ಉಳ್ಳಾಲ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಆಯೋಜಿಸಿದ ‘ಹಸಿರು ಕರಾವಳಿ’ ಪರಿಸರ ಜಾಗೃತಿ ಅಭಿಯಾನದ ಭಾಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಇತ್ತೀಚಿಗೆ ಕೆ.ಸಿ.ರೋಡಿನಲ್ಲಿರುವ ಸ್ಕೂಲ್ ಆಫ್ ಕುರ್ಆನಿಕ್ ಸ್ಟಡೀಸ್ ವಿದ್ಯಾ ಸಂಸ್ಥೆಯಲ್ಲಿ ನಡೆಸಲಾಯಿತು.
ಮುಖ್ಯ ಅಥಿತಿಗಳಾಗಿ ಎಸ್ಐಓ ರಾಷ್ಟ್ರಾಧ್ಯಕ್ಷರಾದ ಲಬೀದ್ ಶಾಫಿ ಗಿಡ ನೆಡುವ ಮೂಲಕ ಅಧಿಕೃತ ಚಾಲನೆ ನೀಡಿ ಹಸಿರಿನ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.
ಎಸ್ಕ್ಯುಎಸ್ ಇದರ ಮಾನೇಜಿಂಗ್ ಡೈರೆಕ್ಟರ್ ಉಮರ್ ಆಶಿಕ್ ಅಭಿಯಾನಕ್ಕೆ ಶುಭ ಹಾರೈಸಿದರು. ಎಸ್ಐಓ ಉಳ್ಳಾಲ ಘಟಕಾಧ್ಯಕ್ಷರಾದ ನಿಝಾಮ್ ಉಮರ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಎಸ್ಕ್ಯುಎಸ್ ಅಧ್ಯಾಪಕ ಉಮರ್ ಫಾರೂಕ್ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಎಸ್ಐಓ ಜಿಲ್ಲಾಧ್ಯಕ್ಷರಾದ ಅಶೀರುದ್ದೀನ್ ಮಂಜನಾಡಿ ಬೀಜಗಳನ್ನು ವಿತರಿಸಿದರು. ವಿದ್ಯಾರ್ಥಿ ಮುಹಮ್ಮದ್ ಕಿರಾತ್ ಪಠಿಸಿದರು. ಅಧ್ಯಾಪಕ ಶುಕೂರ್ ಮುದಸ್ಸಿರ್ ಧನ್ಯವಾದವಿತ್ತರು.
IslamKannada News Portal
