Home / ಲೇಖನಗಳು / ಪುಣ್ಯ ಕರ್ಮಗಳನ್ನು ತಾತ್ಸಾರವಾಗಿ ಕಾಣದಿರಿ

ಪುಣ್ಯ ಕರ್ಮಗಳನ್ನು ತಾತ್ಸಾರವಾಗಿ ಕಾಣದಿರಿ

@ ಪಿ.ಎಂ.ಎಂ. ಗಫೂರ್

ನಮ್ಮದು ಕ್ಷಣಿಕ ಕಾಲದಲ್ಲಿ ಮುಗಿಯುವಂತಹ ಜೀವನವಾಗಿದೆ. ಯಾವಾಗ ಹೇಗೆ ಎಂಬ ಬಗ್ಗೆ, ನಮ್ಮ ಮರಳುವಿಕೆ ಹೇಗೆ ಎಂಬ ಬಗ್ಗೆ ಖಾತ್ರಿಯಿರದಿದ್ದರೂ ಖಂಡಿತವಾಗಿಯೂ ಒಮ್ಮೆ  ಹೋಗಲೇಬೇಕು. ಎಲ್ಲಾ ಸಂತೋಷಗಳಿಗೆ ವಿದಾಯ ಹೇಳಿ ಸುಖಲೋಲುಪತೆಯನ್ನು ತೊರೆದು ಎಲ್ಲ ನಿಕಟ ಸಂಬಂಧಗಳನ್ನು ಕಡಿದು ಕೊಂಡು ನಾವು ಹೋಗಲೇಬೇಕು. ಇಷ್ಟು  ಕ್ಷಣಿಕವಾದ ಜೀವನದಲ್ಲಿ ನಮ್ಮ ಮುಂದೆ ಸಣ್ಣ ಸಮಯ ಮಾತ್ರ ಇರುವುದು ಸೆಕೆಂಡುಗಳು… ನಿಮಿಷಗಳು…

ಉತ್ತಮ ಕಾರ್ಯಗಳನ್ನು ಮಾತ್ರ ಮಾಡಿರಿ. ಮಾಡುವ ಕೆಲಸದಲ್ಲಿ ಆತ್ಮಾರ್ಥತೆಯಿರಲಿ. ಇಷ್ಟಾದರೆ ಜೀವನದಲ್ಲಿ ಯಶಸ್ಸು ಖಂಡಿತ. ದೊಡ್ಡ ದೊಡ್ಡ ಕಾರ್ಯಗಳು ಬಹಳಷ್ಟಿವೆ. ಅದಕ್ಕಿಂತಲೂ ಹೆಚ್ಚು ಸಣ್ಣ ಸಣ್ಣ ಕಾರ್ಯಗಳಿವೆ. ನಾವು ತಾತ್ಸಾರವಾಗಿ ಭಾವಿಸುವಂತಹ  ಕಾರ್ಯಗಳು ನಮಗೆ ಮಹಾ ಪ್ರತಿಫಲ ಪಡೆಯುವುದಕ್ಕೆ ಕಾರಣವಾಗಬಹುದು. ಆದ್ದರಿಂದ ಯಾವ ವಿಚಾರಗಳನ್ನೂ ತಾತ್ಸಾರವಾಗಿ ಕಾಣಬಾರದು.

ಬುಖಾರಿ ವರದಿ ಮಾಡಿದ ಪ್ರವಾದಿ ವಚನವೊಂದು ಹೀಗಿದೆ-
ಪ್ರವಾದಿ(ಸ) ಹೇಳಿದರು, ಅಷ್ಟೇನೂ ಗಂಭೀರವಾಗಿ ಪರಿಗಣಿಸದ ಒಂದು ಕಾರ್ಯವು ಅಲ್ಲಾಹನಿಗೆ ತೃಪ್ತಿಕರವಾಗಿ ಉಚ್ಚರಿಸುವ ಒಂದು ವಚನದ ಮೂಲಕ ಅಲ್ಲಾಹನು ಓರ್ವ ವ್ಯಕ್ತಿಯನ್ನು ಹಲವು ದರ್ಜೆಗಳಷ್ಟು ಉನ್ನತಿಗೇರಿಸಬಹುದು. ಅದಕ್ಕೆ ವಿರುದ್ಧವಾಗಿರುವ ಒಂದು ವಚನವನ್ನು ಪ್ರವಾದಿವರ್ಯರು(ಸ) ಹೇಳಿದ್ದಾರೆ- ಅಷ್ಟೇನೂ ಗಂಭೀರವಾಗಿ ಪರಿಗಣಿಸದೆ ಅಲ್ಲಾಹನ ಕೋಪಕ್ಕೆ ಪಾತ್ರವಾಗುವಂತಹ ಒಂದು ಮಾತಿನ ಮೂಲಕ ಓರ್ವ ವ್ಯಕ್ತಿ ನರಕದಲ್ಲಿ ಅಪ್ಪಳಿಸಿ ಬೀಳಬಹುದು.

ಮಿಸ್ಕಾಲದರ್ರತಿನ್ ಎಂದು ಒಳಿತು ಮತ್ತು ಕೆಡುಕುಗಳ ಅಳತೆಯ ಮಾನವಾಗಿ ಕುರ್‍ಆನ್ ಉದ್ದರಿಸಿದೆ-
“ಸಣ್ಣ ಇರುವೆಯ ಕಾಲಿನ ಗಾತ್ರದ ಅಳತೆಯಾಗಿದೆ ಎಂದು `ಮಿಸ್ಕಾಲದರ್ರತಿನ್’ ಎಂಬ ವಚನದ ತಫ್ಸೀರ್‍ ಗಳಲ್ಲಿ ಕಾಣಬಹುದು ಅಥವಾ ಅಷ್ಟು ಚಿಕ್ಕ ಗಾತ್ರದಷ್ಟು ಒಳಿತು ಅಥವಾ ಕೆಡುಕು ಮಾಡಿದರೆ ಅದಕ್ಕೆ ತಕ್ಕ ಪ್ರತಿಫಲ ನೀಡುವನು.
ಅಲ್ಲಾಹನ ಈ ವಚನವು ನಮ್ಮನ್ನು ಎಚ್ಚರಿಸುವುದಲ್ಲದೇ ಕಳೆದು ಹೋಗುತ್ತಿರುವ ನಿಮಿಷಗಳಲ್ಲಿ ಕೆಡುಕಿನಿಂದ ಮುಕ್ತರಾಗಿ ಒಳಿತುಗಳಲ್ಲಿ ಸಕ್ರಿಯರಾಗಿ ಫಲಪ್ರದವಾಗುವ ರೀತಿಯಲ್ಲಿ  ವಿನಿಯೋಗಿಸಲು ನಾವು ಉತ್ಸುಕರಾಗಬೇಕು.

ಒಳಿತುಗಳಲ್ಲಿ ಯಾವುದನ್ನೂ ಕ್ಷುಲ್ಲಕವಾಗಿ ಕಾಣದೆ ಇರುವುದು ಕೂಡಾ ಪುಣ್ಯ ಕರ್ಮವಾಗಿದೆ. ಒಮ್ಮೆ ಪ್ರವಾದಿವರ್ಯರೊಂದಿಗೆ ಅಬೂದರ್ರ್ ಗಿಫ್ಫಾರಿಯವರು ಅತೀ ಶ್ರೇಷ್ಠವಾದ ಪುಣ್ಯ ಕರ್ಮ ಯಾವುದು ಎಂದು ಕೇಳಿದರು, “ಅಲ್ಲಾಹನ ಮೇಲೆ ವಿಶ್ವಾಸವಿಟ್ಟು ಅವನ ಮಾರ್ಗದಲ್ಲಿ ಜಿಹಾದ್ ಮಾಡುವುದಾಗಿದೆ” ಎಂದು ಪ್ರವಾದಿವರ್ಯರು(ಸ) ಉತ್ತರಿಸಿದರು. ಆಗ ಪುನಃ, “ಯಾವ ರೀತಿಯ ಗುಲಾಮನನ್ನು ವಿಮೋಚಿ ಸುವುದು ಉತ್ತಮ?” ಎಂದು ಕೇಳಿದರು. “ಹೆಚ್ಚು ಬೆಲೆಬಾಳುವ ಮತ್ತು ಯಜಮಾನದ ಮೆಲ್ನೋಟದಲ್ಲಿ ಶ್ರೇಷ್ಠವಾಗಿರುವ ಗುಲಾಮರನ್ನು  ವಿಮೋಚಿಸುವುದು ಉತ್ತಮ ಎಂದು ಹೇಳಿದರು. ಆಗ ಮತ್ತೆ, ಇದು ಸಾಧ್ಯವಿಲ್ಲವೆಂದಾದರೆ ನಾನು ಏನು ಮಾಡಬೇಕು ಎಂದು ಕೇಳಿದರು. “ಹಾಗಾದರೆ ಏನಾದರೂ ಕೆಲಸ ಮಾಡುವವರಿಗೆ ನೆರವಾಗಿರಿ” ಅಥವಾ ತನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸಲು ಕಷ್ಟಪಡುವವನಿಗೆ ನೆರವಾಗಿರಿ. ಇದನ್ನು ಮಾಡಲು ಅಶಕ್ತನಾಗಿದ್ದರೆ? ಏನು ಮಾಡಬೇಕು? ಯಾರಿಗೂ ತೊಂದರೆ ಕೊಡಬೇಡಿರಿ, ಅದು ನಿಮಗೆ ಪ್ರತಿಫಲಾರ್ಹವಾಗಿದೆ ಎಂದು ಹೇಳಿದರು.

ಈ ಹದೀಸ್‍ನ ಕೊನೆಯ ಭಾಗವನ್ನು ಗಮನಿಸಿರಿ. ಯಾವ ಪುಣ್ಯ ಕರ್ಮವೂ ಮಾಡದೆ ಸುಮ್ಮನಿರುವ ಸಮಯ ಕೂಡಾ ಪ್ರತಿಫಲಾರ್ಹವಾಗುವಂತಹ ಸಂದರ್ಭ. ಯಾರನ್ನೂ ಉಪದ್ರವಿಸದೆ ಯಾರಿಗೂ ಕಿರುಕುಳ ನೀಡದೆ ಬದುಕಿರಿ.

ಎಷ್ಟೇ ಚಿಕ್ಕದಾದ ಪುಣ್ಯ ಕರ್ಮವಾದರೂ ಸರಿ. ಅದನ್ನು ತಾತ್ಸಾರವಾಗಿ ಕಾಣಬಾರದು. ಸಹೋದರರನ್ನು ಭೇಟಿಯಾಗುವಾಗ ಮುಗುಳ್ನಗೆಯನ್ನು ಬೀರುವುದು ಪುಣ್ಯ ಕರ್ಮವಾಗಿದೆಯೆಂದು ಪ್ರವಾದಿವರ್ಯರು(ಸ) ಹೇಳಿದ್ದಾರೆ. ನಿನ್ನ ನೀರಿನ ತೊಟ್ಟಿಯಲ್ಲಿದ್ದ ನೀರನ್ನು ಸಹೋದರನ ಪಾತ್ರೆಗೆ ಸುರಿಯುವುದು ಕೂಡಾ ಪುಣ್ಯ ಕರ್ಮವಾಗಿದೆ ಎನ್ನುವ ಮೂಲಕ ಆ ಹದೀಸ್ ಕೊನೆಗೊಳ್ಳುತ್ತದೆ.

