ಪ್ರವಾದಿ ಅಯ್ಯೂಬ್(ಅ)ರಿಗೆ ಸಂಬಂಧಿಸಿದ ಹಲವು ವಿಷಯಗಳು ಪವಿತ್ರ ಕುರ್ಆನ್ ಮತ್ತು ಪ್ರವಾದಿ ವಚನಗಳಲ್ಲಿ ಪ್ರಸ್ತಾವಿಸಲಾಗಿದೆ. ಪ್ರವಾದಿಗಳಲ್ಲಿ ಅತ್ಯಂತ ದೀರ್ಘ ಕಾಲ ರೋಗವನ್ನು ಅನುಭವಿಸಿರುವ ವ್ಯಕ್ತಿಯಾಗಿ ಇಂದಿನ ಈ ಕಾಲದಲ್ಲಿ ಅವರ ಜೀವನವು ಚರಿತ್ರೆಯು ಹೆಚ್ಚಿನ ಪ್ರಾಧಾನ್ಯತೆಯನ್ನು ಪಡೆದಿದೆ.
ಕುರ್ಆನ್ನಲ್ಲಿ ಎರಡು ಸೂರಃಗಳಲ್ಲಿ ಅಯ್ಯೂಬ್(ಅ)ರಿಗೆ ಸಂಬಂಧಿಸಿದ ಸ್ವಾದ್ 40 ನೇ ಸೂಕ್ತವು ಆ ಕುರಿತು ಬೆಳಕು ಚೆಲ್ಲುತ್ತದೆ.
ಅಯ್ಯೂಬ್(ಅ)ರು ಅಂದಿನ ಸಮಾಜದಲ್ಲಿ ಆರ್ಥಿಕವಾಗಿ ಉತ್ತಮ ಸ್ತರದಲ್ಲಿದ್ದರು. ವಿಶಾಲವಾದ ಕೃಷಿ ಭೂಮಿ, ಅಸಂಖ್ಯಾತ ಕುರಿ ಮೇಕೆಗಳನ್ನು ಹೊಂದಿದ್ದ ಅವರು ದೊಡ್ಡ ಧನಿಕರಾಗಿದ್ದರು. ಸಂತಾನ ಭಾಗ್ಯದಲ್ಲೂ ಅವರು ಅನುಗ್ರಹೀತರಾಗಿದ್ದರು. 32ನೇ ವರ್ಷದಲ್ಲಿ ಅವರಿಗುಂಟಾದ ತುರಿಕೆಯು ದೇಹದಲ್ಲಿಡೀ ಹರಡಲಾರಂಭಿಸಿತು. ಸುಮಾರು 13 ರಿಂದ 18 ವರ್ಷದ ವರೆಗೆ ಆ ರೋಗವು ನಿರಂತರವಾಗಿ ಮುಂದುವರಿದು ಅವರ ಸಂತಾನವೂ ಪತ್ನಿಯಂದಿರೂ ಅವರನ್ನು ಬಿಟ್ಟು ಹೋದರು. ಓರ್ವ ಪತ್ನಿಯು ಅವರ ಶುಶ್ರೂಷೆ ಮಾಡುತ್ತಾ ಜೊತೆಗಿದ್ದರೆಂದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ. ತುರಿಕೆಯ ಕಾರಣ ದೇಹದಲ್ಲಿ ಕೀವು ತುಂಬಿ ಒಡೆದು ಹುಣ್ಣುಗಳಾದವು. ದುರ್ಗಂಧವು ಅಸಹನೀಯವಾಗಿತ್ತೆಂದು ತಿಳಿದು ಬರುತ್ತದೆ. ಆದರೆ ತನ್ನನ್ನು ಬಾಧಿಸಿದ ಈ ರೋಗವನ್ನು ಬಹಳ ತಾಳ್ಮೆ, ಸಹನೆಯೊಂದಿಗೆ ಅಯ್ಯೂಬ್(ಅ)ರು ಎದುರಿಸಿದ್ದರೆಂದು ಪವಿತ್ರ ಕುರ್ಆನ್ ತಿಳಿಸುತ್ತದೆ.
`ಅಯ್ಯೂಬ್(ಅ)ರ ಸಹನೆ’ ಎಂಬ ಮಾತು ಚಾಲ್ತಿಗೆ ಬಂದಿತ್ತು. ತನ್ನ ವ್ಯಕ್ತಿಗತವಾದ ಸಮಸ್ಯೆಯ ಕುರಿತು ದೇವನೊಡನೆ ದೂರು ನೀಡಲು ಅವರು ನಾಚಿಗೆ ಪಟ್ಟಿದ್ದರು. ಆದ್ದರಿಂದಲೇ `ನಾನು ರೋಗಬಾಧಿತನಾಗಿದ್ದೇನೆ, ನೀನು ಕರುಣೆ ಉಳ್ಳವರಲ್ಲಿ ಅತ್ಯಂತ ಕರುಣೆಯುಳ್ಳವನಾಗಿರುವಿಯಲ್ಲವೇ? ಎಂದಷ್ಟೇ ಅವರು ಪ್ರಾರ್ಥಿಸಿದ್ದರು. ಎಂತಹ ಉದಾತ್ತವಾದ ಪ್ರಾಥನಾ ಶೈಲಿಯಿದು?
ದೇವನ ಮುಂದೆ ದೂರು ನೀಡುವುದಿಲ್ಲ. ಕೇವಲ ಒಂದು ವಾಕ್ಯದಲ್ಲಿ ತನ್ನ ಸಂಕಷ್ಟವನ್ನು ಎಲ್ಲವನ್ನೂ ಅರಿಯುವ ದೇವನ ಮುಂದೆ ಸಮರ್ಪಿಸುತ್ತಾರೆ. ಬಳಿಕ `ನೀನು ಕರುಣಾಮಯಿಗಳಲ್ಲಿ ಕರುಣಾಮಯಿಯಲ್ಲವೇ?’ ಎಂದೂ ಹೇಳುತ್ತಾರೆ. ನಂತರ ಅಯ್ಯೂಬ್(ಅ)ರು ಆ ಮಾರಕ ವ್ಯಾಧಿಯಿಂದ ಮುಕ್ತರಾಗುತ್ತಾರೆ ಮತ್ತು ಅವರಿಗೆ ನಷ್ಟವಾಗಿದ್ದ ಐಶ್ವರ್ಯವೆಲ್ಲವೂ ಮರಳಿ ಬರುತ್ತದೆ.
ಇಂದು ವಿಶ್ವವು ಎದುರಿಸುತ್ತಿರುವ ಕೋವಿಡ್-19 ಎಂಬ ಮಹಾಮಾರಿಯಿಂದ ಸತ್ಯವಿಶ್ವಾಸಿಗಳು ಹೇಗೆ ಎದುರಿಸಬೇಕೆಂಬುದನ್ನು ಅಯ್ಯೂಬ್(ಅ) ಜೀವನ ನಮಗೆ ಕಲಿಸಿಕೊಡುತ್ತದೆ. ಪರೀಕ್ಷೆಗಳನ್ನು ಎದುರಿಸಲು ಸಾಧ್ಯವಾಗದೆ. ಹೇಡಿಗಳಾಗಿ ಮಾರ್ಪಟ್ಟಿರುವುದೇ ಇಂದು ನಾವು ಕಾಣುತ್ತಿರುವ ಲೋಕದ ದುರಂತ. ಪ್ರಸಕ್ತ ಪರಿಸ್ಥಿತಿಯನ್ನು ಯಶಸ್ವಿಯಾಗಿ ಎದುರಿಸಲು, ಅನುಕೂಲಕರವಾಗಿ ಮಾರ್ಪಡಿಸಲು ವಿಶ್ವಾಸಿಗಳು ಪ್ರಯತ್ನಿಸಬೇಕು. ವರ್ತಮಾನ ಕಾಲದಲ್ಲಿ ಪ್ರತಿಕೂಲ ಪರಿಸ್ಥಿತಿಗಳನ್ನು ಅನುಕೂಲಕರವಾಗಿ ಮಾರ್ಪಡಿಸಿದ ಹಲವು ಘಟನೆಗಳನ್ನು ನಾವು ನೋಡಿದ್ದೇವೆ.
ಕಳೆದ ಹತ್ತು ವರ್ಷಗಳಿಂದ ನಿರಂತರ ಆಕ್ರಮಣಕ್ಕೀಡಾಗುತ್ತಿರುವ ಗಾಝಾ ನಗರವು ಕೊರೋನಾ ಕಾಲವನ್ನು ತಮಗೆ ಅನುಕೂಲಕರವಾಗಿ ಪರಿವರ್ತಿಸಿದೆ. ವಿಶ್ವದಲ್ಲಿ ಅತ್ಯಧಿಕ ಜನಸಾಂದ್ರತೆಯಿರುವ ಪಟ್ಟಣವಾಗಿದ್ದರೂ ಬೆರಳೆಣಿಕೆಯ ರೋಗಿಗಳು ಮಾತ್ರ ಅಲ್ಲಿದ್ದಾರೆ. ವಶಾಹತುಶಾಹಿ ಶಕ್ತಿಗಳು ವಿಶ್ವದ ಮುಂದೆ ಬಾಯಿತೆರೆದು ಅಳುತ್ತಿರುವಾಗ ತಮ್ಮ ಮೇಲೆ ಬಾಂಬ್ ಎಸೆಯಲು ಶಸ್ತ್ರಾಸ್ತ್ರವನ್ನು ನಿರ್ಮಿಸಿದ್ದ ಟ್ರಂಪ್ರೊಂದಿಗೆ ಫೆಲೆಸ್ತೀನ್ನ ಮಗುವೊಂದು ಕೇಳುವ ಹರಿತವಾದ ಪ್ರಶ್ನೆಯೊಂದು ಟ್ರಂಪನ್ನು ಮಾತ್ರವಲ್ಲ ಯುರೋಪಿಯನ್ ಒಕ್ಕೂಟವು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದೆ. ವೈಜ್ಞಾನಿಕ ತಂತ್ರಜ್ಞಾನಗಳು ಆಟಿಕೆಯಾಗಿ ಮಾರ್ಪಟ್ಟಿರುವಾಗಲೂ, ಅಸ್ತಿತ್ವಕ್ಕಾಗಿ ಮನುಷ್ಯನ ರೋಧನ ಎಂತವರ ಕಣ್ಣ ತೆರೆಯುವಂತಿದೆ. ದೇವನಿಗೂ ಮಧ್ಯ ಪ್ರವೇಶಿಸಲಿಕ್ಕಿದೆ ಎಂಬುದರ ಸ್ಪಷ್ಟ ಉದಾಹರಣೆಯಿದು. ಸೀಸರ್ ನದು ಸೀಸರ್ ನಿಗೆ, ದೇವ ನದು ದೇವನಿಗೆ ಎಂದು ಹೇಳಿ ವಿಭಜನೆ ಮಾಡಿದವರು ಇಂದು ಈ ಮಹಾ ಮಾರಿಯನ್ನು ಹೋಗಲಾಡಿಸಲು ಆಕಾಶದಿಂದ ಸಹಾಯ ಹಸ್ತ ಬೇಕೆಂದು ಆಶಿಸುತ್ತಿದ್ದಾರೆ.
ಈ ಸಂದರ್ಭವನ್ನೇ ಕುರ್ಆನ್ ಬಹಳ ಸ್ಪಷ್ಟವಾಗಿ ಹೇಳಿರಬಹುದು. “ಈ ದ್ರೋಹದಲ್ಲಿ ಕುರುಡರಂತೆ ಅಲೆದಾಡುತ್ತಿರಲು ಇನ್ನಷ್ಟು ದೀರ್ಘ ಅವಕಾಶ ನೀಡುತ್ತಿದ್ದಾರೆ.” (ಅಲ್ಬಕರ: 15)
ಮಹಾಮಾರಿಗಳು ಇದಕ್ಕಿಂತ ಮೊದಲೂ ಬಂದಿವೆ. ಸಮೂಹದ ದುಷ್ಟ ಕೃತ್ಯಗಳು ಮೇರೆ ಮೀರಿದಾಗ ಸೃಷ್ಟಿಕರ್ತನು ಶಕ್ತವಾಗಿ ಹಸ್ತಕ್ಷೇಪ ನಡೆಸಿದ ಚರಿತ್ರೆಯು ಪವಿತ್ರ ಕುರ್ಆನ್ನಲ್ಲಿ ಬೈಬಲ್ನಲ್ಲೂ ಕಾಣಲು ಸಾಧ್ಯವಿದೆ. ನಿಷೇಧಿಸಿದ ಕೃತ್ಯಗಳು ವ್ಯಾಪಕವಾದಾಗ, ಸಮಾಜದಲ್ಲಿ ಅಧಾರ್ಮಿಕತೆ ತಾಂಡವವಾಡುವಾಗ, ಸತ್ಯಸಂದೇಶ ನೀಡುವ ಸಂದೇಶ ವಾಹಕರನ್ನು ಹತ್ಯೆಗೈದಾಗ, ವಿಶ್ವದ ವ್ಯವಸ್ಥೆಯನ್ನು ಬುಡಮೇಲು ಗೊಳಿಸಲು ಪ್ರಯತ್ನಿಸಿದಾಗ ಸೃಷ್ಟಿಕರ್ತನು ಹಸ್ತಕ್ಷೇಪಿಸಿದ್ದಾನೆ. ಇಂದಿನ ವಿಶ್ವದ ಪರಿಸ್ಥಿತಿಯೂ ಇವುಗಳಿಗಿಂತ ಭಿನ್ನವಾಗಿಲ್ಲ ಎಂಬುದು ವಾಸ್ತವಿಕತೆಯಾಗಿದೆ. “ಓ ಸತ್ಯವಿಶ್ವಾಸಿಗಳೇ! ನೀವು ನಿಮ್ಮ ಬಗ್ಗೆ ಚಿಂತಿಸಿಕೊಳ್ಳಿರಿ. ನೀವು ಸ್ವತಃ ಸತ್ಪಥದಲ್ಲಿದ್ದರೆ ಇತರರ ಪಥಭ್ರಷ್ಟತೆಯಿಂದ ನಿಮಗೇನೂ ಕೇಡುಂಟಾಗದು. ನಿಮಗೆಲ್ಲರಿಗೂ ಅಲ್ಲಾಹನ ಕಡೆಗೆ ಮರಳಿ ಸಾಗಲಿಕ್ಕಿದೆ. ನೀವೇನು ಮಾಡುತ್ತಿದ್ದೀರೆಂದು ಆಗ ಅವನು ನಿಮಗೆ ತೋರಿಸಿಕೊಡುವನು.” (ಅಲ್ಮಾಇದ: 105)
IslamKannada News Portal


