Home / ವಾರ್ತೆಗಳು / ಸಿಖ್ ವ್ಯಕ್ತಿಯಿಂದ ಮಸೀದಿಗೆ ಜಮೀನು

ಸಿಖ್ ವ್ಯಕ್ತಿಯಿಂದ ಮಸೀದಿಗೆ ಜಮೀನು

ಮುಝಪ್ಫರ್‍ ನಗರ,ನ.26: ಉತ್ತರ ಪ್ರದೇಶದ ಮುಝಪ್ಫರ್ ನಗರದಲ್ಲಿ ಸಿಖ್ ವ್ಯಕ್ತಿಯೊಬ್ಬರು ಧಾರ್ಮಿಕ ಸೌಹಾರ್ದವನ್ನು ಮೆರೆದಿದ್ದಾರೆ.

ಗುರುನಾನಕರ 550ನೇ ಜಯಂತಿ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಸುಖ್‍ಪಾಲ್ ಸೀಂಗ್ ಬೇಡಿ ಮಸೀದಿಯೊಂದಕ್ಕೆ ಜಮೀನು ನೀಡುವುದಾಗಿ ಘೋಷಿಸಿದರು. ಮುಝಪ್ಫರ್ ನಗರ ಜಿಲ್ಲೆಯ ಪುರಕಾಜಿ ನಗರದಲ್ಲಿ ಅವರು ಕಾರ್ಯಕ್ರಮವೊಂದರಲ್ಲಿ ತನ್ನ ನಿರ್ಧಾರವನ್ನು ತಿಳಿಸಿದ್ದಾರೆ.

ಅವರು ನಗರ ಪಂಚಾಯತ್ ಅಧ್ಯಕ್ಷ ಝಹೀರ್ ಫಾರೂಕಿಯವರ ಕೈಯಲ್ಲಿ 900 ವರ್ಗ ಫೀಟ್ ಪ್ಲಾಟಿನ ದಾಖಲೆಗಳನ್ನು ನೀಡಿದರು. ಪುರ್‍ಕಾಜಿ ನಗರದಲ್ಲಿ ಮುಸ್ಲಿಮರು ಬಹುಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಗುರುನಾನಕರು ಎಲ್ಲ ಜನರೊಂದಿಗೆ ಸಮಾನ ಗೌರವಾದರಗಳೊಂದಿಗೆ ವ್ಯವಹರಿಸಲು ಕಲಿಸಿದ್ದಾರೆ. ಮತ್ತು ಶಾಂತಿ, ಸೌಹಾರ್ದದ ಸಂದೇಶ ನೀಡಿದ್ದಾರೆ ಎಂದು ಸಿಂಗ್ ಬೇಡಿ ಹೇಳಿದರು. ಎರಡೂ ಸಮುದಾಯಗಳು ಬೇಡಿಯವರ ಈ ಕೊಡುಗೆಯನ್ನು ಹರ್ಷದಿಂದ ಸ್ವಾಗತಿಸಿವೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …