@ ಟಿ.ಎಂ.ವಿ.
ಪ್ರತಿಯೊಂದು ಪ್ರಕೃತಿ ದುರಂತಗಳು ಸಂಭವಿಸುವಾಗಲೂ `ಹಲೋ, ದೇವನೆಲ್ಲಿದ್ದಾನೆ?’ ಎಂದು ನಾಸ್ತಿಕವಾದಿಗಳು ಕೇಳುವುದಿದೆ. ಇಲ್ಲದಿದ್ದರೆ ನೀವು ಹೇಳುವಂತಹ ಈ ದೇವ ಎಷ್ಟೊಂದು ಕ್ರೂರಿ ಎಂಬ ರೀತಿಯ ಪ್ರಶ್ನೆಗಳನ್ನೂ ಕೇಳಲಾಗುತ್ತದೆ. ಕೋವಿಡ್- 19 ಆಗಮನದಿಂದ ಆರಾಧನಾಲಯಗಳು ಮುಚ್ಚಲ್ಪಟ್ಟಾಗ ದೇವನು ಪರಾಜಯಗೊಂಡ ಎಂದು ಒಪ್ಪಿಕೊಂಡು ವಿಜ್ಞಾನದ ವಿಜಯ ಪತಾಕೆ ಹಾರಿಸಲ್ಪಟ್ಟಿತು ಎಂದೂ ನಾಸ್ತಿಕವಾದಿಗಳು ಹೇಳುತ್ತಾರೆ.
ಪ್ರಕೃತಿಯನ್ನು ವಿಶ್ವಾಸಿಗಳು ದೇವನೆಂದು ಬದಲಾಯಿಸಿ ಕರೆಯುತ್ತಾರೆ ಎಂಬ ವಿಚಾರಗಳಿಂದ ಈ ರೀತಿಯ ವಾದವು ಉಂಟಾಗುತ್ತದೆ. ಪ್ರಕೃತಿಯಲ್ಲಿ ಸಂಭವಿಸುವುದೆಲ್ಲವೂ ದೇವ ನ್ಯಾಯವೆಂದು ಧರ್ಮವು ಹೇಳುತ್ತದೆಯೆಂಬುದು ಇವರ ಭಾವನೆ. ಅಥವಾ ಇವರು ತಪ್ಪು ತಿಳಿದುಕೊಂಡಿದ್ದಾರೆ. ನಾಸ್ತಿಕವಾದಿಗಳ ಈ ಮಾತುಗಳನ್ನು ನೂರು ಶೇಕಡಾ ಸುಳ್ಳೆಂದು ಹೇಳಲು ಸಾಧ್ಯವಿಲ್ಲ. ಬಹುದೇವ ವಿಶ್ವಾಸದ ದೇವನ್ಯಾಯದ ಕುರಿತು ದೃಷ್ಟಿಕೋನವು ಇದೇ ಆಗಿದೆ.
ಇಸ್ಲಾಮಿನ ದೃಷ್ಟಿಕೋನವು ಇದರಿಂದ ಭಿನ್ನವಾಗಿದೆ. ಪ್ರಕೃತಿ ಹಾಗೂ ಜೀವನದಲ್ಲಿ ಸಂಭವಿಸುವುದೆಲ್ಲವೂ ದೇವ ನ್ಯಾಯದ ಪ್ರತೀಕವೆಂದು ಇಸ್ಲಾಮ್ ಹೇಳುವುದಿಲ್ಲ. ಜೀವನಕ್ಕೆ ಇಸ್ಲಾಮ್ ನೀಡುವ ಶೀರ್ಷಿಕೆ ಪರೀಕ್ಷೆ ಎಂದಾಗಿದೆ. ದೇವ ನ್ಯಾಯ ಎಂಬುದು ಪ್ರಕೃತಿಯಲ್ಲಿ ಉಂಟಾಗುವ ಒಂದಲ್ಲ. ಮನುಷ್ಯರಿಂದ ಅದು ಹುಟ್ಟ ಬೇಕಾಗಿದೆ. ದೇವ ನ್ಯಾಯಕ್ಕಾಗಿ ಹುಟ್ಟಬೇಕಾದ ಮೌಲ್ಯಗಳು ಯಾವುದೆಂದು ಧರ್ಮಗ್ರಂಥಗಳು, ಪ್ರವಾದಿಗಳು, ಕಲಿಸಿಕೊಟ್ಟಿದ್ದಾರೆ. ಈ ತತ್ವ ಹಾಗೂ ಮೌಲ್ಯಗಳನ್ನು ಬೆಳಗಲು ಜೀವಿಸಬೇಕೆಂದು ಇಸ್ಲಾಮ್ ಮನುಷ್ಯರಿಗೆ ಕರೆ ಕೊಡುತ್ತದೆ. ಬಹುದೇವ ವಿಶ್ವಾಸ ಮತ್ತು ಇಸ್ಲಾಮ್ನ ನಡುವಿನ ಮುಖ್ಯ ವಿಷಯಗಳೆಲ್ಲ ಪ್ರಕೃತಿ ಹಾಗೂ ಜೀವನದಲ್ಲಿ ಸಂಭವಿಸುವ ಅವಸ್ಥೆಗಳೇ ದೇವ ನ್ಯಾಯವೇ ಎಂಬ ವಿಷಯವೂ ಒಂದು.
ಪವಿತ್ರ ಕುರ್ಆನ್ನ `ಯಾಸೀನ್; ಅಧ್ಯಾಯದಲ್ಲಿ ಮಕ್ಕಾದ ವಿಶ್ವಾಸಿಗಳು ಹಾಗೂ ಬಹುದೇವ ವಿಶ್ವಾಸಿಗಳ ನಡುವಿನ ಒಂದು ಸಂವಾದವನ್ನು ಬಹಳ ಪ್ರಾದಾನ್ಯತೆಯೊಂದಿಗೆ ಉದ್ದರಿಸಲಾಗಿದೆ. “ಸತ್ಯನಿಷೇಧಿಗಳೊಂದಿಗೆ ನಿಮಗೆ ನೀಡಲಾಗಿರುವುದನ್ನು ಬಡವರಿಗಾಗಿ ನೀವು ಖರ್ಚು ಮಾಡಬೇಕೆಂದು ಹೇಳುವಾಗ ಅವರು ಕೇಳುತ್ತಾರೆ, ಅಲ್ಲಾಹನು ಇಚ್ಛಿಸಿದರೆ ಸ್ವತಃ ತಾನು ಯಾರಿಗೆ ಉಣಿಸುತ್ತಿದ್ದನೋ ಅವರಿಗೆ ನಾವು ಉಣಿಸಬೇಕೆ? ನೀವಂತೂ ಸಂಪೂರ್ಣವಾಗಿ ದಾರಿಗೆಟ್ಟು ಹೋಗಿದ್ದೀರಿ” ಎಂದು ಹೇಳುತ್ತಾರೆ. (36: 47)
ಪ್ರಕೃತಿಯಲ್ಲೂ, ಲೋಕದಲ್ಲೂ ಸಂಭವಿಸುವುದೆಲ್ಲವೂ ದೇವನ ನ್ಯಾಯವೆಂದು ಮಕ್ಕಾದ ಸತ್ಯನಿಷೇಧಿಗಳ ವಾದವಾಗಿತ್ತು. ಇದನ್ನು ಕುರ್ಆನ್ ಹಲವು ಕಡೆಗಳಲ್ಲಿ ಖಂಡಿಸುವುದು ನಮಗೆ ಕಂಡುಬರುತ್ತದೆ. ಸಂಪತ್ತು ಸುಖ ಇರುವುದೇ ದೇವನು ನಮ್ಮೊಂದಿಗಿದ್ದಾನೆ ಎಂಬುದಕ್ಕೆ ಪುರಾವೆಯಾಗಿದೆ ಎಂಬುದಕ್ಕೆ ಉದಾಹರಣೆಯೆಂಬುದು ಬಹುದೇವ ವಿಶ್ವಾಸಿಗಳ ವಾದವಾಗಿತ್ತು. ಸೂರಃ ಅಲ್ಕಹ್ಫ್ ಅಧ್ಯಾಯದಲ್ಲಿ ಬಹುದೇವ ವಿಶ್ವಾಸಿಯಾದ ತೋಟಗಾರನು ಮತ್ತು ವಿಶ್ವಾಸಿಯ ನಡುವಿನ ಮಾತುಕತೆಗಳ ಉದಾಹರಣೆಯಿದೆ. ಭೌತಿಕವಾದಿಗಳು ಪ್ರಕೃತಿ ಎಂದು ಹೇಳುವುದನ್ನೇ ಬಹುದೇವ ವಿಶ್ವಾಸಿಗಳು ದೇವ ಎಂದು ಕರೆಯುತ್ತಾರೆ. ಅಥವಾ ಭೌತಿಕವಾದಿಗಳ ಪ್ರಕೃತಿಯೇ ಬಹುದೇವ ವಿಶ್ವಾಸಿಗಳ ದೇವ. ವಿಶೇಷವಾಗಿ ಸಾಮಾಜಿಕ ಜೀವನವನ್ನು ವಿಮರ್ಶಿಸುವ ಉಪಾದಿ ಎಂಬ ನೆಲೆಯಲ್ಲಿ ಇವೆರಡೂ ಒಂದೇ ಆಗಿದೆ.
ಇಸ್ಲಾಮ್ ನ್ಯಾಯದ ಕುರಿತು ಇನ್ನೊಂದು ವಾದವನ್ನು ಮುಂದಿಡುತ್ತದೆ. ನ್ಯಾಯವು ಉದಿಸುವುದಲ್ಲ, ಉದಯವಾಗಬೇಕಾದದ್ದು. ಯಾವುವು ಉದಯವಾಗಬೇಕಾದದ್ದು? ದೇವನು ಆದೇಶಿಸಿದ್ದು, ಪ್ರವಾದಿವರ್ಯ ಕಲಿಸಿದ್ದು ಮಾತ್ರ. ಬಡವನ ದಾರಿದ್ರ್ಯ ದೇವ ನ್ಯಾಯವಾಗಿದೆ. ಆದ್ದರಿಂದ ಆತನ ಬಡತನವನ್ನು ಹೋಗಲಾಡಿಸಲು ಶ್ರಮಿಸುವುದು ದೇವ ನ್ಯಾಯಕ್ಕೆ ವಿರುದ್ಧವಾಗಿದೆ- ಇದು ಬಹುದೇವ ವಿಶ್ವಾಸಿಗಳ ದೃಷ್ಟಿಕೋನವಾಗಿದೆ. ಲೌಕಿಕ ವಾದಿಗಳ ಹಾಗೂ ನಾಸ್ತಿಕವಾದಿಗಳ ದೃಷ್ಟಿಕೋನವೂ ಇದೇ ಆಗಿದೆ. ಇವರಲ್ಲಿರುವ ವ್ಯತ್ಯಾಸ ಇಷ್ಟೇ. ಕೆಲವು ಬಹುಸಂಖ್ಯೆಯ ದೇವರುಗಳಿದ್ದಾರೆ ಎಂದರೆ ಇನ್ನೊಂದು ಪ್ರಕೃತಿಯೆಂದು ಹೇಳುತ್ತಾರೆ.
ದಾರಿದ್ರ್ಯವಾಗಿರಲಿ ಅಥವಾ ಮನುಷ್ಯನಿಗೆ ಪರಿಹರಿಸಲು ಸಾಧ್ಯವಾಗುವಂತಹ ಯಾವುದೇ ಲೌಕಿಕ ಸಮಸ್ಯೆಯಾಗಿರಲಿ, ಅದು ಮಾನವರು ನಿಭಾಯಿಸಬೇಕಾದ ವಿಷಯಗಳೆಂದು ಇಸ್ಲಾಮ್ ಹೇಳುತ್ತದೆ. ಅಥವಾ ಪರೀಕ್ಷೆಗಳೆಂದು. ಪ್ರತಿ ಸಮಸ್ಯೆಗೂ ಉತ್ತರ ಕಂಡುಹಿಡಿಯಲು ಹೊಣೆಗಾರಿಕೆಯುಳ್ಳವರು ಸಮಾಜದಲ್ಲಿರುತ್ತಾರೆ. ದಾರಿದ್ರ್ಯದ ವಿಷಯದಲ್ಲಿ ಶ್ರೀಮಂತರಿಗೆ ಹೆಚ್ಚಿಗೆ ಹೊಣೆಗಾರಿಕೆಯಿದೆ. ಸಂಪತ್ತಿನ ವಿತರಣೆಯಲ್ಲಿನ ಅನ್ಯಾಯವಾದರೆ ಆ ವಿಷಯದಲ್ಲಿ ಅಧಿಕಾರದಲ್ಲಿರುವವರಿಗೆ ಹೆಚ್ಚಿನ ಹೊಣೆಗಾರಿಕೆಯಿದೆ.
ಸಾಮಾಜಿಕ ನ್ಯಾಯದ ಕುರಿತು ಹೇಳುವಾಗಲೆಲ್ಲಾ ವಿಧಿಯ ವಾದ ಮತ್ತು ಪ್ರಕೃತಿ ನಿರ್ಣಯ ವಾದವು ಇತಿಹಾಸದಲ್ಲಿ ಕಾಣಸಿಗುತ್ತದೆ. ಇದನ್ನು ಕುರ್ಆನ್ ನಿಷೇಧಿಸುತ್ತದೆ. ಅಲ್ಲಾಹನು ಶ್ರೀಮಂತರಿಗೆ ಸಂಪತ್ತು ನೀಡಿ, ಬಡವರಿಗೆ ಕೊಡಲಿಲ್ಲ. ಇದುವೇ ದೇವನ ನ್ಯಾಯ ಎಂಬುದು ಇಸ್ಲಾಮಿನ ದೃಷ್ಟಿಕೋನವಲ್ಲ. ಇಸ್ಲಾಮಿ ಆರ್ಥಿಕ ವ್ಯವಸ್ಥೆಯ ಅಡಿಪಾಯ ಸಂಪತ್ತು ನಿಮ್ಮ ಶ್ರೀಮಂತರ ನಡುವೆ ಮಾತ್ರ ಚಲಿಸುತ್ತ ಇರಬಾರದೆಂದಾಗಿದೆ. (ಹಶ್ರ್: 7)
ಇದು ಕೇವಲ ಆರ್ಥಿಕ ವಿಷಯಗಳಿಗೆ ಸೀಮಿತವಲ್ಲ. ಸಾಮಾಜಿಕ ನ್ಯಾಯಕ್ಕೂ ಇದು ಅನ್ವಯಿಸುತ್ತದೆ. ಸಾಮೂಹಿಕ ಅಧಿಕಾರಗಳು, ಅರ್ಹತೆಗಳು ಪರಂಪರಾಗತವಾಗಿ ದೊರೆತವರಿಗೆ ಲಭಿಸಿತು. ಅದಿಲ್ಲದವರು ಅದಕ್ಕೆ ಅರ್ಹತೆಯಿಲ್ಲದವರೆಂದು ಮಕ್ಕಾದ ಬಹುದೇವ ವಿಶ್ವಾಸಿಗಳ ನಂಬಿಕೆಯಾಗಿತ್ತು. ಮಾತ್ರವಲ್ಲ ಈ ರೀತಿಯ ಮೇಲ್ಮೆಯ ನಮಗೆ ದೇವನಿಂದ ದೊರೆತಿದೆ. ಆ ಕುರಿತು ಪ್ರಶ್ನಿಸುವುದು ದೇವಧಿಕ್ಕಾರವೆಂಬುದು ಅವರ ನಂಬಿಕೆಯಾಗಿತ್ತು. ಇಸ್ಲಾಮ್ಗೆ ಸಂಬಂಧಿಸಿ ಮನುಷ್ಯನಿಗೆ ಮಧ್ಯ ಪ್ರವೇಶಿಸಲು ಸಾಧ್ಯವಿರುವ ಪ್ರಾಕೃತಿಕ ಹಾಗೂ ಮಾನವ ಜೀವನದಲ್ಲೂ ನೆಲೆ ನಿಲ್ಲುವ ಅವಸ್ಥೆಯ ಹೆಸರಲ್ಲಿ ದೇವ ನ್ಯಾಯ ಎಂಬುದು ವಂಶಗಳ ಶ್ರೇಷ್ಠತೆಯೂ ಅಲ್ಲ. “ದೇವಭಯವೇ ಶ್ರೇಷ್ಠತೆಯ ಮಾನದಂಡ” ಎಂಬ ಕುರ್ಆನ್ ಸೂಕ್ತವು ಸ್ಥಾನಮಾನಕ್ಕೆ ವಿರುದ್ಧವಾದ ಈ ದೇವ ನ್ಯಾಯದ ಸಂಕಲ್ಪದತ್ತ ಬೊಟ್ಟು ಮಾಡುತ್ತದೆ.
ಇದು ಲಿಂಗ ನ್ಯಾಯಕ್ಕೂ ಅನ್ವಯಿಸುತ್ತದೆ. ಲಿಂಗ ಸಮಾನತೆಯ ಕುರಿತು ಹೇಳುವಾಗ ಮಹಿಳೆಗೆ ರಾತ್ರಿ ಒಬ್ಬಳಿಗೆ ಸಂಚರಿಸಲು ಸಾಧ್ಯವಿದೆಯೇ? ಹೀಗಿರುವಾಗ ಅವಳನ್ನು ಸಾಮಾಜಿಕ ಜೀವನದ ಉನ್ನತ ಹಂತಕ್ಕೆ ಹೇಗೆ ತಲುಪಿಸುವುದು ಎಂಬ ಪ್ರಶ್ನೆಯನ್ನು ವಿಶ್ವಾಸಿಗಳೇ ಕೇಳುತ್ತಾರೆ. ಮಹಿಳೆಗೆ ರಾತ್ರಿ ಸಂಚರಿಸಲು ಸಾಧ್ಯವಾಗದಿರುವುದು ಅವರ ಶಾರೀರಿಕ ದೌರ್ಬಲ್ಯದಿಂದಲ್ಲ. ಅವಳಿಗಿಂತ ಹೆಚ್ಚು ಶಕ್ತಿಯಿರುವ ಪುರುಷ ಅವಳ ಮೇಲೆ ಅತಿಕ್ರಮಣ ನಡೆಸಬಹುದು ಎಂಬ ಕಾರಣಕ್ಕಾಗಿದೆ. ಶ್ರೀಮಂತರಲ್ಲಿ ಸಂಪತ್ತು ಕೇಂದ್ರೀ ಕೃತವಾಗದಂತೆ ಹೆಚ್ಚು ಸಾಮಾಜಿಕ ಅಧಿಕಾರಗಳು ಪುರುಷರ ಕೈಗಳಲ್ಲಿ ಭದ್ರವಾಗಿದೆ. ಅದರಿಂದ ಮಹಿಳೆಯರಿಗೆ ನೀಡಬೇಕು ಎಂದು ಹೇಳುವಾಗ ಪ್ರಾಕೃತಿಕ ಹಾಗೂ ದೇವ ತೀರ್ಮಾನ ಹಾಗೆ ಅಲ್ಲ ಎಂದು ಹೇಳುವುದು ಬಡವರ ವಿಷಯದಲ್ಲಿ ಮಕ್ಕಾದ ಬಹುದೇವಾರಾಧಕರು ಹೇಳುತ್ತಿದ್ದ ಮಾತಿನ ಪುನರಾವರ್ತನೆಯಾಗಿದೆ.
ನ್ಯಾಯ ಎಂಬುದನ್ನು ಔದಾರ್ಯದಿಂದ ಮಾತ್ರ ಸಾಕ್ಷಾತ್ಕಾರಗೊಳಿಸಲು ಸಾಧ್ಯವೆಂದು ಇಸ್ಲಾಮ್ ಭಾವಿಸುವುದಿಲ್ಲ. ಅದು ಹಕ್ಕುಗಳನ್ನು ನೀಡುವುದರಿಂದಲೂ ಸಾಧ್ಯವಾಗುತ್ತದೆ. ಅನ್ಯಾಯಕ್ಕೆ ವೈಯಕ್ತಿಕ ಅಕ್ರಮದ ರೂಪಗಳು ಹಾಗೂ ಕೆಲವು ಅತಿಕ್ರಮಣದ ರೂಪಗಳು ಇರುತ್ತವೆ. ದೇವ ನ್ಯಾಯವನ್ನು ಸ್ಥಾಪಿಸಲು ಇವೆರಡರ ಮೇಲೂ ಹಸ್ತಕ್ಷೇಪ ನಡೆಸಲಾಗುತ್ತದೆ. ಇಂತಹ ಅನ್ಯಾಯದ ವಿರುದ್ಧ ಕುರ್ಆನ್ ಧಾರಾಳವಾಗಿ ಮಾತನಾಡಿದೆ. “ಜೀವಂತ ಹೂಳಲ್ಪಟ್ಟ ಹೆಣ್ಣು ಮಗುವಿನೊಡನೆ ಕೇಳಲಾಗುವುದು, ಯಾವ ಕಾರಣಕ್ಕಾಗಿ ನಿನ್ನನ್ನು ಕೊಲ್ಲಲ್ಲಾಯಿತು?” ಎಂಬುದನ್ನು ಕುರ್ಆನ್ ಪ್ರಸ್ತಾವಿಸಿದ ಕಾರಣ ಪರಲೋಕದಲ್ಲಿ ನಡೆಯಲಿರುವ ಕಾರ್ಯಗಳ ಕುರಿತು ಮುನ್ನೆಚ್ಚರಿಕೆ ಮಾತ್ರ ಅಲ್ಲ. ಒಂದು ಸಾಮೂಹಿಕ ಪಿಡುಗು ಈ ರೀತಿ ಹೂಳಲು ಕಾರಣವಾಯಿತು ಎಂಬುದಕ್ಕೆ ತೀವ್ರ ಆಕ್ಷೇಪವೂ ಆಗಿದೆ. ಓರ್ವ ವ್ಯಕ್ತಿ ಎಂಬ ನೆಲೆಯಲ್ಲಿ ಅವರು ಮಾಡಿದ ತಪ್ಪಾದರೂ ಏನು? ಹೆಣ್ಣಾದ್ದು ಆ ಮಗುವಿನ ತಪ್ಪೇ? ಎಂಬ ಪ್ರಶ್ನೆಗಳನ್ನು ಈ ದಿವ್ಯ ವಚನವು ಧ್ವನಿಸುತ್ತದೆ. ಘಟನೆಯನ್ನು ಸ್ಪರ್ಶಿಸಬೇಕಾದಲ್ಲಿ, ಘಟನೆಯನ್ನು, ವ್ಯಕ್ತಿಯನ್ನು ವಿಮರ್ಶಿಸಬೇಕಾದಲ್ಲಿ ವ್ಯಕ್ತಿಯನ್ನು ಸ್ಪರ್ಶಿಸುವ ದೇವ ನ್ಯಾಯದ ಸಫಲತೆಯ ಕುರಿತು ಇಸ್ಲಾಮ್ ಮಾತನಾಡುತ್ತದೆ. ಬಹುದೇವಾರಾಧನೆಯೆಂಬುದು ಒಂದು ಆರಾಧನಾ ಕ್ರಮ ಮಾತ್ರ ಅಲ್ಲ. ಅನ್ಯಾಯದ ಸಾಮೂ ಹಿಕ-ರಾಜಕೀಯದ ಘಟಕವೂ ಆಗಿದೆ. ಅದು ಅತ್ಯಂತ ದೊಡ್ಡ ಅಕ್ರಮ ಹಾಗೂ ಕ್ಷಮಿಸಲಾಗದ ಅಪರಾಧವಾಗುವುದು ಅದು ಸಾಮಾಜಿಕ ಅನ್ಯಾಯ ಎಂಬ ಕಾರಣದಿಂದಾಗಿದೆ.
ಪ್ರಕೃತಿ ದುರಂತಗಳೆಲ್ಲವೂ ದೇವ ಶಿಕ್ಷೆಯೆಂಬ ದೃಷ್ಟಿಕೋನವನ್ನು ಇಸ್ಲಾಮ್ ಒಪ್ಪುವುದಿಲ್ಲ. ಸಾಮಾನ್ಯವಾಗಿ ಬಹುದೇವವಿಶ್ವಾಸವು ಇಂತಹ ದೃಷ್ಟಿಕೋನವನ್ನು ಹೊಂದಿದೆ. ಅದರಲ್ಲಿ ಹೆಚ್ಚಿನ ಭಾಗ ಪರೀಕ್ಷೆಗಳಾಗಿರುತ್ತವೆ. ಅಪರೂಪವಾಗಿ ಕೆಲವು ಶಿಕ್ಷೆಯೂ ದೊರೆಯಬಹುದು. ಪ್ರಕೃತಿ ದುರಂತಗಳು ಎಂದು ಮನುಷ್ಯನು ಹೆಸರಿಟ್ಟು ಕರೆಯುವ ದುರಂತಗಳಲ್ಲಿ ದೊಡ್ಡ ಪಾಲು ಮಾನವ ಕೈಗಳ ಕಾರಣದಿಂದಾಗಿದೆ. (ರೂಮ್ -41) ಕೆಲವೊಂದಕ್ಕೆ ಮನುಷ್ಯನ ಕಾರ್ಯ ಚಟು ವಟಿಕೆಯೊಂದಿಗೆ ಯಾವುದೇ ಸಂಬಂಧವಿರುವುದಿಲ್ಲ. ಆದರೆ ಮಾನವನ ಮೇರೆಮೀರಿದ್ದ ಅಧಾರ್ಮಿಕತೆಗೆ ಇರುವ ದೇವ ಶಿಕ್ಷೆಯೂ ಆಗಬಹುದು. (ಹೂದ್- 17) ಈ ಎರಡು ರೀತಿಗಳಿಂದಲೂ ವಿಭಿನ್ನವಾದುದು ಪ್ರಕೃತಿಯಲ್ಲಿ ಸಂಭವಿಸುತ್ತದೆ. ಅದಕ್ಕೆ ಪ್ರಕೃತಿಯ ಸಂಕೀರ್ಣತೆಯೊಂದಿಗೆ, ಮನುಷ್ಯನ ಬುದ್ಧಿ ಶಕ್ತಿಯ ಪರಿಮಿತಿಗಳೊಂದಿಗೆ ಸಂಬಂಧವಿದೆ. ಎಂತಹ ಸಂದಿಗ್ಧ ಘಟ್ಟಗಳನ್ನು ಪರೀಕ್ಷೆಯೆಂದು ಹೇಳಿ ಎದುರಿಸಲು ವಿಶ್ವಾಸಿಗಳಿಗೆ ಸಾಧ್ಯವಾಗುತ್ತದೆ.
ಕೋವಿಡ್ನಂತಹ ಒಂದು ಸಾಂಕ್ರಾಮಿಕ ರೋಗ ಬರುತ್ತದೆ. ದೇವನಿದ್ದಾನೆಂದರೆ ಅವನು ಕ್ರೂರಿ ಎಂಬ ಪರಿಹಾಸ್ಯ. ಪರೀಕ್ಷೆಯಲ್ಲಿ ಸಿಲಬಸ್ ನಲ್ಲಿರುವುದರಿಂದ ನೀಡಲಾದ ಕಷ್ಟವಾದ ಒಂದು ಪ್ರಶ್ನೆಯನ್ನು ಕಾಣುವಾಗ ಪರೀಕ್ಷಕ ಎಷ್ಟೊಂದು ಕಠಿಣ ವ್ಯಕ್ತಿ ಎಂದು ಹೇಳುವಂತೆ ಇದು. ಸಾಂಕ್ರಾಮಿಕ ರೋಗವು ದೇವ ನ್ಯಾಯವಲ್ಲ. ಅದು ಒಂದು ಪ್ರಕೃತಿಯ ಸನ್ನಿವೇಶವಾಗಿದೆ. ಮನುಷ್ಯನು ಮಧ್ಯ ಪ್ರವೇಶಿಸಬಹುದಾದ ಸಮಸ್ಯೆ. ಸಾಂಕ್ರಾಮಿಕ ರೋಗವನ್ನು ಹೆಚ್ಚು ಪ್ರಯಾಸಕರ ಮಾಡುವ ಸಾಮಾಜಿಕ-ರಾಜಕೀಯ ಪರಿಸ್ಥಿತಿಯು ಮನುಷ್ಯ ನಿರ್ಮಿತವಾಗಿದೆ. ಪ್ರತಿಯೊಂದು ಸಂದರ್ಭದಲ್ಲೂ ಅನಿವಾರ್ಯವಾಗುವ ಚಟುವಟಿಕೆಗಳಿವೆ. ಅದನ್ನು ಸರಿಯಾಗಿ ನಿರ್ವಹಿಸುವುದೇ ಸಾಂಕ್ರಾಮಿಕ ರೋಗ ಕಾಲದಲ್ಲಿ ದೇವ ನ್ಯಾಯ ಕಾರ್ಯಗಳು.
ಪ್ರಾರ್ಥನಾ ಮಂದಿರಗಳು ಮುಚ್ಚಲ್ಪಟ್ಟಿತು. ದೇವನು ಸ್ಥಳ ಖಾಲಿ ಮಾಡಿದ ಎಂದು ಅವರು ಅಪಹಾಸ್ಯ ಮಾಡಿದರು. ಪ್ರಾರ್ಥನಾಲಯಗಳನ್ನು ತೆರೆದಿಡುವುದು ಮಾತ್ರ ದೇವನಿಚ್ಛೆಯಲ್ಲ. ಮುಚ್ಚಬೇಕಾದ ಸಮಯದಲ್ಲಿ ಮುಚ್ಚಬೇಕು ಎಂಬುದೂ ದೇವ ನ್ಯಾಯವಾಗಿದೆ. ಅದು ಮನುಷ್ಯನು ಪ್ರಕೃತಿ ಹಾಗೂ ಜೀವನದೊಂದಿಗೆ ಸಾಧಿಸಬೇಕಾದ ಗುರಿಗಳ ಅಡಿಪಾಯವಾಗಿದೆ.
ನಾಸ್ತಿಕವಾದಿಗಳು ಒಂದು ಪರಿಮಿತಿಯಲ್ಲಿ ನಿಂತುಕೊಂಡು ಇಸ್ಲಾಮನ್ನು ವೀಕ್ಷಿಸುತ್ತಿರುವಂತಹ ಸಮಸ್ಯೆಯೂ ಇದರಲ್ಲಿದೆ. ಯುಕ್ತಿವಾದವು ವಿಜ್ಞಾನದ ವಾದವಾಗಿದೆ. ವೈಜ್ಞಾನಿಕವಾದವು ಪ್ರಕೃತಿ ವಾದವಾಗಿದೆ. ವಿಜ್ಞಾನವು ಪ್ರಕೃತಿಯ ಮುಂದುವರಿಕೆಯಾಗಿದೆ. ಕಾರ್ಯಕ್ಷಮತೆಯ ಉಪಕರಣವಾಗಿದೆ. ಕಾರುಣ್ಯದ ತತ್ವಶಾಸ್ತ್ರವಲ್ಲ. ನ್ಯಾಯದ ಕುರಿತು ಪ್ರಕೃತಿವಾದಕ್ಕೆ ನ್ಯಾಯವಿಲ್ಲದಂತೆ, ನ್ಯಾಯದ ಕುರಿತ ವೈಜ್ಞಾನಿಕವಾದದಲ್ಲಿ ನ್ಯಾಯ ಇಲ್ಲ. ಕರುಣೆಯು ಇಲ್ಲ. ಬೆಗೋವಿಚ್ರ ನಿರೀಕ್ಷೆಯಂತೆ ಪ್ರಕೃತಿಯ ಕಾರ್ಯಕ್ಷಮತೆ ಅದ್ಭುತವಾಗಿದೆ. ಮೃಗಗಳ ಮುಖಾರವಿಂದವೇ ಕಾರ್ಯ ಕ್ಷಮತೆಯಿಂದ ಕೂಡಿದೆ. ಮೃಗಗಳನ್ನು ಧಾರ್ಮಿಕ ಮೌಲ್ಯಗಳು ಮುನ್ನೆಡೆಸುತ್ತಿಲ್ಲ. ಪ್ರಯೋಜನಕಾರಿ ಮೌಲ್ಯಗಳು ಮೃಗಗಳನ್ನು ಪೋಷಿಸುತ್ತದೆ. ಬೇಗೋವಿಚ್ ಬರೆಯುತ್ತಾರೆ, “ಮನುಷ್ಯ ಲೋಕದ ಭಾಗವೂ, ಅದರ ಉತ್ಪನ್ನವೂ ಆಗಿದ್ದಾನೆ. ಆದ್ದರಿಂದ ಮನುಷ್ಯನು ಒಂದು ವಸ್ತುವಾದರೆ ಮಾತ್ರ ಮಾನವನ ಕುರಿತು ವೈಜ್ಞಾನಿಕ ವಿಶ್ಲೇಷಣೆ ಸಾಧ್ಯ. ಒಟ್ಟಿನಲ್ಲಿ ಹೇಳುವುದಾದರೆ ಮನುಷ್ಯನು ಪ್ರಕೃತಿಯಿಂದ ಭಿನ್ನವಾದರೆ, ಅನ್ಯವಾದರೆ, ಅವನು ಒಂದು ಸ್ವಂತವಾದರೆ ಮಾತ್ರ ಅದು ಸಾಧ್ಯವಾಗುವುದು.” ಹೀಗೆ ಆದರೆ ಮಾತ್ರ ಸರಿಯಾದ ಧರ್ಮವು ಸಾಧ್ಯ ಎಂಬುದು ಬೇಗೋವಿಚ್ರ ಅಭಿಪ್ರಾಯವಾಗಿತ್ತು. ಕೇವಲ ಯುಕ್ತಿವಾದಕ್ಕೆ ಆಧ್ಯಾತ್ಮಿಕತೆಯಲ್ಲೋ, ವಿಮೋಚನಾ ರಾಜಕೀಯದಿಂದಲೋ ವಿಶ್ವಾಸವಿಲ್ಲ. ಅದು ವಿಜ್ಞಾನದಲ್ಲಿ ನಂಬಿಕೆಯಿರಿಸುತ್ತದೆ. ಶಾಸ್ತ್ರವು ಪ್ರಕೃತಿಯ ಹಾಗೂ ಮೃಗದ ಮುಂದುವರಿದ ಭಾಗವಾಗಿದೆ.
ಶಾಸ್ತ್ರವು ನಮ್ಮದು, ನಿಮ್ಮದು ವಿಶ್ವಾಸವೆಂದು ಯುಕ್ತಿವಾದಿಗಳು ಹೇಳುತ್ತಾರೆ. ಇದಕ್ಕೆ ಕಾರಣ ಯುಕ್ತಿವಾದಿಗೆ ಶಾಸ್ತ್ರವು ಉಪಕರಣ ಹಾಗೂ ವಿಶ್ವಾಸವಾಗಿದೆ. ಅಥವಾ ತತ್ವಶಾಸ್ತ್ರವಾಗಿದೆ- ಧಾರ್ಮಿಕತೆಯೂ ಹೌದು. ಧರ್ಮ ವಿಶ್ವಾಸಿಗೆ ವಿಜ್ಞಾನವು (ಶಾಸ್ತ್ರ) ಉಪಕರಣವಾಗಿದೆ. ತತ್ವಶಾಸ್ತ್ರವಲ್ಲ, ಧಾರ್ಮಿಕತೆಯೂ ಅಲ್ಲ ಅದು ಅವರಿಗೆ ಧರ್ಮವಾಗಿದೆ. ಆದ್ದರಿಂದ ಶಾಸ್ತ್ರವು ನಮ್ಮದು ಎಂದವರ ವಿಶ್ವಾಸವಾಗಿದೆ. ಶಾಸ್ತ್ರವು ಪ್ರಕೃತಿಯ ಮುಂದುವರಿಕೆಯಾಗಿದೆ. ಪರಿಷ್ಕ್ರತವಾದ ಪ್ರಕೃತಿವಾದವಾಗಿದೆ. ಪರಿಷ್ಕ್ರತ ಪ್ರಕೃತಿವಾದರಿಂದ ಪ್ರಾಚೀನ ಪ್ರಕೃತಿವಾದವನ್ನು ಯುಕ್ತಿವಾದಿಗಳು ಪರಿಹಾಸ್ಯ ಮಾಡುತ್ತಾರೆ. ವಾಸ್ತವದಲ್ಲಿ ಇಸ್ಲಾಮ್ ಪ್ರಾಚೀನವೋ ಆಧುನಿಕವೋ ಆದ ಪ್ರಕೃತಿವಾದದಲ್ಲಿ ನ್ಯಾಯವಾದವಾಗಿದೆ. ಪ್ರಕೃತಿಯನ್ನು ಪ್ರಶ್ನೆಯೆಂದು ಕಾಣುವ, ನ್ಯಾಯವನ್ನು ಉತ್ತರವೆಂದು ಕಾಣುವ ದೈವಿಕತೆಯ ಹಾಗೂ ಮಾನವೀಯತೆಯ ಇನ್ನೊಂದು ದಾರಿಯಾಗಿದೆ.
IslamKannada News Portal
