Home / ವಾರ್ತೆಗಳು / ಹಿರಿಯ ವಿದ್ವಾಂಸ, ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್‌ರವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ: ಜಮಾಅತೆ ಇಸ್ಲಾಮೀ ಹಿಂದ್ ನಗರಾಧ್ಯಕ್ಷ ಕೆ.ಎಂ.ಅಶ್ರಫ್ ತೀವ್ರ ಸಂತಾಪ

ಹಿರಿಯ ವಿದ್ವಾಂಸ, ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್‌ರವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ: ಜಮಾಅತೆ ಇಸ್ಲಾಮೀ ಹಿಂದ್ ನಗರಾಧ್ಯಕ್ಷ ಕೆ.ಎಂ.ಅಶ್ರಫ್ ತೀವ್ರ ಸಂತಾಪ

ಮಂಗಳೂರು,ಸೆ.24:ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲಾ ಸಂಯುಕ್ತ ಖಾಝಿಯಾಗಿದ್ದ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಅಲ್ಪಕಾಲದ ಅಸೌಖ್ಯದಿಂದ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ನಗರಾಧ್ಯಕ್ಷರಾದ ಕೆ.ಎಂ.ಅಶ್ರಫ್‌ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇಸ್ಲಾಮೀ ಶರೀಅತ್, ಧಾರ್ಮಿಕ ಪಾಂಡಿತ್ಯ, ಭೂಗೋಳ, ಖಗೋಳ ಶಾಸ್ತ್ರದಲ್ಲಿ ಆಳವಾದ ಜ್ಞಾನ ಹೊಂದಿದ್ದ ಬೇಕಲ ಉಸ್ತಾದ್ ಅವರು ಕರ್ನಾಟಕ ಹಾಗೂ ಕೇರಳ ರಾಜ್ಯದ ಜನತೆಯ ಮೆಚ್ಚುಗೆ ಗಳಿಸಿದ್ದರು. ಬಹಳ ಗಾಂಭೀರ್ಯ ವ್ಯಕ್ತಿತ್ವ, ಮೃದು ಮನಸ್ಸಿನವರಾದ ಅವರ ಅಗಲಿಕೆ ಈ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯನ್ನು ಸಹಿಸಲು ಉಸ್ತಾದರ ಮಕ್ಕಳಿಗೆ, ಕುಟುಂಬಕ್ಕೆ ಮತ್ತು ಸಮಸ್ತ ನಾಡಿನ ಜನರಿಗೆ ದೇವನು ಶಕ್ತಿ ನೀಡಲಿ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …