Home / ವಾರ್ತೆಗಳು / ” ಜಿಹಾದ್” ಪುಸ್ತಕ ಪರಿಚಯ

” ಜಿಹಾದ್” ಪುಸ್ತಕ ಪರಿಚಯ

ಮದರಸಾಗಳು ಭಯೋತ್ಪಾದನೆಯ ಕೇಂದ್ರಗಳೆಂದೂ ….., ಕಾಫಿರ್’ಗಳನ್ನು ವಧಿಸಬೇಕೆಂದೂ…. ಮುಸ್ಲಿಮೇತರರ ನಂಬಿಕೆ, ಮಾನ, ಪ್ರಾಣ, ಸೊತ್ತುಗಳ ಮೇಲೆ ಅಕ್ರಮವೆಸಗುವುದೇ ಜಿಹಾದ್ ಆಗಿದೆ ಎಂದೂ… ಹೀಗೆ ಮಾಡುವುದರಿಂದ ಮುಸ್ಲಿಮರಿಗೆ ಸ್ವರ್ಗ ಪ್ರಾಪ್ತಿಯ ನಂಬಿಕೆ ಇದೆಯೆಂದೂ…. ಹೀಗೆ ಹತ್ತು-ಹಲವು ಕಪೋಲಕಲ್ಪಿತ ಸುದ್ದಿಗಳ ದ್ವೇಷಾಭಿಯಾನವನ್ನೇ ಹೆಚ್ಚಿನ ಮಾಧ್ಯಮಗಳು ಮಾಡುತ್ತಿದೆ.

ಇಂತಹ ವಿಚಾರಗಳು ಮಾಧ್ಯಮಗಳಿಗೆ ಯಾವುದೇ ಸಂಶೋಧನೆ ಅಥವಾ ವೈಜ್ಞಾನಿಕ ಜಿಜ್ಞಾಸೆಯಿಂದ ಸಿಕ್ಕಿದ್ದಲ್ಲ , ಅದೊಂದು ಗಿಳಿಪಾಠದಂತೆ ಉರು ಹೊಡೆದ ಸಂಗತಿಗಳಾಗಿವೆ . ಇಂತಹ ವದಂತಿಗಳು ಮತ್ತು ಕಾಲ್ಪನಿಕ ಕತೆಗಳ ಹಿಂದೆ ಪ್ಯಾಶಿಸ್ಟ್ ತಂತ್ರಗಾರಿಕೆಯ ವ್ಯವಸ್ಥಿತ ಷಡ್ಯಂತ್ರವಿದೆ. ಆ ಮೂಲಕ ಅವರು ಇಡೀ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದ್ದಾರೆ.
ಶಾಂತಿ ಪ್ರಕಾಶನ’ವು ಈಗಾಗಲೇ ‘ಜಿಹಾದ್’ನ ಕುರಿತು ಸವಿಸ್ತಾರ ವಿವರಗಳಿರುವ ‘ಅಲ್ ಜಿಹಾದ್ ಫಿಲ್ ಇಸ್ಲಾಮ್’ ಎನ್ನುವ ಬ್ರಹತ್ ಗ್ರಂಥದ ಆಯ್ದ ಭಾಗಗಳನ್ನು ಕನ್ನಡಕ್ಕೆ ಭಾಷಾಂತರಿಸಿದೆ. ” ಜಿಹಾದ್ : ಸಮಗ್ರ ಅಧ್ಯಯನ” ಎಂಬ ಈ ಕೃತಿಯು ದ್ವೇಷದ ಒಳಸಂಚು ಮತ್ತು ಜಿಹಾದ್’ನ ನೈಜ ಕಾನೂನಾತ್ಮಕ ವಿಚಾರಗಳ ಆಧ್ಯಾಯಗಳನ್ನು ಒಳಗೊಂಡಿದೆ. ಇದು ಸತ್ಯಾಕಾಂಕ್ಷಿಗಳಿಗೆ ಉಪಯುಕ್ತವಾದ ಅತ್ಯಂತ ವಸ್ತುನಿಷ್ಠ ಕೃತಿಯಾಗಿದೆ.
● ಜಿಹಾದ್ : ಸಮಗ್ರ ಅಧ್ಯಯನ
ಲೇಖಕರು : ಮೌ| ಅಬುಲ್ ಆಲ್ ಮೌದೂದಿ
ಅನುವಾದಕರು : ಇಬ್ರಾಹೀಮ್ ಸಈದ್
ಪುಟ : 168 | ಮುಖಬೆಲೆ : 50
▬▬▬● *ಶಾಂತಿ ಪ್ರಕಾಶನ* ●▬▬▬
+91 9448696490 | +91 9449333496
SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …