ಪ್ರಶ್ನೆ: ಕೆಲವು ಮಸೀದಿಗಳಲ್ಲಿ ನಮಾಝ್‍ಗಾಗಿ ಬಳಸುವ ಮುಸಲ್ಲದಲ್ಲಿ ಹಲವಾರು ವಿನ್ಯಾಸಗಳು ಚಿತ್ರಗಳು ಇವೆ. ಚಿತ್ರವಿರುವ ಮುಸಲ್ಲಗಳಲ್ಲಿ ನಮಾಝ್ ಮಾಡಬಾರದೆಂದು ಹೇಳುತ್ತಾರೆ. ಇದು ಸರಿಯೇ?
ಉತ್ತರ: ಅಚೇತನವಾದ ವಸ್ತುಗಳ ಚಿತ್ರಗಳು ಅನುವದನೀಯವಾಗಿದೆ ಎಂಬ ವಿಷಯದಲ್ಲಿ ವಿದ್ವಾಂಸರ ಮಧ್ಯೆ ತರ್ಕವಿಲ್ಲ. ಮಸೀದಿಯನ್ನು ಅಲಂಕರಿಸುವ ಭಕ್ತಿಪೂರ್ಣವಾದ ಕಲಾಕೃತಿಗಳು ಎಂಬ ನೆಲೆಯಲ್ಲಿ ಅಂತಹ ಮುಸಲ್ಲಗಳಿಗೆ ಪ್ರಚಾರ ದೊರೆತಿರಬಹುದು. ಆದರೆ ನಮಾಝ್ ಮಾಡುವವರ ಗಮನ ತಪ್ಪುವ ರೀತಿಯ ಮುಸಲ್ಲಗಳು ಅಥವಾ ಇತರ ಅಲಂಕಾರಗಳು ನಮಾಝ್ ನಿರ್ವಹಿಸುವ ಸ್ಥಳದಲ್ಲಿದ್ದರೆ ಅಂತಹವುಗಳನ್ನು ತೆರವುಗೊಳಿಸುವುದು ಉತ್ತಮವಾಗಿದೆ.
IslamKannada News Portal
