Home / ವಾರ್ತೆಗಳು / ಮೌಲಾನ ರಬೀಅ ಹಸನ್ ನದ್ವಿಯವರನ್ನು ಸಂದರ್ಶಿಸಿದ ಟಿ. ಆರಿಫಲಿ

ಮೌಲಾನ ರಬೀಅ ಹಸನ್ ನದ್ವಿಯವರನ್ನು ಸಂದರ್ಶಿಸಿದ ಟಿ. ಆರಿಫಲಿ

ಹೊಸದಿಲ್ಲಿ,ಅ. 28: ಆಲ್ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡು ಅಧ್ಯಕ್ಷ ರಾಬಿ ಹಸನ್ ನದ್ವಿಯವರನ್ನು ಜಮಾಅತೆ ಇಸ್ಲಾಮೀ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಟಿ.ಆರಿಫಲಿ ಭೇಟಿಯಾಗಿದ್ದು ಬಾಬರಿ ಮಸೀದಿ ವಿಷಯದಲ್ಲಿ ಇಬ್ಬರೂ ಚರ್ಚಿಸಿದರು.

ಅಲ್ಲಾಹನ ಭವನ ಬಾಬರಿ ಮಸೀದಿಯ ಸಂರಕ್ಷಣೆ ಮುಸ್ಲಿಂ ಸಮಾಜದ ಜವಾಬ್ದಾರಿಯಾಗಿದ್ದು, ನ್ಯಾಯ ವ್ಯವಸ್ಥೆಯ ಪರಿಮಿತಿಯಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲಿ ನಾವೇನು ಮಾಡಬಹುದು ಎಂದು ಇಬ್ಬರು ಚರ್ಚಿಸಿದರು. ನಾವು ನೇಮಿಸಿದ ವಕೀಲರು ಅವರ ಕೆಲಸವನ್ನು ಉತ್ತಮವಾಗಿ ಮಾಡಿದರು. ಅವರು ಅರ್ಜಿಯಲ್ಲಿ ವಿಶ್ವಾಸ ಭಾವನೆಯನ್ನು ತಂದರು.

ನಮಗೆ ಮಾಡಲು ಸಾಧ್ಯವಿರುವುದು ಮಾತ್ರ ಮಾಡುವಂತೆ ಇಸ್ಲಾಮ್ ನಮಗೆ ಅನುಮತಿಸಿದೆ. ಭಾರತದ ಮಸೀದಿಗಾಗಿ ಹೋರಾಡಲೋ, ಸಮಸ್ಯೆವುಂಟು ಮಾಡಲೋ ಅಲ್ಲಾಹನು ನಮಗೆ ಹೊಣೆ ವಹಿಸಿಲ್ಲ. ಈಗಿನ ಸಮಸ್ಯೆ ಕಾನೂನಿದ್ದು. ಇದು ಸರಕಾರದ ಜವಾಬ್ದಾರಿಯಾಗಿದೆ. ಮುಸ್ಲಿಮರದ್ದೂ ಅಲ್ಲ. ಸುಪ್ರೀಂಕೋರ್ಟು ನ್ಯಾಯ ವ್ಯವಸ್ಥೆಯನ್ನು ನೋಡಿ ತೀರ್ಪು ನೀಡದಿದ್ದರೆ ಈ ನಿಲುವು ಭಾರತದೊಳಗೆ ಮತ್ತು ಹೊರಗೆ ಪ್ರಶ್ನಿಸಲ್ಪಡಬಹುದು. ಮುಂದಿನ ತಲೆಮಾರಿಗೆ ದೇಶ ಉತ್ತರಿಸಬೇಕಾಗಬಹುದು ಎಂದು ನದ್ವಿ ಹೇಳಿದರು.

ಹಲವು ಸವಾಲುಗಳನ್ನು ನಾವು ಎದುರಿಸುತ್ತಿದ್ದೇವೆ. ನಮ್ಮ ವಿಶ್ವಾಸ ಜೀವನ ಶೈಲಿ ಸುಧಾರಿಸುವುದು ಅತಿ ದೊಡ್ಡ ಸವಾಲಾಗಿದೆ. ಇಸ್ಲಾಮನ ಮಾನವೀಯತೆಯ ಆಶಯಗಳನ್ನು ದೇಶದ ಪ್ರಜೆಗಳ ಮುಂದೆ ಪ್ರಚಾರ ಮಾಡಬೇಕಾಗಿದೆ. ಇದು ನಮ್ಮ ಮುಖ್ಯ ಹೊಣೆಗಾರಿಕೆಯಾಗಿದೆ. ಇದಕ್ಕೆ ಮುಸ್ಲಿಮ್ ಸಮುದಾಯ ಮುಖ್ಯವಾಗಿ ಯುವಕರನ್ನು ತರಬೇತುಗೊಳಿಸಬೇಕಾಗಿದೆ. ಇದು ಮುಸ್ಲಿಂ ನಾಯಕರ ಜವಾಬ್ದಾರಿ ಎಂದು ನದ್ವಿ ಹೇಳಿದರು.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …