Home / ವಾರ್ತೆಗಳು / ಜಮಾಅತೆ ಇಸ್ಲಾಮೀ-ಪೀಪಲ್ಸ್ ಫೌಂಡೇಶನ್ ವತಿಯಿಂದ ಕೇರಳ ಪ್ರವಾಹ ಪೀಡಿತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಸ್ವಾವಲಂಬಿ ಪಟ್ಟಣ ನಿರ್ಮಾಣ

ಜಮಾಅತೆ ಇಸ್ಲಾಮೀ-ಪೀಪಲ್ಸ್ ಫೌಂಡೇಶನ್ ವತಿಯಿಂದ ಕೇರಳ ಪ್ರವಾಹ ಪೀಡಿತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಸ್ವಾವಲಂಬಿ ಪಟ್ಟಣ ನಿರ್ಮಾಣ

ವಯನಾಡ್,ಜೂ.13: ಕೇರಳ ಪ್ರವಾಹದ ನಷ್ಟವನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಕೇರಳದ ಎನ್‌ಜಿಓ ಪೀಪಲ್ಸ್ ಫೌಂಡೇಶನ್, ವಯನಾಡ್ ಜಿಲ್ಲೆಯಲ್ಲಿ 1000 ಕ್ಕೂ ಹೆಚ್ಚು ಕುಟುಂಬಗಳಿನ್ನು ಪುನರ್ವಸತಿಗೊಳಿಸಲು ಯಶಸ್ವಿ ಮಾದರಿ ಪಟ್ಟಣವನ್ನು ರೂಪಿಸಿದ್ದು, ಇಂದು ಉದ್ಘಾಟನೆಗೊಂಡಿದೆ.

ವಯನಾಡಿನ ಪೀಪಲ್ಸ್ ಫೌಂಡೇಶನ್‌ 2018 ಕೇರಳ ಪ್ರವಾಹ ಪೀಡಿತರಿಗೆ ಪುನರ್ವಸತಿ ಯೋಜನೆಯ ಭಾಗವಾಗಿ 25 ಮನೆಗಳು, ಪ್ರೀ-ಸ್ಕೂಲ್‌ಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಆಟದ ಮೈದಾನಗಳನ್ನು ಹೊಂದಿರುವ ‘ಪೀಪಲ್ಸ್ ವಿಲೇಜ್’ಎಂಬ ಸ್ವಾವಲಂಬಿ ಪಟ್ಟಣವನ್ನು ನಿರ್ಮಿಸಿದ್ದು,ನಿರಾಶ್ರಿತರ ಬಾಳಿಗೆ ಬೆಳಕನ್ನು ತುಂಬಿದೆ.

ಪ್ರತಿಷ್ಠಾನದ ಸ್ವಯಂಸೇವಕರ ದೈಹಿಕ ಪರಿಶ್ರಮದ ಜೊತೆಗೆ ನಾವು ಸಾರ್ವಜನಿಕರ ಆರ್ಥಿಕ ಸಹಾಯದಿಂದ ಟೌನ್‌ಶಿಪ್ ಮತ್ತು ಆಶ್ರಯಗಳನ್ನು ನಿರ್ಮಿಸಿದ್ದೇವೆ. ಎಲ್ಲಾ ಆಶ್ರಯಗಳನ್ನು ಪರಿಸರದ ಪರಿಸ್ಥಿತಿ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ನಿರ್ಮಿಸಲಾಗಿದೆ,” ಎಂದು ಎನ್‌ಜಿಓ ಆಡಳಿತ ಮಂಡಳಿ ಹೇಳಿದೆ.

1924 ಪ್ರವಾಹದ ಬಳಿಕ ಆಗಸ್ಟ್ 2018 ರಲ್ಲಿ ಕೇರಳ ರಾಜ್ಯವು ಭೀಕರ ಪ್ರವಾಹಕ್ಕೆ ತುತ್ತಾಯಿತು. ಅದರಲ್ಲಿಯೂ ಭಾರತದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ವಯನಾಡಿನಲ್ಲಿ ಸಾವಿರಾರು ಮನೆಗಳು ಮಾರಣಾಂತಿಕ ಪ್ರವಾಹಕ್ಕೆ ತುತ್ತಾಗಿತ್ತು.

ಜಮಾಅತೆ ಇಸ್ಲಾಮೀ ಕೇರಳ ರಾಜ್ಯ ಸಮಿತಿಯೊಂದಿಗೆ ಕೆಲಸ ಮಾಡುವ ಪೀಪಲ್ಸ್ ಫೌಂಡೇಶನ್ ತನ್ನ ಎರಡು ವರ್ಷಗಳ ಯೋಜನೆಯನ್ನು 25 ಕೋಟಿ ಮೌಲ್ಯದ ವಿವಿಧ ಏಜೆನ್ಸಿಗಳು ಮತ್ತು ಸಾರ್ವಜನಿಕರ ಸಹಕಾರ ಮತ್ತು ಭಾಗವಹಿಸುವಿಕೆಯೊಂದಿಗೆ ಯೋಜಿಸಿದೆ ಮತ್ತು ಜಾರಿಗೆ ತಂದಿದೆ.

ಸರ್ಕಾರದ ಸಹಾಯಕ್ಕಾಗಿ ಅರ್ಹತೆ ಹೊಂದಿದ್ದರೂ, ತಾಂತ್ರಿಕ ಅಸಮರ್ಥತೆಯಿಂದಾಗಿ ಅವುಗಳನ್ನು ಪಡೆಯಲು ಸಾಧ್ಯವಾಗದ ಜನರಿಗೆ ಈ ಯೋಜನೆಯು ಆದ್ಯತೆ ನೀಡುತ್ತದೆ.
ಪೀಡಿತ ಪ್ರದೇಶಗಳಲ್ಲಿ ಗರಿಷ್ಠ ಎರಡು ವರ್ಷಗಳ ಅವಧಿಯಲ್ಲಿ 300 ಹೊಸ ಮನೆಗಳನ್ನು ಸ್ಥಾಪಿಸುವುದು, ಅಸ್ತಿತ್ವದಲ್ಲಿರುವ 1000 ಮನೆಗಳನ್ನು ನವೀಕರಿಸುವುದು, 1000 ಹೆಚ್ಚೂ ಸ್ವ-ಉದ್ಯೋಗ ಯೋಜನೆಗಳು, 50 ಕುಡಿಯುವ ನೀರಿನ ಯೋಜನೆಗಳು, ವಿದ್ಯಾರ್ಥಿವೇತನಗಳು, ವೈದ್ಯಕೀಯ ಚಿಕಿತ್ಸೆ ಮತ್ತು ಇತರ ಅಗತ್ಯ ಸೌಲಭ್ಯಗಳನ್ನು 2018 ರಲ್ಲಿ ಘೋಷಿಸಲಾಗಿತ್ತು. 2018 ರ ಕೇರಳ ಪ್ರವಾಹದ ನಂತರ ರಾಜ್ಯದ ಜನಸಂಖ್ಯೆಯ ಆರನೇ ಒಂದು ಭಾಗದಷ್ಟು ಜನರು ನಿರಾಶ್ರಿತರಾಗಿದ್ದಾರೆ ಅಥವಾ ನಿರುದ್ಯೋಗಿಗಳಾಗಿದ್ದಾರೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …