Home / ವಾರ್ತೆಗಳು / ಗಝಾಲ ಹಾಶ್ಮಿ ವರ್ಜಿನಿಯ ಸೆನೆಟ್ ಪ್ರತಿನಿಧಿಯಾಗಿರುವ ಮೊದಲ ಮುಸ್ಲಿಂ ಮಹಿಳೆ

ಗಝಾಲ ಹಾಶ್ಮಿ ವರ್ಜಿನಿಯ ಸೆನೆಟ್ ಪ್ರತಿನಿಧಿಯಾಗಿರುವ ಮೊದಲ ಮುಸ್ಲಿಂ ಮಹಿಳೆ

ವರ್ಜೀನಿಯ,ನ.13: ವರ್ಜೀನಿಯ ಸನೆಟ್‍ನ ಇತಿಹಾಸದಲ್ಲಿಯೇ ಮುಸ್ಲಿಂ ಮಹಿಳಾ ಪ್ರತಿನಿಧಿಯೊಬ್ಬರು ಆಯ್ಕೆಯಾಗಿದ್ದಾರೆ. ಕಳೆದ ವಾರ ನಡೆದ ಚುನಾಣೆಯಲ್ಲಿ ವರ್ಜೀನಿಯ ಡಿಸ್ಟ್ರಿಕ್ಟ್ ನಿಂದ ಭಾರತದ ಮೂಲದ ಗಝಾಲ ಗೆದ್ದಿದ್ದಾರೆ. ಅವರಿಗೆ ಪ್ರಚಂಡ ಬಹುಮತ ಸಿಕ್ಕಿತ್ತು.

ಡೆಮಕ್ರಾಟಿಕ್ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ತನ್ನ ಪ್ರಥಮ ಚುನಾವಣೆಯಲ್ಲಿಯೇ ಗೆಲುವು ಕಂಡಿದ್ದಾರೆ. ವರ್ಜೀನಿಯದಲ್ಲಿ ರಿಪಬ್ಲಿಕನ್ ಪಾರ್ಟಿ ನಿರೀಕ್ಷಿತ ಜಯ ಪಡೆಯಲು ವಿಫಲವಾಗಿದೆ.

ರಿಚ್ಮಂಡ್ ರೆನಾಲ್ಡ್ ಕಮ್ಯುನಿಟಿ ಕಾಲೇಜಿನ ಲಿಟರೇಚರ್ ಪ್ರೊಫೆಸರ್ ಆಗಿ ಗಝಾಲ್ 20 ವರ್ಷ ದುಡಿದ್ದಾರೆ. 1964ರಲ್ಲಿ ಹೈದರಾಬಾದಿನ ಝಿಯ ಹಾಶ್ಮೀ, ತನ್ವೀರ್ ಹಾಶ್ಮೀ ದಂಪತಿಯ ಮಗಳಾಗಿ ಗಝಾಲ ಜನಿಸಿದ್ದರು. ಗಝಾಲರ ತಂದೆ ಆಲಿಗಡ್ ಯುನಿವರ್ಸಿಟಿ ಯೂನಿಯನ್ ಅಧ್ಯಕ್ಷರಾಗಿದ್ದರು. ಗಝಾಲ ಜಾರ್ಜಿಯ ಸದರ್ನ್ ಯುನಿವರ್ಸಿಟಿಯಿಂದ ಪದವಿ ಪಡೆದಿದ್ದರು. ಅಟ್ಲಾಂಟೊ, ಎಂರಾಯ್ ಯನಿವರ್ಸಿಟಿಯಿಂದ ಡಾಕ್ಟರೇಟ್ ಪಡೆದುಕೊಂಡಿದ್ದಾರೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …