Home / ಲೇಖನಗಳು / ಚೆಂದದ ಹುಡುಗಿಯನ್ನು ಮದುವೆಯಾಗುವುದು..

ಚೆಂದದ ಹುಡುಗಿಯನ್ನು ಮದುವೆಯಾಗುವುದು..

ಕೆಲವರ ಮನಸ್ಸಿನಲ್ಲಿ ತಾನು ಮದುವೆಯಾಗುವ ಹುಡುಗಿ ಚೆಂದಗಿರಬೇಕಿದೆಂದಿರುತ್ತದೆ. ತಪ್ಪಲ್ಲ. ಚಂದ ಮಾತ್ರ ಸಾಲದು ಚಂದದೊಂದಿಗೆ ಅವಳ ಧಾರ್ಮಿಕ ಶಿಕ್ಷಣ ಹೇಗಿದೆ ಎಂಬುದು ಮುಖ್ಯವಾಗುತ್ತದೆ. ಬಯಸಿದ್ದೆಲ್ಲವೂ ಸಿಗಬೇಕೆಂದಿಲ್ಲ. ಸಿಕ್ಕದ್ದನ್ನು ಒಪ್ಪಿಕೊಳ್ಳುವುದು ಮುಖ್ಯವಾಗುತ್ತದೆ. ಚಂದವಿಲ್ಲದ ಹುಡುಗಿಯರಿರಲಿ, ಹುಡುಗರಿರಲಿ ಅವರೂ ಅಲ್ಲಾಹನ ಸೃಷ್ಟಿಗಳಾಗಿದ್ದಾರೆ.

ಒಟ್ಟಿನಲ್ಲಿ ಚಂದ ಅಂದರೆ ಧರ್ಮ, ಗುಣ ನಡತೆಯೂ ಚಂದ ಆಗಿರಬೇಕು. ವಿವಾಹ ಒಂದು ಒಡಂಬಡಿಕೆ ಆದರೂ ತಾತ್ಕಾಲಿಕವಾದುದಲ್ಲ. ಈ ಒಪ್ಪಂದವನ್ನು ಮುರಿಯುವುದು ಅಲ್ಲಾಹನಿಗೆ ಅರೋಚಕವಾಗಿದೆ ಎಂಬುದನ್ನು ನಾವು ಅರಿತಿರಬೇಕು. ಜೀವನವಿಡೀ ಕೂಡಿ ಬಾಳಿ ಬದುಕಬೇಕಾದವರು ಅಂತರ್ಥ. ಇಲ್ಲಿ ಪರಸ್ಪರ ಹೊಂದಿಕೆ ಹೊಂದಾಣಿಕೆಗಳು ಆವಶ್ಯಕವಾಗಿದೆ. ಇವೆರಡೂ ಸಂಸ್ಕಾರಕ್ಕೆ ಒಪ್ಪ ಓರಣವಿದ್ದಂತೆ. ಇದು ಸಾಧ್ಯವಾಗುವುದು ಹುಡುಗಿ ಮತ್ತು ಹುಡುಗ ಧಾರ್ಮಿಕ ವ್ಯಕ್ತಿ ಆದಾಗ. ಅಥವಾ ದೀನಿ ಶಿಕ್ಷಣ ಪಡೆದವರಾದಾಗ ಎಂಬುದು ಹಗಲು ಬೆಳಕಿನಷ್ಟೇ ಸತ್ಯ.

ಆದ್ದರಿಂದ ನೀವು ಆಯ್ಕೆ ಮಾಡುವ ಹುಡುಗಿ ಹೇಗಿರಬೇಕೆಂದು ನೀವೇ ಯೋಚಿಸಬೇಕು. ಪ್ರವಾದಿವರ್ಯರು(ಸ) ನಾಲ್ಕು ವಿಷಯಗಳಿಗೆ ಹೆಣ್ಣನ್ನು ಮದುವೆಯಾಗುವುದು ಎಂದರು. ಸಂಪತ್ತು, ಕುಟುಂಬ, ಸೌಂದರ್ಯ, ಧರ್ಮ. ಧರ್ಮವಿರುವವಳನ್ನು ಮದುವೆಯಾದರೆ ನೀನು ವಿಜಯಿಯಾಗುವೆ ಎಂದು ಪ್ರವಾದಿ(ಸ) ಸಮುದಾಯಕ್ಕೆ ಕಲಿಸಿದರು. ಇವು ಮೂರು ಇರುವವರು ಸಿಗುವುದು ಕಷ್ಟವೇನಲ್ಲ. ಹಾಗಂತ ಇವುಗಳಲ್ಲಿ ಧರ್ಮಕ್ಕೆಹೆಚ್ಚು ಮಹತ್ವ ನೀಡಬೇಕೆಂದು ಪ್ರವಾದಿ(ಸ) ನಮಗೆ ಬೋಧಿಸಿದ್ದಾರೆ.

ಪ್ರವಾದಿ ಪತ್ನಿ ಖದೀಜಾ(ರ)ರನ್ನೇ ನೋಡಿ. ಅವರಲ್ಲಿ ಸಂಪತ್ತಿತ್ತು. ಉತ್ತಮ ಮನೆತನವಿತ್ತು. ಆಸ್ತಿ ಇತ್ತು, ಉತ್ತಮ ಗುಣನಡತೆ, ವಿದ್ಯಾಭ್ಯಾಸ ಇತ್ತು. ಪ್ರವಾದಿವರ್ಯರು(ಸ) ಹೇಳಿದರು: ಖದೀಜಾರಿಗಿಂತ(ರ) ಉತ್ತಮ ಪತ್ನಿ ನನಗೆ ಸಿಕ್ಕಿಲ್ಲ. ನನ್ನ ಜನತೆ ನನ್ನಲ್ಲಿ ವಿಶ್ವಾಸವಿಡದಿದ್ದಾಗ ಅವರು ನನ್ನಲ್ಲಿ ವಿಶ್ವಾಸ ಇರಿಸಿದರು. ನನ್ನ ಜನತೆ ನನ್ನನ್ನು ಸುಳ್ಳುಗಾರನಾಗಿಸಿದಾಗ ಖದೀಜ ಸತ್ಯಸಂಧನೆಂದು ಅಂಗೀಕರಿಸಿದರು. ಎಲ್ಲರೂ ನನ್ನನ್ನು ಕೈ ಬಿಟ್ಟಾಗ ಅವರು ನನಗೆ ಸಂಪತ್ತಿನಿಂದ ಭರವಸೆ ಮೂಡಿಸಿದರು. ಅವರಲ್ಲೇ ನನಗೆ ಅಲ್ಲಾಹನು ಸಂತಾನಗಳನ್ನು ನೀಡಿದನು”

ಹೀಗೆ, ನಾಲ್ಕು ವಿಷಯಗಳು ಇರುವ ಪತ್ನಿಯರು ಸಿಗುತ್ತಾರೆ. ಸುಂದರಿಯೇ ಆಗಬೇಕೆಂದು ಮನಸ್ಸಿನಲ್ಲಿ ಹಟ ಮೂಡಿದರೆ ಬರೇ ಸುಂದರಿಯೇ ಸಿಗುವ ಸಾಧ್ಯತೆ ಇರುತ್ತದೆ. ಉಳಿದೆಲ್ಲ ವಿಚಾರಗಳು ಇಲ್ಲದಿರಬಹುದು. ನಿಜವಾದ ಸೌಂದರ್ಯ ಧರ್ಮ. ಧಾರ್ಮಿಕಳಾದ ಪತ್ನಿಯಿಂದ ಇಹವೂ, ಪರವೂ ಬೆಳಗುತ್ತದೆ. ಹೀಗಾಗಿ ಮದುವೆಯಾಗುವ ಹೆಣ್ಣಿನಲ್ಲಿ ಧರ್ಮಕ್ಕೆ ಪ್ರಾಶಸ್ತ್ಯ ಕೊಡುವುದು ಅಗತ್ಯವೆಂದು ಯುವಕರು ತಿಳಿಯಬೇಕಿದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …