Home / ಲೇಖನಗಳು / ರಮಝಾನ್: ನಾವು ಮಾಡಬೇಕಿರುವುದೇನು?

ರಮಝಾನ್: ನಾವು ಮಾಡಬೇಕಿರುವುದೇನು?

@ ಅಬೂ ಮಾಝ್, ಕಾರ್ಕಳ

ರಮಝಾನ್ ತಿಂಗಳು ಮತ್ತೊಮ್ಮೆ ನಮ್ಮ ಜೀವನದಲ್ಲಿ ಲಭಿಸಿದೆ.
ಅದೆಷ್ಟೋ ನಮ್ಮ ಸಹೋದರ ಸಹೋದರಿಯರಿಗೆ ಗತಿಸಿ ಹೋದ ರಮಝಾನ್ ತಿಂಗಳೇ ಜೀವನದ ಕೊನೆಯ ರಮಝಾನ್ ಆಗಿತ್ತು.  ಆದರೆ ಅವರಿಗೆ ತಿಳಿದಿರಲಿಲ್ಲ. ಅದೇ ರೀತಿ ಈ ಬರುವ ರಮಝಾನ್ ನಮ್ಮ ಕೊನೆಯ ರಮಝಾನ್ ಕೂಡಾ ಆಗಿರಲಿಕ್ಕೆ ಸಾಧ್ಯತೆ ಇದೆ.  ಅದನ್ನು ಮುಂದಿಟ್ಟು ಈ ರಮಝಾನ್ ತಿಂಗಳ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಪ್ರಯತ್ನಿಸಬೇಕಾದುದು ನಮ್ಮ ಮುಂದಿರುವ  ಜವಾಬ್ದಾರಿ.

ಈ ತಿಂಗಳು ಒಂದು ಕಡೆ ಉಪವಾಸಿಗರಿಗೆ ತರಬೇತಿಯ ತಿಂಗಳಾಗಿದ್ದರೆ ಇನ್ನೊಂದೆಡೆ ಪಾಠ ಪರಿಹಾರದ ತಿಂಗಳಾಗಿರುತ್ತದೆ. ಅದಲ್ಲದೆ  ಈ ತಿಂಗಳ ಉಪವಾಸಗಳು ಒಂದೋ ನಮ್ಮ ಬಗ್ಗೆ ಇಲ್ಲವೇ ನಮ್ಮ ವಿರುದ್ಧ ಸಾಕ್ಷಿ ನೀಡಲಿರುವುವು. ಇದನ್ನೆಲ್ಲಾ ತಿಳಿದ ಮೇಲೆ ಯಾವುದೇ ರೀತಿಯ ಅಸಡ್ಡೆ, ಸೋಮಾರಿತನ ತೋರಿಸುವಂತಿಲ್ಲ.

ಕುರ್‌ಆನಿನ ಮತ್ತು ಪ್ರವಾದಿ ವಚನಗಳ ಮೂಲಕ ಈ ಕೆಳಗಿನ ವಿಷಯಗಳ ಬಗ್ಗೆ ನಮಗೆ ಸ್ಪಷ್ಟ ಸಂದೇಶಗಳು ಲಭಿಸುತ್ತವೆ. ಅದನ್ನು ಮರೆಯದೆ ಅಧ್ಯಯನ ನಡೆಸುತ್ತ ಇದರ ಸಂಪೂರ್ಣ ಪ್ರಯೋಜನ ಪಡೆಯುವವರಾಗಬೇಕು.

1. ದಾಸ್ಯ ಪ್ರಜ್ಞೆ.
2. ಆತ್ಮಶುದ್ಧಿ.
3. ನಂಬಿಕೆಯಲ್ಲಿ ವೃದ್ಧಿ.
4. ಸಹನೆಯ ತರಬೇತಿ.
5. ನಿಷ್ಕಳಂಕವಾಗುವುದು.
6. ಕೃತಜ್ಞತೆ.
7. ಸಹೋದರತ್ವ ಬೆಳೆಸುವುದು
8. ಕರುಣೆ ವೃದ್ಧಿಸುವುದು.
9. ಆರಾಧನೆಗಳ ಮೂಲಕ ಅಲ್ಲಾಹನೊಂದಿಗೆ ಸಂಬಂಧ ವೃದ್ಧಿಸುವುದು.
10. ಕೆಡುಕಿನಿಂದ ದೂರ ಸರಿಯುವುದು.
11. ಒಳಿತನ್ನು ಬೆಳೆಸುವುದು.
12. ದಾನ ಧರ್ಮಗಳಲ್ಲಿ ವೃದ್ಧಿ.
13. ಜವಾಬ್ದಾರಿಯ ಅರಿವು.
14. ದೇವಾನಿಷ್ಠೆ ಅಥವಾ ತಕ್ವಾ ಹುಟ್ಟಿಸುವುದು.
15. ಕುರ್‌ಆನಿನೊಂದಿಗೆ ಸಂಬಂಧ ವೃದ್ಧಿಸುವುದು.
16. ಪುಣ್ಯಫಲ ಗಳಿಸುವ ಚಿಂತೆ
17. ಅಲ್ಲಾಹನ ದಿಕ್ರ್-ಸ್ತುತಿ.
18. ತೌಬಾ ಇಸ್ತಿಗ್ಫಾರ್.
19. ದುಆ.
20. ಸಹ್ರಿ.
21. ಇಫ್ತಾರ್.
22. ಮಗ್ಫಿರತ್‌ಗಾಗಿ ದುಆ.
23. ರಹಮತ್‌ನ ಬಯಕೆ.
24. ನರಕದಿಂದ ರಕ್ಷಣೆ.
25. ಬಾಬುಲ್ ರಯ್ಯಾನ್‌ನ ಬಯಕೆ.
26. ತೋರಿಕೆಯಿಂದ ದೂರ.
27. ಲೈಲತುಲ್ ಕದ್ರ್.
28. ಇಯ್ತಿಕಾಫ್.
29. ಉಪವಾಸದ ರಕ್ಷಣೆಯ ಚಿಂತೆ.
30. ನಾಲಗೆಯ ಮೇಲೆ ಹಿಡಿತ.
31. ಕೋಪದ ಮೇಲೆ ನಿಯಂತ್ರಣ.
32. ಇಫ್ತಾರ್ ಮಾಡಿಸುವುದು.
33. ತರಾವೀಹ್ ನೆರವೇರಿಸುವುದು.
34. ತಹಜ್ಜುದ್.
35. ಫಿತ್ರ್ ಝಕಾತ್.
36. ಈದುಲ್ ಫಿತ್ರ್ ಆಚರಣೆ.
37. ಸಂದರ್ಭ ಒದಗಿದರೆ ಉಮ್ರಾ ನೆರವೇರಿಸುವುದು.
38. ಪರಸ್ಪರ ಸಂಬಂಧ ಉತ್ತಮಗೊಳಿಸುವುದು.
39. ಕ್ಷಮಿಸುವುದು.
40. ಶವ್ವಾಲಿನ ಆರು ಉಪವಾಸವಿಡುವುದು.
ಈ ಬಗ್ಗೆ ಒಂದೊಂದು ವಿಷಯವನ್ನು ಪ್ರವಾದಿ ವಚನಗಳಿಂದ ಅರಿತು ಅದನ್ನು ಪಾಲಿಸಬೇಕಾಗಿರುವುದು ಅತೀ ಅಗತ್ಯ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …