Home / ವಾರ್ತೆಗಳು / ಸಿಖ್ಖರೊಂದಿಗಿನ ಸಹರಾಣ್ ಪುರ ಭೂ ವಿವಾದ ಕೊನೆಗೊಳಿಸಿದ ಮುಸ್ಲಿಮರು-ದೆಹಲಿ ಹಿಂಸಾಕಾಂಡದಲ್ಲಿ ಮಾಡಿದ ಉಪಕಾರಕ್ಕೆ ಪ್ರತಿಸ್ಪಂದನೆ

ಸಿಖ್ಖರೊಂದಿಗಿನ ಸಹರಾಣ್ ಪುರ ಭೂ ವಿವಾದ ಕೊನೆಗೊಳಿಸಿದ ಮುಸ್ಲಿಮರು-ದೆಹಲಿ ಹಿಂಸಾಕಾಂಡದಲ್ಲಿ ಮಾಡಿದ ಉಪಕಾರಕ್ಕೆ ಪ್ರತಿಸ್ಪಂದನೆ

ಲಕ್ನೋ: ಪಶ್ಚಿಮ ಉತ್ತರ ಪ್ರದೇಶದ ಸಹರಾಣ್ ಪುರದಲ್ಲಿ ಸಿಖ್ಖರು ಮತ್ತು ಮುಸ್ಲಿಮರ ನಡುವೆ ಹತ್ತು ವರ್ಷಗಳಿಂದ ಇದ್ದ ಭೂ ವಿವಾದ ಕೊನೆಗೊಂಡಿದೆ.

ಸಹರಾಣ್ ಪುರ ರೈಲು ನಿಲ್ದಾಣದಿಂದ ಅನತಿ ದೂರದಲ್ಲಿರುವ ಗುರುದ್ವಾರಕ್ಕೆ ಹೊಂದಿಕೊಂಡಿರುವ ಜಮೀನಿಗೆ ಸಂಬಂಧಿಸಿದಂತೆ ಈ ವಿವಾದ ಹತ್ತು ವರ್ಷಗಳಿಂದ ನಡೆದುಬಂದಿತ್ತು. ಗುರುದ್ವಾರ ಸಂಕೀರ್ಣವನ್ನು ವಿಸ್ತರಿಸುವ ಸಲುವಾಗಿ ಗುರುದ್ವಾರ ಸಮಿತಿ ಜಮೀನು ಖರೀದಿಸಿತ್ತು. ಆ ಸ್ಥಳದಲ್ಲಿದ್ದ ಹಳೆಯ ಕಟ್ಟಡವನ್ನು ಧ್ವಂಸಗೊಳಿಸಲಾಯಿತು. ಇದರಲ್ಲಿ ಹಳೆಯ ಮಸೀದಿಯೊಂದಿತ್ತು ಎನ್ನಲಾಗಿದೆ.

ಕೊನೆಗೆ ಈ ವಿವಾದ ಸುಪ್ರೀಂಕೋರ್ಟ್ ತಲುಪಿತು. ಅದರೆ ಇದೀಗ ಮುಸ್ಲಿಮರು ತಮ್ಮ ಕ್ಲೆಮ್ ಬಿಟ್ಟುಬಿಟ್ಟಿದ್ದಾರೆ ಹಾಗೂ ಸಿಖ್ಖರು ಮುಸ್ಲಿಮರಿಗೆ ಪರ್ಯಾಯ ಜಾಗವನ್ನು ನೀಡಿದ್ದಾರೆ. ಅದರೆ ಈಶಾನ್ಯ ದೆಹಲಿ ಹಿಂಸಾಚಾರದ ವೇಳೆ ನೀಡಿದ ಸಹಕಾರಕ್ಕೆ ಪ್ರತಿಯಾಗಿ ಈ ಜಾಗವನ್ನು ಕೂಡಾ ಮುಸ್ಲಿಮರು ಪಡೆಯದೇ ಮಾನವೀಯತೆ ಮೆರೆದಿದ್ದಾರೆ.

“ದೆಹಲಿಯಲ್ಲಿ ನಡೆದ ಪ್ರತಿಭಟನೆಯುದ್ದಕ್ಕೂ ಸಿಖ್ಖರು ನೀಡಿದ ನೆರವಿನ ಹಿನ್ನೆಲೆಯಲ್ಲಿ, ಸಹರಾಣ್ ಪುರ ಮಸೀದಿ ಸಮಿತಿಯು ಕೃತಜ್ಞತಾಪೂರ್ವಕ ಕ್ರಮವಾಗಿ ವಿವಾದಿತ ಜಾಗದ ಮೇಲಿನ ಕ್ಲೇಮ್ ಬಿಟ್ಟುಬಿಟ್ಟಿದೆ” ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಕೃಪೆ: ವಾರ್ತಾ ಭಾರತಿ

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …