ವಾಶಿಂಗ್ಟನ್, ಅ. 28: ಫೆಲೆಸ್ತೀನ್ ಮ್ಯೂಝಿಯಂ ಒಂದು ಅಮೆರಿಕದ ವಾಶಿಂಗ್ಟನ್‍ನಲ್ಲಿ ಆರಂಭಗೊಂಡಿದೆ ಎಂದು ಪಾರ್ಸ್ ಟುಡೆ ಡಾಟ್‍ಕಾಮ್ ವರದಿ ಮಾಡಿದೆ. ಫೆಲಸ್ತೀನಿಯರ ದುಃಖ ಭರಿತ ಕತೆಯನ್ನು ಇಲ್ಲಿ ಅರಿತುಕೊಳ್ಳಬಹುದಾಗಿದೆ.
ಕಲಾವಿದ ಇಲ್ಲಿ ಜನರನ್ನು ನಿರ್ವಸಿತ ಗೊಳಿಸಿದ್ದು, ದೊಡ್ಡ ಗೋಡೆ ಎಬ್ಬಿಸಿ ಜನರನ್ನು ಹರಿಹಂಚಿದ್ದು ಇವೆಲ್ಲವೂ ಚಿತ್ರದ ಮೂಲಕ ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಬಸಾರಾ ನಝ್ಝಾರ್(31) ಮ್ಯೂಸಿಯಂ ಸಂಸ್ಥಾಪಕರಾಗಿದ್ದು ಹಾಲೊಕಾಸ್ಟ್ ಮ್ಯೂಝಿಯಂ ರೀತಿಯಲ್ಲಿಯೇ ಇದೆ.
The first Palestinian museum in Washington DC showcases the work of Palestinian artists from around the world. pic.twitter.com/qO653OCCUS
— Al Jazeera English (@AJEnglish) July 2, 2019
ನಝ್ಝಾರ್ 2011ರಲ್ಲಿ ಫೆಲೆಸ್ತೀನಿನಿಂದ ವಿದ್ಯಾರ್ಥಿಯಾಗಿ ಅಮೆರಿಕಕ್ಕೆ ಬಂದಿದ್ದರು. ಅವರು ಫೆಲಸ್ತೀನಿನ ಜನರ ದುಃಖವನ್ನು ಸ್ವಯಂ ಅನುಭವಿಸಿದ್ದರು. ಫೆಲಸ್ತೀನಿಯರು ತಮ್ಮ ದುಃಖ, ನೋವು, ವಿಚಾರ, ತಮ್ಮ ಇತಿಹಾಸ ಸಂಸ್ಕ್ರತಿಯನ್ನು ಪ್ರಕಟಿಸಬಹುದಾದಂತೆ ಯಾವ ಜಾಗವನ್ನು ತಾನು ನೋಡಿಲ್ಲ ಎಂದು ನಝ್ಝಾರ ಹೇಳುತ್ತಾರೆ. ಆದ್ದರಿಂದ ಆಫ್ರಿಕನ್, ಅಮೆರಿಕನ್ ಹಿಸ್ಟ್ರಿ ಕಲ್ಚರ್ ನ್ಯಾಶನಲ್ ಮ್ಯೂಝಿಯಂ ಪ್ರೇರಣೆಯಿಂದ ಈ ಹೆಜ್ಜೆ ಇಟ್ಟಿರುವೆ ಎಂದು ಅವರು ಹೇಳಿದರು.
IslamKannada News Portal
