Home / ವಾರ್ತೆಗಳು (page 18)

ವಾರ್ತೆಗಳು

“ಪ್ರವಾದಿ ಮುಹಮ್ಮದ್(ಸ) ಜೀವನ ಮತ್ತು ಸಂದೇಶ” ಪುಸ್ತಕ ಪರಿಚಯ

-ಪ್ರೊ| ಜವರೇಗೌಡ ಈ ಗ್ರಂಥದ ಮುನ್ನುಡಿಯಲ್ಲಿ ಬರೆಯುತ್ತಾರೆ…. ಮುಹಮ್ಮದ್‍ರಂತಹ(ಸ) ಮಹಾ ಪ್ರವಾದಿಗಳ ಜೀವನ ಯಾತ್ರೆಯ ಪಥ ಸಸಿನವೂ ಅಲ್ಲ; ಸರಾಗವೂ ಅಲ್ಲ ; ನಿಷ್ಕಂಟಕವೂ ಅಲ್ಲ ಎಂಬುದು ಲೋಕವೇದ್ಯ. ಅವರು ಮುಳ್ಳಿನ ಕಿರೀಟ ಧರಿಸಿ, ಮುಳ್ಳಿನ ಹಾವುಗೆಯ ಮೇಲೆ, ಅಗ್ನಿಜ್ವಾಲೆಯ ನಡುವೆ, ಕೆಂಡದ ಕೊಂಡದಲ್ಲಿ ನಡೆಯಬೇಕಾಗುತ್ತದೆ. ದೇವನ ಪ್ರೀತಿ ಅವರಿಗೆ ಬಲು ಸುಲಭದಲ್ಲಿ ದೊರೆಯಲಿಲ್ಲ. ಅವರನುಭವಿಸಿದ ಕಷ್ಟ-ಸಂಕಷ್ಟಗಳಿಗೆ, ಬೇನೆ-ಬವಣೆಗಳಿಗೆ ಲೆಕ್ಕವಿಲ್ಲ. ದಿನ ಬೆಳಗಾದರೆ ಅವರು ಅಪಾಯದ ಅಂಚಿನಲ್ಲಿರುತ್ತಿದ್ದರು. ಭಾವುಕರಿಗೆ ಅದೊಂದು …

Read More »

‘ತಫ್ಹೀಮುಲ್ ಕುರ್‍ಆನ್’ ಆರು ಸಂಪುಟಗಳಲ್ಲಿ…

ಆಧುನಿಕ ಮನ-ಮಸ್ತಿಷ್ಕಗಳು ಸರೆಗೊಳ್ಳುವಂತಹ ‘ತಫ್ಹೀಮುಲ್ ಕುರ್‍ಆನ್’ ಸೆಯ್ಯದ್ ಅಬುಲ್ ಆಲಾ ಮೌದೂದಿ (ರ) ಅವರು ಅನುವಾದಿಸಿರುವ “ಪವಿತ್ರ ಕುರ್’ಆನ್’ ನ “ಜಗದ್ವಿಖ್ಯಾತ ವ್ಯಾಖ್ಯಾನ” ಗ್ರಂಥವಾಗಿದೆ. ಇದೊಂದು ಕೇವಲ ಕುರ್‍ಆನಿನ ಅನುವಾದ ಮಾತ್ರ ಅಲ್ಲ ;ಬದಲಾಗಿ ಪವಿತ್ರ ಕುರ್‍ಆನನ್ನು ವಿಶಾಲವಾಗಿ ಗ್ರಹಿಸಲು ಸಾಧ್ಯವಾಗಿಸುವ ಅಗಾಧ ಜ್ಞಾನ ಭಂಡಾರವಾಗಿದೆ. ಈ ಗ್ರಂಥದ ಅಧ್ಯಯನವು ; ಈ ಭೌತಿಕ ಜಗತ್ತಿನ ವಾಸ್ತವಿಕತೆ ಏನು, ಇದರಲ್ಲಿ ತಾನು ಮತ್ತು ತನ್ನ ಪಾತ್ರ ಹೊಣೆಗಾರಿಕೆಗಳೇನು ಎಂಬುದನ್ನು ಸವಿವರವಾಗಿ …

Read More »

‘ಶತ್ರುವತ್ಸಲ ಪ್ರವಾದಿ ಮುಹಮ್ಮದ್(ಸ)’ ಪುಸ್ತಕ ಪರಿಚಯ

ತನ್ನನ್ನು ನಿರಂತರವಾಗಿ ಪೀಡಿಸಿ ದೇಶ ಭ್ರಷ್ಟರನ್ನಾಗಿ ಮಾಡಿದ ಶತ್ರುಗಳಿಗೂ ಪ್ರವಾದಿ ಮುಹಮ್ಮದ್ (ಸ) ಅವರು ಪ್ರೀತಿ ವಾತ್ಸಲ್ಯವನ್ನು ಧಾರೆಯೆರೆಯಲಾದ ಇನ್ನೊಂದು ಉದಾಹರಣೆ ಜಗತ್ತಿನ ಇತಿಹಾಸದಲ್ಲಿ ಬೇರೆ ಸಿಗಲಾರದು. ಪ್ರವಾದಿವರ್ಯರಿಗೆ(ಸ) ಸತ್ಯದ ಸ್ಥಾಪನೆಗಾಗಿ ಎಂತೆಂತಹ ಭೀಕರ ಸಂಕಷ್ಟಗಳನ್ನು, ಸತ್ವಪರೀಕ್ಷೆಗಳನ್ನು ಎದುರಿಸಬೇಕಾಯಿತು; ಅವರ ಮೇಲೆ ಏನೆಲ್ಲ ಗತಿಸಿತು ಎಂಬುದನ್ನು ಯೋಚಿಸುವಾಗಲೇ ಮೈ ನವಿರೇಳುತ್ತದೆ. ಅಂತಹ ಘಟನೆಗಳ ಪೈಕಿ ಕೆಲವೊಂದನ್ನು ಇತಿಹಾಸದ ಪುಟಗಳಿಂದ ಆಯ್ದು ಯುವ ಲೇಖಕ ಮುಹಮ್ಮದ್ ಅಶ್ರಫ್ ಅವರು ‘ಶತ್ರುವತ್ಸಲ ಪ್ರವಾದಿ …

Read More »

ಪವಿತ್ರ ಕುರ್‌ಆನ್ ಆನ್‍ಲೈನ್ ಅಧ್ಯಯನ: ಜ್ಞಾನ ಪ್ರಸಾರಕ್ಕೊಂದು ಸ್ವಾಗತಾರ್ಹ ಕ್ರಮ- ಅಬ್ದುಸ್ಸಲಾಮ್ ಪುತ್ತಿಗೆ

ಮಂಗಳೂರು: ಮಂಗಳೂರಿನಲ್ಲಿ ಹಿದಾಯತ್ ಸೆಂಟರನ್ನು ಕೇಂದ್ರವಾಗಿರಿಸಿಕೊಂಡು ಪವಿತ್ರ ಕುರ್‌ಆನ್ ಅಧ್ಯಯನಕ್ಕಾಗಿ ಇತ್ತೀಚೆಗೆ ಆರಂಭಿಸಿರುವ ಆನ್‍ಲೈನ್ ಕೋರ್ಸ್ ಒಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಮ್ ಪುತ್ತಿಗೆಯವರು ತಿಳಿಸಿದರು. ಕುರ್‌ಆನ್ ಆನ್‍ಲೈನ್ ಅಧ್ಯಯನ ಸರಣಿಯ ಎರಡನೇ ಕೈಪಿಡಿಯ ಬಿಡುಗಡೆ ಸಮಾರಂಭಕ್ಕೆ ಕಳುಹಿಸಿದ ಶುಭ ಸಂದೇಶದಲ್ಲಿ ಅವರು ಈ ಮಾತನ್ನು ಹೇಳಿದರು. ಯಾವುದಾದರೂ ನಿರ್ದಿಷ್ಟ ಸ್ಥಳಕ್ಕೆ ಹೋಗಿ ಕಲಿಯಲು ಅನುಕೂಲ ವಿಲ್ಲದ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ಸಹಾಯವಾಗಲಿದೆ. ಅತ್ಯಾಧುನಿಕ …

Read More »

ಉಸ್ತಾದರುಗಳ ಮನೆ ಬಾಗಿಲಿಗೆ ರೇಷನ್

ಕೊರೋನಾ ಲಾಕ್‌ಡೌನ್ ನಿಮಿತ್ತ, ಕಳೆದ ಐದಾರು ತಿಂಗಳುಗಳಿಂದ ಉದ್ಯೋಗವಿಲ್ಲದೆ ಮನೆಯಲ್ಲೇ ಉಳಿದಿರುವ ಮಸೀದಿ-ಮದ್ರಸಗಳ ಉಸ್ತಾದರುಗಳ ಮನೆ ಬಾಗಿಲಿಗೆ, ಬೋಳಂಗಡಿ ಹವ್ವಾ ಜುಮ್ಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಙಲ್ ಮದನಿಯವರ ನೇತೃತ್ವದಲ್ಲಿ ಸುಮಾರು ಮೂವತ್ತೆಂಟು ಕುಟುಂಬಗಳಿಗೆ ಎರಡು ಸಾವಿರ ರೂಪಾಯಿಯ ರೇಷನ್‌ ಕಿಟ್ಟನ್ನು ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ವತಿಯಿಂದ, ವಿತರಿಸಲಾಯಿತು. ಬರೀ ಉಸ್ತಾದರುಗಳನ್ನು ಮಾತ್ರ ಗುರಿಯಾಗಿಸಿ ಹಮ್ಮಿಕೊಂಡ ಯೋಜನೆಯಾಗಿತ್ತಿದು. ಕೆಲವು ಮಸೀದಿ ಕಮಿಟಿಗಳು ಉಸ್ತಾದರುಗಳಿಗೆ …

Read More »

ಹಸಿರು ಕರಾವಳಿ ಅಭಿಯಾನ : ರಹ್ಮಾನಿಯಾ ಜುಮಾ ಮಸೀದಿ ಆವರಣದಲ್ಲಿ ತರಕಾರಿ ಬೀಜಗಳ ಬಿತ್ತನೆ

ಕೊಣಾಜೆ : ಹಸಿರು ಕರಾವಳಿ ಅಭಿಯಾನ -2020 ಇದರಂಗವಾಗಿ ಪಜೀರು ರಹ್ಮಾನಿಯಾ ಜುಮಾ ಮಸೀದಿ ಆವರಣದಲ್ಲಿ ತರಕಾರಿ ಬೀಜಗಳ ಬಿತ್ತನೆ ಮತ್ತು ಗಿಡ ವಿತರಣೆ ಕಾರ್ಯಕ್ರಮ ನಡೆಯಿತು. ಹಸಿರು ಕರಾವಳಿ ಅಭಿಯಾನದ ಬಂಟ್ವಾಳ ತಾಲೂಕು ಸಂಚಾಲಕ ರಿಝ್‌ವಾನ್ ಅಝ್‌ಹರಿ ಸದ್ರಿ ಅಭಿಯಾನದ ಮಹತ್ವ ಮತ್ತು ಅನಿವಾರ್ಯತೆಯ ಬಗ್ಗೆ ಮಾತನಾಡಿದರು. ಪಜೀರು ಮಸೀದಿಯ ಖತೀಬರಾದ ಇಬ್ರಾಹಿಂ ದಾರಿಮಿ ಸಾಂಕೇತಿಕವಾಗಿ ಬೀಜ ಬಿತ್ತನೆ ಮಾಡಿದರು. ಹ್ಯೂಮನ್ ಫೌಂಡೇಶನ್‌ನ ನಾಸಿರ್ ಅಹ್ಮದ್ ಸಾಮಣಿಗೆ ಮುಖ್ಯ …

Read More »

ಮಗನ ಹುಟ್ಟುಹಬ್ಬದ ದಿನ ಶಾಲೆಗೆ ಸ್ವಂತ ಖರ್ಚಿನಲ್ಲಿ ಪೈಂಟಿಂಗ್ ಮಾಡಿಸಿ ಶಿಕ್ಷಣ ಸಚಿವರ ಮೆಚ್ಚುಗೆಗೆ ಪಾತ್ರರಾದ ಹುಸೈನ್

ಬಾಗಲಕೋಟೆ, ಆ.21: ತನ್ನ ಮಗನ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಸರ್ಕಾರಿ ಶಾಲಾ ನೌಕರರೊಬ್ಬರ ಪ್ರಶಂಸಾರ್ಹ ಕೆಲಸಕ್ಕೆ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲಕಲ್ ತಾಲೂಕಿನ ಹಿರೇಸಿಂಗನಗುಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ‘ಡಿ’ ಗ್ರೂಪ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುವ ಮುಹಮ್ಮದ್ ಹುಸೈನ್ ಅವರು ತಮ್ಮ ಮಗನ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿದ್ದು, ತಮ್ಮ ಸ್ವಂತ ಖರ್ಚಿನಲ್ಲಿ ಶಾಲೆಗೆ ಪೈಂಟಿಂಗ್ ಮಾಡಿದ್ದಾರೆ. ಸುಮಾರು 30,000 ರೂ. ಖರ್ಚು ಮಾಡುವ ಮೂಲಕ ಅವರು ಶಾಲೆಗೆ ಪೈಂಟಿಂಗ್ ಮಾಡಿ …

Read More »

ಹಸಿರು ಕರಾವಳಿ ಅಭಿಯಾನ: ಸ್ಕೂಲ್ ಆಫ್ ಕುರ್‌ಆನಿಕ್ ಸ್ಟಡೀಸ್‌ನಲ್ಲಿ ಗಿಡ ನೆಡುವ ಕಾರ್ಯಕ್ರಮ

ಉಳ್ಳಾಲ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಆಯೋಜಿಸಿದ ‘ಹಸಿರು ಕರಾವಳಿ’ ಪರಿಸರ ಜಾಗೃತಿ ಅಭಿಯಾನದ ಭಾಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಇತ್ತೀಚಿಗೆ ಕೆ.ಸಿ.ರೋಡಿನಲ್ಲಿರುವ ಸ್ಕೂಲ್ ಆಫ್ ಕುರ್‌ಆನಿಕ್ ಸ್ಟಡೀಸ್ ವಿದ್ಯಾ ಸಂಸ್ಥೆಯಲ್ಲಿ ನಡೆಸಲಾಯಿತು. ಮುಖ್ಯ ಅಥಿತಿಗಳಾಗಿ ಎಸ್‌ಐಓ ರಾಷ್ಟ್ರಾಧ್ಯಕ್ಷರಾದ ಲಬೀದ್ ಶಾಫಿ ಗಿಡ ನೆಡುವ ಮೂಲಕ ಅಧಿಕೃತ ಚಾಲನೆ ನೀಡಿ ಹಸಿರಿನ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಎಸ್‌ಕ್ಯು‌ಎಸ್ ಇದರ ಮಾನೇಜಿಂಗ್ ಡೈರೆಕ್ಟರ್ …

Read More »

ಅಪಘಾತದ ಗಾಯಾಳು ಸೈನಿಕರ ರಕ್ಷಣೆಗೆ ಧಾವಿಸಿದ ಕಾಶ್ಮೀರಿಗಳು: ವೈರಲ್ ಆದ ‘ಕಾಶ್ಮೀರಿ ಇನ್ಸಾನಿಯತ್’

ಮೆಚ್ಚುಗೆಯ ಟ್ವೀಟ್ ಮಾಡಿದ ಸೇನಾಪಡೆಯ ಲೆಫ್ಟಿನೆಂಟ್ ಜನರಲ್ ಶ್ರೀನಗರ,ಆ.20: ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೇತ್‌ಪೊರಾದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸೈನಿಕರಿಗೆ ಸ್ಥಳೀಯರು ನೆರವಾಗುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಛಾಯಾಚಿತ್ರದಿಂದ ಪ್ರೇರಿತವಾಗಿ ಭಾರತೀಯ ಸೇನಾಪಡೆಯ ಲೆಫ್ಟಿನೆಂಟ್ ಜನರಲ್ ಜೀತ್‌ಸಿಂಗ್ ಧಿಲ್ಲೋನ್ ಅವರು ‘ಕಾಶ್ಮೀರಿಯತ್ ಸೂಫಿಯತ್ ಇನ್ಸಾನಿಯತ್ ’ ಎಂಬ ಹೃದಯಸ್ಪರ್ಶಿ ಸಂದೇಶದೊಂದಿಗೆ ಟ್ವೀಟ್ ಮಾಡಿದ್ದಾರೆ. ಆಗಸ್ಟ್ 20ರಂದು ಸೇನಾಪಡೆಯ ವಾಹನವೊಂದು ಲೇತ್ ಪೊರಾ ಸಮೀಪದ ಹೆದ್ದಾರಿಯಲ್ಲಿ …

Read More »

ಜಮಾಅತೆ ಇಸ್ಲಾಮೀ, ಹೆಚ್.ಆರ್.ಎಸ್ ತಂಡದಿಂದ ಬೆಳ್ತಂಗಡಿ ಭೇಟಿ

ಬೆಳ್ತಂಗಡಿ: ಕಳೆದ ವರ್ಷ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಬೆಳ್ತಂಗಡಿ ತಾಲೂಕಿನ ವಿವಿಧ ಪ್ರದೇಶಗಳ ಅರ್ಹ ಕುಟುಂಬಗಳಿಗೆ ಮನೆ ನಿರ್ಮಾಣ ಮತ್ತು ಮನೆ ರಿಪೇರಿ ಹಾಗೂ ಇನ್ನಿತರ ಅಗತ್ಯಗಳಿಗಾಗಿ ಜಮಾಅತೆ ಇಸ್ಲಾಮೀ, ಹೆಚ್.ಆರ್.ಎಸ್. ವತಿಯಿಂದ ಸಹಾಯ ನೀಡಲಾಗಿತ್ತು. ಅದರ ಬೆಳವಣಿಗೆಯ ಬಗ್ಗೆ ಪರಿಶೀಲನೆ ನಡೆಸಲು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಸಮೀಕ್ಷೆ ನಡೆಸಲು ಆಗಸ್ಟ್ 18ರಂದು ಮಂಗಳವಾರ ಜಮಾಅತ್‌, ಹೆಚ್.ಆರ್.ಎಸ್. ತಂಡ ಪುನಃ ಬೆಳ್ತಂಗಡಿ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ …

Read More »