Home / ಲೇಖನಗಳು / ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಹತ್ತು ಸೂತ್ರಗಳು

ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಹತ್ತು ಸೂತ್ರಗಳು

@ ಜಾಸಿಮುಲ್ ಮುತವ್ವ.

ದಾಂಪತ್ಯ ಮತ್ತು ಕುಟುಂಬ ಸಂಬಂಧದ ಸಮಸ್ಯೆಗಳ ಪರಿಹಾರದ ಸಂದರ್ಭದಲ್ಲಿ ಅನೇಕ ಬಾರಿ ಸಮಸ್ಯೆಗಳು  ಜಟಿಲವಾಗುತ್ತಾ ಹೋಗುವ ಸಂಭವ ಉಂಟಾಗುತ್ತದೆ. ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ರೀತಿ ಅವಲಂಭಿಸದ ಕಾರಣ  ಇದು ಸಂಭವಿಸುತ್ತದೆ. ಹೆಚ್ಚಿನ ಕುಟುಂಬಗಳು ಎದುರಿಸುವ ಸಮಸ್ಯೆಗಳ ಪರಿಹಾರಕ್ಕೆ ನಾನು ಹತ್ತು ವಿಚಾರಗಳನ್ನು  ಉಪದೇಶಿಸುತ್ತೇನೆ.

1. ತಕ್ಷಣದ ಪ್ರತಿಕ್ರಿಯೆ, ಹತೋಟಿ ಮೀರಿದ ಮಾತು ಮತ್ತು ಉದ್ರೇಕಕಾರೀ ಮನೋಭಾವ ಸಮಸ್ಯೆಯನ್ನು ಹೆಚ್ಚು  ಜಟಿಲಗೊಳಿಸುತ್ತದೆ. ಆದ್ದರಿಂದ ಸಮಸ್ಯೆಗಳು ಉಂಟಾದಾಗ ಮನಸ್ಸು ಶಾಂತಚಿತ್ತದಿಂದ ಇರಲು ಮಧ್ಯೆ ಸ್ವಲ್ಪ ಬಿಡುವು  ಮಾಡಿಕೊಂಡು ದೀರ್ಘ ನಿಟ್ಟುಸಿರು ಬಿಟ್ಟು ಸಮಯ ವ್ಯಯಿಸಿರಿ. ಇಲ್ಲದಿದ್ದರೆ ಪ್ರತಿಕೂಲ ಪರಿಣಾಮವಾಗಬಹುದು.

2. ನಮ್ಮ ವಿರುದ್ದ ಬಣದೊಂದಿಗೆ ಮಾತು ಪ್ರಾರಂಭಿಸುವ ಮೊದಲು ಅವರ ಮೇಲೆ ದುಡುಕಿ ಎಗರಾಡಿ ಹಾರಿ ಬೀಳುವುದಕ್ಕಿಂತ ಮೊದಲು ಇಂತಹ ಒಂದು ಕುದಿಯುವಿಕೆಗೆ ಕಾರಣವೇನೆಂಬುದನ್ನು ಸ್ವತಃ ಅರಿತುಕೊಳ್ಳಬೇಕು.  ಒಂದು ವೇಳೆ ನೀವು ಹಾಗೆ ಎಗರಾಡಲು ಕಾರಣಗಳಿರಬಹುದು. ಆಗ ಅವರ ಸ್ಥಾನದಲ್ಲಿ ನಿಮ್ಮನ್ನು ಕಲ್ಪಿಸಿ ಒಂದು  ನಿಮಿಷ ಚಿಂತಿಸಬೇಕು, ಒಂದು ವೇಳೆ ನೀವು ಕೂಡಾ ಅವರ ಹಾಗೆ ವರ್ತಿಸಬಹುದು.

3. ವಿರುದ್ದ ತಂಡದವರು ತಮ್ಮ ವಾದಗಳನ್ನು ತಮ್ಮ ನಿಲುವುಗಳನ್ನು ಸಮರ್ಥಿಸಲು ಹೇಳುವ ಮಾತುಗಳನ್ನು ನಾವು ಗಮನವಿಟ್ಟು ಆಲಿಸಬೇಕು.  ಆ ಆಲಿಸುವಿಕೆ ಅವರಿಗೆ ಪ್ರತಿಯೇಟು ನೀಡುವ ದಾಟಿಯಲ್ಲಿರಬಾರದು. ಕುಟುಂಬ  ಸಮಸ್ಯೆಗಳ ಪರಿಹಾರದ ಸಂದರ್ಭದಲ್ಲಿ ಸಾಮಾನ್ಯವಾಗಿ ನಾವು ವಿರುದ್ದ ಬಣದವರ ವಾದಗಳನ್ನು ಆಲಿಸುವುದಿಲ್ಲ  ಅಥವಾ ಅವರ ವಾದಗಳನ್ನು ವಿವರಿಸುವ ಮೊದಲೇ ಅವರ ಬಗ್ಗೆ ನೀವೊಂದು ನಿಲುವು ತಳೆದಿರುತ್ತೀರಿ. ಇಂತಹ  ನಿಲುವುಗಳು ಸಮಸ್ಯೆಗಳ ಪರಿಹಾರಕ್ಕೆ ಸಹಾಯಕವಾಗಲಾರದು.

4. ವಿರುದ್ಧ ತಂಡದವರ ಬಗ್ಗೆ ಇರುವ ಉತ್ತಮ ಧಾರಣೆಯು ನಿಮ್ಮ ಮನಸ್ಸನ್ನು ಆಳುತ್ತದೆ. ವಿಶೇಷವಾಗಿ ಅವರು  ಪ್ರಾಮಾಣಿಕರೂ ನಿಮ್ಮನ್ನು ವಂಚಿಸುವವರಲ್ಲವೆಂಬ ಬಗ್ಗೆ ನಿಮಗೆ ಸಂಪೂರ್ಣ ಭರವಸೆ ಇರಬೇಕು. ಒಂದು ಸಮಸ್ಯೆಯ ಪರಿಹಾರ ಕಂಡುಹುಡುಕುವಾಗ ಮತ್ತೆ ನೂರು ಸಮಸ್ಯೆ ಉಂಟು ಮಾಡುವಂತಾಗಬಾರದು ಎಂಬ ನಿಲುವು  ನಿಮ್ಮದಾಗಿದ್ದರೆ ಸದ್ವಿವೇಕದಿಂದ ಇದರಲ್ಲಿ ಪಾಲ್ಗೊಳ್ಳಬೇಕು.

5. ಪದ ಪ್ರಯೋಗಗಳು ಕೂಡಾ ಪರಸ್ಪರ ಹತ್ತಿರಗೊಳಿಸುವಂತಿರಬೇಕು. ಬಿರುಕು ಉಂಟು ಮಾಡುವ  ಮಾತುಗಳಿಂದ ದೂರವಿರಬೇಕು. ಸ್ನೇಹ ಸ್ಪರ್ಶದ ಹೂಮಳೆ ಸುರಿಸುವ ಮಾತುಗಳು ಅಲ್ಲಿ ಹೊರ ಹೊಮ್ಮಬೇಕು.  ಸವಾಲು ಹಾಕುವಂತಿರಬಾರದು. ಒಳ್ಳೆಯ ಮಾತುಗಳಾಗಬೇಕೇ ಹೊರತು ಮನಸ್ಸು ಘಾಸಿಗೊಳಿಸುವಂತಹ  ಮಾತುಗಳು ಬರಬಾರದು. ಇಂತಹ ನಿಲುವು ತಾಳಿದರೆ ಸಮಸ್ಯೆಗಳು ಸುಲಭದಲ್ಲಿ ಪರಿಹಾರವಾಗಬಲ್ಲುದು.  ಜೊತೆಗೆ ನೀನು, ನೀವು ಎಂದೆಲ್ಲಾ ಹೇಳಿ ಅವರತ್ತ ಬೆರಳು ತೋರಿಸಿ ಆಕ್ಷೇಪಾರ್ಹ ಮಾತುಗಳನ್ನಾಡುವ ಬದಲು  ನಾನು ಭಾವಿಸುತ್ತೇನೆ, ನನಗೆ ಅನ್ನಿಸಿದಂತೆ ಮುಂತಾದ ಪದಗಳನ್ನು ಬಳಸಬೇಕು.

6.  ಹಳೆಯ ಸಮಸ್ಯೆಗಳನ್ನು ಕೆದಕಿ ನಿಮ್ಮ ವಿಚಾರಗಳನ್ನು ಪ್ರಸ್ತುತ ಪಡಿಸುವ ಶೈಲಿಯನ್ನು ತೊರೆಯಿರಿ. ಇತರ  ಕುಟುಂಬಗಳ ಜೊತೆ ತುಲನೆ ಮಾಡುವುದನ್ನು ಬಿಟ್ಟುಬಿಡಿರಿ.

7. ನಿಮ್ಮೊಂದಿಗೆ ಸಹಮತವಿಲ್ಲದ ವ್ಯಕ್ತಿಯೊಂದಿಗೆ ಮಾತು ಪ್ರಾರಂಭಿಸಬೇಕಾಗಿ ಬಂದರೆ ನಿನ್ನದು ತಪ್ಪು ನನ್ನದು ಮಾತ್ರ ಸರಿ ಎಂಬ ಸಿದ್ದಾಂತದೆಡೆಗೆ ಮಾತುಗಳು ವಾಲದಂತೆ ಎಚ್ಚರ ವಹಿಸಿರಿ. ನಿಮ್ಮ ವಿರುದ್ಧ ಪಕ್ಷದವರಿಗೆ ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಸಿ ಕೊಡಲು ಶ್ರಮಿಸಿರಿ. ನಮ್ಮ ಮದ್ಯೆ ಉದ್ಬವಿಸಿದ ಸಮಸ್ಯೆ ಮರುಕಳಿಸದಂತೆ ಒಂದು ತೀರ್ಪಿಗೆ ಎರಡೂ ಬಣಗಳು ಬದ್ಧರಾಗಲು ಶ್ರಮಿಸಬೇಕು.

8. ಪ್ರತೀ ಬಣಗಳೂ ತಮ್ಮ ತಮ್ಮ ನಿಲುವಿನಲ್ಲಿ ಗಟ್ಟಿಯಾಗಿ ನಿಂತು ಪರಿಹಾರಕ್ಕಿರುವ ಫಾರ್ಮುಲಾದತ್ತ ಹೊರಳದೆ  ಸ್ಥಂಭಿಸುವ ಹಂತಕ್ಕೆ ತಲುಪಿದರೆ ಮಾತು ನಿಲ್ಲಿಸುವುದು ಉಚಿತ. ಸ್ವಲ್ಪ ಸಮಯದ ಬಳಿಕ ಮಾತು ಪ್ರಾರಂಭಿಸಬೇಕು.  ಪರಿಸ್ಥಿತಿ ಶಾಂತಗೊಂಡು ಮನಸ್ಸುಗಳು ಹಗುರವಾಗಲು ಒಂದು ಸಣ್ಣ ಬಿಡುವು ಉತ್ತಮವಾಗಿದೆ.

9. ಸಮಸ್ಯೆಯ ಪರಿಹಾರಕ್ಕೆ ನಮಾಝ್ ಸಹನೆಯ ಮೂಲಕ ಅಲ್ಲಾಹನಲ್ಲಿ ಸಹಾಯ ಯಾಚಿಸಿರಿ. ಮನಸ್ಸಿನ  ಹೃದಯದ ಈಮಾನ್ ವಿಶ್ರಾಂತಿಯ ಸಮಯದಲ್ಲಿ ಸಮಸ್ಯೆಯ ಪರಿಹಾರವನ್ನು ತ್ವರಿತಗೊಳಿಸುವುದು.

10. ಪ್ರತೀ ಸಮಸ್ಯೆಯ ಸಂದರ್ಭದಲ್ಲಿಯೂ ಪರಿಹಾರಕ್ಕಾಗಿ ಅದರ ಸ್ವಭಾವಕ್ಕನುಗುಣವಾಗಿ ಆಯಾ ವಿಷಯದ ಬಗ್ಗೆ  ಪಾಂಡಿತ್ಯ ಪ್ರಾವೀಣ್ಯತೆಯಿರುವ ತಜ್ಞರ ಸಲಹೆ ಸಹಾಯ ಸಹಕಾರವನ್ನು ಪಡೆಯಿರಿ. ದಾಂಪತ್ಯದ ಸಮಸ್ಯೆಗಳು  ಒಮ್ಮೆ ಪರಿಹಾರಗೊಂಡರೆ ಮತ್ತೆ ಅದು ಸಂಗಾತಿಗಳ ನಡುವೆ ಬಹಳ ಅನ್ಯೋನ್ಯತೆಗೆ ಕಾರಣವಾದ ಸಾಕಷ್ಟು ಅನುಭವಗಳು ನಮ್ಮಲ್ಲಿವೆ. ಕೆಲ ಸಂದರ್ಭಗಳಲ್ಲಿ ಆಪತ್ತುಗಳು ಬಳಿಕ ಅನುಗ್ರಹವಾಗಿ ಪರಿಣಮಿಸಿದ್ದಿದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …