Home / ವಾರ್ತೆಗಳು / ಹೀಗೊಂದು ಮಾನವೀಯ ನೆರವು- ಸುಹಾನಾ ಚಿಕಿತ್ಸೆಗೆ ಬಂದ ಹಣದಲ್ಲಿ ಯತೀಶ್ ಶುಶ್ರೂಷೆಗೆ ಸಹಾಯ

ಹೀಗೊಂದು ಮಾನವೀಯ ನೆರವು- ಸುಹಾನಾ ಚಿಕಿತ್ಸೆಗೆ ಬಂದ ಹಣದಲ್ಲಿ ಯತೀಶ್ ಶುಶ್ರೂಷೆಗೆ ಸಹಾಯ

ಪರಸ್ಪರ ಸಹಾಯ, ನೆರವಿನಿಂದಲೇ ಜಗತ್ತು ನಡೆಯುತ್ತಿದೆ. ಇಂಥದೇ ಒಂದು ಅಪೂರ್ವ ಸಹಾಯದ ಘಟನೆ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯ ಕೊಠಡಿಯಲ್ಲಿ ನಡೆಯಿತು.

ಮಂಗಳೂರು ಕಣ್ಣೂರಿನ ಸುಹಾನಾ ಎಂಬ ಬಾಲಕಿಯನ್ನು ಎರಡೂ ಕಾಲು ಕೊಳೆಯುವಂಥ ಅತ್ಯಂತ ಅಪರೂಪದ ಕಾಯಿಲೆಯ ಚಿಕಿತ್ಸೆಗೆ ಕಳೆದ ತಿಂಗಳು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅತ್ಯಂತ ಬಡ ಕುಟುಂಬದ ಅವರ ಬಳಿ ಚಿಕಿತ್ಸೆಗೆ ಹಣವಿರಲಿಲ್ಲ. ಈ ಬಾಲಕಿಯ ಚಿಕಿತ್ಸೆಗೆ ನೆರವು ನೀಡುವಂತೆ ಆಸಿಫ್ ಆಪತ್ಬಾಂಧವ ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದರು.

ಆಸಿಫ್ ಮನವಿಗೆ ಸ್ಪಂದಿಸಿದ ಹೃದಯವಂತರು, ಸುಹಾನಾ ಚಿಕಿತ್ಸೆಗೆ 14 ಲಕ್ಷ ರೂ. ನೆರವು ನೀಡಿದ್ದರು. ಅದರಲ್ಲಿ ಆರು ಲಕ್ಷ ರೂ. ಆಸ್ಪತ್ರೆ ಬಿಲ್ ಪಾವತಿಸಲಾಗಿದೆ. ಇನ್ನೂ ಪ್ರತಿ ತಿಂಗಳು ಆಕೆಗೆ ಚಿಕಿತ್ಸೆಯ ಅಗತ್ಯವಿದೆ. ಗುರುವಾರ ಆಕೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾಳೆ.

ಇನ್ನೊಂದೆಡೆ ಕಾರ್ಕಳ ಇನ್ನಾ ಗ್ರಾಮದ ಯತೀಶ್ ಪೂಜಾರಿ 10 ದಿನಗಳ ಹಿಂದೆ ರಸ್ತೆ ಅಪಘಾತದಿಂದ ಗಾಯಗೊಂಡು ಕೋಮಾ ಸ್ಥಿತಿಯಲ್ಲಿ ಉಡುಪಿಯ ಆದರ್ಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರದ್ದು ಕೂಡಾ ಕಡು ಬಡತನದ ಕುಟುಂಬ. ಅವರ ನೆರವಿಗೂ ಆಸಿಫ್ ಧಾವಿಸಿದ್ದರು.

ಸುಹಾನಾ ಚಿಕಿತ್ಸೆಗೆ ಜಮೆಯಾಗಿ ಉಳಿಕೆಯಾದ ಹಣದಲ್ಲಿ ಒಂದು ಲಕ್ಷ ರೂ. ಮೊತ್ತದ ಚೆಕ್ಕನ್ನು ಆಕೆಯ ತಂದೆ ಝೈನುದ್ದೀನ್ ಅವರು ಯತೀಶ್ ಪೂಜಾರಿಯ ತಾಯಿ ಉಷಾ ಮತ್ತು ತಂದೆ ಚಂದ್ರಶೇಖರ್ ಅವರಿಗೆ ಹಸ್ತಾಂತರಿಸಿ, ಮಾನವೀಯ, ಸೌಹಾರ್ದ ಮತ್ತು ಸಹೋದರತೆಯ ಸಂದೇಶವನ್ನು ನಮಗೆ ನೀಡಿದ್ದಾರೆ.
ಈ ಅಪೂರ್ವ ಸೇವೆಗೆ ದೀಪಕ್ ಕೋಟ್ಯಾನ್ ಕಾರ್ಕಳ, ರಫೀಕ್ ಮಾಸ್ಟರ್, ಆಸಿಫ್ ಆಪತ್ಬಾಂಧವ ಹಾಗೂ ನಾನೂ ಸಾಕ್ಷಿಯಾದೆ. ಯತೀಶ್ ಶೀಘ್ರ ಗುಣಮುಖರಾಗಲಿ. ಇಂಥ ನೆರವಿನ ಅಪೂರ್ವ ಘಟನೆಗಳು ಇನ್ನಷ್ಟು ನಡೆಯುತ್ತಿರಲಿ.

  • ಆರಿಫ್ ಪಡುಬಿದ್ರಿ
SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …