ಮುಸಲ್ಮಾನರೇ ಹೇಳುವ ಹಾಗೆ, ಮುಸಲ್ಮಾನರು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುವುದು ಮತ್ತು ಅನುಸರಿಸುವುದು ತಮಗೆ ಇಸ್ಲಾಮ್ ಅನ್ನು ಅನುಗ್ರಹ ರೀತಿಯಲ್ಲಿ ಪರಿಚಯಿಸಿದ ಮಹಮ್ಮದ್ ಪೈಗಂಬರರನ್ನು.
ಮುಸಲ್ಮಾನರ ಪ್ರಕಾರ ಪ್ರವಾದಿರವರು ಬೋಧಿಸದೆ ಉಳಿದ ವಿಷಯಗಳೇ ಇಲ್ಲ. ದೈನಂದಿನ ಎಲ್ಲಾ ಚಟುವಟಿಕೆಗಳ ಮೇಲು ವೈಜ್ಞಾನಿಕ ತಳಹದಿಯ ಮೇಲೆ ಕೆಲವು ವಿಧಿವಿಧಾನಗಳನ್ನು ಹೇಳಿದ್ದಾರೆ ಎಂಬುದು ಅವರ ಅಚಲ ನಂಬಿಕೆ. ಹಾಗಾದರೆ ಸಾಂಕ್ರಾಮಿಕ ರೋಗಕ್ಕೆ ಸಂಭಂದಿಸಿದಂತೆ ಪ್ರವಾದಿರವರ ಸಂದೇಶ ಏನು ಎಂದು ಈ ಕಾಲಕ್ಕೆ ತುರ್ತಾಗಿ ಪರಾಮರ್ಶಿಸಲು ಹೊರಟಾಗ..
ಪ್ರವಾದಿ ರವರು ಹೇಳುತ್ತಾರೆ,
1.ಯಾವುದೇ ಊರಲ್ಲಿ ಸಾಂಕ್ರಾಮಿಕ ರೋಗ ಉಲ್ಭಣಿಸಿದಾಗ ಆ ಊರಿನವರು ಇನ್ನೊಂದು ಊರಿಗೆ ಹೋಗುವುದಾಗಲಿ ಇನ್ನೊಂದುಊರಿನವರು ಸಾಂಕ್ರಾಮಿಕ ರೋಗದಿಂದ ನರಳುತ್ತಿರುವ ಊರಿಗೆ ಬರುವುದಾಗಿ ಮಾಡಬಾರದು.
2. ಸಾಂಕ್ರಾಮಿಕ ರೋಗಕ್ಕೆ ತುತ್ತಾದ ಊರಿನಲ್ಲಿ ಸಾಮೂಹಿಕವಾದ ಪ್ರಾರ್ಥನೆ ಕೈಗೊಳ್ಳಬಾರದು.
3. ಸಾಂಕ್ರಾಮಿಕ ರೋಗ ಇದ್ದ ಸಮಯದಲ್ಲಿ ನಿಮ್ಮ ಮನೆಗಳೇ ನಿಮಗೆ ಮಸೀದಿ ಆಗಿರುತ್ತದೆ. ಆ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲ.
4. ರೋಗ ಇದ್ದಾಗಲೂ ಇಲ್ಲದೇ ಇದ್ದಾಗಲೂ ಸೀನುವಾಗ, ಆಕಳಿಸುವಾಗ ತಮ್ಮ ಕೈ ಯ ಮೇಲ್ಭಾಗ ಬಾಯಿಗೆ ಅಡ್ಡಲಾಗಿ ಹಿಡಿಬೇಕು.
4. ಮಲಮೂತ್ರ ವಿಸರ್ಜನೆ ಮಾಡಿದ ನಂತರ ಅಂಗಾಗಗಳನ್ನು, ಸ್ಥಳವನ್ನು ಶುದ್ಧ ನೀರಲ್ಲಿ ಶುಚಿ ಗೊಳಿಸಬೇಕು.
5. ಕಡ್ಡಾಯ ವಾದ ನಮಾಜಿಗೂ, ಇತರೆ ನಮಾಜಿಗೂ, ಮತ್ತು ಕುರಾನ್ ಮುಟ್ಟುವ ಮುಂಚೆ ಕಡ್ಡಾಯ ವಾಗಿ ಅಗಾಂಗ ಶುದ್ಧಿ ಮಾಡಲೇ ಬೇಕು…
ಈ ರೀತಿ ಹಲವಾರು ವಿಚಾರಗಳ ಬಗ್ಗೆ ಪ್ರವಾದಿಗಳು ಉಲ್ಲೇಖಿಸಿದ್ದಾರೆ ಮತ್ತು ಹಾಗೆಯೇ ಬದುಕಿದ್ದಾರೆ. ಹಾಗಿದ್ದರೂ ಕೂಡ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮಸೀದಿಯಲ್ಲಿ ನಮಾಜು ಮಾಡಲು ತೆರಳುವುದು. ಸರ್ಕಾರದ ಆದೇಶವನ್ನು ಮೀರಿ ಗುಂಪುಗುಂಪಾಗಿ ಸೇರುವುದು, ಸಾಮೂಹಿಕವಾಗಿ ಪ್ರಾರ್ಥನೆ ನಡೆಸುವುದು ಇವೆಲ್ಲವೂ ಏನನ್ನು ಸೂಚಿಸುತ್ತದೆ? ಕುರಾನಿನ ಬಗ್ಗೆ ಅರಿವಿಲ್ಲ ಪ್ರವಾದಿಗಳ ಸಂದೇಶಗಳ ಬಗ್ಗೆ ಜ್ಞಾನವಿಲ್ಲ ಅನ್ನುವಂತದ್ದು ಅಲ್ಲವೇ??
ನಾವು ಅಜ್ಞಾನಿಗಳು, ಮೂರ್ಖರು
ನಾವು ಪರಸ್ಪರ ಸಂಬಂಧಗಳನ್ನು ಬಲಿ ಕೊಡಲು ಸಾಮಾಜಿಕ ಅಸ್ವಸ್ಥತೆಯನ್ನು ಸೃಷ್ಟಿಸಲು
ಪ್ರವಾದಿಗಳ ಸಂದೇಶದ ವಿರುದ್ಧವೇ ಹೆಜ್ಜೆ ಹಾಕುತ್ತಿರುವ ಮತಾಂದ ಕ್ರಿಮಿಗಳು ಎಂಬುದನ್ನು ಸಾರಿ ಸಾರಿ ಹೇಳುತ್ತಿಲ್ಲವೇ?
ಆತ್ಮೀಯ ಪ್ರಜ್ಞಾವಂತ ಮತ್ತು ನಿಜವಾದ ಮುಸಲ್ಮಾನರೇ, ಮೇಲೆ ಹೇಳಿದ ವರ್ಗದವರಿಂದ ನೀವು ಅಂತರವನ್ನು ಕಾಯ್ದುಕೊಳ್ಳಲೇಬೇಕಾಗಿದೆ.
ಏಕೆಂದರೆ ಸಮಾಜ ಎಂದರೆ ಒಂದು ಧರ್ಮವಲ್ಲ ಬದಲಿಗೆ ಅದು ಹಲವಾರು ಧರ್ಮಗಳನ್ನೊಳಗೊಂಡಂತಹ ಒಂದು ಜೇನುಗೂಡು.
ಆ ಜೇನುಗೂಡಿಗೆ ಕಲ್ಲು ಹೊಡೆದು ಶಾಂತವಾಗಿರುವ ಜೇನುಗಳನ್ನು ಕೆರಳಿಸುವುದು ಆ ಮೂಲಕ ಶಾಂತಿಯ ಸಮಾಜವನ್ನು ಹಾಳು ಗೆಡವಲು ಕಾಯುತ್ತಿರುವ ಕಿಡಿಗೇಡಿಗಳ ನಡುವೆ ಹೇಗೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂಬ ಪರಿಜ್ಞಾನ ನಿಮಗಿರಲಿ. ಸತ್ಯ ಮತ್ತು ಮಿಥ್ಯ ನಡುವಿನ ಅಂತರ ಮತ್ತು ಅವುಗಳು ಸೃಷ್ಟಿಸಬಹುದಾದ ಅವಾಂತರಗಳನ್ನು ನೀವೇ ಅವರಿಗೆ ಹೇಳಿ ಸುಧಾರಿಸಬೇಕು.. ಇದು ಪ್ರಜ್ಞಾವಂತ ಮುಸಲ್ಮಾನರಲ್ಲಿ ನನ್ನ ಮನವಿ.
–ಮಹೇಂದ್ರ ಕುಮಾರ್
IslamKannada News Portal
