ಛತ್ತಿಸ್‍ಗಡ, ಆ.: ಕೊರೊನ ಪ್ರತಿರೋಧಕ್ಕಾಗಿ ಹರಿಯಾಣ ಮುಖ್ಯಮಂತ್ರಿಯ ಸಂತ್ರಸ್ತ ನಿಧಿಗೆ ಲುಲುಗ್ರೂಪ್ ಅಧ್ಯಕ್ಷ ಎಂ ಎ ಯೂಸುಫಲಿ ಒಂದೂವರೆ ಕೋಟಿ ರೂಪಾಯಿ ನೀಡಿದ್ದಾರೆ. ಮುಖ್ಯಮಂತ್ರಿ ಮನೋಹರ ಖಟ್ಟರ್ ಅವರ ಚಂಡೀಗಡ ಕಚೇರಿಗೆ ಲುಲು ಗ್ರೂಪ್‍ನ ಪ್ರತಿನಿಧಿಗಳಾದ ನಜುಮುದ್ದೀನ್, ಜಯಕುಮಾರ್ ಹೋಗಿ ಚೆಕ್ ಹಸ್ತಾಂತರಿಸಿದ್ದಾರೆ. ಇದಲ್ಲದೆ ಹರಿಯಾಣದ ವೇಮಾವತ್ ಜಿಲ್ಲಾಡಳಿತದ ಸಿಎಸ್‍ಆರ್ ಫಂಡ್‍ಗೆ ಯೂಸುಫಲಿ ಅವರು ಐವತ್ತು ಲಕ್ಷ ರೂಪಾಯಿ ನೀಡಿದ್ದಾರೆ. ಮೇವಾತ್ ಜಿಲ್ಲಾ ಡೆಪ್ಯುಟಿ ಕಮಿಶನರ್ ಮತ್ತು ಜಿಲ್ಲಾಧಿಕಾರಿಯಾದ ಪಂಕಜ್‍ರು ಚೆಕ್ ಅನ್ನು ಪಡೆದುಕೊಂಡಿದ್ದಾರೆ.
ಭಾರತ ಮತ್ತು ಗಲ್ಫ್ ದೇಶಗಳಲ್ಲಿ ಕೊರೊನ ಸಂತ್ರಸ್ತ ಕಾರ್ಯಗಳಿಗಾಗಿ ಇದುವರೆಗೆ 47.5 ಕೋಟಿ ರೂಪಾಯಿಯನ್ನು ಯೂಸುಫಲಿ ನೀಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಕೊರೊನ ಫಂಡ್‍ಗೆ 25 ಕೋಟಿ ರೂಪಾಯಿ ನೀಡಿದ್ದಾರೆ. ಕೇರಳ ಮುಖ್ಯ ಮಂತ್ರಿಯ ಸಂತ್ರಸ್ತರ ನಿಧಿಗೆ ಹತ್ತು ಕೋಟಿ ರೂಪಾಯಿಯನ್ನು ನೀಡಿದ್ದಾರೆ. ಉತ್ತರಪ್ರದೇಶ ಮುಖ್ಯಮಂತ್ರಿಯ ಸಂತ್ರಸ್ತ ನಿಧಿಗೆ ಐದು ಕೋಟಿ ರೂಪಾಯಿ ನೀಡಿದ್ದಾರೆ.
IslamKannada News Portal
