರಕ್ಷಿಸಿದ ಮುಸ್ಲಿಮ್ ಯುವಕರು – ವಿಡಿಯೋ
ಬೆಂಗಳೂರು: ಇತ್ತೀಚಿಗೆ ಫೇಸ್ ಬುಕ್ ನಲ್ಲಿ ಪ್ರವಾದಿ ನಿಂದೆ ಆರೋಪದಲ್ಲಿ ಬೆಂಗಳೂರಿನಲ್ಲಿ ಉದ್ರಿಕ್ತ ಗುಂಪಿನಿಂದ ಹಿಂಸಾಚಾರ ಭುಗಿಲೆದಿತ್ತು. ಈ ನಡುವೆ ಮುಸ್ಲಿಮ್ ಯುವಕರ ಗುಂಪೊಂದು ಬೆಂಗಳೂರು ನಗರದ ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ದೇವಾಲಯದ ಸುತ್ತಲೂ ಒಂದು ಮಾನವ ಸರಪಳಿಯನ್ನು ರಚಿಸುವ ಮೂಲಕ ಉದ್ರಿಕ್ತರಿಂದ ದೇವಾಲಯಕ್ಕೆ ಹಾನಿ ಸಂಭವಿಸದಂತೆ ರಕ್ಷಿಸಿದ ದ್ರಶ್ಯವು ಕಂಡು ಬಂತು ಎಂಬುದಾಗಿ ಎಎನ್ಐ ಟ್ವೀಟ್ ಮಾಡಿದೆ. #WATCH Karnataka: A group of Muslim …
Read More »ಗಣಪತಿ ಮೂರ್ತಿಗಳನ್ನು ಒಡೆದು ಹಾಕಿದ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ ಬಹರೈನ್ ಪೊಲೀಸರು
ಮನಾಮ: ಬಹರೈನ್ ನ ರಾಜಧಾನಿ ಮನಾಮ ಇಲ್ಲಿನ ಜುಫ್ಫೈರ್ ಪ್ರದೇಶದ ಮಳಿಗೆಯೊಂದರಲ್ಲಿ ಮಹಿಳೆಯೊಬ್ಬಳು ಗಣೇಶನ ವಿಗ್ರಹಗಳಿಗೆ ಹಾನಿಗೊಳಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಉದ್ದೇಶಪೂರ್ವಕ ಹಾನಿ ಹಾಗೂ ಸಾರ್ವಜನಿಕವಾಗಿ ಧಾರ್ಮಿಕ ಚಿಹ್ನೆಯೊಂದಕ್ಕೆ ಅವಮಾನಿಸಿದ ಆರೋಪ ಆಕೆಯ ಮೇಲೆ ಹೊರಿಸಲಾಗಿದೆ. ಈ ಘಟನೆಯ ವೀಡಿಯೋ ವೈರಲ್ ಆದಂತೆಯೇ 54 ವರ್ಷದ ಆ ಮಹಿಳೆಗೆ ರವಿವಾರ ಸಮನ್ಸ್ ಕಳುಹಿಸಲಾಗಿತ್ತು ಎಂದು …
Read More »ಶಿಥಿಲಾವಸ್ಥೆಯಲ್ಲಿದ್ದ ಮನೆ ದುರಸ್ತಿ ಮಾಡಿದ ಜಮಾಅತೆ ಇಸ್ಲಾಮೀ ಹಿಂದ್
ಮಂಗಳೂರು,ಆ.4: ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಸಮಾಜ ಸೇವಾ ಘಟಕದ ವತಿಯಿಂದ ಫರಂಗಿಪೇಟೆ ಸಮೀಪದ ಅಮ್ಮೆಮಾರ್ ಎಂಬಲ್ಲಿನ ಬಡ ಕುಟುಂಬದ ಮನೆಯೊಂದನ್ನು ದಾನಿಗಳ ನೆರವಿನಿಂದ ಸಂಗ್ರಹಿಸಿದ ಸುಮಾರು ಎರಡು ಲಕ್ಷ ರೂಪಾಯಿ ವ್ಯಯಿಸಿ ದುರಸ್ತಿಗೊಳಿಸಿ, ಚೆಂದ ಮಾಡಿಸಿ ಕೊಡಲಾಯಿತು. ಈ ಸತ್ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಜಮಾಅತೆ ಇಸ್ಲಾಮೀ ಹಿಂದ್ ಕೃತಜ್ಞತೆ ಸಲ್ಲಿಸಿದೆ.
Read More »ಯುಪಿಎಸ್ಸಿ ಪರೀಕ್ಷೆ: ಈ ಬಾರಿ 42 ಮುಸ್ಲಿಂ ಅಭ್ಯರ್ಥಿಗಳು ತೇರ್ಗಡೆ; ಟಾಪ್ 100ರಲ್ಲಿ ಸ್ಥಾನ ಪಡೆದ ಸಫ್ನಾ ನಝರುದ್ದೀನ್
ಹೊಸದಿಲ್ಲಿ: ಕೇಂದ್ರ ಲೋಕಸೇವಾ ಆಯೋಗ 2019ರಲ್ಲಿ ನಡೆಸಿದ ಪರೀಕ್ಷೆಯಲ್ಲಿ 42 ಮುಸ್ಲಿಂ ಅಭ್ಯರ್ಥಿಗಳು ತೇರ್ಗಡೆಗೊಂಡಿದ್ದಾರೆ. ಕಳೆದ ವರ್ಷ ಒಟ್ಟು 28 ಮಂದಿ ತೇರ್ಗಡೆಗೊಂಡಿದ್ದರು. ಪಿಎಸ್ಸಿ ರ್ಯಾಂಕ್ ಪಟ್ಟಿಯಲ್ಲಿ 45ನೇ ರ್ಯಾಂಕ್ ಗಳಿಸಿರುವ ಸಫ್ನಾ ನಝರುದ್ದೀನ್ ಅವರು ಟಾಪ್ 100ರಲ್ಲಿ ಸ್ಥಾನ ಪಡೆದ ಏಕೈಕ ಮುಸ್ಲಿಂ ಅಭ್ಯರ್ಥಿಯಾಗಿದ್ದಾರೆ. ಮಂಗಳವಾರ ಬಿಡುಗಡೆಯಾದ ಫಲಿತಾಂಶದಲ್ಲಿ ಒಟ್ಟು 829 ಮಂದಿ ತೇರ್ಗಡೆಗೊಂಡಿದ್ದು, ಅವರ ಪೈಕಿ ಮುಸ್ಲಿಂ ಅಭ್ಯರ್ಥಿಗಳು ಶೇ 5ರಷ್ಟಿದ್ದಾರೆ. ಕಳೆದ ವರ್ಷ ತೇರ್ಗಡೆಯಾದ ಒಟ್ಟು …
Read More »ಜಮಾಅತೆ ಇಸ್ಲಾಮೀ ಹಿಂದ್ ನಿಂದ ವಿದ್ಯುತ್ ಆಮ್ಲಜನಕ ವಿಷನ್ ಹಸ್ತಾಂತರ
ಮಂಗಳೂರು: ಮಂಗಳೂರು ತಾಲೂಕಿನ ತಲಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿಲಿಕೂರು ಎಂಬಲ್ಲಿಯ ಬಡ ಕುಟುಂಬವೊಂದರಲ್ಲಿ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಕೊರೋನ ಕಾರಣದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿರುವುದರಿಂದ ವಿದ್ಯುತ್ ಆಕ್ಸಿಜನ್ ಅವಶ್ಯಕತೆ ಇದ್ದು, ದಾನಿಗಳು ವಿದ್ಯುತ್ ಆಮ್ಲಜನಕದ ಮಿಷನ್ ನೀಡಲು ಮುಂದಾಗಬೇಕೆಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಸಂದೇಶವನ್ನು ಗಮನಿಸಿ, ಸ್ಪಂದಿಸಿದ ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಹಾಗೂ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ 50 ಸಾವಿರ …
Read More »ಕೊರೊನ ಪ್ರತಿರೋಧಕ್ಕಾಗಿ ಹರಿಯಾಣಕ್ಕೆ ಒಂದೂವರೆ ಕೋಟಿ ರೂ. ಧನ ಸಹಾಯವಿತ್ತ ಎಂ ಎ ಯೂಸಫಲಿ
ಛತ್ತಿಸ್ಗಡ, ಆ.: ಕೊರೊನ ಪ್ರತಿರೋಧಕ್ಕಾಗಿ ಹರಿಯಾಣ ಮುಖ್ಯಮಂತ್ರಿಯ ಸಂತ್ರಸ್ತ ನಿಧಿಗೆ ಲುಲುಗ್ರೂಪ್ ಅಧ್ಯಕ್ಷ ಎಂ ಎ ಯೂಸುಫಲಿ ಒಂದೂವರೆ ಕೋಟಿ ರೂಪಾಯಿ ನೀಡಿದ್ದಾರೆ. ಮುಖ್ಯಮಂತ್ರಿ ಮನೋಹರ ಖಟ್ಟರ್ ಅವರ ಚಂಡೀಗಡ ಕಚೇರಿಗೆ ಲುಲು ಗ್ರೂಪ್ನ ಪ್ರತಿನಿಧಿಗಳಾದ ನಜುಮುದ್ದೀನ್, ಜಯಕುಮಾರ್ ಹೋಗಿ ಚೆಕ್ ಹಸ್ತಾಂತರಿಸಿದ್ದಾರೆ. ಇದಲ್ಲದೆ ಹರಿಯಾಣದ ವೇಮಾವತ್ ಜಿಲ್ಲಾಡಳಿತದ ಸಿಎಸ್ಆರ್ ಫಂಡ್ಗೆ ಯೂಸುಫಲಿ ಅವರು ಐವತ್ತು ಲಕ್ಷ ರೂಪಾಯಿ ನೀಡಿದ್ದಾರೆ. ಮೇವಾತ್ ಜಿಲ್ಲಾ ಡೆಪ್ಯುಟಿ ಕಮಿಶನರ್ ಮತ್ತು ಜಿಲ್ಲಾಧಿಕಾರಿಯಾದ ಪಂಕಜ್ರು …
Read More »ಕೋವಿಡ್-19 ಶವ ಸಂಸ್ಕಾರ ತರಬೇತಿ: ಎಸ್.ಐ.ಓ ಕಾರ್ಯಕರ್ತರು ಭಾಗಿ
ಉಡುಪಿ,ಆ.3: ಜಿಲ್ಲಾ ಸರಕಾರಿ ಆಸ್ಪತ್ರೆ ಶವಾಗಾರದ ಬಳಿ ಸೋಮವಾರ ನೊಂದಾಯಿಸಿಕೊಂಡ ಸ್ವಯಂ ಸೇವಕರಿಗೆ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರ ಮಾಡುವ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಉಡುಪಿ ಜಿಲ್ಲಾ ಎಸ್.ಐ.ಓ ಕಾರ್ಯಕರ್ತರು ಭಾಗವಹಿಸಿ ತರಬೇತಿ ಪಡೆದರು. ಈ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದ ಶಾಸಕ ರಘುಪತಿ ಭಟ್ ಮಾತನಾಡಿ, ಜನರು ಜಾಗೃತರಾಗಿ ಇಂತ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಸಂದರ್ಭದಲ್ಲಿ ಸ್ವಯಂ ಸೇವಕರ ಅಗತ್ಯ …
Read More »ಲಂಗರ್ (ಉಚಿತ ಆಹಾರ) ವ್ಯವಸ್ಥೆಗೆ 330 ಕ್ವಿಂಟಾಲ್ ಗೋಧಿಯೊಂದಿಗೆ ಗೋಲ್ಡನ್ ಟೆಂಪಲ್ಗೆ ತಲುಪಿದ ಮುಸ್ಲಿಮರು
ಪಂಜಾಬ್,ಜು.11: 330 ಕ್ವಿಂಟಾಲ್ ಗೋಧಿಯೊಂದಿಗೆ ಸಿಖ್ಖರ ಆರಾಧನಾಲಯವಾದ ಅಮೃತಸರದ ಗೋಲ್ಡನ್ ಟೆಂಪಲ್ಗೆ ಮಲೆರ್ಕೋಟ್ಲಾದ ಮುಸ್ಲಿಮರು ತಲುಪಿದರು. ಸಿಖ್ ನಂಬಿಕೆಯ ಒಂದು ಭಾಗವೆಂದೇ ಪರಿಗಣಿಸಲ್ಪಟ್ಟ ಲಂಗರ್(ಉಚಿತ ಆಹಾರ) ವ್ಯವಸ್ಥೆ ಮಾಡುವಲ್ಲಿ ಗೋಲ್ಡನ್ ಟೆಂಪಲ್ ತೊಂದರೆ ಎದುರಿಸುತ್ತಿದೆ ಎಂಬುದನ್ನು ಅರಿತಾಗ ಸಹೋದರತ್ವ ಹಾಗೂ ಸೌಹಾರ್ದತೆಯ ಪ್ರತೀಕವಾಗಿ ಈ ದೃಶ್ಯವು ಕಂಡು ಬಂತು. ಗೋಲ್ಡನ್ ಟೆಂಪಲ್ನಲ್ಲಿ ಪ್ರತಿದಿನ ಸುಮಾರು 1 ಲಕ್ಷ ಜನರು ಲಂಗರ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. “ಸಂಪನ್ಮೂಲಗಳ ಕೊರತೆ ಇದೆ ಎಂದು ನಾವು …
Read More »ಬಂಗ್ಲೆ ಗುಡ್ಡೆ ದುರಂತ ಪ್ರದೇಶ ಹಾಗೂ ಮೃತರ ಮನೆಗೆ ಜಮಾಅತೆ ಇಸ್ಲಾಮೀ ಹಿಂದ್ ತಂಡ ಭೇಟಿ
ಮಂಗಳೂರು (ಜುಲೈ 9 ): ಇತ್ತೀಚೆಗೆ ಬಂಗ್ಲೆಗುಡ್ಡೆಯಲ್ಲಿ ಭೂಕುಸಿತದಿಂದ ಎರಡು ಮನೆಗಳು ಧರಾಶಾಹಿಯಾಗಿ, 4 ಮನೆಗಳು ಸಂಪೂರ್ಣ ಹಾನಿಗೊಂಡು, ಇಬ್ಬರು ಮಕ್ಕಳು ಜೀವಂತ ಸಮಾಧಿಯಾದ ದುರಂತ ಸ್ಥಳಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ದ.ಕ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು. ಮಕ್ಕಳನ್ನು ಕಳಕೊಂಡು ದುಃಖದ ಮಡುವಿನಲ್ಲಿ ನೋವನ್ನು ಅನುಭವಿಸುತ್ತಿರುವ ತಂದೆ ಶರೀಫರನ್ನು ಅವರ ಸಂಬಂಧಿಕರೋರ್ವರ ಮನೆಯಲ್ಲಿ ಭೇಟಿ ನೀಡಿ ಸಾಂತ್ವನ ಹೇಳಿತು. ಅಲ್ಲಾಹನ ವಿಧಿಯನ್ನು ಯಾರಿಂದಲೂತಡೆಯಲುಸಾಧ್ಯವಿಲ್ಲ. ಯಾವುದೇ ಪರೀಕ್ಷಾ …
Read More »
IslamKannada News Portal