ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರ ಶಾಖೆಯ ವತಿಯಿಂದ, ಕಸ್ಬಾಬೆಂಗರೆ ಎಂಬಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಜೋಪಡಿಯಲ್ಲಿ ಬದುಕು ಸವೆಸುತ್ತಿದ್ದ, ಐದು ಮಕ್ಕಳಿರುವ ಬಡ ದಂಪತಿಗಳ ಕುಟುಂಬಕ್ಕೆ ದಾನಿಗಳ ನೆರವಿನಿಂದ ಅವಶ್ಯಕ ಸವಲತ್ತುಗಳುಳ್ಳ ಚೆಂದದ ಮನೆಯೊಂದನ್ನು ನಿರ್ಮಿಸಿ ಕೊಡಲಾಯಿತು.
ಜಮಾಅತೆ ಇಸ್ಲಾಮೀ ಹಿಂದ್, ಮಂಗಳೂರು ನಗರ ಶಾಖೆಯ ಸಮಾಜ ಸೇವಾ ಘಟಕದ ಸಂಚಾಲಕರಾದ ಜ| ಅಬ್ದುಲ್ ಗಫೂರ್ ಕುಳಾಯಿಯವರು ಮನೆ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ, ಮನೆಯ ಗಾತ್ರಕ್ಕಿಂತ ಮನೆಯಲ್ಲಿ ಮನಶ್ಶಾಂತಿ ಬಹುಮುಖ್ಯ ಮುಖ್ಯವೆನ್ನುತ್ತಾ ಸಂದರ್ಭೋಚಿತವಾಗಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಗರಪಾಲಿಕೆ ಸದಸ್ಯರಾದ ಜ| ಮುಹಮ್ಮದ್ ಮುನೀಬ್, ಇಂತಹ ಮಾನವೀಯ ಸೇವೆಗಳು ಸದಾ ಜೀವಂತವಾಗಿರ ಬೇಕೆಂದು ಹರಸಿದರು. ಅನಸ್ ಬಿನ್ ಮಾಲಿಕ್ ಮಸೀದಿಯ ಇಮಾಮರಾದ ಶೈಖ್ ಅಹ್ಮದ್ ಅಸ್ಗರ್, ಮೋನಾಕ, ಇಬ್ರಾಹಿಮ್ ಬಿ.ಎ., ಮುಕ್ರಿ ಬಶೀರಾಕ ಇತರರು ಉಪಸ್ಥಿತರಿದ್ದರು. ಸಹಕರಿಸಿದ ದಾನಿಗಳ ವ್ಯಾಪಾರ-ವ್ಯವಹಾರಗಳಲ್ಲಿ ಅಲ್ಲಾಹನು ಧಾರಾಳ ಬರ್ಕತ್ ಸುರಿಸಲಿ ಮತ್ತು ಪರಲೋಕದಲ್ಲೂ ಅವರಿಗೆ ತಕ್ಕ ಪ್ರತಿಫಲ ನೀಡಿ ಅನುಗ್ರಹಿಸಲಿ. ಆಮೀನ್!
Social Service Unit, Jamaat-e-Islami Hind, Mangalore. 9945923640, 9535445101
IslamKannada News Portal






