ಕಟಿಹಾರ: ಭಾರತದಲ್ಲಿ ಒಂದು ಬಾರಿ ಪಂಚಾಯತ್ ಅಧ್ಯಕ್ಷ ಆದರೂ ಅವರ ಬಳಿಕ ಹಣದ ಕೊರತೆ ಇರುವುದಿಲ್ಲ. ಸರಪಂಚ್ ಆದ ವ್ಯಕ್ತಿ ಸೈಕಲ್‍ನಲ್ಲಿ ಹೋಗುತ್ತಿದ್ದಾತ ಕಾರಿನಲ್ಲಿ ಹೋಗ ತೊಡಗುತ್ತಾನೆ. ತನ್ನ ಐದು ವರ್ಷಗಳ ಅಧಿಕಾರದ ಅವಧಿಯಲ್ಲಿ ಅಸ್ತಿ ಮಾಡಿಕೊಳ್ಳುತ್ತಾನೆ. ಆದರೆ ಈ ಎಲ್ಲ ವಿಪರೀತಗಳ ಹೊರತಾಗಿಯೂ ನಾಲ್ಕು ಬಾರಿ ಶಾಸಕನಾದ ಸಿಪಿಐಯ ಮೆಹಬೂಬ್ ಅಲಂರ ಬಳಿ ಸರಿಯಾದ ಮನೆಯಿಲ್ಲ. ಅವರಿಗೆ ಒಂದು ಸರಿಯಾದ ಮನೆಯನ್ನೂ ಕಟ್ಟಿಸಿಕೊಳ್ಳಲು ಸಾಧ್ಯವಾಗಿಲ್ಲ.
ವರದಿಯಾಗಿರುವ ಪ್ರಕಾರ ಮೆಹಬೂಬ್ ಅಲಂರು ಬಿಹಾರದ ಕಟಿಯಾರ ಜಿಲ್ಲೆಯವರು. ಬಲರಾಮಪುರ ಶಾಸಕನಾಗಿ ನಾಲ್ಕನೇ ಬಾರಿ ಗೆದ್ದು ಬಂದಿದ್ದಾರೆ. ಈ ಬಾರಿ ಆಲಂ ಬಿಹಾರ ವಿಧಾನಸಭೆಗೆ ಎಲ್ಲರಿಗಿಂತ ಹೆಚ್ಚು ಬಹುಮತದಿಂದ ಗೆದ್ದಿದ್ದಾರೆ. ಅವರು ಈಗಲೂ ಅತ್ತಿತ್ತ ನಡೆದೇ ಹೋಗುತ್ತಿದ್ದಾರೆ. ಈ ಬಾರಿ ಬಿಹಾರ ಚುನಾವಣೆ ಗೆದ್ದವರಲ್ಲಿ ಶೇ.81ರಷ್ಟು ಮಂದಿ ಕೋಟ್ಯಾಧೀಶರು ಎನ್ನಲಾಗುತ್ತಿದೆ. ಇವರ ನಡುವೆ ಮೆಹಬೂಬ್ ಆಲಂ ಒಂದು ಸರಿಯಾದ ಮನೆಯೂ ಇಲ್ಲದ ಶಾಸಕನಾಗಿ ಆಯ್ಕೆಯಾಗಿದ್ದು ದೊಡ್ಡ ಚರ್ಚೆಯ ವಿಷಯವಾಗುತ್ತಿದೆ.
ಮೆಹಬೂಬ್‍ರವರು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸಿಪಿಐ ಟಿಕೆಟ್‍ನಿಂದ ನಾಲ್ಕನೆ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಈ ಬಾರಿ 53 ಸಾವಿರ ಮತಗಳ ಅಂತರದಿಂದ ತಮ್ಮ ಪ್ರತಿಸ್ಪರ್ಧಿಯನ್ನು ಸೋಲಿಸಿದ್ದಾರೆ. ಮೆಹಬೂಬ್ ಅಲಂ ಹತ್ತನೆ ತರಗತಿ ಕಲಿತಿದ್ದಾರೆ. ಅವರಿಗೆ ಹೊಲಗಳಿವೆ. ಅವರ ವಯಸ್ಸು ಕೇವಲ 44 ವರ್ಷ ಮಾತ್ರ ಆಗಿದೆ.
Mehboob Alam of CPI ML elected 4th time in a row from Balrampur,Katihar seat in Bihar …Won by a huge margin ,purely by his work , doesn't have his pucca makan yet .
It's his son here . pic.twitter.com/4l0AcUNy3n— Kishlay Sharma (@Kishlaysharma) November 12, 2020
IslamKannada News Portal
