Home / ವಾರ್ತೆಗಳು / ಜಮಾಅತೆ ಇಸ್ಲಾಮೀ ಹಿಂದ್‌ನಿಂದ ಉಸ್ತಾದ್‌‌ ಕುಟುಂಬಕ್ಕೆ ಮನೆ ಹಸ್ತಾಂತರ

ಜಮಾಅತೆ ಇಸ್ಲಾಮೀ ಹಿಂದ್‌ನಿಂದ ಉಸ್ತಾದ್‌‌ ಕುಟುಂಬಕ್ಕೆ ಮನೆ ಹಸ್ತಾಂತರ

ಮಂಗಳೂರು: ಬೆಳ್ತಂಗಡಿ ತಾಲೂಕಿನ ಮೌಲಾನಾರೋರ್ವರ ಮನೆಯ ಸಿಮೆಂಟ್ ಶೀಟಿನ ಮೇಲ್ಛಾವಣಿ, ಹಾನಿಗೊಳಗಾಗಿದ್ದು, ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ಶಾಖೆಯ ವತಿಯಿಂದ, ಅದಕ್ಕೆ ಸ್ಲ್ಯಾಪ್‌ ಹಾಕಿ, ಕೊಠಡಿಯನ್ನು ಸೇರಿಸಿ, ದಾನಿಗಳ ನೆರವಿನಿಂದ ಸುಮಾರು ನಾಲ್ಕು ಲಕ್ಷ ರೂಪಾಯಿ ವ್ಯಯಿಸಿ, ಸಂಪೂರ್ಣ ದುರಸ್ತಿ ಮಾಡಿಸಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಮನೆಯನ್ನು ಬೋಳಂಗಡಿ ಹವ್ವಾ ಜುಮ್ಮಾ ಮಸೀದಿಯ ಖತೀಬರಾದ, ಮೌಲಾನಾ ಯಹ್ಯಾ ತಂಙಲ್‌ ಮದನಿಯವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಉಪ್ಪಿನಂಗಡಿ ಜಮಾಅತೆ ಇಸ್ಲಾಮೀ ಹಿಂದ್‌ನ ಅಧ್ಯಕ್ಷರಾದ ಅಬ್ದುಲ್ ಹಸೀಬ್ , ಜಮಾಅತ್‌ನ ಉಪಾಧ್ಯಕ್ಷರಾದ ಅಬ್ದುರ್ರಹ್ಮಾನ್‌ ಮೌಲವಿ, ಸಮಾಜ ಸೇವಾ ವಿಭಾಗದ ಉಪ್ಪಿನಂಗಡಿ ಹೊಣೆಗಾರರಾದ ಇಲ್ಯಾಸ್‌ ಯು.ಕೆ., ಮುಹಮ್ಮದ್ ಕೆ.ಪಿ., ಅಬ್ದುಲ್ಲತೀಪ್‌ ಹಾಗೂ ಶಂಶೀರ್ ಮೆಲ್ಕಾರ್‌, ಅಬುಸಾಲಿ ಬಂಟ್ವಾಳ ಉಪಸ್ಥಿತರಿದ್ದರು.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …