Home / ಲೇಖನಗಳು / ಏನಿದು ಹಿಜಾಬ್

ಏನಿದು ಹಿಜಾಬ್

ಸಮವಸ್ತ್ರದ ಬಟ್ಟೆಯನ್ನು ಹೆಚ್ಚುವರಿಯಾಗಿ ತಲೆಗೆ ಹಾಕಲು ಅನುಮತಿ ಕೇಳುವುದನ್ನು ಅರ್ಥವಿಲ್ಲದ ಹಿಜಾಬ್ (ತಲೆವಸ್ತ್ರ)  ವಿವಾದ ಎಂದು ಹೇಳುತ್ತಾ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಾದವನ್ನೇ ಸೃಷ್ಟಿಸಲಾಗಿದೆ.

ಮಾಧ್ಯಮಗಳು ಚರ್ಚಿಸುತ್ತಿರುವ ಹಿಜಾಬ್ / ಬುರ್ಖ ಎಂಬ ಪದ ಕುರ್ ಆನ್ ನಲ್ಲಿ ಹೆಣ್ಣಿನ ಉಡುಗೆಯ ಬಗ್ಗೆಯಾಗಲಿ, ತಲೆವಸ್ತ್ರದ ಬಗ್ಗೆಯಾಗಲಿ ಹೇಳುವಾಗ ಬಳಸಲಾಗಿಲ್ಲ.

ಹೆಣ್ಣಿನ ಉಡುಗೆಯ ಬಗ್ಗೆ ಹೇಳುವಾಗ ಬಿಕುಮುರಿಹಿನ್ನ ಅಲಾ ಜುಯೂಬಿಹಿನ್ನ (ಅನ್ನೂರ್ ಅಧ್ಯಾಯ) ಅರ್ಥಾತ್ ತಮ್ಮ ಎದೆಯ ಮೇಲೆ ತಮ್ಮ ಮೇಲು ಹೊದಿಕೆಯ ಸೆರಗನ್ನು ಹಾಕಿಕೊಂಡಿರಲಿ ಎಂದಷ್ಟೇ ಹೇಳಲಾಗಿದೆ. ಮೇಲುಹೊದಿಕೆ ಅಂದರೆ ತಲೆ ವಸ್ತ್ರವಾಗಿದೆ. ಅನ್ನೂರ್ ನಲ್ಲಿ ನೀಡಲಾದ ಆದೇಶಗಳು ಖಡ್ಡಾಯವಾಗಿದೆ.

ಹಾಗೆಯೇ ಅಹ್ ಝಾ ಬ್ ಅಧ್ಯಾಯದಲ್ಲಿ ಯುದ್ ನೀನ ಅಲೈಹಿನ್ನ ಮಿನ್ ಜಲಾಬೀಬಿಹಿನ್ನ ಎನ್ನಲಾಗಿದೆ. ಇದರ ಅರ್ಥ ವಿಶ್ವಾಸಿನಿಯರು ತಮ್ಮ ಮೇಲೆ ತಮ್ಮ ಚಾದರಗಳ ಸೆರಗನ್ನು ಇಳಿಸಿಕೊಳ್ಳಿರಿ ಎಂದಾಗಿದೆ.

*ಜಿಲ್ ಬಾಬ್ * ಎಂದರೆ ಅರಬಿಯಲ್ಲಿ ದೊಡ್ಡ ಚದ್ದರಕ್ಕೆ ಹೇಳಲಾಗುತ್ತದೆ. ಇದ್ ನಾ ಪದದ ಮೂಲಾರ್ಥ ಸುತ್ತಿಕೊಳ್ಳು ಅಥವಾ ಹತ್ತಿರಗೊಳಿಸು ಎಂದಾಗಿದೆ.
(ಚಾದರವನ್ನು ಸುತ್ತಿಕೊಳ್ಳು, ಹತ್ತಿರಗೊಳಿಸು, ಇಳಿಸಿಬಿಡು) ಎಂದಾಗುತ್ತದೆ.

ಮದೀನಾದಲ್ಲಿ ಈ ಸೂಕ್ತಗಳನ್ನು ಆಲಿಸಿದ ವಿಶ್ವಾಸಿನಿಯರಾದ ಮಹಿಳೆಯರು ಎಲ್ಲ ತೆಳುವಾದ ವಸ್ತ್ರಗಳನ್ನು ತೊರೆದು ದಪ್ಪಗಿನ ವಸ್ತ್ರಗಳನ್ನು ಆಯ್ದುಕೊಂಡು ಅವುಗಳನ್ನು ದುಪ್ಪಟವಾಗಿ ಬಳಸಿದರು.

ಪ್ರಭಾತ ನಮಾಝಿಗೆ ಮಸ್ಜಿದ್ ನಬವಿಗೆ ಆಗಮಿಸಿದ ಮಹಿಳೆಯರು ಮೈತುಂಬಾ ಸೆರಗು ಹೊದ್ದಿದ್ದರು. ಕೆಲವರು ಚಾದರಗಳನ್ನು ಶಿರವಸ್ತ್ರದಂತೆ ಧರಿಸಿದ್ದರು ಎಂಬುದು ಪ್ರವಾದಿ ಪತ್ನಿ ಆಯಿಶಾ(ರ)ರಿಂದ ವರದಿಯಾಗಿದೆ.

ಹೆಣ್ಣಿಗೆ ರಕ್ತಸಂಬಂಧಿಗಳಲ್ಲದವರ ಮುಂದೆ ಮುಖ ಮತ್ತು ಕೈ ಹೊರತು ಪಡಿಸಿ ಉಳಿದ ಭಾಗಗಳು ಗೋಚರಿಸುವುದು ಧರ್ಮಬದ್ಧವಲ್ಲ ಎಂಬುದು ಆಯಿಶಾ(ರ) ವರದಿ ಮಾಡಿದ ಪ್ರವಾದಿ ಮುಹಮ್ಮದ್(ಸ) ರ ಅಧಿಕೃತ ವಚನವಾಗಿದೆ. ಈ ಕಾರಣಕ್ಕಾಗಿ ಪ್ರಭುದ್ಧಳಾದ ಮುಸ್ಲಿಮ್ ಹುಡುಗಿಯರು ತಲೆ ವಸ್ತ್ರ ಹಾಕುತ್ತಾರೆ. ಎದೆಗೆ ಸುತ್ತಿಕೊಳ್ಳುತ್ತಾರೆ.

ಖಡ್ಡಾಯವಾದ ಕಾರಣ ಬಣ್ಣ ಯಾವುದೇ ಆಗಿದ್ದರೂ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರದ ಬಣ್ಣದ ಹೆಚ್ಚುವರಿ ಬಟ್ಟೆಗಾಗಿ ಅನುಮತಿ ಕೇಳುತ್ತಾರೆ. ಸ್ಕಾರ್ಫ್ ವಿವಾದ ಇಂದು ನಿನ್ನೆಯದಲ್ಲ. ಎಷ್ಟೋ ವರುಷಗಳಿಂದ ನಡೆದು ಬರುತ್ತಿಧೆ. ಹೆಚ್ಚಿನ ಕಡೆಗಳಲ್ಲಿ ಅನುಮತಿ ಇರುವುದರಿಂದ ಶಿಕ್ಷಣಕ್ಕೆ ಯಾವುದೇ ರೀತಿಯ ತೊಡಕಾಗಿಲ್ಲ.
ಶಿಕ್ಷಣ ಮತ್ತು ತಲೆವಸ್ತ್ರದ ಆಯ್ಕೆ ಬಂದಾಗ ಬಹುಪಾಲು ಹುಡುಗಿಯರು ಹಿಂದಿನಿಂದಲೂ ಶಿಕ್ಷಣವನ್ನು ಕಡೆಗಣಿಸಿದ್ದಾರೆ ಎಂಬುದು ಯಾರಿಗೂ ತಿಳಿಯದ ವಿಚಾರವೇನಲ್ಲ. ಪ್ರಾಥಮಿಕ ತರಗತಿಯಲ್ಲಿ ಸ್ಕಾರ್ಫ್ ಖಡ್ಡಾಯವಿಲ್ಲದ ಕಾರಣ ವಿವಾದವಾಗುವುದಿಲ್ಲ.

ಸ್ಕಾರ್ಫ್ ವಿವಾದವಾಗುವಂತಹ ವಿಷಯವೇ ಅಲ್ಲ. ಹಿಂದೆ ಎಲ್ಲ ಧರ್ಮೀಯರೂ ಧರಿಸುತ್ತಿದ್ದ, ಇಂದಿಗೂ ಎಲ್ಲ ಧರ್ಮೀಯರೂ ಧರಿಸುವಂತಹ ಮಾಮೂಲಿ ಉಡುಪು. ಅದಕ್ಕೆ *ಹಿಜಾಬ್ * ಎಂಬ ಅರಬಿ ಪದ ಬಳಸಿ ಮತಾಂಧರ ಉಡುಗೆ ಎಂಬಂತೆ ವೈಭವೀಕರಿಸಲಾಗಿದೆ.

‘ಸತಾಯಿಸಲ್ಪಡದಿರಲಿಕ್ಕಾಗಿ” ರುವ ಮಹಿಳೆಯ ಸರಳ ಉಡುಗೆ ಇಂದು ಸತಾಯಿಸಲ್ಪಡಲು ಕಾರಣವಾಗಿರುವುದರ ಬಗ್ಗೆ ಖೇದವಿದೆ.

✍️ಶಮೀರ ಜಹಾನ್

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …