Home / ಪ್ರಶ್ನೋತ್ತರ / ಸಾಯಿಬಾಬ ಮತ್ತು ಮುಸ್ಲಿಮ್ ಬಾಬಾಗಳು?

ಸಾಯಿಬಾಬ ಮತ್ತು ಮುಸ್ಲಿಮ್ ಬಾಬಾಗಳು?

ಪ್ರಶ್ನೆ: ದೇವನು ಮಾನವ ರೂಪದಲ್ಲಿ ಅವತರಿಸುವುದಿಲ್ಲವೆಂದು ನೀವು ಹೇಳುತ್ತೀರಿ? ಹಾಗಾದರೆ ಭಗವಾನ್ ಸಾಯಿಬಾಬ ದೇವರ ಅವತಾರವಲ್ಲವೇ? ಬಾಬಾರ ಅದ್ಭುತ ಪವಾಡಕ್ಕೆ ಸಾವಿರಾರು ಮುಸ್ಲಿಮರೂ ಮಾರು ಹೋಗಿದ್ದಾರಲ್ಲಾ? ಅವರ ಕುರಿತು ನೀವೇನು ಹೇಳುವಿರಿ?

ದೇವರಿಗೆ ಅವತಾರವಿಲ್ಲವೆಂದು ನಾನು ಮಾತ್ರವಲ್ಲ ಪ್ರಖ್ಯಾತ ಹಿಂದೂ ವಿದ್ವಾಂಸರೂ ಆಧಾರ ಸಹಿತವಾಗಿ ಸಮರ್ಥಿಸಿದ್ದಾರೆ. ಮೊದಲೇ ಈ ಪ್ರಶ್ನೆಗೆ ಬಹಳ ವಿವರವಾಗಿ ವಿವರಿಸಿದ್ದೇನೆ. ಸತ್ಯ ಸಾಯಿಬಾಬ ಕೇವಲ ಓರ್ವ ಮನುಷ್ಯ ಮಾತ್ರ. 1926 ನವೆಂಬರ್ 23ಕ್ಕೆ ಅವರು ಜನಿಸಿದರು. ಅವರ ತಂದೆ ಪೆದ್ದವೆಂಕಪ್ಪರಾಜ, ತಾಯಿ ಈಶ್ವರಾಂಬ. ಆಂಧ್ರದ ಗೋಪಾಲಪಳ್ಳಿ ಗ್ರಾಮದಲ್ಲಿ ಜನನ. ಅದೇ ಪುಟ್ಟಪರ್ತಿಯೆಂದು ಪ್ರಸಿದ್ದವಾಗಿದೆ. ಸಾಯಿ ಬಾಬರು ಮರಣ ಹೊಂದಿದ್ದಾರೆ. ಮಣ್ಣಿನಲ್ಲಿ ಅವರ ದೇಹ ಲೀನವಾಗಿದೆ. ಆದರೆ ನಿರಾಕಾರನೂ, ಆಶ್ರಯದಾತನೂ, ಅನಾದಿಯೂ, ಅವಿಭಾಜ್ಯನೂ ಆದ ದೇವನು ಈ ಎಲ್ಲಾ ದೌರ್ಬಲ್ಯಗಳಿಂದ ಮುಕ್ತನಾಗಿದ್ದಾನೆ.

ಸಾಯಿ ಬಾಬಾರಿಗೆ ಚತುರ ಜಾದೂಗಾರನಿಗೆ ಹೊರತಾದ ಸಾಮರ್ಥ್ಯವೋ, ಅದ್ಭುತ ಶಕ್ತಿಯೋ ಇರಲಿಲ್ಲವೆಂದು ಜನಸಾಮಾನ್ಯರಿಗೆ ತಿಳಿಯುವಂತಹ ಘಟನೆಯನ್ನು ಅವರ ಜೀವನ ದಿಂದಲೇ ಹೆಕ್ಕಿ ತೆಗೆಯಬಹುದು. ಕೆಲವನ್ನು ಮಾತ್ರ ಇಲ್ಲಿ ಸೂಚಿಸಲಾಗಿದೆ.

1. ಪುಟ್ಟಪರ್ತಿ ಆಶ್ರಮದಲ್ಲಿ ಸಾಯಿಬಾಬಾರನ್ನು ಕೊಲ್ಲುವ ವಿಫಲ ಯತ್ನ ನಡೆಯಿತು. ಅಕ್ರಮಿಗಳ ಇರಿತದಿಂದ ಇಬ್ಬರು ಅಂಗರಕ್ಷಕರು ಹತರಾದರು. ಅನೇಕರಿಗೆ ಗಾಯವಾಯಿತು. ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರ ಗುಂಡಿಗೆ ನಾಲ್ವರು ಹಂತಕರ ಬಲಿಯಾಯಿತು. ಆದರೆ ಈ ಗೂಢಾಲೋಚನೆಯ ರಹಸ್ಯಗಳನ್ನು ಅರಿಯಲು ಸಾಯಿಬಾಬಾರಿಗೆ ಸಾಧ್ಯವಾಗಲಿಲ್ಲ. ಅಪರಾಧಿಗಳನ್ನು ಪತ್ತೆಹಚ್ಚಲು ಪೊಲೀಸರು ಬರಬೇಕಾಯಿತು. ಅದೂ ಸಾಲದೇ ಪೊಲೀಸ್ ನಾಯಿಗಳನ್ನೂ ಕರೆಸಬೇಕಾಯಿತು. ಸಾಯಿಬಾಬಾಗೆ ಪರೋಕ್ಷ ಜ್ಞಾನವೆಂಬುದು ಇದ್ದಿದ್ದರೆ ಅಕ್ರಮಿಗಳು ಆಶ್ರಮ ನಿವಾಸಿಗಳಾಗಿ ಸೇರಿಕೊಳ್ಳುತ್ತಿರಲಿಲ್ಲ, ಅಪರಾಧಿಗಳ ಪತ್ತೆಗೆ ಪೊಲೀಸರು, ಪೊಲೀಸ್ ನಾಯಿಗಳ ಅಗತ್ಯ ತಲೆದೋರುತ್ತಿರಲಿಲ್ಲ, ಘಟನೆಯ ಬಳಿಕ ಸಾಯಿಬಾಬರ ವಸತಿ ಕೇಂದ್ರಕ್ಕೆ ಪೊಲೀಸ್ ಭದ್ರತೆ ಅಗತ್ಯವಿರಲಿಲ್ಲ, ಅವರಿಗೆ ಅಮಾನುಷ ಶಕ್ತಿಯಿದ್ದರೆ ಪುಟ್ಟಪರ್ತಿ ಹಾಗೂ ಇತರೆಡೆ 500ಕ್ಕಿಂತಲೂ ಅಧಿಕ ಪೊಲೀಸ್ ಕಾವಲು ಅಗತ್ಯವಿರಲಿಲ್ಲ, ಪುಟ್ಟಪರ್ತಿಯ ಆಶ್ರಮ ನಿವಾಸಿಗಳಿಗೆ ಅವರ ದೈವಿಕ ಶಕ್ತಿಯಲ್ಲಿ ನಂಬಿಕೆಯಿಲ್ಲದ್ದರಿಂದಲೇ ಅವರನ್ನು ಕೊಲ್ಲಲು ಯತ್ನಿಸಿದ್ದರು.

2. 1993ರಲ್ಲಿ ಹೈದರಾಬಾದ್‌ನಲ್ಲಿ ಸಾಯಿಬಾಬಾ ಟ್ರಸ್ಟ್‌ನ ಒಂದು ಕಲ್ಯಾಣ ಮಂಟಪವನ್ನು ಪ್ರಧಾನ ಮಂತ್ರಿಯವರು ಉದ್ಘಾಟಿಸಿದರು. ಸಮಾರಂಭದಲ್ಲಿ ಅಂದಿನ ಗೃಹಸಚಿವ ಎಸ್.ಬಿ. ಚೌಹಾಣ್, ಕೃಷಿ ಸಚಿವ ಬಲ್‌ರಾಂದಾಕರ್‌, ಆಂಧ್ರ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳಾದ ವಿಜಯ ಭಾಸ್ಕರ ರೆಡ್ಡಿ, ಬಂಗಾರಪ್ಪ ಮೊದಲಾದ ಹಲವಾರು ಗಣ್ಯರು ಭಾಗವಹಿಸಿದ್ದರು. ಸಮಾರಂಭದಲ್ಲಿ ಸಾಯಿಬಾಬಾರು ಗಾಳಿಯಿಂದ ಚಿನ್ನದ ಸರ ತೆಗೆದು ಕಲ್ಯಾಣ ಮಂಟಪ ನಿರ್ಮಿಸಿದ ಶಿಲ್ಪಿಗೆ ಉಡುಗೊರೆಯಾಗಿ ನೀಡುತ್ತಾರೆ. ಆ ಸಮಾರಂಭವನ್ನು ದೂರದರ್ಶನ ನೇರ ಪ್ರಸಾರ ಮಾಡಿತ್ತು. ಇದು ಸಾಯಿಬಾಬಾರ ಪವಾಡದ ರಹಸ್ಯವನ್ನು ಬಯಲಿಗೆಳೆಯಲು ಸಾಧ್ಯವಾಯಿತು.

ಸಾಯಿಬಾಬಾ ತನ್ನ ನಿಕಟವರ್ತಿಯಿಂದ ಉಪಾಯದಿಂದ ಚಿನ್ನದ ಸರವನ್ನು ಪಡೆದುಕೊಂಡು, ಬಹಳ ಚಾಣಾಕ್ಷತನದಿಂದ ಕೈಯೊಳಗೆ ಇರಿಸಿದ್ದನ್ನು ಅದರಲ್ಲಿ ಸ್ಪಷ್ಟವಾಗಿ ಕಾಣಬಹುದು. ಕೋಟ್ಯಂತರ ಮನುಷ್ಯರನ್ನು ಹಾದಿ ತಪ್ಪಿಸುವ ಬಾಬಾರ ದಿವ್ಯಪವಾಡದ ನಿಜಸ್ಥಿತಿ ಮನವರಿಕೆಯಾಗುವ ಆ ಕಾರ್ಯಕ್ರಮವನ್ನು ದೂರದರ್ಶನ ಪ್ರಸಾರ ಮಾಡಲಿಲ್ಲ, ಆದರೆ ಈ ಉದ್ಘಾಟನಾ ಸಮಾರಂಭದ ವೀಡಿಯೋ ದೃಶ್ಯವನ್ನು ಪವಾಡ ಪುರುಷರ ಬಣ್ಣ ಬಯಲು ಮಾಡುವ ಅಂತಾರಾಷ್ಟ್ರೀಯ ಸಮಿತಿಯ ಭಾರತೀಯ ಸಂಯೋಜಕ ಸಿ. ಪ್ರೇಮಾನಂದ್ ಉಪಾಯದಿಂದ ಪಡೆದುಕೊಂಡರು. ಅದನ್ನು ವಿವಿಧೆಡೆ ಪ್ರದರ್ಶಿಸಲಾಯಿತು. ಸಾಯಿಬಾಬ ಹಾಗೂ ಅನುಯಾಯಿಗಳಿಗೆ ತೃಪ್ತಿಕರ ಉತ್ತರ ನೀಡಲು ಸಾಧ್ಯವಾಗಲಿಲ್ಲ,

3. ಶೂನ್ಯದಿಂದ ಭಸ್ಮ ಹಾಗೂ ಚಿನ್ನದ ಸರಗಳನ್ನು ತೆಗೆಯಲು ಸಾಧ್ಯವಾಗಿದ್ದರೆ ಔಷಧಿ ಹಾಗೂ ಇನ್ನಿತರ ವಸ್ತುಗಳನ್ನು ಮಾಡಲು ಸಾಧ್ಯವಾಗಬೇಕಿತ್ತಲ್ಲವೇ.? ಆದರೆ ಪುಟ್ಟಪರ್ತಿಯ ಆಸ್ಪತ್ರೆಗಳಿಗೆ ಸ್ವದೇಶದಿಂದ ಮಾತ್ರವಲ್ಲ ವಿದೇಶದಿಂದಲೂ ಔಷಧಗಳನ್ನು ತರಲಾಗುತ್ತಿತ್ತು. ಸಾಯಿಬಾಬಾರಿಗೆ ದಿವ್ಯ ಪವಾಡವಿದ್ದರೆ ರೋಗಿಗಳಿಗೆ ಸಾಂತ್ವನ ನೀಡಲು ಅತ್ಯಾಧುನಿಕ ತಂತ್ರಜ್ಞಾನದ ಆಸ್ಪತ್ರೆಗಳ ಅಗತ್ಯವಿರಲಿಲ್ಲ. ಪುಟ್ಟಪರ್ತಿಯಲ್ಲಿಯೂ ಕೂಡಾ ಇತರ ಆಸ್ಪತ್ರೆಗಳಂತೆ ರೋಗಿಗಳಿಗೆ ಶಸ್ತ್ರಕ್ರಿಯೆ ನಡೆಸಿ ಔಷಧಿಗಳನ್ನು ನೀಡಲಾಗುತ್ತಿತ್ತು. ಆದ್ದರಿಂದ ಪವಾಡವೆಂಬುದು ಎಲ್ಲಿಯೂ ಕಂಡು ಬಂದಿಲ್ಲ.

ಅವತಾರ ಪುರುಷರೆಂದು ಘೋಷಿಸಿಕೊಂಡವರು ಹಾಗೂ ಅವರ ಅನುಯಾಯಿಗಳು ಪವಾಡಗಳ ಕುರಿತು ಹಸಿ ಸುಳ್ಳನ್ನು ಹೇಳಲು ಹಿಂಜರಿಯುವುದಿಲ್ಲ. ಉದಾಹರಣೆಗೆ ಒಂದು ಘಟನೆಯನ್ನು ವಿವರಿಸುತ್ತೇನೆ.

ವಿಶ್ವಪ್ರಸಿದ್ದ ಸೈಕೋ ವಾಚ್ ಕಂಪೆನಿಯ ಮಾಲಕರು ಹೊಸ ಮಾದರಿಯ ಒಂದು ವಾಚ್ ನಿರ್ಮಿಸಿದರು. ಅದನ್ನು ಹೆಚ್ಚಿನ ಪರಿಶೀಲನೆಗಾಗಿ ತನ್ನ ಕಪಾಟಿನಲ್ಲಿ ಭದ್ರವಾಗಿರಿಸಿದರು.
ಅವರು ಬಿಡುವಿನ ವೇಳೆಯಲ್ಲಿ ಭಾರತಕ್ಕೆ ಬಂದಿದ್ದಾಗ ಪುಟ್ಟಪರ್ತಿಯನ್ನು ಸಂದರ್ಶಿಸಿದರು. ತನ್ನ ಭಕ್ತವೃಂದದ ನಡುವೆ ಜಪಾನ್ ದೇಶದ ವ್ಯಕ್ತಿಯನ್ನು ಕಂಡ ಸಾಯಿಬಾಬ ಅವರನ್ನು ಬಳಿಗೆ ಕರೆದರು. ಗಾಳಿಯಿಂದ ಒಂದು ಕಟ್ಟನ್ನು ತೆಗೆದು ಆತನಿಗೆ ನೀಡಿದರು. ಅದನ್ನು ಬಿಚ್ಚಿ ನೋಡಿ ಆ ವಾಚ್ ನಿರ್ಮಿಸಿದ ವ್ಯಕ್ತಿಗೆ ಆಶ್ಚರ್ಯವಾಯಿತು. ಅದು ಟೋಕಿಯೋದ ತನ್ನ ಕಪಾಟಿನಲ್ಲಿ ಜೋಪಾನವಾಗಿರಿಸಿದ ಹೊಸ ಮಾದರಿಯ ವಾಚ್ ಆಗಿತ್ತು. ಅದರ ಹೆಸರು, ಬೆಲೆ, ಬರೆದಿಟ್ಟ ಲೇಬಲ್ ಅಥವಾ ಅದನ್ನು ಕಟ್ಟಿದ್ದ ಸಿಲ್ಕ್ ರಿಬ್ಬನ್‌ನಲ್ಲೂ ಸ್ವಲ್ಪವೂ ವ್ಯತ್ಯಾಸವಿರಲಿಲ್ಲ, ಇದರೊಂದಿಗೆ ಸೈಕೋ ಕಂಪೆನಿಯ ಮಾಲಕನಿಗೆ ಸತ್ಯ ಸಾಯಿಬಾಬಾರ ದೈವಿಕ ಪವಾಡ ಕುರಿತ ಸಂಶಯಗಳೆಲ್ಲಾ ಮಾಯವಾಯಿತು. ಆತ ಸಾಯಿಬಾಬಾರ ಪಾದಗಳಿಗೆ ನಮಸ್ಕರಿಸಿ ಅವರ ಆರಾಧಕನಾಗಿ ಬಿಟ್ಟನು.

ಟೋಕಿಯೋಕ್ಕೆ ಮರಳಿದ ಬಳಿಕ ತಾನು ಲಾಕರ್‌ನಲ್ಲಿರಿಸಿದ ಕೈಗಡಿಯಾರ ಕಾಣೆಯಾಗಿದ್ದು ಕಂಡು ಸೈಕೋ ಕಂಪೆನಿಯ ಮಾಲಕ ದಿಗ್ಬ್ರಮೆಗೊಂಡರು. ತನ್ನ ಖಾಸಗಿ ಕಾರ್ಯದರ್ಶಿಯೊಂದಿಗೆ ವಿಷಯ ತಿಳಿಸಿದಾಗ, ಆತ ತುಂಬಾ ತಲೆಕೂದಲಿರುವ ದೇವಸಂಭೂತನಂತೆ ತೋರುವ ವ್ಯಕ್ತಿಯೊಬ್ಬರು ಒಂದು ದಿನ ಕಛೇರಿಗೆ ಬಂದು ಲಾಕರ್ ತೆರೆದು ವಾಚ್‌ನೊಂದಿಗೆ ಮರಳಿದ ವಿಷಯ ತಿಳಿಸಿದಾಗ ಆಶ್ಚರ್ಯ ಇಮ್ಮಡಿಯಾಯಿತು. ಭಾರತ ಸರ್ಕಾರದ ಮಾಜಿ ವಿಜ್ಞಾನ ಸಲಹಗಾರರಾಗಿದ್ದ ಡಾ| ಎಸ್. ಭಾಗವತ್ ಎಂ.ಎಸ್.ಸಿ, ಡಿ.ಎ.ಎಸ್.ಸಿ, ಪಿ.ಎಚ್.ಡಿ 1973ರಲ್ಲಿ ಎಸ್. ಕೆ. ನಾಯರ್‌ರ ಸಂಪಾದಕತ್ವದ ಮಲಯಾಳ ವಾರಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಈ ಘಟನೆಯನ್ನು ವಿವರಿಸಲಾಗಿತ್ತು.

ಪ್ರಸಿದ್ದ ವಿಚಾರವಾದಿಯಾಗಿದ್ದ ದಿವಂಗತ ಎ.ಟಿ. ಕೋವೂರ್ ಈ ಘಟನೆಯ ನಿಜಸ್ಥಿತಿಯನ್ನು ಪರೀಕ್ಷಿಸಲು ತೀರ್ಮಾನಿಸಿದರು. ಅದಕ್ಕಾಗಿ ಪುಟಪರ್ತಿಗೆ ಭೇಟಿ ನೀಡಿದ ಜಪಾನ್ ದೇಶದ ವ್ಯಕ್ತಿಯ ಹೆಸರು ಮತ್ತು ವಿಳಾಸ ತಿಳಿಸಬೇಕೆಂದು ಕೋವೂರ್ 1973 ಸೆಪ್ಟಂಬರ್ 11ರಂದು ಡಾ| ಭಾಗವತ್‌ರಿಗೆ ಪತ್ರ ಬರೆದರು. ಎರಡು ತಿಂಗಳು ಕಳೆದರೂ ಭಾಗವತ್‌ರಿಂದ ಪ್ರತಿಕ್ರಿಯೆ ಇಲ್ಲ, ಆದ್ದರಿಂದ ಕೋವೂರ್ ಶ್ರೀಲಂಕಾದ ಜಪಾನ್ ರಾಯಭಾರ ಕಛೇರಿಯಿಂದ ಸೈಕೋ ವಾಚ್ ನಿರ್ಮಾಪಕರ ವಿಳಾಸವನ್ನು ಪಡೆದರು. ನಂತರ 1973 ಅಕ್ಟೋಬರ್ 30ಕ್ಕೆ ಸೈಕೋ ವಾಚ್ ಕಂಪೆನಿಯ ಹಟೋರಿ ಆ್ಯಂಡ್ ಕಂಪನಿ ಲಿಮಿಟೆಡ್‌ನ ಅಧ್ಯಕ್ಷರಾದ ಶೋಜಿ ಹಟೋರಿಗೆ ಒಂದು ಪತ್ರವನ್ನು ಬರೆದರು. ಅದರಲ್ಲಿ ಡಾ| ಭಾಗವತರವರು ವಿವರಿಸಿದ ಘಟನೆಯನ್ನು ಸೇರಿಸಿದ ಬಳಿಕ ನಾಲ್ಕು ಪ್ರಶ್ನೆಯನ್ನು ಕೇಳಲಾಯಿತು.
1. ನೀವು ಅಥವಾ ನಿಮ್ಮ ಪಾಲುದಾರರು ಯಾವಾಗಲಾದರೂ ಭಾರತದಲ್ಲಿ ಸಾಯಿಬಾಬಾರನ್ನು ಸಂದರ್ಶಿಸಿದ್ದೀರಾ.?
2. ನಿಮಗೆ ಅಥವಾ ನಿಮ್ಮ ಯಾವುದೇ ಪಾಲುದಾರರಿಗೆ ಸಾಯಿಬಾಬಾರು ಶೂನ್ಯದಿಂದ ಕೈ ಗಡಿಯಾರ ಉಡುಗೊರೆಯಾಗಿ ನೀಡಿದ್ದಾರಾ.?
3. ನಿಮ್ಮ ಅಥವಾ ನಿಮ್ಮ ಯಾವುದೇ ಪಾಲುದಾರರೊಂದಿಗೆ ಖಾಸಗಿ ಕಾರ್ಯದರ್ಶಿಯವರು ಓರ್ವ ಅಪರಿಚಿತ ವ್ಯಕ್ತಿ ಬಂದು ಲಾಕರ್‌ನಿಂದ ವಾಚ್ ತೆಗೆದುಕೊಂಡು ಹೋಗಿ ದ್ದಾರೆಂದು ತಿಳಿಸಿದ್ದಾರಾ.?
4. ನಿಮ್ಮ ಪೈಕಿ ಯಾರಾದರೂ ಸಾಯಿಬಾಬಾರ ಭಕ್ತರಾಗಿದ್ದೀರಾ.?
ಸೈಕೋ ಕಂಪೆನಿಯ ಮಾಲಕ ಶೋಜಿ ಹಟೋರಿ 1973 ನವೆಂಬರ್ 8ಕ್ಕೆ ಕೋವೊರ್‌ರ ಪತ್ರಕ್ಕೆ ಉತ್ತರ ಕಳುಹಿಸಿದರು. ಅದರಲ್ಲಿ ಕೋವೋರ್‌ರ 4 ಪ್ರಶ್ನೆಗಳಿಗೂ ‘ಇಲ್ಲ’ ಎಂಬ ನಕಾರಾತ್ಮಕ ಉತ್ತರ ಬಂತು.
– ಎ.ಟಿ. ಕೋವೂರ್ ಪ್ರಸ್ತುತ ಉತ್ತರದ ಫೋಟೋ ಕಾಪಿಯನ್ನು ಡಾ| ಭಾಗವತ್‌ರಿಗೆ ಕಳುಹಿಸಿದರು. ಅದರಲ್ಲಿ ಶೋಜಿ ಹಟೋರಿ ಅಥವಾ ಅವರ ಪಾಲುದಾರರಲ್ಲದ ಯಾರಾದರೂ ವ್ಯಕ್ತಿಗಳು ಮಲಯಾಳಂ ಲೇಖನದಲ್ಲಿ ವಿವರಿಸಿದ ಘಟನೆಯ ಕಥಾ ಪಾತ್ರರೆಂದಾದರೆ ಅವರ ಹೆಸರು ವಿಳಾಸ ಕಳುಹಿಸಿ ಕೊಡುವಂತೆ ವಿನಂತಿಸಿದರು. ಆದರೆ ಪ್ರತಿಕ್ರಿಯೆಯೇ ಇರಲಿಲ್ಲ, ಆದ್ದರಿಂದ ಎ.ಟಿ. ಕೋವೂರ್ ಈ ಘಟನೆಯನ್ನೆಲ್ಲಾ ವಿವರಿಸಿ 1976 ಸೆಪ್ಟೆಂಬರ್ 12ರ ಟೈಮ್ಸ್ ಆಫ್ ಇಂಡಿಯಾದಲ್ಲಿ ಲೇಖನ ಬರೆದರು. ಆಗ ಡಾ| ಭಾಗವತ್ ಆಖಾಡಕ್ಕೆ ಇಳಿದರು. 1976 ನವೆಂಬರ್ 29ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಒಂದು ಸ್ಪಷ್ಟಿಕರಣ ನೀಡಿದರು. ಅದರಲ್ಲಿ ತನಗೆ ಅಂತಹ ಘಟನೆಯ ಕುರಿತು ತಿಳಿದೇ ಇಲ್ಲವೆಂದೂ, ತಾನು ಅಂತಹ ಲೇಖನ ಯಾವುದೇ ಭಾಷೆಯಲ್ಲೂ ಬರೆದೇ ಇಲ್ಲವೆಂದೂ ಸಮರ್ಥಿಸಲು ಪ್ರಯತ್ನಿಸಿದರು.
ಮಲಯಾಳ ವಾರಪತ್ರಿಕೆಯು ಸಾಯಿಬಾಬಾರ ದೈವಿಕ ಶಕ್ತಿಗೆ ಉದಾಹರಣೆಯಾಗಿ ಉದ್ದರಿಸಿದ ಸೈಕೋ ವಾಚ್‌ನ ಘಟನೆಯು ಮಹಾ ಸುಳ್ಳು ಹಾಗೂ ಉದ್ದೇಶಪೂರ್ವಕವಾಗಿ ಆ ಕಟ್ಟು ಕಥೆಯನ್ನು ರಚಿಸಲಾಗಿದೆಯೆಂದು ಎಲ್ಲರಿಗೂ ಸ್ಪಷ್ಟವಾಯಿತು.
(ವಿವರಣೆಗಾಗಿ Saibaba’s Miracles: An overview Edited By Dale Beyer Stein, Page 89-98 ನೋಡಿರಿ.)

ವಾಸ್ತವದಲ್ಲಿ ಪ್ರಪಂಚ ಸೃಷ್ಟಿಕರ್ತನಿಗಲ್ಲದೆ ಬೇರೆ ಯಾರಿಗೂ ಅಡಗಿಸಿಟ್ಟದ್ದನ್ನು ಹೊರತೆಗೆಯಲು, ಲೋಕದಲ್ಲಿರುವ ಪದಾರ್ಥಗಳಿಂದ ಅವುಗಳ ರೂಪಗಳನ್ನು ಬದಲಾಯಿಸಲು ಸಾಧ್ಯವೇ ಹೊರತು ಶೂನ್ಯದಿಂದ ಯಾವುದನ್ನೂ ಸೃಷ್ಟಿಸಲು ಸಾಧ್ಯವಿಲ್ಲ, ಅವರಿಗೆ ಪರೋಕ್ಷ ಹಾಗೂ ಭವಿಷ್ಯದ ಕುರಿತು ತಿಳಿಯಲು ಸಾಧ್ಯವಿಲ್ಲ, ಆದ್ದರಿಂದ ದೇವಮಾನವರೆಂದೂ, ದೇವನ ಅವತಾರವೆಂದು ಘೋಷಿಸುವವರು ಮಹಾವಂಚಕರು. ಅವರಲ್ಲಿ ವಿಶ್ವಾಸವಿರಿಸುವವರು ಅರಬಿ ಹೆಸರಿನವರಾದರೂ ಅಲ್ಲದಿದ್ದರೂ ಅವರು ಮೂಢನಂಬಿಕೆಯ ದಾಸರು, ದೇವನಲ್ಲಿ ಮಾತ್ರವಿರುವ ವಿಶೇಷತೆಗಳನ್ನು ಇತರಿಗಿದೆಯೆಂದು ಹೇಳಿ ಸೃಷ್ಟಿಗಳನ್ನು ಪಾಲುದಾರಗೊಳಿಸುವುದು ಅಕ್ಷಮ್ಯ ಅಪರಾಧವಾಗಿದೆ.

ಹಾಗಾದರೆ ದಿವ್ಯಶಕ್ತಿ ಇದೆ ಎಂದು ಹೇಳುವ ಮುಸ್ಲಿಮ್ ಬಾಬಾಗಳು?
ಅವರು ಕೂಡಾ ಮಹಾ ವಂಚಕರು. ದೇವನಿಗಲ್ಲದೆ ಬೇರಾರಿಗೂ ಅಗೋಚರ ಶಕ್ತಿ ಸಾಮರ್ಥ್ಯ ಇಲ್ಲ ಅಲೌಕಿಕ ದಾರಿಯ ಮೂಲಕ ಯಾರಿಗೂ ತಲೆನೋವು, ಹೊಟ್ಟೆನೋವು ಅಥವಾ ಮಾನಸಿಕ ರೋಗವನ್ನು ಬರಿಸಲು ಸಾಧ್ಯವಿಲ್ಲ, ಸಾಧ್ಯವಿದ್ದಿದ್ದರೆ ಎಲ್ಲರೂ ತಮ್ಮ ಶತ್ರುಗಳ ವಿರುದ್ದ ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದರು. ಬಾಬಾ, ಔಲಿಯಾಗಳು ಹಾಗೂ ಮಾಂತ್ರಿಕರೆಂದು ಮೆರೆಯುವವರು ಮುಗ್ಧ ಜನರ ಮಾರಣ ಹೋಮಗೈಯುವ ಆಡಳಿತಗಾರರಿಗೆ ಗುಣವಾಗದ ತಲೆ ನೋವನ್ನೋ ಅಥವಾ ಹೊಟ್ಟೆ ನೋವನ್ನೋ ನೀಡಲಿ. ಆದರೆ ಅದು ಖಂಡಿತಾ ಅಸಾಧ್ಯದ ಮಾತು. ಆದರೆ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದೆಯೇ ಗೋಚರಿಸಿದರೂ ಅಂಧವಿಶ್ವಾಸದ ಕೆಸರಲ್ಲಿ ಹೊರಳಾಡುತ್ತಿರುವವರಿಗೆ ನಿಜ ಸ್ಥಿತಿಯ ಅರಿವಾಗುವುದೇ ಇಲ್ಲ.

ಅವರು ಮಹಾವಂತರು. ದೇವನ ಹೊರತು ಯುಾರಿಗೂ ಅಗೋಚರ ಶಕ್ತಿ ಸಾಮರ್ಥ್ಯವಿಲ್ಲ, ಅಗೋಚರ ರೀತಿಯಲ್ಲಿ ಶತ್ರುಗಳಿಗೆ ತಲೆನೋವು, ಹೊಟ್ಟೆನೋವು ಅಥವಾ ಮಾನಸಿಕ ರೋಗವನ್ನು ಬರಿಸಲು ಸಾಧ್ಯವಿಲ್ಲ, ಸಾಧ್ಯವಿರುತ್ತಿದ್ದರೆ ಕ್ಲಿಂಟನ್ ರು ಮೋಸಿಕಾ ಹಾಗೂ ಸದ್ದಾಂ ಹುಸೈನರಿಗೆ ಲೋಕದೆಲ್ಲಡೆಯಿರುವ ಎಲ್ಲಾ ಭಗವಾನ್‌ಗಳನ್ನೂ, ‘ಅಮ್ಮಂದಿರನ್ನೂ, ಪುಣ್ಯ ಪುರುಷರನ್ನೂ, ಜಾಲಿಯಾಗಳನ್ನೂ ಸೇರಿಸಿ ಆ ಪ್ರಯತ್ನ ಮಾಡುತ್ತಿದ್ದರು. ಪವಾಡ ಪುರುಷರೆಂದು ಘೋವಿಸಿಕೊಂಡು ಔಲಿಯಾಗಳೆಂದು ಹೊಗಳಲ್ಪಡುವವರಿಗೆ ಅಂತಹ ಸಾಮರ್ಥ್ಯವಿದ್ದರೆ ಫೆಲಸ್ತೀನ್ ಜನತೆಯನ್ನು ಕ್ರೂರವಾಗಿ ಹಿಂಸಿಸುತ್ತಿರುವ ಇಸ್ರೇಲಿ ಆಡಳಿತಗಾರರಿಗೆ ಗುಣಪಡಿಸಲಾಗದಂತಹ ತಲೆನೋವೋ ಅಥವಾ ಹೊಟ್ಟೆನೋವೋ ಬರುವಂತೆ ಮಾಡಲಿ. ಇದು ಖಂಡಿತಾ ಸಾಧ್ಯವಿಲ್ಲ, ಅತಿ ಮಾನುಷ ಸಾಮರ್ಥ್ಯವಿದೆಯೆಂದು ಹೇಳಿಕೊಳ್ಳುವವರಿಗೆ ಸವತಃ ತಮ್ಮನ್ನೇ ರಕ್ಷಸಲು ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ವಧಿಸಲ್ಪಟ್ಟ ಹಾಗೂ ಮಾಂತ್ರಿಕನಾಗಿ ಮೆರೆದಿದ್ದ ತಿರುವಿಲಾ ಮಲೆಯ ಫಕೀರ್ ಉಪಾಪ್ಪರ ಅನುಭವವೇ ಇದಕ್ಕೆ ಸಾಕ್ಷಿ, ಮೂಡನಂಬಿಕೆಯ ದಾಸರು ಇದನ್ನು ಅರ್ಥಮಾಡಿಕೊಂಡಿಲ್ಲವೆಂಬುವುದೇ ವಾಸ್ತವೀಕತೆಯಾಗಿದೆ.

‘ದೇವರು – ಧರ್ಮ – ಧರ್ಮಗ್ರಂಥ ಸ್ನೇಹ ಸಂವಾದ’ ಕೃತಿಯಿಂದ

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …