Home / ವಾರ್ತೆಗಳು / ಜಮಾಅತ್ ಇಸ್ಲಾಮೀ ಹಿಂದ್ ನಿಂದ ದಿಲ್ಲಿ ಗಲಭೆ ಸಂತ್ರಸ್ತರಿಗೆ 10 ಕೋಟಿ ರೂಪಾಯಿ ಬೃಹತ್ ಯೋಜನೆ – ಟಿ. ಆರಿಫಲಿ

ಜಮಾಅತ್ ಇಸ್ಲಾಮೀ ಹಿಂದ್ ನಿಂದ ದಿಲ್ಲಿ ಗಲಭೆ ಸಂತ್ರಸ್ತರಿಗೆ 10 ಕೋಟಿ ರೂಪಾಯಿ ಬೃಹತ್ ಯೋಜನೆ – ಟಿ. ಆರಿಫಲಿ

ಹೊಸದಿಲ್ಲಿ, ಮಾ. 14: ದಿಲ್ಲಿ ಕೋಮು ದಾಳಿಯಲ್ಲಿ ಸಿಲುಕಿ ಸಂತ್ರಸ್ತರಾದವರ ಪುನರ್ವಸತಿಗೆ ದೇಶದ ವಿವಿಧ ಸ್ವಯಂ ಸೇವಾ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಸಹಯೋಗದಲ್ಲಿ ಹತ್ತು ಕೋಟಿ ರೂಪಾಯಿಯ ಬೃಹತ್ ಯೋಜನೆಗೆ ಜಮಾಅತೆ ಇಸ್ಲಾಮೀ ಹಿಂದ್ ರೂಪು ನೀಡಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಟಿ. ಆರಿಫ್ ಆಲಿ ತಿಳಿಸಿದ್ದಾರೆ. ಮನೆಗಳನ್ನು ಮರು ನಿರ್ಮಿಸುವ ಯೋಜನೆಯಲ್ಲಿ ವಕ್ಫ್ ಬೋರ್ಡ್ ಮತ್ತು ದಿಲ್ಲಿ ಸರಕಾರದ ಸಹಾಯವನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದವರು ಹೇಳಿದ್ದಾರೆ.

20 ಕುಟುಂಬಗಳಿಗೆ ಕಮರ್ಶಿಯಲ್ ವಾಹನಗಳು, ಹತ್ತು ಕುಟುಂಬಗಳಿಗೆ ಸಣ್ಣ ಸರಕು ಬಂಡಿಗಳು, ಐದು ಕುಟುಂಬಗಳಿಗೆ ಮಧ್ಯಮ ಸರಕು ವಾಹನಗಳನ್ನು ಕೊಡಲಾಗುವುದು. 50 ವಿಧವೆಗಳಿಗೆ ಭತ್ಯೆ, 100 ಅನಾಥರಿಗೆ ಸ್ಕಾಲರ್‍ಶಿಪ್, 500 ಕುಟುಂಬಗಳಿಗೆ ಕಿಟ್‍ಗಳನ್ನು ವಿತರಿಸಲಾಗಿದೆ. 60 ಗಾಯಾಳುಗಳ ಚಿಕಿತ್ಸೆಯನ್ನು ವಹಿಸಿಕೊಳ್ಳಲಾಗಿದೆ. ಹತ್ತು ಮಂದಿಯ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದೆ.

ಸಂತ್ರಸ್ತರಿಗಾಗಿರುವ ಸರಕಾರಿ ಯೋಜನೆಯು ಸಿಗುವಂತೆ ಮಾಡಲು ಬೇಕಾದ ಕಾನೂನಾತ್ಮಕ ಸಹಾಯವನ್ನು ಮಿಷನ್ 2026ರ ಅಧೀನದಲ್ಲಿ ಅಸೊಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ನೀಡುತ್ತಿದೆ. ಅಲ್ ಶಿಫ ಮಲ್ಟಿ ಸ್ಪೇಶಲಿಟಿ ಆಸ್ಪತ್ರೆಯಲ್ಲಿ ಪ್ರತಿ ದಿನ 200 ಮಂದಿಗೆ ವಿವಿಧ ಮದ್ದುಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಚಿಕಿತ್ಸೆಯನ್ನೂ ನೀಡಲಾಗುತ್ತಿದೆ. ತಜ್ಞ ಚಿಕಿತ್ಸೆ ಬೇಕಾದವರಿಗೆ ಒಖ್ಲಾದ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರಿಫಲಿ ತಿಳಿಸಿದರು.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …