Home / ಲೇಖನಗಳು / ಅವರ ಸಂಕಟ ನನಗೂ ಗೊತ್ತು, ನಾನೂ ಒಬ್ಬ ವಲಸೆ ಕಾರ್ಮಿಕ ಸೋನು: ಸೂದ್, ಚಿತ್ರ ನಟ

ಅವರ ಸಂಕಟ ನನಗೂ ಗೊತ್ತು, ನಾನೂ ಒಬ್ಬ ವಲಸೆ ಕಾರ್ಮಿಕ ಸೋನು: ಸೂದ್, ಚಿತ್ರ ನಟ

ಈ ಮುಂಬೈ ಮಹಾ ನಗರಕ್ಕೆ ನಾನು ಕೂಡಾ ವಲಸೆ ಕಾರ್ಮಿಕನಾಗಿ ಜೀವನ ದಡ ಸೇರಿಸಲು ಬಂದ ವ್ಯಕ್ತಿ. ಈಗ ಸಂಕಷ್ಟದ ಕಾಲದಲ್ಲಿ ವಲಸೆ ಕಾರ್ಮಿಕರನ್ನು ಅವರ ಮನೆಗಳಿಗೆ ಕಳಿಸುವುದಕ್ಕೆ ನಾನು ನನ್ನಿಂದಾಗುವ ಸಹಾಯ ಮಾಡಲು ಮುಂದಾಗಿದ್ದು, ಅವರ ನೋವು ಅರಿವಿರುವವರಲ್ಲಿ ನಾನೂ ಒಬ್ಬ ಎಂದಾದ್ದರಿಂದ ರಾಜಕೀಯ ಸಹಿತ ಬೇರೆ ಯಾವ ಉದ್ದೇಶವೂ ಅದರ ಹಿಂದಿಲ್ಲ. ರಾಜಕೀಯದಲ್ಲಿ ಆಸಕ್ತಿಯಿಲ್ಲದವನು ನಾನು. ನಾನೇನು ಮಾಡಿದೆನೋ ಅದೆಲ್ಲವೂ ಅಂತರಾಜ್ಯ ವಲಸೆ ಕಾರ್ಮಿಕರ ಮೇಲಿನ ಪ್ರೀತಿಯಿಂದ ಮಾಡಿದ್ದೇನೆ. ನಾನು ಅವರನ್ನು ಅವರ ಕುಟುಂಬದ ಜೊತೆ ಸೇರಿಸುವುದನ್ನು ಮಾತ್ರ ಬಯಸಿದ್ದು.

ಬಾಂದ್ರ ಟರ್ಮಿನಲ್‍ಗೆ ವಲಸೆ ಕಾರ್ಮಿಕರನ್ನು ನೋಡಲು ಬಂದ ನನ್ನನ್ನು ರೈಲ್ವೆ ಪ್ರೊಟೆಕ್ಷನ್ ಪೋರ್ಸ್ ತಡೆದು ನಿಲ್ಲಿಸಿತು. ಇದೇ ಮೊದಲ ಬಾರಿ ಅವರು ನನ್ನನ್ನು ಹೀಗೆ ತಡೆದಿದ್ದರು. ಅವರನ್ನು ದೂರಲು ಆಗುವುದಿಲ್ಲ. 2000-2500 ಕಾರ್ಮಿಕರು ನನ್ನನ್ನು ನೋಡಲು ಆವೇಶದಿಂದ ಕಾದಿದ್ದರು. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗದೆಂದು ಅವರು ಭಾವಿಸಿರಬಹುದು. ವೈಯಕ್ತಿಕ ನೆಲೆಯಲ್ಲಿ ಕಾರ್ಮಿಕರನ್ನು ಭೇಟಿಯಾಗಲು ಆಗುವುದಿಲ್ಲ ಎಂದು ಅವರು ನನಗೆ ತಿಳಿಸಿದರು. ನಿಬಂಧನೆಗಳು ನನಗೆ ಮನದಟ್ಟಾಯಿತು. ನಾನು ಅದನ್ನು ಅನುಸರಿಸಿದೆ.

ವಲಸೆ ಕಾರ್ಮಿಕರ ಭಾವನೆಗಳು ನನಗೆ ಚೆನ್ನಾಗಿ ತಿಳಿಯುತ್ತದೆ. ಪಂಜಾಬ್‍ನ ಮೊಗದಿಂದ ಕಾರ್ಮಿಕನಾಗಿ ಮುಂಬೈಗೆ ಬಂದ ವ್ಯಕ್ತಿ ನಾನು. ಅಲ್ಲಿಂದ ಒಂದು ದಿವಸ ರೈಲು ಹತ್ತಿ ಇಲ್ಲಿಗೆ ಬಂದು ಮುಟ್ಟಿದೆ. ಅದರ ಬಳಿಕ ದಬಾಂಗು, ಜೋಧ ಅಕ್ಬರ್‍ ನಂತಹ ಸಿನೆಮಾಗಳಲ್ಲಿ ನಾನು ಅಭಿನಯಿಸಿದೆ. ಪ್ರತಿಯೊಬ್ಬರು ಮಹಾನಗರಕ್ಕೆ ಬರುವುದು ಉತ್ತಮ ಜೀವನ ನಡೆಸಲು ಆಗಬೇಕೆಂಬ ಕನಸು ಹೊತ್ತುಕೊಂಡೇ ಆಗಿದೆ. ಅಂತರ್ ರಾಜ್ಯ ಕಾರ್ಮಿಕರ ಈಗಿನ ಪರಿಸ್ಥಿತಿಯನ್ನು ನಾನು ಸಹಾನುಭೂತಿಯಿಂದ ನೋಡುತ್ತಿದ್ದೇನೆ. ನೂರಾರು ಕಿಲೋ ಮೀಟರ್ ದೂರದಲ್ಲಿರುವ ತಮ್ಮ ಮನೆಗಳಿಗೆ ಅವರು ನಡೆದು ಹೋಗುತ್ತಿರುವ ದೃಶ್ಯ ಎದೆ ಒಡೆಯುವಂತಹ್ದು. ನಡೆದು, ಸೈಕಲ್‍ನಲ್ಲಿ, ಲಾರಿಗಳಲ್ಲಿ ಸಿಕ್ಕಿದ್ದರಲ್ಲಿ ದೂರದ ಮನೆಗಳಿಗೆ ಅವರು ಪ್ರಯಾಣಿಸುತ್ತಿದ್ದಾರೆ. ಕೆಲವರು ಈ ಪ್ರಯಾಣದಲ್ಲಿ ಹಸಿವಿನಿಂದ ಬಸವಳಿದು ಕುಸಿದು ಬಿದ್ದು ಮೃತ ಪಟ್ಟಿದ್ಧಾರೆ. ಅವರ ನೋವುಗಳು ನಾನು ಒಬ್ಬ ನಟನಾಗಬೇಕೆಂದು ಮಾಡಿದ ಪ್ರಯತ್ನಗಳು ನನಗೆ ನೆನಪಿಸಿತು. ಗುರಿಗೆ ತಲುಪಲು ನನ್ನ ಆರಂಭ ಕಾಲ ಕಷ್ಟದ್ದಾಗಿತ್ತು. ಆ ಕಾರ್ಮಿಕರನ್ನು ಕಂಡಾಗ ಕನಸಿನೆಡೆಗಿನ ನನ್ನ ಪ್ರಯಾಣವು ನೆನಪಾಗುತ್ತದೆ.

ಮೇ ಒಂಬತ್ತಕ್ಕೆ ಗೆಳೆಯ ನೀತಿ ಗೋಯಲ್ ಜೊತೆ ವಲಸೆ ಕಾರ್ಮಿಕರಿಗೆ ಆಹಾರ ವಿತರಿಸುತ್ತಿರುವಾಗ ಅವರ ಮುಂಬೈಯಿಂದ ಕಾಲ್ನಡಿಗೆಯಲ್ಲಿ ಊರಿಗೆ ಮರಳುತ್ತಿದ್ದಾರೆ ಎಂಬ ವಿಷಯ ಅರಿವಾಯಿತು. ಕರ್ನಾಟದಲ್ಲಿರುವ ಮನೆಗೆ ಮರಳುತ್ತಿದ್ದಾರೆ ಎಂದು ಕಾರ್ಮಿಕರ ಒಂದು ಸಮೂಹ ನನಗೆ ತಿಳಿಸಿತು. ನಮ್ಮ ಮನೆ, ಕಚೇರಿ, ರಸ್ತೆಗಳೆಲ್ಲವೂ ಆಗಿದ್ದು ಅವರ ಕಾರಣದಿಂದಲೇ ಆಗಿದೆ. ಹೀಗಿದ್ದೂ ನಾವು ಅವರನ್ನು ಈ ರೀತಿ ನಿರ್ಲಕ್ಷಿಸುತ್ತಿರುವುದು ಯಾಕೆ ಎಂಬ ಯೋಚನೆ ನನ್ನಲ್ಲಿ ಬಲಗೊಂಡಿತು.

ಪ್ರಾಣವನ್ನು  ಮುಳ್ಳಿನ ಮೊನೆಯಲ್ಲಿ ನಿಲ್ಲಿಸಿ ಅವರು ಮನೆಗೆ ಮರಳುವ ದೃಶ್ಯವು ನನಗೆ ನಿದ್ದೆಯಿಲ್ಲದ ರಾತ್ರೆಗಳನ್ನು ತಂದು ಕೊಟ್ಟಿತು. ಮುಂದೆ ಬಂದು ಅವರಿಗಾಗಿ ಏನಾದರೂ ಮಾಡಬೇಕೆಂಬ ಹಂಬಲ ಗಟ್ಟಿಯಾಗಿದ್ದು ಹಾಗೆ. ಎರಡು ದಿವಸಗಳಲ್ಲಿ ವಿವಿಧ ರಾಜ್ಯಗಳ ಅಧಿಕಾರಿಗಳಿಂದ ಅನುಮತಿ ಪಡೆದುಕೊಂಡು 300 ಮಂದಿಗೆ ಮೊದಲ ಬ್ಯಾಚ್ ಬಸ್ಸುಗಳನ್ನು ಏರ್ಪಡಿಸಿದೆ. ಅವರ ವೈದ್ಯಕೀಯ ತಪಾಸಣೆ ಮಾಡಿದೆವು. ಅದರ ನಂತರ ಕಾರ್ಮಿಕರನ್ನು ಮನೆಗಳಿಗೆ ಕಳುಹಿಸಿದಾಗ ತುಂಬ ಸಂತೋಷ ಅನಿಸಿತು. ನಂತರ ಅದು ಮುಂದುವರಿಯುತ್ತಲೇ ಹೋಯಿತು. ದೇಶದ ವಿವಿಧ ಭಾಗಗಳಿಂದ ಕಾರ್ಮಿಕರ ಮನವಿಗಳು ಹರಿದು ಬರ ತೊಡಗಿತು.

ಸಾಮಾಜಿಕ ಮಾಧ್ಯಮಗಳು ಹೆಲ್ಪ್ ಲೈನ್ ನಂಬರ್‍ ಗಳ ಮೂಲಕ ಬರುವ ಮನವಿಗೆ ಸಂಬಂಧಿಸಿದ ಕಾರ್ಯಗಳಲ್ಲಿ ಗೆಳೆಯರು ಕುಟುಂಬ ಸಹಾಯ ಮಾಡುತ್ತ ನನ್ನ ಜೊತೆಗಿದ್ದರು. ವಿವಿಧ ರಾಜ್ಯಗಳಿಂದ ಜನರು ನನ್ನನ್ನು ಸಂಪರ್ಕಿಸಲು ತೊಡಗಿದರು. ಜನರು ನನ್ನಲ್ಲಿ ನಂಬಿಕೆಯಿಟ್ಟು ಸಹಾಯಕ್ಕಾಗಿ ಸಂದೇಶ ಕಳುಹಿಸುತ್ತಲೇ ಇದ್ದರು. ಹೆಚ್ಚಿನವರು ಕಣ್ಣೀರೊಂದಿಗೆ ಅವರ ಅವಸ್ಥೆಯನ್ನು ವಿವರಿಸುತ್ತಿದ್ದರು. ಅಂತಹ ಕೆಟ್ಟ ಪರಿಸ್ಥಿತಿಯಲ್ಲಿ ಅವರಿದ್ದರು. ಆನಂತರ ನನ್ನ ಎಲ್ಲ ಗಮನ ಅತ್ತ ಹರಿಯಿತು. ಕೆಳ ಹಂತದಿಂದ ಉನ್ನತ ಸ್ತರದವರೆಗಿನ ಬಹಳಷ್ಟು ಜನರಲ್ಲಿ ಮಾತಾಡಿದೆ. ಪೊಲೀಸರು. ಮೆಡಿಕಲ್ ಡಿಪಾರ್ಟ್‍ಮೆಂಟ್ ಸಹಿತ ಎಲ್ಲರೂ ಅನುಮತಿ ಕೊಟ್ಟರು. ನನ್ನನ್ನು ಸಂಪರ್ಕಿಸಿದರೆ ಅವರಿಗೆ ಮನೆಗೆ ಹೋಗಬಹುದು ಎಂಬ ನಂಬಿಕೆಯನ್ನು ಸಂರಕ್ಷಿಸಬೇಕಾಗಿತ್ತು. ಆದ್ದರಿಂದ ಈ ಕೆಲಸದಲ್ಲಿ ನಾನು ಸಕ್ರಿಯನಾದ್ದು ಮತ್ತು ಪ್ರಯಾಣಕ್ಕೆ ಸೌಲಭ್ಯ ಮಾಡಿ ಕೊಡುವ ಭರವಸೆ ಕೊಟ್ಟದ್ದು. ಅನುಮತಿಯನ್ನು ಪಡೆದುಕೊಳ್ಳುವುದು ನನ್ನ ಮುಂದಿದ್ದ ದೊಡ್ಡ ಸವಾಲು ಆಗಿತ್ತು. ಎಲ್ಲರಿಗೂ ಮನವರಿಕೆ ಮಾಡಿಕೊಡುವುದು ಸುಲಭದ ವಿಷಯ ಅಲ್ಲ. ಕೆಲವರು ಬೇಗನೆ ಪ್ರತಿಕ್ರಿಯಿಸಿದರೆ ಕೆಲವರು ಸಮಯ ತೆಗೆದುಕೊಳ್ಳುತ್ತಿದ್ದರು. ತಮಿಳ್ನಾಡು, ಆಂಧ್ರ ಪ್ರದೇಶ, ತೆಲಂಗಾಣಗಳಲ್ಲಿದ್ದವರಿಗೆಲ್ಲ ಸಹಾಯ ಮಾಡಬೇಕಾಗಿತ್ತು. ಆದರೆ, ಮಹಾರಾಷ್ಟ್ರದಿಂದ ಬಂದವರನ್ನು ಸ್ವೀಕರಿಸುವುದಿಲ್ಲ ಎಂಬ ನಿಲುವಿನಲ್ಲಿ ತೆಲಂಗಾಣ ಇತ್ತು.

ಮನುಷ್ಯ ಪ್ರಕಾರ ಇರುವ ಈ ಕೆಲಸಗಳನ್ನು  ಸಾಮಾಜಿಕ ಮಾಧ್ಯಮಗಳಲ್ಲಿ ತಮಾಷೆ, ಟ್ರೋಲ್‍ಗಳಿಗೆ ಜನರು ಬಳಸುತ್ತಿದ್ದಾರೆ. ಮನೆಗೆ ಹೋಗುವ ಕುರಿತ ಮನವಿಯ ಜೊತೆಗೆ ರಸಕರವಾದ ಇತರ ಮನವಿಗಳು ನನಗೆ ಸಿಕ್ಕಿತ್ತು. ಪ್ರೇಯಸಿಯನ್ನು ಭೇಟಿಯಾಗಲು ನನಗೆ ಸೌಕರ್ಯ ಮಾಡಿಕೊಡಬೇಕೆಂದು ಹೇಳುವವರೂ ಇದ್ದರು. ಇನ್ನೊಬ್ಬರಿಗೆ ಮದ್ಯ ತಲುಪಿಸಿ ಕೊಡುವುದು ಬೇಕಾಗಿತ್ತು. ಅವನ್ನೆಲ್ಲ ನಗುವಿನೊಂದಿಗೆ ಅನುಭವಿಸಿದೆ. ನನ್ನ ಸಾಮಾಜಿಕ ಕಾರ್ಯಕ್ಕೆ ಪ್ರೇರಣೆ ನೀಡಿದ್ದು ತಂದೆ ತಾಯಿ, ಸರೋಜ್ ಸೂದ್, ಶಕ್ತಿಸೂದ್. ನನ್ನ ನಟನಾ ವರ್ಚಸ್ಸು ಕೆಲಸ ಬೇಗ ಆಗಲು ಉಪಯೋಗಿಸಿದ್ದೆ ಅಷ್ಟೇ. ತಮ್ಮಿಂದ ಆಗುವ ಸಹಾಯವನ್ನು ಮಾಡಿಕೊಡಲು ಎಲ್ಲರೂ ಮುಂದೆ ಬರಬೇಕು. ಪ್ರತಿಯೊಂದು ಅಡುಗೆ ಕೋಣೆಯೂ ಹೊರಗಿನ ಒಬ್ಬರಿಗೆ ಆಹಾರ ಕೊಡಲಿ. ದೇಶದಲ್ಲಿ ಹಸಿದು ಯಾರೂ ಮಲಗಬಾರದು. ಮನೆಯಿಲ್ಲದೆ ಯಾರೂ ಬೀದಿಯಲ್ಲಿ ಅಲೆಯಬಾರದು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …