Home / ಲೇಖನಗಳು / ಪವಿತ್ರ ಕುರ್‍ಆನ್ ವಿವರಿಸುವ ಪ್ರವಾದಿ ನೂಹರ ಪುತ್ರ

ಪವಿತ್ರ ಕುರ್‍ಆನ್ ವಿವರಿಸುವ ಪ್ರವಾದಿ ನೂಹರ ಪುತ್ರ

ಅಮೆರಿಕ ಪ್ರೊಫೆಸರ್ ಗಬ್ರಿಯೇಲ್ ಸಈದ್ ರೆನಾಲ್ಡ್ ಪವಿತ್ರ ಕುರ್‍ಆನ್ ವಿವರಿಸಿದ ಪ್ರವಾದಿ ನೂಹರನ್ನು ನಿರಾಕರಿಸಿದ ಪುತ್ರನ ಕಥೆಯನ್ನು ತನ್ನ ಲೇಖನದಲ್ಲಿ ಭಿನ್ನವಾಗಿ ವಿಶ್ಲೇಷಿಸಿದ್ದಾರೆ. ಅಂದರೆ ಆಯಾ ಪ್ರವಾದಿಗಳ ಕುಟುಂಬ ಪ್ರವಾದಿಗಳನ್ನು ವಿರೋಧಿಸಿದ್ದನ್ನು ಅವರು ಜೋಡಿಸಿ ವಿಶ್ಲೇಷಿಸಿದ್ದಾರೆ. ರೆನಾಲ್ಡ್ ರಿಗೆ ದೇವ ಗ್ರಂಥದಲ್ಲಿ (ಸೆಮಿಟಿಕ್ ಗ್ರಂಥಗಳಲ್ಲಿ) ಅವರಿಗೆ ದೊಡ್ಡ ಮಟ್ಟದ ಪಾಂಡಿತ್ಯವಿದೆ.

ಪವಿತ್ರ ಕುರ್‍ಆನ್ ಮತ್ತು ಅದಕ್ಕಿಂತ ಹಿಂದಿನ ದೇವ ಗ್ರಂಥಗಳ ಬೆಳಕಿನಲ್ಲಿ ಪವಿತ್ರ ಕುರ್‍ಆನ್ ನೂಹರ(ಅ)ರ ಪುತ್ರ ನ ಕುರಿತು ಹೇಗೆ ವಿವರಿಸಿದೆ ಎಂದು ವಿಶ್ಲೇಷಣೆ ನಡೆಸಿದ್ದು, ಅವರು ಹೇಳುವ ಪ್ರಕಾರ ನೂಹರ ಪುತ್ರ ನೂಹರನ್ನು ನಿಷೇಧಿಸಿದ ಘಟನೆ ಮತ್ತು ಪ್ರವಾದಿ ಹಝ್ರತ್ ಇಬ್ರಾಹೀಮ್ (ಅ)ರನ್ನು ಅವರ ತಂದೆ ಅಝ್ಹರ್ ನಿಷೇಧಿಸಿದ ಘಟನೆಗೆ ಹೋಲಿಸಿ ಹೇಳುತ್ತಾರೆ. ಅಂದರೆ ಪ್ರತಿಯೊಂದು ಕುಟುಂಬಗಳ ವಿಶ್ವಾಸ ಮತ್ತು ಅವಿಶ್ವಾಸಗಳನ್ನು ಅವರು ವಿಶ್ಲೇಷಿಸಿದ್ದಾರೆ. ಪ್ರವಾದಿಗಳಿಗೆ ಕುಟುಂಬದಿಂದಲೇ ಮೊದಲ ವಿರೋಧ ಎದುರಿಸಬೇಕಾಯಿತು. ತೀರ ಆಪ್ತರೇ ದೇವ ಸಂದೇಶವನ್ನು ನಿರಾಕರಿಸಿ, ಪ್ರವಾದಿಗಳನ್ನು ಸುಳ್ಳಾಗಿಸುವುದರಲ್ಲಿ ಮುಂಚೂಣಿಯಲ್ಲಿದ್ದರು. ಇಂತಹ ಘಟನೆಗಳು ಮತ್ತು ಕಥೆಗಳನ್ನು ಪವಿತ್ರ ದೇವ ಗ್ರಂಥಗಳ ಆಧಾರದಲ್ಲಿ ರೆನಾಲ್ಡ್ ಪರಸ್ಪರ ಹೋಲಿಸಿ ನೋಡಿ ವಿವರಿಸುತ್ತಾರೆ.

ಜೊತೆಗೆ ಪವಿತ್ರ ಕುರ್‍ಆನ್ ವಿವರಿಸಿದ ಘಟನೆಯನ್ನು ತೌರಾತ್‍ನೊಂದಿಗೆ ಜೋಡಿಸಿ ವಿವರಿಸಿದ್ದಾರೆ. ಆಯಾ ಕಾಲದಲ್ಲಿ ಕುಟುಂಬದ ಜನರೇ ಪ್ರವಾದಿಗಳಿಗೆ ಶತ್ರುವಾಗಿದ್ದರು. ಅಂತಿಮವಾಗಿ ಪ್ರವಾದಿಗಳ ಶಿಕ್ಷಣವೇ ಉಳಿಯಿತು. ವಿರೋಧಿಗಳು ನಾಶವಾದರು. ಇದು ಎಲ್ಲ ಕಾಲದ ಜನ ಸಮುದಾಯಕ್ಕೆ ಪಾಠವಾಗಿದೆ.

ರೆನಾಲ್ಡ್ ಈ ಅರ್ಥದಲ್ಲಿ ಪ್ರವಾದಿ ನೂಹರ ನಿಷೇಧಿ ಪುತ್ರನ ಕಥೆಯನ್ನು ಪವಿತ್ರ ಕುರ್‍ಆನ್‍ನ ಇತರ ಸಮಾನ ಕಥೆಗಳೊಂದಿಗೆ ಸೇರಿಸಿ ವಿಶ್ಲೇಷಣೆ ನಡೆಸಿದ್ದಾರೆ. ಅಂದು ನೂಹರನ್ನು ಮತ್ತು ಅನುಯಾಯಿಗಳನ್ನು ಮೂರ್ಖರೆಂದು ಹೇಳಲಾಗುತ್ತಿತ್ತು. ಆದರೆ ಜಲ ಪ್ರಳಯದಿಂದ ಸುರಕ್ಷಿತವಾಗಿ ನೂಹರು ಮತ್ತು ಅನುಯಾಯಿಗಳು ಪಾರಾದರು. ಜಲ ಪ್ರಳಯದಲ್ಲಿ ನೂಹರ ನಿಷೇಧಿ ಪುತ್ರನ ದಾರುಣ ಅಂತ್ಯವೂ ನಡೆಯಿತು. ಹೀಗೆ ಮೂರ್ಖರೆಂದು ಹೀಯಾಳಿಸದವರೆ ತಮ್ಮ ನಾಶವನ್ನು ಮೈಮೇಲೆಳೆದು ಕೊಂಡ ಮೂರ್ಖರಾಗಿಬಿಟ್ಟರು.
ಹೀಗೆಯೇ ಪ್ರವಾದಿ ಇಬ್ರಾಹೀಮ್ ನಿಷೇಧಿ ತಂದೆಯ ಅವಸ್ಥೆಯಾಗಿತ್ತು. ಫರೋವನ ಜೊತೆಗಿದ್ದ ಪ್ರವಾದಿ ಮೂಸ ಮತ್ತು ಮೂಸಾರ ಸಂದೇಶವನ್ನು ನಿರಾಕರಿಸಿದ ಫರೋವನ ಅವಸ್ಥೆಯೂ ಮತ್ತು ಫರೋವನ ದಾರುಣ ಅಂತ್ಯವೂ ಹೀಗೆಯೇ ಆಗಿತ್ತೆಂದು ಸಈದ್ ರೆನಾಲ್ಡ್ ಹೇಳುತ್ತಾರೆ. ಫರೋವಾ ಮತ್ತು ಆತನ ನಿಷೇಧಿ ಹಿಂಬಾಲಕರು ಸಮುದ್ರದೊಳಗೆ ಸಿಕ್ಕಿಬಿದ್ದು ಜಲ ಸಮಾಧಿಯಾದರು.

ಇದೇ ವೇಳೆ ಅವಿಶ್ವಾಸಿಗಳು ಅಲ್ಲಾಹನ ಕರುಣೆಗೆ ಪಾತ್ರವಾಗುವುದಿಲ್ಲ ಎಂಬ ವಾದವನ್ನು ಸಈದ್ ರೆನಾಲ್ಡ್ ಒಪ್ಪುವುದಿಲ್ಲ. ಆದರೆ ಡೇವಿಡ್ ಮಾರ್ಷಲ್ ಎಂಬವರು ಪ್ರವಾದಿ ನೂಹರ ಪುತ್ರನ ಘಟನೆಯನ್ನು ಮುಂದಿಟ್ಟು ಅಲ್ಲಾಹು, ಮುಹಮ್ಮದ್ ಅವಿಶ್ವಾಸಿಗಳು ಎಂಬ ಗ್ರಂಥದಲ್ಲಿ ಅವಿಶ್ವಾಸಿಗಳಿಗೆ ಕರುಣೆ ಸಿಗುವುದಿಲ್ಲ ವಾದಿಸಿದ್ದನ್ನು ಸಈದ್ ರೆನಾಲ್ಡ್ ನಿರಾಕರಿಸಿದ್ದಾರೆ. ಯಾಕೆಂದರೆ ಪವಿತ್ರ ಕುರ್‍ಆನ್‍ನಲ್ಲಿ ವಿವರಣೆಗೊಂಡ ಕಥೆಗಳನ್ನು ಪ್ರವಾದಿವರ್ಯರು(ಸ) ಸಾರ್ವತ್ರಿಕ ರೂಪದಲ್ಲಿ ವಿವರಿಸಿದರು ಎನ್ನುತ್ತಾರೆ ರೆನಾಲ್ಡ್ ಅಂದರೆ ಪ್ರವಾದಿ ಮುಹಮ್ಮದರು(ಸ) ಪವಿತ್ರ ಕುರ್‍ಆನ್ ಕಥೆಗಳ ಮೂಲಕ ತಮ್ಮ ಅನುಯಾಯಿಯಾದ ವಿಶ್ವಾಸಿಗಳಿಗೆ ಧರ್ಮವನ್ನು ಕಲಿಸಿಕೊಟ್ಟರು. ದೇವ ವಿಶ್ವಾಸವನ್ನು ಅನುಯಾಯಿಗಳಲ್ಲಿ ದೃಢಗೊಳಿಸಿದರು. ಕುಟುಂಬ ಸಂಬಂಧಗಳನ್ನು ವಿವರಿಸುವುದಕ್ಕೆ ಬಳಸಿದರೆಂದು ಸಈದ್ ರೆನಾಲ್ಡ್ ಹೇಳುತ್ತಾರೆ. ಪವಿತ್ರ ಕುರ್‍ಆನ್ ಮತ್ತು ಅದಕ್ಕಿಂತ ಮೊದಲಿನ ಪ್ರವಾದಿ ನೂಹರ ಚರಿತ್ರೆಯ ಕುರಿತ ಲೇಖನದ ಎರಡನೆ ಭಾಗದಲ್ಲಿ ಪವಿತ್ರಕುರ್‍ಆನ್ ಮಾತ್ರ ಈ ಕಥೆಯನ್ನು ಈ ರೀತಿ ನಿರ್ವಹಿಸಿತು ಎಂದು ಹೇಳಿದ್ದಾರೆ. ಗತ ಕಾಲದ ದೇವ ಗ್ರಂಥಗಳಲ್ಲಿ ಕಾಣಿಸದಿರುವ ಪ್ರವಾದಿ ನೂಹರ ಮಗನ ಕಥೆ ಪವಿತ್ರ ಕುರ್‍ಆನ್ ವಿವರಿಸಿದ್ದು ಪ್ರವಾದಿ ಮುಹಮ್ಮದ್(ಸ) ಮತ್ತು ಅವರು ಸಮುದಾಯಕ್ಕೆ ಸಂಬಂಧಿಸಿದ ಪ್ರತ್ಯೇಕ ಪರಿಸ್ಥಿತಿಯನ್ನು ಮುಂದಿಟ್ಟಾಗಿದೆ ಎನ್ನುತ್ತಾರೆ ರೆನಾಲ್ಡ್.

ಪವಿತ್ರ ಕುರ್‍ಆನ್ ಮತ್ತು ಬೈಬಲ್‍ಗಳಲ್ಲಿ ವಿವರಣೆಗೊಂಡ ವ್ಯಕ್ತಿಗಳು ಪರಸ್ಪರ ಸ್ವಲ್ಪ ಮಾತ್ರ ಅಂತರವನ್ನು ಹೊಂದಿದ್ದಾರೆ. ಇವುಗಳನ್ನು ಪರಸ್ಪರ ಮೂಲ ವ್ಯತ್ಯಾಸವಾಗಿ ಪರಿಗಣಿಸಲು ಸಾಧ್ಯವಿಲ್ಲ. ಆದರೆ ಪವಿತ್ರ ಕುರ್‍ಆನ್ ಈ ಕಥೆಯನ್ನು ದೇವ ವಿಶ್ವಾಸಕ್ಕೆ ಸಂಬಂಧಿಸಿ ಸ್ಮರಣೆ ಮೂಡಿಸಲು ವಿವರಿಸಿದೆ ಎನ್ನುತ್ತಾರೆ ಅವರು. ಜೊತೆಗೆ ಕಥೆಯ ಮೂಲಕ ಗತ ದೇವ ಗ್ರಂಥಗಳನ್ನು ವಿಮರ್ಶಾತ್ಮಕ ವಿಶ್ಲೇಷಣೆ ಮಾಡಲು ರೆನಾಲ್ಡ್ ಬಯಸಿಲ್ಲ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …