ಹೊಸದಿಲ್ಲಿ: ಕೇಂದ್ರ ಸರಕಾರ ಹೊಸದಾಗಿ ಜಾರಿಗೆ ತಂದ ಕೃಷಿ ಕಾನೂನುಗಳನ್ನು ವಿರೋಧಿಸಿ ದಿಲ್ಲಿ ಚಲೋ ಅಂಗವಾಗಿ ಆಗಮಿಸಿರುವ ಸಾವಿರಾರು ರೈತರಿಗೆ ರಾಜಧಾನಿಯ ವಿವಿಧ ಮಸೀದಿಗಳ ಮುಖಾಂತರ ಆಹಾರ ಸರಬರಾಜು ಸತತ ಎರಡನೇ ದಿನವೂ ಮುಂದುವರಿದಿದೆ. ಕನಿಷ್ಠ 25 ಮಸೀದಿಗಳು ರಾತ್ರಿ ರೈತರಿಗೆ ಆಶ್ರಯ ಕಲ್ಪಿಸಲು ಸಿದ್ಧತೆ ನಡೆಸಿವೆ ಎಂದು ಈ ಏರ್ಪಾಟುಗಳನ್ನು ನೋಡಿಕೊಳ್ಳುತ್ತಿರುರವ ಯುನೈಟೆಡ್ ಅಗೇನ್ಸ್ಟ್ ಹೇಟ್ ಸಂಘಟನೆಯ ನದೀಮ್ ಖಾನ್ ಹೇಳಿದ್ದಾರೆ. ದಿಲ್ಲಿಯ ಹೌಝ್ ಖಸ್, ಒಖ್ಲಾ, ಓಲ್ಡ್ …
Read More »ಹೀಗೊಂದು ಮಾನವೀಯ ನೆರವು- ಸುಹಾನಾ ಚಿಕಿತ್ಸೆಗೆ ಬಂದ ಹಣದಲ್ಲಿ ಯತೀಶ್ ಶುಶ್ರೂಷೆಗೆ ಸಹಾಯ
ಪರಸ್ಪರ ಸಹಾಯ, ನೆರವಿನಿಂದಲೇ ಜಗತ್ತು ನಡೆಯುತ್ತಿದೆ. ಇಂಥದೇ ಒಂದು ಅಪೂರ್ವ ಸಹಾಯದ ಘಟನೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯ ಕೊಠಡಿಯಲ್ಲಿ ನಡೆಯಿತು. ಮಂಗಳೂರು ಕಣ್ಣೂರಿನ ಸುಹಾನಾ ಎಂಬ ಬಾಲಕಿಯನ್ನು ಎರಡೂ ಕಾಲು ಕೊಳೆಯುವಂಥ ಅತ್ಯಂತ ಅಪರೂಪದ ಕಾಯಿಲೆಯ ಚಿಕಿತ್ಸೆಗೆ ಕಳೆದ ತಿಂಗಳು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅತ್ಯಂತ ಬಡ ಕುಟುಂಬದ ಅವರ ಬಳಿ ಚಿಕಿತ್ಸೆಗೆ ಹಣವಿರಲಿಲ್ಲ. ಈ ಬಾಲಕಿಯ ಚಿಕಿತ್ಸೆಗೆ ನೆರವು ನೀಡುವಂತೆ ಆಸಿಫ್ ಆಪತ್ಬಾಂಧವ ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದರು. ಆಸಿಫ್ ಮನವಿಗೆ …
Read More »ಬಿಹಾರ: ನಾಲ್ಕನೆ ಬಾರಿ ಎಂಎಲ್ಎ ಆಗಿಯೂ ಈ ಮುಸ್ಲಿಮ್ ನಾಯಕನಿಗೆ ಸರಿಯಾದ ಮನೆಯಿಲ್ಲ…!
ಕಟಿಹಾರ: ಭಾರತದಲ್ಲಿ ಒಂದು ಬಾರಿ ಪಂಚಾಯತ್ ಅಧ್ಯಕ್ಷ ಆದರೂ ಅವರ ಬಳಿಕ ಹಣದ ಕೊರತೆ ಇರುವುದಿಲ್ಲ. ಸರಪಂಚ್ ಆದ ವ್ಯಕ್ತಿ ಸೈಕಲ್ನಲ್ಲಿ ಹೋಗುತ್ತಿದ್ದಾತ ಕಾರಿನಲ್ಲಿ ಹೋಗ ತೊಡಗುತ್ತಾನೆ. ತನ್ನ ಐದು ವರ್ಷಗಳ ಅಧಿಕಾರದ ಅವಧಿಯಲ್ಲಿ ಅಸ್ತಿ ಮಾಡಿಕೊಳ್ಳುತ್ತಾನೆ. ಆದರೆ ಈ ಎಲ್ಲ ವಿಪರೀತಗಳ ಹೊರತಾಗಿಯೂ ನಾಲ್ಕು ಬಾರಿ ಶಾಸಕನಾದ ಸಿಪಿಐಯ ಮೆಹಬೂಬ್ ಅಲಂರ ಬಳಿ ಸರಿಯಾದ ಮನೆಯಿಲ್ಲ. ಅವರಿಗೆ ಒಂದು ಸರಿಯಾದ ಮನೆಯನ್ನೂ ಕಟ್ಟಿಸಿಕೊಳ್ಳಲು ಸಾಧ್ಯವಾಗಿಲ್ಲ. ವರದಿಯಾಗಿರುವ ಪ್ರಕಾರ ಮೆಹಬೂಬ್ ಅಲಂರು …
Read More »ಜಮಾಅತೆ ಇಸ್ಲಾಮಿ ಹಿಂದ್ ಸಿದ್ದಾಪುರ ಶಾಖೆಯ ವತಿಯಿಂದ ಸೀರತ್ ಸ್ವಚ್ಛತಾ ಅಭಿಯಾನ
ಸಿದ್ದಾಪುರ,ನ.12:- ಜಮಾಅತೆ ಇಸ್ಲಾಮಿ ಹಿಂದ್ ಸಿದ್ದಾಪುರ ಶಾಖೆಯ ವತಿಯಿಂದ ಪ್ರವಾದಿ ಜೀವನ ಮತ್ತು ಸಂದೇಶ ಪ್ರಚಾರಾರ್ಥ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮವನ್ನು ಸಿದ್ದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಚಾಲನೆ ನೀಡಿದರು. ನಂತರ ಮಾತನಾಡಿ ಸ್ವಚ್ಚತೆಗೆ ಆದ್ಯತೆ ನೀಡಿ ಶುಚಿತ್ವ ಕಾಪಾಡಿಕೊಂಡಲ್ಲಿ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದ್ದು ಸ್ವಚ್ಛ ಗ್ರಾಮವನ್ನಾಗಿಸಲು ಎಲ್ಲರೂ ಕೈಜೋಡಿಸಬೇಕಾಗಿದೆ. ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ನೇತೃತ್ವದಲ್ಲಿ ನಡೆಯುತ್ತಿರುವ ಸ್ವಚ್ಛತಾ ಆಂದೋಲನದ ಅಂಗವಾಗಿ ಅಂಗನವಾಡಿ ಕೇಂದ್ರಗಳ …
Read More »ಹುತಾತ್ಮ ಯೋಧನ ತಾಯಿಯಲ್ಲಿ ಚಿಕಿತ್ಸೆಗೆ ಹಣ ಇರಲಿಲ್ಲ; ಉಚಿತ ಚಿಕಿತ್ಸೆ ನೀಡಿದ ವೈದ್ಯ ಅಲ್ತಾಫ್ ಶೇಕ್
ದೇಶಕ್ಕಾಗಿ ಸೇವೆ ಮಾಡಿ ಹುತಾತ್ಮರಾದ ಸೈನಿಕರ ಕುಟುಂಬ ಯಾವಾಗಲೂ ನಮಗೆ ಮೊದಲ ಆದ್ಯತೆಯಾಗಿದೆ. ದೇಶಕ್ಕಾಗಿ ಹುತಾತ್ಮರಾದ ಸೈನಿಕರ ತಾಯಿಯೋರ್ವರು ಮೂತ್ರ ರೋಗದಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಅವರ ಬಳಿ ಹಣ ಇರಲಿಲ್ಲ. ಮಹಾರಾಷ್ಟ್ರದ ಔರಂಗಾಬಾದ್ ಮೂತ್ರತಜ್ಞರಾದ ವೈದ್ಯ ಅಲ್ತಾಫ್ ಶೇಕ್ ಆ ತಾಯಿಗೆ ಉಚಿತ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಉಚಿತ ಚಿಕಿತ್ಸೆ ನೀಡಿದ ಬಳಿಕ ಆ ತಾಯಿಯನ್ನು ಡಿಸ್ಚಾರ್ಜ್ ಮಾಡಿದಾಗ, ಅವರು ವೈದ್ಯರನ್ನು ತಬ್ಬಿಕೊಂಡು ಜೋರಾಗಿ ಅಳಲು ಪ್ರಾರಂಭಿಸಿದರು. ಈ …
Read More »ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಪ್ರೊ. ಇಮ್ರಾನ್ ಅಲಿ ಅನಾಲಿಟಿಕಲ್ ಕೆಮಿಸ್ಟ್ರಿಯಲ್ಲಿ ದೇಶದ ನಂ.1 ವಿಜ್ಞಾನಿ
ಸ್ಟ್ಯಾನ್ಫೋರ್ಡ್ ವಿವಿಯಿಂದ ಗೌರವ ಹೊಸದಿಲ್ಲಿ: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ರಸಾಯನ ಶಾಸ್ತ್ರ ವಿಭಾಗದ ಪ್ರೊಫೆಸರ್ ಇಮ್ರಾನ್ ಅಲಿ ಅವರನ್ನು ಅನಾಲಿಟಿಕಲ್ ಕೆಮಿಸ್ಟ್ರಿ ಕ್ಷೇತ್ರದ ಭಾರತದ ನಂ. 1 ವಿಜ್ಞಾನಿ ಹಾಗೂ ಜಗತ್ತಿನ 24ನೇ ಅತ್ಯುತ್ತಮ ವಿಜ್ಞಾನಿ ಎಂದು ಅಮೆರಿಕಾದ ಸ್ಟ್ಯಾನ್ಫೋರ್ಡ್ ವಿವಿಯ ವಿಜ್ಞಾನಿಗಳ ತಂಡವೊಂದು ಗುರುತಿಸಿದೆ. ಈ ಟಾಪ್ ವಿಜ್ಞಾನಿಗಳ ಪಟ್ಟಿಯನ್ನು ಖ್ಯಾತ ಪಿಎಲ್ಒಎಸ್ ಬಯಾಲಜಿ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಜಗತ್ತಿನಲ್ಲಿ ವಿವಿಧ ಕ್ಷೇತ್ರಗಳ ಅತ್ಯುತ್ತಮ 68,80,389 …
Read More »ಪ್ರವಾದಿ ‘ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ’ ವಿಚಾರಗೋಷ್ಠಿ
ಪ್ರವಾದಿ ‘ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ’ ಸೀರತ್ ಅಭಿಯಾನದ ಪ್ರಯುಕ್ತ ಜಮಾಅತೆ ಇಸ್ಲಾಮೀ ಹಿಂದ್ ಮಾನವಿ ವತಿಯಿಂದ ಸ್ಥಳೀಯ ಕುಬಾ ಮಸ್ಜೀದ್ ಸಭಾಂಗಣದಲ್ಲಿ ವಿಚಾರ ಗೋಷ್ಟಿಯನ್ನು ಹಮ್ಮಿಕೊಳ್ಳಲಾಯಿತು. ವಿಶೇಷ ಆಹ್ವಾನಿತರಾಗಿ ಆಗಮಿಸಿದ ಶ್ರೀ ರಾಜಾ ವೆಂಕಟಪ್ಪ ನಾಯಕ್ ದೊರೆ ಶಾಸಕರು ಮಾನವಿ ಸಭಿಕರನ್ನುದ್ದೇಶಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮುಖ್ಯ ಅತಿಥಿಗಳಾಗಿ ಶ್ರೀ ತಿಪ್ಪಣ್ಣ ಬಾಗಲವಾಡ, ಸಂಸ್ಥಾಪಕ ಅಧ್ಯಕ್ಷರು ಸಿದ್ಧಾರ್ಥ ಕಾಲೇಜು, ಶ್ರೀ ಮುತ್ತುರಾಜ್ ಶೆಟ್ಟಿ. ಗುಲ್ಬರ್ಗ ವಿಭಾಗೀಯ ಉಪಾಧ್ಯಕ್ಷರು, ಆರ್ಯವೈಶ್ಯ ಸಂಘ. …
Read More »ಪ್ರವಾದಿ ಮುಹಮ್ಮದ್(ಸ) ಮಹಾನ್ ಮಾನವತಾವಾದಿ- ಪ್ರೊ. ಮಹೇಶ್ ಚಂದ್ರಗುರು
ಮೈಸೂರು: ಪ್ರವಾದಿ ಮುಹಮ್ಮದ್ರವರು(ಸ) ಮಧ್ಯಪ್ರಾಚ್ಯದ ಮಕ್ಕಾದಲ್ಲಿ ಜನಿಸಿ ಅತ್ಯಂತ ಅರಾಜಕತೆ ಮತ್ತು ಶೋಷಣಾ ಪ್ರವೃತ್ತಿಗಳಿಗೆ ಗುರಿಯಾಗಿದ್ದಂತಹ ಸಮಾಜವನ್ನು ಮಾನವೀಯತೆ ಮತ್ತು ಸಮಾನತೆಯ ಕಡೆಗೆ ಮುನ್ನಡೆಸಿದರು ಎಂದು ಮೈಸೂರು ವಿಶ್ವವಿದ್ಯಾನಿಲಯ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಪ್ರಗತಿಪರ ಚಿಂತಕಾದ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಹೇಳಿದರು ಅವರು, ಜಮಾಅತೆ ಇಸ್ಲಾಮಿ ಹಿಂದ್ ಮೈಸೂರು ವತಿಯಿಂದ ನಗರದ ಎನ್.ಆರ್.ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿರುವ ಅರ್ಫಾತ್ ಫಂಕ್ಷನ್ ಹಾಲ್ನಲ್ಲಿ ಬುಧವಾರ ಆಯೋಜಿಸಿದ್ದ ‘ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ’ ಸಂವಾದ ಕಾರ್ಯಕ್ರಮದಲ್ಲಿ …
Read More »‘ಅನಾಥ ಮುತ್ತು’ ಪುಸ್ತಕ ಪರಿಚಯ
ಎಲ್ಲ ಕಾಲಗಳಲ್ಲೂ ಪ್ರವಾದಿ ಮುಹಮ್ಮದ್(ಸ) ಅವರ ಜೀವನ ಒಂದು ಚರ್ಚಾ ವಿಷಯವಾಗಿರುತ್ತದೆ. ಜಗತ್ತಿನಲ್ಲಿ ಅವರ ಕುರಿತು ಬರೆದಷ್ಟು ಇನ್ನಾರ ಕುರಿತೂ ಬರೆಯಲಾಗಿಲ್ಲ. ಅವರ ಚರಿತ್ರೆಯನ್ನು ಬರೆಯುವವರ ಸರಮಾಲೆ ಎಂದೂ ಕೊನೆಗೊಳ್ಳಲಿಲ್ಲ ; ಕೊನೆಗೊಳ್ಳುವುದೂ ಇಲ್ಲ. ಅದು ಕೇವಲ ಚರಿತ್ರೆ ಅಲ್ಲ, ಬದಲಾಗಿ ಅದೊಂದು ನಾಗರಿಕತೆ, ಸಂಸ್ಕೃತಿ ಮತ್ತು ಒಂದು ಜನಾಂಗದ ಉತ್ಥಾನ ವೃತ್ತಾಂತವಾಗಿದೆ. -ಶಾಂತಿ ಪ್ರಕಾಶನ- ದ ‘ಅನಾಥ ಮುತ್ತು’ ಎಂಬ ಗ್ರಂಥವು, ಪ್ರವಾದಿ ಮುಹಮ್ಮದ್(ಸ) ಅವರ ಬದುಕಿನ ಕುರಿತು …
Read More »ಅಂದು ಬಾಡಿಗೆ ಕೋಣೆಯ ಮದರಸ ; ಈಗ ಶಾಹೀನ್ ಸಂಸ್ಥೆ ವಿದ್ಯಾರ್ಥಿ ಕಾರ್ತಿಕ್ ಕರ್ನಾಟಕ NEET ಟಾಪರ್
ಬೀದರ್ : ಕರ್ನಾಟಕದ ಬೀದರ್ನ ಶಾಹೀನ್ ಸಂಸ್ಥೆಯು ನೀಟ್ ಪರೀಕ್ಷೆ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ಸಂಸ್ಥೆಯ ಕಾರ್ತಿಕ್ ರೆಡ್ಡಿ 720 ಅಂಕಗಳಿಗೆ 710 ಅಂಕ ಗಳಿಸಿ ಕರ್ನಾಟಕದ ನಂಬರ್ ಒನ್ ಟಾಪರ್ ಆಗಿದ್ದಲ್ಲದೇ ಅಖಿಲ ಭಾರತ ಮಟ್ಟದಲ್ಲಿ 9ನೇ ಸ್ಥಾನ ಪಡೆದಿದ್ದಾರೆ. ಅಲ್ಲದೇ ಅರ್ಬಜ್ ಅಹ್ಮದ್ ಎಂಬ ಲಾರಿ ಚಾಲಕನ ಮಗ 700 ಅಂಕಗಳೊಂದಿಗೆ ಕರ್ನಾಟಕದ 3ನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಮಾತ್ರವಲ್ಲ, ಬೀದರ್ನ ಶಾಹೀನ್ ಶಾಲೆಯಲ್ಲಿ ಇಂದು …
Read More »
IslamKannada News Portal