ಬುಖಾರಿಯವರು ಉದ್ಧರಿಸಿದ ಮತ್ತೊಂದು ಪ್ರವಾದಿ ವಚನ ಹೀಗಿದೆ- ಈರ್ವರ ನಡುವೆ ನ್ಯಾಯ ಪಾಲಿಸುವುದು ಪುಣ್ಯ ಕರ್ಮವಾಗಿದೆ. ನಿಮ್ಮ ವಾಹನದ ಮೇಲೆ ಇನ್ನೊಬ್ಬರನ್ನು ಹತ್ತಿಸಿಕೊಳ್ಳುವುದು ಅಥವಾ ಇನ್ನೊಬ್ಬರ ವಸ್ತುಗಳನ್ನು ತಮ್ಮ ವಾಹನಗಳಿಗೆ  ಹೇರುವುದು ಪುಣ್ಯ ಕರ್ಮವಾಗಿದೆ. ಉತ್ತಮವಾದ ಮಾತುಗಳನ್ನು ಆಡುವುದು ಕೂಡಾ ಪುಣ್ಯ ಕರ್ಮವಾಗಿದೆ. ನಮಾಝ್‍ಗಾಗಿ ಧಾವಿಸುವ ಪ್ರತಿಯೊಂದು ಹೆಜ್ಜೆಯೂ ಪುಣ್ಯ ಕರ್ಮವಾಗಿದೆ.  ದಾರಿಯಲ್ಲಿನ ತೊಂದರೆಗಳನ್ನು ನೀಗಿಸುವುದು ಕೂಡಾ ಪುಣ್ಯ ಕರ್ಮವಾಗಿದೆ.

ಗಂಭೀರವಾಗಿ ಪರಿಗಣಿಸದೆ ಮಾಡಿದ ಕೆಲವು ಚಟುವಟಿಕೆಗಳು ಇತರರಿಗೆ ಮಹಾ ಉಪಕಾರ ಅಥವಾ ತೊಂದರೆ ಉಂಟು ಮಾಡಿದ ಹಲವು ಅನುಭವಗಳು ನಮ್ಮಲ್ಲಿ ಧಾರಾಳ ಇರಬಹುದು.

ಈ ಸಾಲುಗಳು ಬರೆಯುವಾಗ ನಾನು ಸ್ಮರಿಸುತ್ತೇನೆ. ನನಗೆ ತಿಳಿಯದೆ ನನ್ನನ್ನು ಅರಿಯದೆ ವಿವಿಧ ದಿಕ್ಕುಗಳಲ್ಲಿರುವ ಎಷ್ಟೋ ಜನರು ಇದನ್ನು ಓದುವರು. ಅವರಿಗೆ ಇದರಿಂದ ಸಣ್ಣ ಒಂದು  ಪ್ರಚೋದನೆಯಾದರೂ ಸಿಗುತ್ತದೆ. ಹಾಗೆಯೇ ಆಗಲಿ ಎಂಬುದು ನನ್ನ ಪ್ರಾರ್ಥನೆ. ನಮ್ಮನ್ನು ನೋಡದ ಪ್ರತಿಫಲಗಳು ನಮ್ಮ ಚಟುವಟಿಕೆಗಳಿಗೆ ಕರುಣಾಮಯನಾದ ಅಲ್ಲಾಹನು ನೀಡುತ್ತಾ  ಇರುತ್ತಾನೆ. ಆದರೆ ಚಟುವಟಿಕೆಗಳ ಸಂದರ್ಭಗಳಲ್ಲಿ ನಮ್ಮ ಮನಸ್ಸಿನ ಉದ್ದೇಶ ಪ್ರಮುಖವಾಗಿದೆ. ಅಲ್ಲಾಹನ ನೋಟವು ನಮ್ಮ ಉದ್ದೇಶದ ಕಡೆಗಾಗಿರುತ್ತದೆ.

ಅಬೂ ಮೂಸಾ ಅಶ್‍ಅರಿಯವರಿಂದ ಮುಸ್ಲಿಮ್ ಉದ್ಧರಿಸಿದ ಪ್ರವಾದಿ ವಚನವೊಂದು ಹೀಗಿದೆ-
ಪ್ರವಾದಿವರ್ಯರು(ಸ) ಹೇಳಿದರು, “ದಾನ ನೀಡುವುದು ಪ್ರತಿಯೊಬ್ಬ ಮುಸ್ಲಿಮನಿಗೆ ಕಡ್ಡಾಯವಾಗಿದೆ.”
ಆಗ ಅವರು ಕೇಳಿದರು,
“ಓರ್ವನ ಕೈಯಲ್ಲಿ ಹಣವು ಇಲ್ಲದಿದ್ದರೆ?”
“ಅವನು ಕಷ್ಟಪಟ್ಟು ದುಡಿದು ಸಂಪಾದಿಸಿದವುಗಳಿಂದ ಉಪಯೋಗಿಸಿ ಬಡವರಿಗೆ ದಾನ ನೀಡಲಿ.”
“ಅವನಿಗೆ ಅಷ್ಟು ಮಾಡಲೂ ಸಾಧ್ಯವಿಲ್ಲವೆಂದಾದರೆ?”
“ತೊಂದರೆಗೆ ಸಿಲುಕಿರುವ ಯಾವುದಾದರೂ ಬಡವನಿಗೆ ನೆರವು ನೀಡಲಿ.”
“ಅವನು ಅದನ್ನು ಮಾಡಲೂ ಅಶಕ್ತನಾಗಿದ್ದರೆ?”
“ಜನರಿಗೆ ಒಳಿತು ಮಾಡಲು ಪ್ರೇರಣೆ ನೀಡಲಿ.”
“ಇನ್ನು ಅದೂ ಮಾಡಲು ಅವನಿಂದ ಅಸಾಧ್ಯವೆಂದಾದರೆ ಅವನು ಜನರಿಗೆ ಕಿರುಕುಳ ನೀಡದಿರಲಿ. ಅದು ಕೂಡಾ
ಪುಣ್ಯ ಕರ್ಮವಾಗಿದೆ.

ಸಣ್ಣ ಜೀವನ, ಕ್ಷುಲ್ಲಕವಾದ ಸಮಯದಲ್ಲಿ ಬಹಳಷ್ಟು ಪುಣ್ಯ ಕರ್ಮ ಮಾಡಲು ಧಾರಾಳ ಅವಕಾಶಗಳಿವೆ. ಹಾಗೆಯೇ ಕೆಟ್ಟ ಕರ್ಮ ಕೆಡುಕನ್ನು ಮಾಡಲೂ ಸಾಕಷ್ಟು ಅವಕಾಶಗಳಿವೆ. ಹೇಗೆ  ಬದುಕಬೇಕು? ಏನು ಮಾಡಬೇಕು ಎಂಬುದನ್ನು ನಮಗೆ ನಿರ್ಧರಿಸಬಹುದು. ಸತ್ಕರ್ಮಗಳ ಮುಖಾಂತರ ನಮ್ಮ ತಕ್ಕಡಿಯನ್ನು ಭಾರಗೊಳಿಸಬೇಕು. “ಈ ಇಹಲೋಕದ ಬದುಕಲ್ಲಿ ಏನು ಮಾಡಿದೆ?” ಎಂದು ಅಲ್ಲಾಹನು ಕೇಳುವಾಗ ನಮಗೆ ಧೈರ್ಯದಿಂದ ಉತ್ತರಿಸಲು ಸಾಧ್ಯವಾಗಬೇಕು.
ಕರ್ಮಗಳು ಅರಳಲಿ! ಪ್ರತಿಫಲಗಳು ಕಾಯುತ್ತಿವೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …