ವಾಷಿಂಗ್ಟನ್,ಸೆ.23: ವಿಶ್ವಪ್ರಸಿದ್ಧ ಟೈಮ್ ಮ್ಯಾಗಝಿನ್ನ ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾಹೀನ್ ಬಾಗ್ ಹೋರಾಟಗಾರ್ತಿ 82ರ ಹರೆಯದ ಬಿಲ್ಕಿಸ್ ಕೂಡ ಸೇರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟ ಆಯುಷ್ಮಾನ್ ಖುರಾನ, ಗೂಗುಲ್ ಸಿಇಒ ಸುಂದರ್ ಪಿಚ್ಚೈ, ಪ್ರೊಫೆಸರ್ ರವೀಂದ್ರ ಗುಪ್ತ ಪಟ್ಟಿಯಲ್ಲಿರುವ ಇತರ ಭಾರತೀಯ ವ್ಯಕ್ತಿಗಳು.
2019 ವರ್ಷದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅತ್ಯಂತ ಪ್ರಭಾವ ಬೀರಿದವರನ್ನು ಪಟ್ಟಿಗೆ ಆಯ್ಕೆ ಮಾಡಲಾಗಿದೆ. ಚೀನದ ಅಧ್ಯಕ್ಷ ಶಿಜಿನ್ ಪಿಂಗ್, ಅಮೆರಿಕದ ವೈದ್ಯ ಅಂಟಾನಿಯೊ ಫೌಸಿ, ಡೆಮಕ್ರಾಟಿಕ್ ಪಕ್ಷದ ಅಮೆರಿಕ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಡೆಮಕ್ರಾಟಿಕ್ ಅಧ್ಯಕ್ಷ ಅಭ್ಯರ್ಥಿ ಜೊ ಬೈಡನ್, ಜರ್ಮನಿ ಚಾನ್ಸಲರ್ ಏಂಜೆಲಾ ಮರ್ಕಲ್, ಫಾರ್ಮುಲಾ ವನ್ ಸ್ಪರ್ಧಿ ಲುಯಿಸ್ ಹಾಮಿಲ್ಟನ್ ಪಟ್ಟಿಯಲ್ಲಿದ್ದಾರೆ.
ಪೌರತ್ವ ತಿದ್ದುಪಡಿ ಕಾನೂನು ಘೋಷಣೆಯಾದ ಬೆನ್ನಿಗೆ ದಿಲ್ಲಿಯ ಶಾಹೀನ್ ಭಾಗ್ನಲ್ಲಿ ಆರಂಭವಾದ ಮಹಿಳಾ ಪ್ರತಿಭಟನೆಯ ಮುಂಪಕ್ತಿಯಲ್ಲಿ ಬಿಲ್ಕಿಸ್ ಇದ್ದರು. ‘ದಾದಿ’ ಎಂದು ಕರೆಯಲ್ಪಟ್ಟ ಬಿಲ್ಕೀಸ್ ಬಾನುರ ದಿಟ್ಟ ಹೋರಾಟಗಳು ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗಿತ್ತು.
IslamKannada News Portal

