ವಾಷಿಂಗ್ಟನ್,ಮೇ.19: ಕೋವಿಡ್-19 ಸೋಂಕು ಹರಡುವಿಕೆಗೆ ಭಾರತದಲ್ಲಿ ಮುಸ್ಲಿಂ ಸಮುದಾಯದವರನ್ನು ಗುರಿಯಾಗಿಸಿ ಆರೋಪ ಮತ್ತು ಕಿರುಕುಳದ ವರದಿಗಳು ಪ್ರಕಟವಾಗುತ್ತಿರುವುದು ನಿಜಕ್ಕೂ ಖೇದಕರ ಎಂದು ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಸ್ಯಾಮ್ ಬ್ರೌನ್‌ಬ್ಯಾಕ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿರುವ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಸುಳ್ಳು ಸುದ್ದಿಗಳು ಮತ್ತು ತಪ್ಪು ಮಾಹಿತಿಯಿಂದಾಗಿ ಇಂತಹ ಅಹಿತಕರ ಘಟನೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.
ವಿಶ್ವದಾದ್ಯಂತ ಕೊರೋನಾವನ್ನು ಒಂದು ಸಾಂಕ್ರಾಮಿಕ ರೋಗವಾಗಿ ಪರಿಗಣಿಸಿ ಹೋರಾಡುತ್ತಿದ್ದರೇ, ಭಾರತದಲ್ಲಿ ಅಲ್ಪಸಂಖ್ಯಾತರನ್ನು ಕೊರೋನಾ ಹರಡುವಿಕೆಗೆ ಗುರಿಯಾಗಿಸಿ ಗುಂಪು ಹತ್ಯೆಗಳು, ಹಲ್ಲೆಗಳು, ಸಾಮಾಜಿಕ ಭಹಿಷ್ಕಾರದಂತಹ ಚಟುವಟಿಕೆಗಳು ನಡೆಯುತ್ತಿರುವುದು ಖೇದರಕ ಎಂದು ಅವರು ಹೇಳಿದರು.
ದೇಶದಲ್ಲಿ ತಬ್ಲೀಗ್ ಜಮಾಅತ್ ಸಮ್ಮೇಳವನ್ನು ಗುರಿಯಾಗಿಸಿ ಮುಸ್ಲಿಮರನ್ನು ಕೊರೋನಾ ಹರಡುವವರೆಂಬಂತೆ ಮಾಧ್ಯಮಗಳು ಬಿಂಬಿಸಿದ ನಂತರ ಹಾಗೂ ಹಲವಾರು ಹಲ್ಲೆ, ಬಹಿಷ್ಕಾರಗಳು ಸಮಾಜಿಕ ಮಾಧ್ಯಮಗಳಲ್ಲಿ ನಿಂದನೆಯು ಅಪಾರವಾಗಿತು. ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಅರಬ್ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ್ದವಲ್ಲದೇ, ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದವು.
ತದನಂತರ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್-19 ಯಾವುದೇ ಧರ್ಮವನ್ನು ನೋಡುವುದಿಲ್ಲ. ಅದಕ್ಕೆ ಭಾಷೆ ಅಥವಾ ಗಡಿ ಇಲ್ಲ ಎಂದು ಹೇಳಿದ್ದರು. ಪ್ರಧಾನಿಯವರ ಈ ಹೇಳಿಕೆಯನ್ನು ಬ್ರೌನ್‌ಬ್ಯಾಕ್ ಈ ಸಂದರ್ಭದಲ್ಲಿ ಪ್ರಶಂಸಿದರು.
IslamKannada News Portal
