ಮಂಗಳೂರು,ಸೆ.24:’ಬೇಕಲ್ ಉಸ್ತಾದ್’ ಎಂದೇ ಜನಪ್ರಿಯರಾಗಿದ್ದ ಹಿರಿಯ ವಿದ್ವಾಂಸ, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳ ಸಂಯುಕ್ತ ಖಾಝಿ ಅಲ್ಹಾಜ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ (71) ರವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು. ಸುನ್ನಿ ಜಂಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷರಾಗಿದ್ದ ಬೇಕಲ್ ಉಸ್ತಾದ್ರವರು ಜಾಮಿಯಾ ಸಅದಿಯಾ ಅರಬಿಯಾ ಶರೀಅತ್ ಕಾಲೇಜಿನ ಪ್ರಾಚಾರ್ಯರಾಗಿ, ಸಮಸ್ತ ಉಲಮಾ ಒಕ್ಕೂಟದ ಕೇಂದ್ರ ಮುಶಾವರ ಸದಸ್ಯರಾಗಿ, ಅಲ್ ಅನ್ಸಾರ್ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. …
Read More »ಟೈಮ್ ಮ್ಯಾಗಝಿನ್ನ ವಿಶ್ವದ ಪ್ರಭಾವೀ ನೂರು ವ್ಯಕ್ತಿಗಳಲ್ಲಿ ಶಾಹಿನ್ ಬಾಗ್ನ ಹೋರಾಟಗಾರ್ತಿ ‘ಬಿಲ್ಕಿಸ್ ದಾದಿ’
ವಾಷಿಂಗ್ಟನ್,ಸೆ.23: ವಿಶ್ವಪ್ರಸಿದ್ಧ ಟೈಮ್ ಮ್ಯಾಗಝಿನ್ನ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾಹೀನ್ ಬಾಗ್ ಹೋರಾಟಗಾರ್ತಿ 82ರ ಹರೆಯದ ಬಿಲ್ಕಿಸ್ ಕೂಡ ಸೇರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟ ಆಯುಷ್ಮಾನ್ ಖುರಾನ, ಗೂಗುಲ್ ಸಿಇಒ ಸುಂದರ್ ಪಿಚ್ಚೈ, ಪ್ರೊಫೆಸರ್ ರವೀಂದ್ರ ಗುಪ್ತ ಪಟ್ಟಿಯಲ್ಲಿರುವ ಇತರ ಭಾರತೀಯ ವ್ಯಕ್ತಿಗಳು. 2019 ವರ್ಷದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅತ್ಯಂತ ಪ್ರಭಾವ ಬೀರಿದವರನ್ನು ಪಟ್ಟಿಗೆ ಆಯ್ಕೆ ಮಾಡಲಾಗಿದೆ. ಚೀನದ ಅಧ್ಯಕ್ಷ ಶಿಜಿನ್ ಪಿಂಗ್, ಅಮೆರಿಕದ …
Read More »ಜೋಪಡಿಗೆ ಹೊಸ ರೂಪ ಕೊಟ್ಟ ಜಮಾಅತೆ ಇಸ್ಲಾಮೀ!
ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರ ಶಾಖೆಯ ವತಿಯಿಂದ, ಕಸ್ಬಾಬೆಂಗರೆ ಎಂಬಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಜೋಪಡಿಯಲ್ಲಿ ಬದುಕು ಸವೆಸುತ್ತಿದ್ದ, ಐದು ಮಕ್ಕಳಿರುವ ಬಡ ದಂಪತಿಗಳ ಕುಟುಂಬಕ್ಕೆ ದಾನಿಗಳ ನೆರವಿನಿಂದ ಅವಶ್ಯಕ ಸವಲತ್ತುಗಳುಳ್ಳ ಚೆಂದದ ಮನೆಯೊಂದನ್ನು ನಿರ್ಮಿಸಿ ಕೊಡಲಾಯಿತು. ಜಮಾಅತೆ ಇಸ್ಲಾಮೀ ಹಿಂದ್, ಮಂಗಳೂರು ನಗರ ಶಾಖೆಯ ಸಮಾಜ ಸೇವಾ ಘಟಕದ ಸಂಚಾಲಕರಾದ ಜ| ಅಬ್ದುಲ್ ಗಫೂರ್ ಕುಳಾಯಿಯವರು ಮನೆ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ, ಮನೆಯ ಗಾತ್ರಕ್ಕಿಂತ …
Read More »‘ನನ್ನ ಪ್ರೀತಿಯ ಧರ್ಮ’ ಕೃತಿ ಪರಿಚಯ
ತಮಿಳುನಾಡಿನ ಅಣ್ಣಾ ಡಿಎಂಕೆ ಪಕ್ಷದ ಶ್ರೀ ಅಡಿಯಾರ್ ಅವರು ಪತ್ರಿಕಾ ರಂಗ, ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರದಲ್ಲಿದಲ್ಲಿ ಅತ್ಯಂತ ಪ್ರಭಾವಿ ಮತ್ತು ವಿಶೇಷ ವ್ಯಕ್ತಿಯಾಗಿದ್ದವರು . ಬಾಲ್ಯದಿಂದಲೇ ಅವರಿಗೆ ಮುಸ್ಲಿಮರ ಜೊತೆ ಉತ್ತಮ ನಂಟಿತ್ತು. ಈ ಸ್ನೇಹ ಸಹವಾಸವೇ ಮುಂದೆ ಅವರಿಗೆ ಇಸ್ಲಾಮನ್ನು ಅರಿಯುವ ಸದವಕಾಶವನ್ನು ಒದಗಿಸಿತ್ತು. ತುರ್ತುಪರಿಸ್ಥಿತಿಯ ಸಂದರ್ಭ ಮೀಸಾ ಕಾಯ್ದೆಯನ್ವಯ ಬಂದಿಸಲ್ಪಟ್ಟಿದ್ದ ಶ್ರೀ ಅಡಿಯಾರ್ ಅವರಿಗೆ ಇಸ್ಲಾಮ್ ಧರ್ಮದ ಅಧ್ಯಯನ ನಡೆಸುವ ಸಂದರ್ಭವಕಾಶವು ಒದಗಿ ಬಂತು, ಒಂದೂವರೆ …
Read More »ಹಿರಿಯ ಸಾಮಾಜಿಕ ಕಾರ್ಯಕರ್ತ, ಆರ್ಯ ಸಮಾಜದ ನಾಯಕ ಸ್ವಾಮಿ ಅಗ್ನಿವೇಶ್ ನಿಧನ
ಹೊಸದಿಲ್ಲಿ ಸೆ.11: ಹಿರಿಯ ಸಾಮಾಜಿಕ ಕಾರ್ಯಕರ್ತ, ಆರ್ಯ ಸಮಾಜದ ನಾಯಕ ಸ್ವಾಮಿ ಅಗ್ನಿವೇಶ್(80) ಅವರು ಶುಕ್ರವಾರ ಸಂಜೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮೃತಪಟ್ಟಿದ್ದಾರೆ. Swamiji, Agniveshji a true ascetic wth Values of Truth, Non Discrimination Passed left us 6.55 p.m. todayBelieving in Non Violence, Human Rights …
Read More »ಎಸ್.ಐ.ಓ ದಿಂದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಸನ್ಮಾನ
ಬಂಟ್ವಾಳ: ಶಿಕ್ಷಕರ ದಿನಾಚರಣೆಯ ಅಂಗವಾಗಿ ಪ್ರಕಟಿಸುವ ದ.ಕ ಜಿಲ್ಲಾಮಟ್ಟದ ಶಿಕ್ಷಕರ ಪ್ರಶಸ್ತಿಯನ್ನು ಪಡೆದ ಬೆಳ್ತಂಗಡಿ ವಲಯದ ಶಿಕ್ಷಕರನ್ನು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್.ಐ.ಒ) ಪಾಣೆಮಂಗಳೂರು ಘಟಕದ ವತಿಯಿಂದ ಸನ್ಮಾನಿಸಿ, ಅಭಿನಂದಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆ (ಕಿರಿಯ ವಿಭಾಗ) ದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ರಕ್ತೇಶ್ವರಿ ಪದವು ಶಾಲೆಯ ಚೈತ್ರ ಪ್ರಭಾ ಶ್ರೀಶಂ, ಪ್ರಾಥಮಿಕ ಶಾಲೆ (ಹಿರಿಯ ವಿಭಾಗ) ದಲ್ಲಿ ಕುಂಜತ್ತೋಡಿ ಶಾಲೆಯ ಸಬೀನಾ …
Read More »ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕ ಯಾಕೂಬ್ ರಿಗೆ ಎಸ್.ಐ.ಓ ದಿಂದ ಸನ್ಮಾನ
ಬೆಳ್ತಂಗಡಿ :ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್.ಐ.ಓ) ಪಾಣೆಮಂಗಳೂರು ಘಟಕದ ವತಿಯಿಂದ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಯಾಕೂಬ್ ಕೊಯ್ಯೂರ್ ಅವರನ್ನು ಅಭಿನಂದಿಸಲಾಯಿತು. ಬೆಳ್ತಂಗಡಿ ತಾಲೂಕಿನ ನಡ ಪ್ರೌಢಶಾಲೆಯ ಗಣಿತ ಶಿಕ್ಷಕ ಯಾಕೂಬ್ ಕೊಯ್ಯೂರ್ ರವರು ಇಲ್ಲಿನ ವಿದ್ಯಾರ್ಥಿಗಳ ಬಾಳಿಗೆ ಆಶಾಕಿರಣವಾಗಿ 1996 ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ರಾಜ್ಯದ ಪ್ರಪ್ರಥಮ ಗಣಿತ ಪ್ರಯೋಗ ಶಾಲೆಯನ್ನು ನಿರ್ಮಿಸಿ ಮಾದರಿಯಾಗಿದ್ದರು. ಈ ಎಲ್ಲಾ …
Read More »ಜಮಾಅತೆ ಇಸ್ಲಾಮೀ ಹಿಂದ್ನಿಂದ ಉಸ್ತಾದ್ ಕುಟುಂಬಕ್ಕೆ ಮನೆ ಹಸ್ತಾಂತರ
ಮಂಗಳೂರು: ಬೆಳ್ತಂಗಡಿ ತಾಲೂಕಿನ ಮೌಲಾನಾರೋರ್ವರ ಮನೆಯ ಸಿಮೆಂಟ್ ಶೀಟಿನ ಮೇಲ್ಛಾವಣಿ, ಹಾನಿಗೊಳಗಾಗಿದ್ದು, ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಶಾಖೆಯ ವತಿಯಿಂದ, ಅದಕ್ಕೆ ಸ್ಲ್ಯಾಪ್ ಹಾಕಿ, ಕೊಠಡಿಯನ್ನು ಸೇರಿಸಿ, ದಾನಿಗಳ ನೆರವಿನಿಂದ ಸುಮಾರು ನಾಲ್ಕು ಲಕ್ಷ ರೂಪಾಯಿ ವ್ಯಯಿಸಿ, ಸಂಪೂರ್ಣ ದುರಸ್ತಿ ಮಾಡಿಸಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಮನೆಯನ್ನು ಬೋಳಂಗಡಿ ಹವ್ವಾ ಜುಮ್ಮಾ ಮಸೀದಿಯ ಖತೀಬರಾದ, ಮೌಲಾನಾ ಯಹ್ಯಾ ತಂಙಲ್ ಮದನಿಯವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಪ್ಪಿನಂಗಡಿ ಜಮಾಅತೆ …
Read More »” ಇಸ್ಲಾಮ್ ಧರ್ಮ ” ಪುಸ್ತಕ ಪರಿಚಯ
“ರಿಸಾಲ ಯೆ ದೀನಿಯ್ಯಾತ್’” – ಇದು ವಿಶ್ವವಿಖ್ಯಾತ ವಿದ್ವಾಂಸರಾದ ಸಯ್ಯದ್ ಅಬುಲ್ ಆಲಾ ಮೌದೂದಿಯವರು(ರ) 1937 ರಲ್ಲಿ ರಚಿಸಿದ ಸುಪ್ರಸಿದ್ಧ ಉರ್ದು ಸಾಹಿತ್ಯವಾಗಿದೆ. ಈ ಪುಸ್ತಕವು ಈಗಾಗಲೇ ದೇಶದ ಎಲ್ಲ ರಾಜ್ಯ ಭಾಷೆಗಳಲ್ಲಿಯೂ ಪ್ರಕಟಗೊಂಡಿದೆ ಮತ್ತು ವಿಶ್ವದ ನಾನಾ ಭಾಷೆಗಳಿಗೆ ಅನುವಾದಗೊಂಡಿದೆ. ಇಂಗ್ಲೀಷ್ ನಲ್ಲಿ ಇದು Towards Understanding Islam ಎಂಬ ಹೆಸರಿನಲ್ಲಿ ಖ್ಯಾತವಾಗಿದೆ. ಅನೇಕ ಶಾಲಾ ಕಾಲೇಜುಗಳಲ್ಲಿ ಇಸ್ಲಾಮ್’ನ ಅಧ್ಯಯನಕ್ಕಾಗಿ ಈ ಪುಸ್ತಕವನ್ನು ಪಠ್ಯವಾಗಿ ಕಲಿಸಲಾಗುತ್ತಿದೆ. ಶಾಂತಿ ಪ್ರಕಾಶನವು …
Read More »HRS ವತಿಯಿಂದ ಮಂದಿರ, ಮಸೀದಿಗಳಲ್ಲಿ ಸ್ಯಾನಿಟೈಜರ್ ಸಿಂಪಡಣೆ
ಸಿಂಧನೂರು, ಸೆ 02: ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ (HRS) ವತಿಯಿಂದ ನಗರದ ಸಾರ್ವಜನಿಕ ಸ್ಥಳಗಳಾದ ಮಂದಿರ ಮತ್ತು ಮಸೀದಿಗಳಲ್ಲಿ ಸ್ಯಾನಿಟೈಜರ್ ಔಷಧ ಸಿಂಪಡಿಸಲಾಯಿತು. ಹಳೇ ಬಜಾರದ ಹುದಾ ಮಸೀದಿ, ಹನುಮಾನ ದೇವರ ಗುಡಿ, ಬಡಿಬೇಸ್ ಮಸೀದಿ ಸೇರಿದಂತೆ ಇಂದು ಒಟ್ಟಾರೆ ನಾಲ್ಕು ಮಂದಿರ ಎಂಟು ಮಸೀದಿಗಳಲ್ಲಿ ಔಷಧ ಸಿಂಪಡಿಸಲಾಗಿದೆ.
Read More »
IslamKannada News Portal