ಮಲಪ್ಪುರಂ,ಜು.2: 2018ರ ಪ್ರಳಯದ ನಂತರ ಪೀಪಲ್ಸ್ ಫೌಂಡೇಶನ್ ಘೋಷಿಸಿದ ಯೋಜನೆಯಲ್ಲಿ ನಿರ್ಮಾಣಗೊಂಡಿರುವ ನಿಲಂಬೂರ್ ಪೀಪಲ್ಸ್ ವಿಲೇಜ್ ಶುಕ್ರವಾರ ಫಲಾನುಭವಿಗಳಿಗೆ ಸಮರ್ಪಿಸಲಾಗುವುದು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹನ್ನೆರಡು ಮನೆಗಳು ಕುಡಿಯುವ ನೀರು ಸಹಿತ ಮೂಲಭೂತ ಸೌಕರ್ಯ ಹೊಂದಿರುವ ವಿಲೇಜ್ ಇದು. ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ನಂಬೂರಿಪಾಟ್ಟಿಯಲ್ಲಿ ಕೊರೋನ ಮಾನದಂಡ ಪಾಲಿಸಿ ಕಾರ್ಯಕ್ರಮ ನಡೆಯಲಿದೆ.
ನೆರೆಯಿಂದಾಗಿ ನಂಬೂರಿಪ್ಪಾಡ್ ಮತ್ತು ಪರಿಸರದಲ್ಲಿ ವ್ಯಾಪಕ ನಾಶನಷ್ಟ ಸಂಭವಿಸಿತ್ತು. ಇವರಿಗೆ ಪೀಪಲ್ಸ್ ವಿಲೇಜ್ನಲ್ಲಿ ಮನೆಯನ್ನು ಕೊಡಲಾಗುತ್ತಿದೆ. ಸಚಿವರಾದ ಕಡಕಂಪ್ಪಳ್ಳಿ ಸುರೇಂದ್ರನ್, ಕೆ.ಕೃಷ್ಣನ್ ಕುಟ್ಟಿ, ಜಮಾಅತೆ ಇಸ್ಲಾಮೀ ಹಿಂದ್ನ ರಾಷ್ಟ್ರೀಯ ಉಪಾಧ್ಯಕ್ಷ ಮುಹಮ್ಮದ್ ಸಲೀಂ ಇಂಜಿನಿಯರ್ ವಿಡಿಯೋ ಕಾನ್ಫೆರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಜಮಾಅತೆ ಇಸ್ಲಾಮಿ ಕೇರಳ ಅಧ್ಯಕ್ಷ ಎಂಐ ಅಬ್ದುಲ್ ಅಝೀಝ್, ಉಪಾಧ್ಯಕ್ಷ ಪಿ. ಮುಜೀಬುರ್ರಹ್ಮಾನ್, ಸಂಸದರಾದ ಪಿ.ಕೆ, ಕುಂಞಿ ಅಲಿಕುಟ್ಟಿ, ಪಿವಿ ಅಬ್ದುಲ್ ವಹಾಬ್, ಶಾಸಕರಾದ ಎಪಿ ಅನಿಲ್ ಕುಮಾರ್, ಪಿಕೆ ಬಶೀರ್ ಪಿವಿ ಅನ್ವರ್ ಭಾಗವಹಿಸಲಿದ್ದಾರೆ.
10ಕೋಟಿ ರೂಪಾಯಿ ವೆಚ್ಚದಲ್ಲಿ 2019ರ ಪ್ರಳಯ ಪುನರ್ವಸತಿ ಯೋಜನೆಗಳು ವಿವಿಧ ಕೇಂದ್ರಗಳಲ್ಲಿ ಪ್ರಗತಿಯಲ್ಲಿವೆ. ಕವಳಪ್ಪಾರದಲ್ಲಿ ಜಮೀನು ಮನೆ ಕಳಕೊಂಡವರ ಪುನರ್ವಸತಿ ಎಡಕ್ಕರ ವಿಲೇಜ್ನಲ್ಲಿ ಒಂದು ಮುಕ್ಕಾಲು ಎಕರೆ ಸ್ಥಳವನ್ನು ಖರೀದಿಸಲಾಗಿದೆ. 25 ಮನೆಗಳನ್ನು ಇಲ್ಲಿ ಕಟ್ಟಲಾಗುವುದಉ. ಇಂಪೆಕ್ಸ್ನ ಸಹಾಯದಲ್ಲಿ ಈ ಪ್ರದೇಶದಲ್ಲಿ ಒಟ್ಟು 60 ಮನೆ ನಿರ್ಮಾಣವಾಗುತ್ತಿದೆ. ಪೀಪಲ್ಸ್ ಫೌಂಡೇಶನ್ ಅಧ್ಯಕ್ಷ ಎಂಕೆ ಮುಹಮ್ಮದಲಿ, ಸಫಿಯ ಅಲಿ, ಎಂ ಅಬ್ದುಲ್ ಮಜೀದ್, ಸಾದಿಕ್ ಉಳ್ಳಿಯಿಲ್, ಹಮೀದ್ ಸಲೀಂ, ಸಲೀಂ ಮಂಬಾಡ್, ಅಬೂಬಕರ್ ಕರುಳಾಯಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
IslamKannada News Portal
