Home / ವಾರ್ತೆಗಳು / ಮಕ್ಕಾದಲ್ಲಿ 9ನೇ ಅಂತಾರಾಷ್ಟ್ರೀಯ ಕು‌ರ್ ಆನ್ ಕಂಠಪಾಠ ಸ್ಪರ್ಧೆಗೆ ಚಾಲನೆ

ಮಕ್ಕಾದಲ್ಲಿ 9ನೇ ಅಂತಾರಾಷ್ಟ್ರೀಯ ಕು‌ರ್ ಆನ್ ಕಂಠಪಾಠ ಸ್ಪರ್ಧೆಗೆ ಚಾಲನೆ

ಮಕ್ಕಾ: ಸೌದಿ ಅರೇಬಿಯಾದ ಪವಿತ್ರ ನಗರವಾದ ಮಕ್ಕಾದಲ್ಲಿ ಅಂತಾರಾಷ್ಟ್ರೀಯ ಕುರ್‌ಆನ್ ಸ್ಪರ್ಧೆಯ 9ನೇ ಆವೃತ್ತಿಗೆ ಭಾನುವಾರ ಚಾಲನೆ ನೀಡಲಾಗಿದೆ. ಸೌದಿ ಯುವರಾಜನ ಮೇಲ್ವಿಚಾರಣೆಯಲ್ಲಿ ಅರಬ್ ದೇಶದ ರಕ್ಷಣಾ ಸಚಿವಾಲಯದ ಧಾರ್ಮಿಕ ವ್ಯವಹಾರಗಳ ವಿಭಾಗವು ಅಂತಾರಾಷ್ಟ್ರೀಯ ಕುರ್‌ಆನ್ ಸ್ಪರ್ಧೆಯನ್ನು ಆಯೋಜಿಸಿದೆ.

ಸತತ ಎಂಟು ದಿನಗಳ ಕಾಲ ಬೆಳಿಗ್ಗೆ ಮತ್ತು ಮಧ್ಯಾಹ್ನದ ಅವಧಿಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಸಬಕ್ ವೆಬ್‌ಸೈಟ್ ವರದಿ ಮಾಡಿದೆ.

27 ದೇಶಗಳ ಪ್ರತಿನಿಧಿಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ಪವಿತ್ರ ಕು‌ರ್ ಆನ್ ಕಂಠಪಾಠದ ವಿವಿಧ ವಿಭಾಗಗಳಲ್ಲಿ ಸ್ಪರ್ಧಾಳುಗಳು ಸ್ಪರ್ಧಿಸಲಿದ್ದಾರೆ. ಈ ಆವೃತ್ತಿಯಲ್ಲಿ ಮೊದಲ ಬಾರಿಗೆ “ಅತ್ಯಂತ ಸುಮಧುರ ಕಂಠ” ಎಂಬ ಹೊಸ ವಿಭಾಗವನ್ನು ಸೇರಿಸಲಾಗಿದೆ.

ಇದಲ್ಲದೇ, ಪವಿತ್ರ ಕು‌ರ್ ಆನ್ ಮತ್ತು ಕು‌ರ್ ಆನಿಕ್ ಸೈನ್ಸ್ ಎಂಬ ವಿಷಯಗಳಿಗೆ ಸಂಬಂಧಿಸಿದ ಇತರ ಸಹ ಕಾರ್ಯಕ್ರಮಗಳು ಕೂಡ ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.

ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸೌದಿ ರಕ್ಷಣಾ ಸಚಿವಾಲಯದ ಅಧಿಕಾರಿ ಮುಹಮ್ಮದ್ ಅಲ್-ಇಸ್ಸಾರವರು, ಕುರ್‌ಆನ್ ಕಂಠಪಾಠ, ಪಠಣ, ತಪ್ಸಿರ್ ವ್ಯಾಖ್ಯಾನ) ಮತ್ತು ತದಬ್ಬುರ್ (ಚಿಂತನೆ) ಮತ್ತು ಬೋಧನೆ ಸೇರಿದಂತೆ ಕುರ್‌ಆನಿನ ಚಟುವಟಿಕೆಗಳಿಗೆ ದೇಶವು ವಿಶೇಷ ಗಮನವನ್ನು ನೀಡುತ್ತದೆ ಎಂದರು.

40ಕ್ಕೂ ಹೆಚ್ಚು ದೇಶಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿತ್ತು ಎಂದು ಸಂಘಟನಾ ಸಮಿತಿಯ ಅಧಿಕಾರಿಯೊಬ್ಬರು ತಿಳಿಸಿದ್ದು, ಮುಸ್ಲಿಂ ಜಗತ್ತಿನ ಉನ್ನತ ಕುರ್‌ಆನ್ ತಜ್ಞರು ಹಾಗೂ ವಿದ್ವಾಂಸರು ಸ್ಪರ್ಧೆಯ ತೀರ್ಪುಗಾರರಾಗಿ ಸೇವೆ ಸಲ್ಲಿಸಲಿದ್ದಾರೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …