ಪ್ರಕೃತಿಯ ಸಂರಕ್ಷಣೆ ಎಂಬುದು ಈ ಕಾಲದ ಅತಿದೊಡ್ಡ ಸವಾಲಾಗಿದೆ. ಬೆಳೆಯುತ್ತಿರುವ ಆಧುನಿಕತೆ ಇಂಡಸ್ಟ್ರಿಯಲ್ ಕೈಗಾರಿಕಾ ಕ್ರಾಂತಿ, ಆಧುನಿಕ ನಗರಗಳ ಬೆಳವಣಿಗೆ ಅಥವಾ urbanisation ನಿಂದ ಪ್ರಕೃತಿ ಸಂರಕ್ಷಣೆ ಇನ್ನಷ್ಟು ಸಂಕೀರ್ಣ ಆಗುತ್ತಿದೆ.
ಇಸ್ಲಾಂ ಧರ್ಮ ಅಂದರೆ ಜಗತ್ತಿಗೆ ಬಂದ ಎಲ್ಲಾ ಪ್ರವಾದಿಗಳು ಪ್ರಕೃತಿ ಸ್ವಭಾವಕ್ಕೆ ಅನುಪಮ ಮಾದರಿಯಾಗಿದ್ದರು. ಅಲ್ಲಾಹನ ಪ್ರವಾದಿ ಮುಹಮ್ಮದ್ (ಸ) ರ ಒಂದು ಹದೀಸ್ ಬಹಳ ಪ್ರಭಾವ ಪೂರ್ಣವಾಗಿದೆ. “ನಾಳೆ ಕಿಯಾಮತ್ ಆಗುವುದಿದ್ದರೆ ಇಂದು ನಿನಗೆ ಸಾಧ್ಯವಾದರೆ ಒಂದು ಗಿಡ ನೆಡು” ಎಂದು ಕಲಿಸಿ ಕೊಟ್ಟರೆ ಈ ವಿಶ್ವ ಜಗತ್ತು ಭೂಮಿಯನ್ನು ಹೇಗೆ ಪೋಷಿಸಿ ಬೆಳೆಸಬೇಕು ಎಂಬುದರ metaphorical ಶಿಕ್ಷಣ ನಮಗೆ ಸಿಗುತ್ತದೆ.
ನಾವು ಕುರಾನ್ ಅನ್ನು ನೋಡಿದರೆ, ಸುಮಾರು 750 ಕ್ಕಿಂತಲೂ ಹೆಚ್ಚು ಸೂಕ್ತಗಳು ಪ್ರಕೃತಿಯ ಕುರಿತು ಇದೆ. ಕುರಾನಿನ ಹಲವು ಸೂರಗಳ ಹೆಸರು ಕೂಡ ಪ್ರಕೃತಿಯ ಕುರಿತು ಇದೆ.
ಅಲ್ ಬಕರ (ಹಸು), ಅಲ್ ಮಾಇದ (ಮೇಜು), ಅಲ್ ಅನ್ಆಮ್ (ಜಾನುವಾರು), ಅನ್ನಹ್ಲ್ (ಜೇನು), ಅರ್ ರ ಅದ್ (ಗುಡುಗು), ಅಲ್ ಕಹಫ್ (ಗುಹೆ), ಅನ್ನೂರ್ (ಪ್ರಕಾಶ), ಅನ್ನಮ್ಲ್ (ಇರುವೆ), ಅಂಕಬೂತ್ (ಜೇಡ), ಅಝ್ಝಖ್ರಫ್ (ಆಭರಣ), ಅದ್ದುಖಾನ್ (ಹೊಗೆ),ಅಲ್ ಅಹ್ಕಾಫ್ (ಮರಳ ದಿಣ್ಣೆಗಳು), ಅಲ್ ಹುಜರಾತ್ (ಕೊಠಡಿಗಳು), ಅಝ್ಹಾರಿಯಾತ್ (ಮಾರುತಗಳು), ಅತ್ತೂರ್ (ಪರ್ವತಗಳು), ಅನ್ನಜ್ಮ್ (ನಕ್ಷತ್ರಗಳು), ಅಲ್ ಕಮರ್(ಚಂದ್ರ), ಅಲ್ ಹದೀದ್ (ಉಕ್ಕು), ಅಲ್ ಬುರೂಜ್ (ಗೋಪುರಗಳು), ಅತ್ವಾರಿಕ್ (ಮಿನುಗು ತಾರೆ), ಅಶ್ಯಮ್ಸ್ (ಸೂರ್ಯ), ಅಲ್ಲೈಲ್ (ರಾತ್ರಿ), ಅತ್ತೀನ್ (ಅಂಜೀರ), ಅಲ್ ಫೀಲ್ (ಆನೆ)
ಅಧ್ಯಾಯ 17: ಬನೀ ಇಸ್ರಾಈಲ್, ಸೂಕ್ತ : 44
تُسَبِّحُ لَهُ السَّمَاوَاتُ السَّبْعُ وَالْأَرْضُ وَمَنْ فِيهِنَّ ۚ وَإِنْ مِنْ شَيْءٍ إِلَّا يُسَبِّحُ بِحَمْدِهِ وَلَٰكِنْ لَا تَفْقَهُونَ تَسْبِيحَهُمْ ۗ إِنَّهُ كَانَ حَلِيمًا غَفُورًا
ಸಪ್ತಗಗನಗಳೂ ಭೂಮಿಯೂ ಅವುಗಳಲ್ಲಿರುವ ಸಕಲ ವಸ್ತುಗಳೂ ಅವನ ಪಾವಿತ್ರ್ಯವನ್ನು ಕೊಂಡಾಡುತ್ತಿವೆ. ಅವನ ಪ್ರಶಂಸೆಯೊಂದಿಗೆ ಅವನ ‘ಜಪ’ (ತಸ್ಬೀಹ್) ಮಾಡದ ಯಾವ ವಸ್ತುವೂ ಇಲ್ಲ.
ಅಧ್ಯಾಯ 2: ಅಲ್ ಬಕರಃ, ಸೂಕ್ತ : 164
إِنَّ فِي خَلْقِ السَّمَاوَاتِ وَالْأَرْضِ وَاخْتِلَافِ اللَّيْلِ وَالنَّهَارِ وَالْفُلْكِ الَّتِي تَجْرِي فِي الْبَحْرِ بِمَا يَنْفَعُ النَّاسَ وَمَا أَنْزَلَ اللَّهُ مِنَ السَّمَاءِ مِنْ مَاءٍ فَأَحْيَا بِهِ الْأَرْضَ بَعْدَ مَوْتِهَا وَبَثَّ فِيهَا مِنْ كُلِّ دَابَّةٍ وَتَصْرِيفِ الرِّيَاحِ وَالسَّحَابِ الْمُسَخَّرِ بَيْنَ السَّمَاءِ وَالْأَرْضِ لَآيَاتٍ لِقَوْمٍ يَعْقِلُونَ
ಆಕಾಶಗಳ ಮತ್ತು ಭೂಮಿಯ ನಿರ್ಮಾಣದಲ್ಲಿ, ಇರುಳು ಹಗಲುಗಳು ಒಂದರ ಹಿಂದೆ ಇನ್ನೊಂದರಂತೆ ನಿರಂತರವಾಗಿ ಬರುತ್ತಿರುವುದರಲ್ಲಿ, ಜನೋಪಯೋಗಿ ಸಾಮಗ್ರಿಗಳನ್ನು ಹೊತ್ತುಕೊಂಡು ಜಲಧಿಗಳಲ್ಲಿ ಸಂಚರಿಸುತ್ತಿರುವ ನೌಕೆಗಳಲ್ಲಿ, ಅಲ್ಲಾಹನು ಆಕಾಶದಿಂದ ಸುರಿಸಿ ಅದರ ಮೂಲಕ ಭೂಮಿಯನ್ನು ನಿರ್ಜೀವಾವಸ್ಥೆಯ ಬಳಿಕ ಸಜೀವಗೊಳಿಸಿ, ಈ ವ್ಯವಸ್ಥೆಯ ಮೂಲಕ ಭೂಮಿಯಲ್ಲಿ ತರತರದ ಜೀವರಾಶಿಗಳು ಹರಡಿರುವಂತೆ ಮಾಡಿದ ಮಳೆ ನೀರಿನಲ್ಲಿ, ಮಾರುತಗಳ ಚಲನೆಯಲ್ಲಿ ಹಾಗೂ ಆಕಾಶ ಮತ್ತು ಭೂಮಿಯ ನಡುವೆ ನಿಯಂತ್ರಿಸಲ್ಪಟ್ಟಿರುವ ಮೋಡಗಳಲ್ಲಿ ನಿಶ್ಚಯವಾಗಿಯೂ ವಿಚಾರವಂತರಿಗೆ ಅನೇಕಾನೇಕ ದೃಷ್ಟಾಂತಗಳಿವೆ.
ಹೀಗೆ ಕುರಾನ್ ಭೂಮಿಯ ಸೌಂದರ್ಯ ಮತ್ತು ಅದರ ಪೋಷಣೆ ಮತ್ತು ಸಂತುಲನೆಯನ್ನು ಬಹಳ ಮನೋಹರವಾಗಿ ವಿವರಿಸಿದೆ.
- ಅಬೂ ಖುತುಬ್, ಮಂಗಳೂರು
IslamKannada News Portal


