@ ಕೆ.ಪಿ. ಪ್ರಸನ್ನನ್
ಕೆಲವು ಪದಗಳು, ವಾಕ್ಯಗಳು, ಸಂದರ್ಭಗಳು… ನಿಮ್ಮನ್ನು ಆ ಯಾತ್ರೆಗೆ ಪ್ರೇರೇಪಿಸುತ್ತದೆ. ಅದು ನನ್ನಲ್ಲಿ ಸಂಭವಿಸಲು `ಮೀಕಾತ್’ ಎಂಬ ಪದದ ವಿವರಣೆಯಿಂದಾಗಿತ್ತು. ನನಗೆ ಅರಬಿಯಲ್ಲಿ ಅಷ್ಟೊಂದು ಹಿಡಿತವಿಲ್ಲ. ಆದ್ದರಿಂದ ಕೆಲವು ಅರ್ಥಗಳನ್ನು ನನ್ನದೇ ರೀತಿಯಲ್ಲಿ ವಿಕಸಿಸಿ ನಾನು ಒಂದು ನಿಲುವಿಗೆ ಬರುತ್ತೇನೆ. ಮನದಲ್ಲೇ ಅದನ್ನು ಜೋಪಾನವಾಗಿಸಿ ನನ್ನ ಸಮಾಧಾನದೊಂದಿಗೆ ಸೇರಿಸಿಕೊಳ್ಳುತ್ತೇನೆ. ಅದರ ಸರಿ-ತಪ್ಪುಗಳ ಕುರಿತು ತರ್ಕ ಮಾಡಲು ತಯಾರಿಲ್ಲ. ಏಕೆಂದರೆ ಅದು ನನ್ನದು ಮಾತ್ರ. ಕೆಲವು ಪ್ರೀತಿ ಪಾತ್ರರು ತಮ್ಮಿಚ್ಛೆಯಂತೆ ಅದನ್ನು ಸ್ವೀಕರಿಸುತ್ತಾರೆ ಅಷ್ಟೇ.
ಇತಿಹಾಸಾತೀತವಾದ ಕಾಲ ಅಥವಾ ಮತ್ತೊಂದು ಲೋಕದ ಕಾಲ. ಪರಿಣಾಮದಿಂದ ಹಿಂದಕ್ಕೆ ಚಲಿಸಿ ಶಾಸ್ತ್ರವು ಅಲ್ಲಿಗೇ ತಲುಪಿತೇ? ನಾನು ಈ ವೇದ ಗ್ರಂಥಗಳನ್ನು ಗೌರವಿಸಿದವರ ಸಾಲಿನಲ್ಲಿ ಸೇರಿರುವುದರಿಂದ ಅದರ ವಿಮರ್ಶೆಗಳಲ್ಲೂ ವಿಶ್ವಾಸವಿರಿಸುತ್ತೇನೆ. ಆದಮ್ರ ಬೆನ್ನಿನಿಂದ ಈ ಬರೆಯುವ ನಾನು, ಅತ್ಯಾಚಾರಕ್ಕೊಳಗಾದ ಆಸಿಫ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೊಲ್ಲಲ್ಪಟ್ಟ ರಾಜನ್, ಗಾಂಧಿ, ಮಾಕ್ರ್ಸ್ ಚೆಗುವೆರ, ಕೃಷ್ಣನ್, ಏಸು, ಮುಹಮ್ಮದ್… ಯಾರೆಲ್ಲಾ ಬೇಕು. ಅವರ ಆತ್ಮಗಳನ್ನೆಲ್ಲಾ ಹೊರ ತೆಗೆದು ಒಂದು ಮೈದಾನದಲ್ಲಿ ಒಂದುಗೂಡಿಸಿದ ಮೀಕಾತ್! ಅಲ್ಲಿ ಅವನು ಕೇಳುತ್ತಾನೆ: “ನಾನಲ್ಲವೇ ನಿಮ್ಮ ಪ್ರಭು.”
ನಾವೆಲ್ಲ ಅಂದು ಬಹಳ ಸ್ನೇಹದಿಂದಿರುವೆವು. ನಂತರ ಹೇಳಿದೆವು: “ಹೌದು, ನೀನೇ ನಮ್ಮ ಪ್ರಭು. ನಂತರ ಮರೆವಿನ ಜೀವನ ಕಾಲ, ಸುಖ ಹಾಗೂ ಕೃತಘ್ನತೆಯ ಪ್ರಯಾಣಗಳು, ಅದರ ನಡುವೆ ಅಂತಹುದ್ದೇ ಒಂದು ಸಮ್ಮೇಳನ.”
ಕೆಲವರಿಗೆ ಅಲ್ಲಿಗೆ ಹೋಗಲು ಆಶೆಯಾಗುತ್ತದೆ. ಗೂಡಿನೊಳಗೆ ಮರಳುವ ಮೋಹ ಇರುವವರಿಗೆ ಅಂತಹ ಬಯಕೆ ಉಂಟಾಗುತ್ತದೆ.
ಜೀವನ ಕಾಲದಲ್ಲಿ ಅದಕ್ಕಾಗಿ ಪುನಃ ಒಂದು ಮೀಖಾತ್ ಉಂಟಾಗುವುದು. ಅದಕ್ಕಾಗಿ ಪ್ರವಾದಿ ಇಬ್ರಾಹೀಮರ ಕಡೆಗೆ ಓಗೊಡುವುದು. ಹೀಗೆ ಕರೆಯಲು ವಿಶ್ವದ ಸೃಷ್ಟಿಕರ್ತನು ಆದೇಶಿಸಿದ್ದನು. ನಿಮ್ಮ ಪ್ರಭು! ಹಿಂದೆ ನಿಮ್ಮನ್ನು ಸೃಷ್ಟಿಸಿದ ಅದೇ ಪ್ರಭು. ಮಣ್ಣಾದ ನೀನು ಅವನ ಆತಿಥ್ಯ ಸ್ವೀಕರಿಸಬೇಕು. ಮನುಷ್ಯನಾಗು. ನಿನ್ನ ಪ್ರಕೃತಿದತ್ತ ಮೌಲ್ಯದೆಡೆಗೆ ಮರಳಲು ಸಿದ್ಧನಾಗು. ಅದಕ್ಕಾಗಿಯೇ ಈ ಪಯಣ!
ಈ ಮೀಕಾತ್ನಲ್ಲಿ ಮಾನವ ಸಮೂಹವು ವಸ್ತ್ರ ಬದಲಿಸುತ್ತದೆ. ನಿನ್ನ ಶತ್ರುವಿನ ಎಲ್ಲಾ ಆತಂಕಗಳನ್ನು ಕಫನ್ ಮತ್ತು ಮುಚ್ಚುವಂತೆ ಎಲ್ಲರಿಗೂ ಒಂದೇ ರೀತಿಯ ವಸ್ತ್ರ. ಎಲ್ಲಾ ಅಸಮಾನತೆಗಳನ್ನು ಆ ಎರಡು ತುಂಡು ಬಟ್ಟೆಯಲ್ಲಿ ಮುಚ್ಚಿಕೊಳ್ಳಬೇಕು. ನಂತರ ಋಜುಮಾನವನಾಗಿ ನಾನು ಅಲ್ಲದಾಗಿ, ವಂಶ ಮತ್ತು ಗೋತ್ರವನ್ನು ಮರೆತು ಮನುಷ್ಯನಾಗ ಬೇಕು. ಅದಕ್ಕೆ ತಯಾರಿದ್ದೀರಾ? ಎಂದು ಪ್ರವಾದಿ ಇಬ್ರಾಹೀಮ್(ಅ) ಕೇಳುತ್ತಿದ್ದಾರೆ. ನಿಮಗೆ ಕೇಳುತ್ತಿದೆಯೇ?
ಮೀಕಾತ್ನಲ್ಲಿ ಇಹ್ರಾಮ್ ಧರಿಸುವುದರೊಂದಿಗೆ ನೀವು ತೋಳ ಅಲ್ಲವಾಗುತ್ತಿರಿ. ನರಿಯೂ ಆಗುವುದಿಲ್ಲ. ಇಲಿ ಅಲ್ಲದಂತಾಗುತ್ತೀರಿ… ಎಂದೆಲ್ಲಾ ಇಸ್ಲಾಮ್ ದರ್ಶನದಲ್ಲಿ ಬರೆದಿಡಲಾಗಿದೆ.
ಹಜ್ಜ್ ಗೆ ಹೋಗುವಾಗ ಓರ್ವನು ಏನಾಗಿದ್ದಾನೆ ಎಂಬುದಲ್ಲ ವಿಷಯ. ಏನಾಗುತ್ತಾರೆ ಎಂಬುದೇ ಮುಖ್ಯ ವಿಷಯ. ನೀವೆಲ್ಲಾ ಅಲ್ಲಾಹನೆಡೆಗೆ ಮರಳಬೇಕಾದವರಲ್ಲವೇ? ಇನ್ನು ಇಹಲೋಕ ಜೀವನಕ್ಕೆ ಮರಳುವುದಿದ್ದರೆ ಜನಿಸಿದ ಮಗುವಿನಂತೆ ನಿಷ್ಕಳಂಕವಾಗಿ ಮರಳಬೇಕು. ಎಲ್ಲಾ ಕಪಟತೆಯನ್ನು ಕಿತ್ತೆಸೆಯಲು ಸಿದ್ಧರಿದ್ದರೆ ಮಾತ್ರ ನೀವು ಯಾತ್ರೆಗೆ ಸಿದ್ಧರಾದರೆ ಸಾಕು ಎಂದು ಆತ ಹೇಳುತ್ತಿದ್ದಾನೆಯೇ?
ಮನುಷ್ಯನು ಅಲ್ಲಾಹನೆಡೆಗೆ ಮರಳಲು ತಯಾರಾಗುತ್ತಾನೆ. ಅವನ ಅಹಂಕಾರ, ಸ್ವಾರ್ಥವೆಲ್ಲವೂ ಮೀಕಾತ್ನಲ್ಲಿ ಮುಚ್ಚಿ ಹಾಕಲ್ಪಡುತ್ತದೆ. ಅವನು ಸ್ವಯಂ ತನ್ನ ಮೃತ ದೇಹಕ್ಕೆ ಸಾಕ್ಷಿಯಾಗುತ್ತಾನೆ. ನಂತರ ನೀವು ಅಂತ್ಯ ದಿನದಲ್ಲಿ ಆ ಮಹಾ ಪ್ರವಾಹದ ಭಾಗವಾಗುತ್ತೀರಿ. ನೀವು ಆ ಮೀಕಾತ್ನ ಕುರಿತು ನೆನಪಿಸಿ. ಮರಣದ ಬಳಿಕ ಪುನಃ ಅವನ ಮುಂದೆ ನಗ್ನರಾಗಿ ನಿಲ್ಲಬೇಕಾದ ಮೀಕಾತ್. ಹಿಂದೆ ಹೇಳಿದ ಅದೇ ಧಾಟಿಯಲ್ಲಿ ನಿಮಗೆ ಎದೆ ಬಿರಿದು ಹೇಳಲು ಸಾಧ್ಯವಾಗುವುದೇ? “ನೀನೇ ಇಹಲೋಕ ಜೀವನದಲ್ಲಿ ನಮ್ಮ ಪ್ರಭುವಾಗಿದ್ದೆ” ಎಂದು? ಹಾಗಿದ್ದರೆ ಅದಕ್ಕಾಗಿ ಈ ಮಹಾ ನದಿಯಲ್ಲಿ ಸೇರಿ ಅರಫಾಕ್ಕೆ ಸಾಗಿರಿ. ನಿಮ್ಮ ಮರಳುವಿಕೆಗೆ ನೀವು ಯಾರಾಗಿದ್ದಿ ಎಂದೂ ಎಲ್ಲಿಗೆ ಮರಳಲಿಕ್ಕಿದೆಯೆಂದೂ ಮನದಲ್ಲಿ ದೃಢಪಡಿಸಿಕೊಳ್ಳಿ.
ಈ ಪ್ರವಾಹದ ಭಾಗವಾಗುವುದೇ ಇಹ್ರಾಮ್ ಆಗಿದೆ. ನೀವು ಸಾಗಿ ಸಾಗಿ ಮಾನವ ರಾಶಿಯ ಭಾಗವಾಗಬೇಕು. ಅದು ಸಾಧ್ಯವಿದೆಯೆ? ಹಾಗಿದ್ದರೆ ನೀವು ಅವನ ಕರೆಯನ್ನು ಕೇಳಬೇಕು. ಅಂದರೆ ಹಾಜಿಯಾಗಬೇಕು. ಹಜ್ಜ್ ಮುಗಿಸಿ ಬರುವವನಲ್ಲ ಹಜ್ಜ್ ಗಾಗಿ ಸಿದ್ಧನಾಗುವನಲ್ಲವೇ ಹಾಜಿ? ಇನ್ನು ಹೇಳಿ ಲಬ್ಬೈಕ್!
ಎಲ್ಲರೂ ಒಂದಾಗುತ್ತಾರೆ ಎಂಬುದನ್ನು ಅನುಭವಿಸುಲು ಒಂದು ಅವಕಾಶ. ಪವಿತ್ರ ಅನುಭವಗಳ ಮುಂದೆ ಕಣ್ಣು ಮುಚ್ಚಬಾರದು. ನಿಮ್ಮ ಗುರಿಯನ್ನು ನೀವೇ ನಿರ್ಧರಿಸಬೇಕು. ಕೇವಲ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂಬುದರ ಬದಲು ಜೀವನದ ಉದ್ದೇಶವನ್ನು ಅರಿತುಕೊಂಡ ಮನುಷ್ಯನಾಗಿ ನೀವು ಮರಳಬೇಕು. ಅಂತಹ ಒಂದು ಮರಳುವಿಕೆ ಇದ್ದರೆ ಇತಿಹಾಸದೆಡೆಗೆ ಉದ್ದೇಶಪೂರ್ವಕ ಸಾಗುವ ಮನುಷ್ಯ. ಇನ್ನು ಅವನೊಂದಿಗಿನ ತರಬೇತಿ, ನೋಟವೂ ಉಂಟಾಗುತ್ತದೆ. ಕಣ್ಣು ತೆರೆದು ನಡೆಯಬೇಕು. ಕೊನೆಗೆ ಮಿನಾ ಬಿಡುವಾಗ ನೀವು ಒಂದು ಉಮ್ಮತ್ನ ಭಾಗವಾಗಿ ಮಾರ್ಪಡಬೇಕು. ಹಾಗಾದರೆ ಉಮ್ಮತ್ ಎಂದರೇನು? ಅದು ಕೂಡಾ ಮೀಕಾತ್ ನಂತೆ ಆತ್ಮದಲ್ಲಿ ಹರಿಯಬೇಕಾದ ಪದ.
ಕಅಬಾದ ಸುತ್ತಲೂ ಹರಡಿಕೊಂಡಿರುವ 10 ಲಕ್ಷದಷ್ಟು ಮನುಷ್ಯ ರಾಶಿಯ ಉಪಗ್ರಹ ಚಿತ್ರವನ್ನು ತೋರಿಸಿ ಓರ್ವರು ಅಮೇರಿಕಾದ ಸೇನಾ ಕಮಾಂಡರ್ ನೊಡನೆ ಕೇಳಿದರಂತೆ, ಈ ಮನುಷ್ಯರೆಲ್ಲಾ ನಿಮ್ಮ ಸೈನಿಕರು ಎಂದು ಭಾವಿಸೋಣ. ಹಾಗಿದ್ದರೆ ಇವರನ್ನು ಒಂದು ಸಾಲಾಗಿ ನಿಲ್ಲಿಸಲು ನಿಮಗೆ ಎಷ್ಟು ಸಮಯ ಬೇಕು? ಹಲವು ದಿವಸಗಳು ಬೇಕಾಗಬಹುದು ಎಂಬುದು ಆತನ ಉತ್ತರವಾಗಿತ್ತು. ಕಅಬಾದಲ್ಲಿ ಬಾಂಗ್ ಮೊಳಗಿ ಕೇವಲ ನಿಮಿಷಗಳೊಳಗೆ ಪಂಕ್ತಿಬದ್ಧವಾಗಿ ಸ್ವಯಂ ನಿಂತುಕೊಂಡ ಆ ಹಾಜಿಗಳ ಚಿತ್ರ ತೋರಿಸಿದಾಗ ಕಮಾಂಡರ್ ಆಶ್ಚರ್ಯಚಕಿತನಾದ! ಈ ಅನುಸರಣೆಯ ರೀತಿಯನ್ನು ಮುಸ್ಲಿಮರು ನಿತ್ಯ ಜೀವನದಲ್ಲಿ ಪಾಲಿಸಿದರೆ ವಿಶ್ವವು ಇದಕ್ಕಿಂತಲೂ ಸುಂದರವಾಗಬಹುದೆಂಬುದರಲ್ಲಿ ಸಂಶಯವಿಲ್ಲ.
ನಮಾಝ್ನ ವೇಳೆಯನ್ನು ಹೊರತು ಪಡಿಸಿ ಜನರು 24 ಗಂಟೆಯೂ ಪ್ರದಕ್ಷಿಣೆ ಮಾಡುತ್ತಿರುವ ಈ ಗೇಹವು ಅದ್ಭುತವೇ ಆಗಿದೆ.
ಮಸೀದಿಯ ಮೇಲಿನ ಅಂತಸ್ತಿನಲ್ಲಿ ನಿಂತು ಕಅಬಾದ ಸುತ್ತಲೂ ಹಾಲು ಕಡಲಿನಂತೆ ಹರಿಯುವ ಸೊಬಗನ್ನು ಎಷ್ಟು ನೋಡಿದರೂ ಸಾಕಾಗುವುದಿಲ್ಲ. ರಾಜನಾಗಲಿ, ಪ್ರಜೆಯಾಗಲಿ ಯಾರೇ ಆದರೂ ನೀವಲ್ಲಿ ಅಲ್ಲಾಹನ ಅತಿಥಿಯಾಗಿ ಆಗಮಿಸಿದ ಹಸಿ ಮನುಷ್ಯರು ಮಾತ್ರ. ಹಜ್ಜನ್ನು ಭಾವನಾತ್ಮಕವಾಗಿ ಅನುಭವಿಸುವ ಧಾರಾಳ ಪುಸ್ತಕಗಳಿವೆ. ಅಲೀ ಶರೀಅತಿಯನ್ನು ಓದುವಾಗ ನಿಮ್ಮ ಹಜ್ಜ್ ಕರ್ಮ ಆರಂಭವಾದ ಅನುಭವವಾಗುತ್ತವೆ. ಪ್ರತಿಯೊಬ್ಬರ ಹಜ್ಜ್ ಅನುಭವದಲ್ಲೂ ಕೆಲವು ಖಾಸಗಿ ಕ್ಷಣಗಳು ಗೋಚರಿಸುತ್ತವೆ. ಹೃದಯದಲ್ಲಿ ಅಪ್ಪಿಕೊಳ್ಳುವುದು ಅದನ್ನೇ ಸೂಚಿಸುತ್ತದೆ. ಮಿನಾದಲ್ಲಿ ತಂಗಿದ ಸಮಯದಲ್ಲಿ ಅರಫಾಕ್ಕಾಗಿ ಕಾಯುವಿಕೆ. ತೀವ್ರ ಜ್ವರದ ಕಾರಣದಿಂದ ಪ್ರಾರ್ಥನೆಗೂ ಕೂಡಾ ಅಸಾಧ್ಯವಾದಂತಹ ದುರ್ಬಲ ಪರಿಸ್ಥಿತಿ ನನ್ನದಾಗಿತ್ತು.
ಪ್ರಿಯಕರ ಮತ್ತು ಪ್ರಿಯತಮೆ ಬೇರ್ಪಟ್ಟರು. ಬಹಳ ಅಲೆದಾಟದ ಬಳಿಕ ಅವಳ ವಸತಿಯ ಮುಂದೆ ಆತ ತಲುಪಿದ. ಅವನ ಯಾತ್ರೆಗಳು ಯಾವಾಗಲೂ ಅವಳಲ್ಲಿಯೇ
ಕೊನೆಗೊಳ್ಳುತ್ತಿತ್ತು.
ಯಾರು ಅದು?
“ನಾನೇ”
ಅವಳು ಬಾಗಿಲು ತೆರೆಯಲೇ ಇಲ್ಲ. ಪುನಃ ಸುತ್ತಾಟ. ಪುನಃ ಅಲ್ಲಿಗೇ ಮರಳುವಿಕೆ. ಅದೇ ವಸತಿಯ ಮುಂದೆ ಆತ ಪುನಃ ಪ್ರತ್ಯಕ್ಷನಾಗುತ್ತಾನೆ.
“ಯಾರು ಅದು ಹೊರಗೆ”
“ನೀನೇ”
ಆಕೆ ಬಾಗಿಲು ತೆರೆದಳು.
ಇದು ಒಂದು ಸೂಫಿ ಕಥೆ. ಅದರಲ್ಲೇ ನನ್ನ ಯಶಸ್ಸಿನ ಔಷಧಿ. ನನಗೆ ಯಾವುದೇ ಸಾಮರ್ಥ್ಯವಿಲ್ಲ. ನೀನೇ ನನಗೆ ದಾರಿ ತೋರಿಸಬೇಕು ಎಂಬ ನನ್ನ ಅಸಹಾಯ ಕತೆಯನ್ನು ನಾನು ತಿಳಿದುಕೊಂಡಾಗ, ಅದು ಪ್ರಾರ್ಥನೆಯಾಗಿ ಬದಲಾಯಿತು. ಅವನು ಸಹಾಯ ಹಸ್ತದೊಂದಿಗೆ ಬಾಗಿಲು ತೆರೆದನು.
ಹಜ್ಜ್ ನ ವಿವಿಧ ಹಂತಗಳು ಹಾದು ಹೋಗುವಾಗ ನೀವು ನಿಮ್ಮಿಂದಲೇ ಅಗಲುತ್ತೀರಿ. ಅಲ್ಲಾಹನಿಗೆ ನಿಕಟರಾಗುತ್ತೀರಿ. ಭಾವೋದ್ವೇಗದಿಂದ ನೀವು ಒಂದು ಧಿಕ್ಕಿನಲ್ಲಿ ಮಾತ್ರ ಸಂಚರಿಸಲು ನಿರ್ಬಂಧಿತರಾಗುತ್ತೀರಿ. ಇನ್ನು ಹಿಂದೆ ಸರಿಯುವ ವಿಷಯವೇ ಇಲ್ಲ. ಇಬ್ರಾಹೀಮ್, ಹಾಜಿರಾ, ಇಸ್ಮಾಈಲರನ್ನು ಅನುಭವಿಸಿ ನಮಗೆ ಮುಗಿಯುವುದಿಲ್ಲ. ತವಾಫ್ ಮತ್ತು ಸಅïಈಯ ಉದ್ದೇಶವನ್ನು ಅನುಭವಿಸಬೇಕು.
ಮಿನಾದಿಂದ ಅರಫಾಕ್ಕೆ ಬಸ್ಸಿನಲ್ಲಿ ಪಯಣ. ಹೊರಗೆ ಜನದಟ್ಟಣೆ. ಒಂದೇ ಗುರಿಯೆಡೆಗೆ ಒಂದೇ ಮಂತ್ರದೊಂದಿಗೆ ಸಾಗುತ್ತಿದೆ. ದಾರಿ ಮಧ್ಯೆ ಜನರು ಬಸ್ಸಿಗೆ ಕೈ ತೋರಿಸಿದರು. ಹೆಚ್ಚಿನವರು ವೃದ್ಧರು, ನಿಶ್ಶಕ್ತಿಯಿರುವವರು. ಅವರ ಬಸ್ಸು ಹಾಳಾಗಿತ್ತು. ಅವರಿಗೆ ಬಸ್ಸನ್ನು ನಿಲ್ಲಿಸುವಂತೆ ನಾನು ಮತ್ತು ನನ್ನ ಸಂಗಡಿಗ ಒತ್ತಾಯಿಸಿದೆವು. ಕೆಲವರು ಬಸ್ಸು ಹತ್ತಿದರು. ಬೇಕಿದ್ದರೆ ಅವರು ಒಳಗೂ, ನಾವು ಹೊರಗೂ ಆಗಬಹುದಾಗಿದ್ದ ವಿಧಿಯನ್ನು ಕುರಿತು ಯೋಚಿಸುವ ಹೊರತು ಮನುಷ್ಯನಿಗೆ ಅಸಹಾಯಕರಿಗಾಗಿ ಸಹಾಯ ಹಸ್ತ ಚಾಚಲು ಸಾಧ್ಯವಿಲ್ಲ. ಅರಫಾ ಎಂದರೆ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳಲಿಕ್ಕಿರುವ ಈ ಯಾತ್ರೆಗಳು ಅದನ್ನು ಕಲಿಸದಿದ್ದರೆ ಮನುಷ್ಯ ಜನ್ಮವು ಖಂಡಿತವಾಗಿಯೂ ನಷ್ಟ ಹೊಂದಿದಂತೆಯೇ.
ಬಸ್ಸಿಗೆ ಹತ್ತಿದ ಯಾತ್ರಿಕರು ಒಳಗಿನವರ ಸೌಕರ್ಯವನ್ನು ಕಡಿಮೆಗೊಳಿಸಿದರು. ಪ್ರಯಾಣದ ಕಷ್ಟವು ಹೆಚ್ಚಾಯಿತು. ನನ್ನ ಮಡಿಲಿಗೆ ಕೆಲವು ಸಾಮಾನುಗಳು ಬಿದ್ದವು. ನನ್ನಿಂದ ಸಹಾಯ ಬೇಡಿದ ವ್ಯಕ್ತಿಗಳ ಮುಖವನ್ನು ನೋಡಿದೆ. ಇವರೆಲ್ಲಾ ಈ ಪ್ರಾಯದಲ್ಲಿ ಹೇಗೆ ಇಲ್ಲಿಗೆ ತಲುಪಿದರು ಎಂದು ಆಶ್ಚರ್ಯ ಪಡಬೇಕಾದ ರೂಪಗಳು. ದಾರಿದ್ರ್ಯವನ್ನು ಎತ್ತಿ ತೋರಿಸುವ ಮುಖಗಳು. ಮಡಿಲಲ್ಲಿ ಇರಿಸಿದ್ದ ಭಾರಗಳಿಂದ ಮನಸ್ಸಿಗೆ ಅಸ್ವಸ್ಥತೆಯುಂಟಾದರೂ, ಆ ಕಷ್ಟದ ಸಂದರ್ಭದಲ್ಲಿ ಅವರಿಗೆ ಸಹಾಯಹಸ್ತ ಚಾಚುವ ಮನಸ್ಸನ್ನು ನೀಡಿದ ಅಲ್ಲಾಹನಿಗೆ ಅರ್ಪಿಸಿದ ಸ್ತುತಿಯು ಕಣ್ಣೀರಾಗಿ ಹರಿಯಿತು. ಆ ಸಹಾಯದಿಂದ ನಾವು ಬಹಳ ಕಷ್ಟ, ತೊಂದರೆಗಳನ್ನು ಅನುಭವಿಸಿದೆವು ಎಂದು ಅವಲೋಕನ ಸಭೆಯಲ್ಲಿ ಹಲವರು ಹೇಳಿದರಾದರೂ `ಅದು ಮಾತ್ರ ನನ್ನ ಸಂಪಾದನೆ’ ಎಂಬ ಸಂತೋಷ, ನೆಮ್ಮದಿ ಈಗಲೂ ನನ್ನಲ್ಲಿ ಉಳಿದಿದೆ.
ಹಜ್ಜ್ ನ ಅತಿಥೇಯ ಅಲ್ಲಾಹನಾಗಿದ್ದಾನೆ. ಅದಕ್ಕೆ ಸಿದ್ಧತೆಗಳನ್ನು ಅವನೇ ಮಾಡುತ್ತಾನೆ. ಹಾಗಿದ್ದರೂ ಅತಿಥಿಗಳಾಗಿ ಬಂದವರನ್ನು ಅತಿಥೇಯರಂತಾಗಲು ಅಲ್ಲಾಹನು ಕೆಲವರಿಗೆ ಅನುಗ್ರಹಗಳನ್ನು ನೀಡುತ್ತಾನೆ. ಆ ಒಂದು ಭಾವನೆಯೇ ಟಾಯ್ಲೆಟ್ನ ಕ್ಯೂವನ್ನು ಪಾಲಿಸಲು, ಅವಿವೇಕ ತೋರಿಸುವವರೊಂದಿಗೆ ವಿವೇಕದಿಂದ ವರ್ತಿಸಲು ಸಾಧ್ಯವಾಯಿತು. ಇಂತಹ ಭಾವನೆಗಳನ್ನು ನಿತ್ಯ ಜೀವನದಲ್ಲಿ ಪಾಲಿಸಲು ಸಾಧ್ಯವಾದರೆ ಜೀವನ ಸಾರ್ಥಕವಾಗಲು ಬೇರೇನು ಬೇಕು!
ಜೆಫ್ರಿ ಲಾಂಗ್ ತನ್ನ ಹಜ್ಜ್ ಅನುಭವದಲ್ಲಿ ಓರ್ವ ಏಷ್ಯಾದ ಸಹೋದರನ ಕುರಿತು ಬರೆದಿದ್ದಾರೆ. ಹೀಗೆ ದೊರೆಯುವ ಎಲ್ಲಾ ಅನುಭವಗಳನ್ನು ಓದಿ ತಿಳಿಯಬೇಕು. ಅಂತಾದರೆ ಮಾತ್ರ ನಮಗೆ ಅದನ್ನು ಪುನಃ ಸೃಷ್ಟಿಸಬೇಕಾಗಿದೆ.
ಬಿಳಿಯ ಚರ್ಮದವನಾದ ಮುಸ್ಲಿಮನ ಕಥೆ ಕೇಳುವ ಉತ್ಸಾಹದಿಂದ ಆತನನ್ನು ಪರಿಗಣಿಸದ ಜೆಫ್ರಿಗೆ ಆ ಸಹೋದರ ನೆನಪಿಸಿದ. ನಮ್ಮ ಊರಿನಲ್ಲಿ ತರಗತಿಯಲ್ಲಿ ಹಾಜರಿ ಕರೆಯುವಾಗ ಮಕ್ಕಳು ಎದ್ದು ನಿಂತು ಲಬ್ಬೈಕ್ (ಹಾಜರ್ ಸಾರ್) ಎಂದು ಹೇಳುತ್ತಾರೆ. ಈ ಬಾರಿಯ ಹಜ್ಜ್ ಎಷ್ಟೊಂದು ಆವೇಶಕರವಾಗಿದೆ ಎಂದು ಹೇಳಿದಾಗ ವರ್ಣ, ಭಾಷೆ, ಕಾಲ, ದೇಶ ಭೇದವಿಲ್ಲದೆ, ನಿಮ್ಮ ಪ್ರಭುವಿನ ಮುಂದೆ ಕರವನ್ನೆತ್ತಿ ಹೇಳುವ ಲಬ್ಬೈಕ್ನ ಮಾಧುರ್ಯ ಹಾಗೂ ಸಹೋದರತೆ ತನ್ನ ಮನದಲ್ಲಿ ತುಂಬಿತೆಂದೂ, ಕಣ್ಣುಗಳು ತುಂಬಿ ಹರಿ ಯಿತೆಂದೂ ಆ ಸಹೋದರರನ್ನು ಗಾಢವಾಗಿ ಆಲಂಗಿಸದೆ ಮರಳಲು ಸಾಧ್ಯವಾಗಲಿಲ್ಲವೆಂದೂ ಜೆಫ್ರಿ ಬರೆಯುತ್ತಾರೆ.
ತೌಹೀದ್ನ ಸೌಂದರ್ಯದಲ್ಲಿ ಮಾನವರ ಏಕತೆಯನ್ನು ಅನುಭವಿಸಿಕೊಂಡು, ಏಕೈಕನಾದ ಸೃಷ್ಟಿಕರ್ತನ ಪ್ರೀತಿ ಗಳಿಸಲು ಆಗ್ರಹಿಸುವುದಾದರೆ ತಾವೂ ಹಾಜಿಗಳಾಗುತ್ತೀರಿ. ಹಾಗಿದ್ದರೆ ನಿಮ್ಮನ್ನು ಕಾಯುತ್ತಾ ಅತಿಥೇಯನಾಗಿ `ಅವನು’ ಅಲ್ಲಿರುತ್ತಾನೆ.
ನಮ್ಮ ದೌರ್ಬಲ್ಯಗಳ ದುಃಖದಲ್ಲಿ ಪುನಃ ಆ ಮಹಾ ಪ್ರವಾಹದ ಭಾಗವಾಗುವ ಆಶೆಯು ಮನದಲ್ಲಿ ಜಾಗೃತವಾಗುತ್ತದೆ. ಪ್ರವಾದಿಯವರು(ಸ) ಒಂದೇ ಬಾರಿ ಮಾಡಿರುವ ಹಜ್ಜ್. ನನ್ನ ಹಜ್ಜ್ ಸಂಪೂರ್ಣತೆ ಪಡೆದಿದೆಯೇ? ಎಂಬ ಆತಂಕವಿರುತ್ತದೆ.
ಅರಫಾದ ಟೆಂಟ್ನಲ್ಲಿ ಕುಳಿತಿರುವಾಗ ಚಾಪೆಗೆ ಬಂದ ಇರುವೆಯನ್ನು ಅಭ್ಯಾಸ ಬಲದಿಂದ ಜಜ್ಜಿರಬಹುದಾ? ಪ್ರಯಾಣದ ನಡುವೆ ಯಾವುದಾದರೂ ಸಸ್ಯವನ್ನು ಚಿವುಟಿರಬಹುದಾ? ಮೊದಲಾದ ಆತಂಕಗಳು ಪ್ರಯಾಣದಲ್ಲಿ ಮಾತುಕತೆಯ ವೇಳೆ ಇಸ್ಲಾಮ್ ಸ್ವೀಕರಿಸಿದ ಓರ್ವ ಸಹೋದರಿಯು ದುಃಖವನ್ನು ಹೇಳುತ್ತಾ, ಇನ್ನೂ ಅವಿವಾಹಿತೆಯಾಗಿರುವ ಆಕೆಯ ಕುರಿತು, ಅವಳೆಡೆಗೆ ತಿರುಗಿ ನೋಡದ ಮುಸ್ಲಿಮ್ ಸಮೂಹದ ಕುರಿತು ಹೇಳಿದ್ದ ಅಂತಹ ಅನಾಥೆಯರನ್ನು ವಿವಾಹವಾಗಿಯಾದರೂ ಸಹಾಯ ಮಾಡಬೇಕು ಎಂದಿದ್ದೆ. ನಮ್ಮ ತಂಡದಲ್ಲಿದ್ದ ಓರ್ವ ವ್ಯಕ್ತಿಗೆ ಆವೇಶ ಬಂದು, ಆತ ತನ್ನ ಪತ್ನಿಯೊಡನೆ ಅನುಮತಿ ಕೇಳಿದ. ರಾದ್ಧಾಂತವೋ ರಾದ್ಧಾಂತ. ಅದಕ್ಕೆ ನಾನೂ ಕೂಡಾ ಅಪರಾಧಿ ಸ್ಥಾನವನ್ನು ಪಡೆದೆ. ಇಂತಹ ಸಂಭಾಷಣೆಗಳನ್ನು ಕೂಡಾ ಬಿಟ್ಟು ಹಜ್ಜನ್ನು ಪವಿತ್ರಗೊಳಿಸಬೇಕೇ? ಅಥವಾ ವಿಶ್ವ ಮಹಾ ಸಮ್ಮೇಳನದ ಅಜೆಂಡಾವಾಗಿ ಎಲ್ಲಾ ದೇಶಗಳ ಸಂದೇಶ ಪ್ರಚಾರಕರಿಗೂ, ಸೇವಕರಿಗೂ ಮಾರ್ಗದರ್ಶಕವಾಗಿ ವಿಕಸಿಸಬೇಕಾದ ಒಂದು ಮಹಾ ಕ್ರಾಂತಿಯಾಗ ಬೇಕೇ ಹಜ್ಜ್? ಹೌದು, ಇನ್ನು ಓದಿಯೂ ಅನುಭವಿಸಿಯೂ ಮುಗಿಯದ ಸಂಗತಿಯದು.
ಕೇವಲ ಝಂ ಝಂ ನೀರು ಮತ್ತು ಖರ್ಜೂರದೊಂದಿಗೆ ಮಾತ್ರ ಓರ್ವ ಹಜ್ಜ್ ನಿಂದ ಮರಳಿ ಬರುತ್ತಾನೆ/ಳೆಯೇ? ಅಥವಾ ಇಸ್ಲಾಮಿನ ನೈಜ ಬದುಕಿನ ವಾಸ್ತವಿಕತೆಯನ್ನು ಬರುವ ಮೀಕಾತ್ಗೆ ಕಾಯ್ದಿರಿಸಬೇಕಾದ ಜೀವನದ ಪಾವಿತ್ರ್ಯತೆಯನ್ನು ಜೊತೆಗೆ ತಂದಿರು ತಾನೆಯೇ?
IslamKannada News Portal


