Home / ವಾರ್ತೆಗಳು / ಯುಪಿಎಸ್‍ಸಿ ಪರೀಕ್ಷೆ: ಈ ಬಾರಿ 42 ಮುಸ್ಲಿಂ ಅಭ್ಯರ್ಥಿಗಳು ತೇರ್ಗಡೆ; ಟಾಪ್ 100ರಲ್ಲಿ ಸ್ಥಾನ ಪಡೆದ ಸಫ್ನಾ ನಝರುದ್ದೀನ್

ಯುಪಿಎಸ್‍ಸಿ ಪರೀಕ್ಷೆ: ಈ ಬಾರಿ 42 ಮುಸ್ಲಿಂ ಅಭ್ಯರ್ಥಿಗಳು ತೇರ್ಗಡೆ; ಟಾಪ್ 100ರಲ್ಲಿ ಸ್ಥಾನ ಪಡೆದ ಸಫ್ನಾ ನಝರುದ್ದೀನ್

ಹೊಸದಿಲ್ಲಿ: ಕೇಂದ್ರ ಲೋಕಸೇವಾ ಆಯೋಗ 2019ರಲ್ಲಿ ನಡೆಸಿದ ಪರೀಕ್ಷೆಯಲ್ಲಿ 42 ಮುಸ್ಲಿಂ ಅಭ್ಯರ್ಥಿಗಳು ತೇರ್ಗಡೆಗೊಂಡಿದ್ದಾರೆ. ಕಳೆದ ವರ್ಷ ಒಟ್ಟು 28 ಮಂದಿ ತೇರ್ಗಡೆಗೊಂಡಿದ್ದರು.

ಪಿಎಸ್‍ಸಿ ರ್ಯಾಂಕ್ ಪಟ್ಟಿಯಲ್ಲಿ 45ನೇ ರ್ಯಾಂಕ್ ಗಳಿಸಿರುವ ಸಫ್ನಾ ನಝರುದ್ದೀನ್ ಅವರು ಟಾಪ್ 100ರಲ್ಲಿ ಸ್ಥಾನ ಪಡೆದ ಏಕೈಕ ಮುಸ್ಲಿಂ ಅಭ್ಯರ್ಥಿಯಾಗಿದ್ದಾರೆ.

ಮಂಗಳವಾರ ಬಿಡುಗಡೆಯಾದ ಫಲಿತಾಂಶದಲ್ಲಿ ಒಟ್ಟು 829 ಮಂದಿ ತೇರ್ಗಡೆಗೊಂಡಿದ್ದು, ಅವರ ಪೈಕಿ ಮುಸ್ಲಿಂ ಅಭ್ಯರ್ಥಿಗಳು ಶೇ 5ರಷ್ಟಿದ್ದಾರೆ. ಕಳೆದ ವರ್ಷ ತೇರ್ಗಡೆಯಾದ ಒಟ್ಟು 759 ಅಭ್ಯರ್ಥಿಗಳ ಪೈಕಿ ಶೇ 4 ಅಥವಾ 28 ಅಭ್ಯರ್ಥಿಗಳು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರು.

2016ನೇ ಬ್ಯಾಚ್ ಪರೀಕ್ಷೆಯಲ್ಲಿ ಮೊದಲ ಬಾರಿ ಗರಿಷ್ಠ 50 ಮುಸ್ಲಿಂ ಅಭ್ಯರ್ಥಿಗಳು ತೇರ್ಗಡೆಗೊಂಡಿದ್ದರಲ್ಲದೆ, ಟಾಪ್ 100ರ ಪಟ್ಟಿಯಲ್ಲಿ ಹತ್ತು ಮಂದಿ ಸಮುದಾಯಕ್ಕೆ ಸೇರಿದವರಾಗಿದ್ದರು. 2017ನೇ ಬ್ಯಾಚಿನ ಪರೀಕ್ಷೆಯಲ್ಲೂ 50 ಮುಸ್ಲಿಂ ಅಭ್ಯರ್ಥಿಗಳು ಯಶಸ್ಸು ಸಾಧಿಸಿದ್ದರು. ಇದಕ್ಕೂ ಮುಂಚೆ, 2012, 2013, 2014 ಹಾಗೂ 2015ರಲ್ಲಿ  ಕ್ರಮವಾಗಿ 30, 34, 38 ಹಾಗೂ 36 ಮುಸ್ಲಿಂ ಅಭ್ಯರ್ಥಿಗಳು ತೇರ್ಗಡೆಗೊಂಡಿದ್ದರು.

ಕೃಪೆ: ವಾರ್ತಾ ಭಾರತಿ

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …