Home / ಲೇಖನಗಳು / ನಮ್ಮನ್ನು ಈ ಸಮಾಜದಲ್ಲಿ ಹೀಗೆ ಬದುಕಲು ಬಿಡಿ.

ನಮ್ಮನ್ನು ಈ ಸಮಾಜದಲ್ಲಿ ಹೀಗೆ ಬದುಕಲು ಬಿಡಿ.

ನಾನು ಕುಟುಂಬ ಸಮೇತ ಅಪರೂಪಕ್ಕೆ ಬಸ್ಸಲ್ಲಿ ಪ್ರಯಾಣಿಸುವ ಸಂದರ್ಭ ಒದಗಿ ಬಂದಿತ್ತು. ನನ್ನ ಕೈಯಲ್ಲಿ ನನ್ನ ಹೆಣ್ಣು ಮಗು ಮತ್ತು ನನ್ನ ಬಾಳಸಂಗಾತಿಯ ಕೈಯಲ್ಲಿ ನನ್ನ ಚಿಕ್ಕ ಗಂಡು ಮಗುವಿತ್ತು. ಎಡಪದವು ನಿಂದ ಮೂಡಬಿದ್ರಿ ಕಡೆಗೆ ಪ್ರಯಾಣಿಸಲು ಎಡಪದವಿನ ಬಸ್ ನಿಲ್ದಾಣದಲ್ಲಿ ರೇಷ್ಮ ಬಸ್ ಗೆ ಹತ್ತಿದಾಗ ಬಸ್ ಚಲಾಯಿಸುತ್ತಿದ್ದ ಡ್ರೈವರ್ ರವರು ಬೊಬ್ಬೆಹಾಕಿ ಎರಡುಸಲ ಕೂಗಿ, ಮಗುವಿದೆ, ಸೀಟು ಬಿಟ್ಟುಕೊಡಿ ಎಂದು ಹೇಳಿದರು. ಅದನ್ನು ಕೇಳಿದ ಓರ್ವ ಹಿಂದೂ ಸಹೋದರಿ ನನ್ನ ಬಾಳಸಂಗಾತಿ ಗೆ ಸೀಟು ಬಿಟ್ಟು ಕೊಟ್ಟರು. ಓರ್ವ ಕ್ರಿಸ್ಟಿಯನ್ ಸಹೋದರಿ ನನಗೆ ಸೀಟು ಕೊಡಲು ತನ್ನಲ್ಲಿದ್ದ ಬ್ಯಾಗ್ ಅನ್ನು ತನ್ನ ಜೊತೆಯಲ್ಲಿದ್ದ ಇನ್ನೊಬ್ಬರ ಜೊತೆ ಕೊಟ್ಟು ಎದ್ದು ನಿಂತಾಗ ಬ್ಯಾಡ ಸಿಸ್ಟೆರ್ ನೀವು ಕುಳಿತು ಮಗುವನ್ನು ಜೊತೆಯಲ್ಲಿ ಕುಳ್ಳಿರಿಸಲು ಸಾಧ್ಯವೇ ಎಂದು ಕೇಳಿದೆ. ಅಯ್ಯೋ ಅದಕ್ಕೇನಂತೆ ಎಂದು ಹೇಳಿ ನನ್ನ ಕೈನಿಂದ ಮಗುವನ್ನು ಪಡೆದು ಕೊಂಡರು. ನಂತರದ ಬಸ್ ನಿಲ್ದಾಣ ಬಂದಾಗ ಯಾರಾದರೂ ಇಳಿಯಲಿಕ್ಕೆ ಇದ್ದಾರೆಯೇ ಎಂದು ಡ್ರೈವರ್ ವಿಚಾರಿಸುತ್ತಲೇ ಇದ್ದರು. ಇಲ್ಲಿ ನನ್ನ ಹೆಣ್ಣು ಮಗು ನಿದ್ರೆಯಲ್ಲಿ ತೂಕಡಿಕೆಗೆ ಇಳಿದಿತ್ತು. ಆ ಕ್ರಿಸ್ಟಿಯನ್ ಸಹೋದರಿ ಮಗುವಿನ ಕೆನ್ನೆ ಸವರುತ್ತ, ತಟ್ಟುತ್ತ, ಮಗುವನ್ನು ನಿದ್ರಿಸುತ್ತಿದ್ದರು.

ವಿಷಯ ಚಿಕ್ಕ ವಿಷಯವಾದರೂ ನನಗೆ ಇದರಲ್ಲಿ ಈ ದೇಶದ ವಿವಿಧತೆ ಮತ್ತು ಅದರ ಒಂದು ಸುಂದರ ನೋಟ ಕಾಣಲು ಸಾಧ್ಯವಾಗಿತ್ತು. ಧರ್ಮಂದತೆಯ ಮದ್ಯದಲ್ಲಿ ನಮ್ಮನ್ನು ಕೋಮುವಾದಿಗಳು ಅದೆಷ್ಟು ಮುಳುಗಿಸಿದರೂ ಸಮಾಜದಲ್ಲಿ ಮಾನವೀಯತೆ, ಸೌಹಾರ್ದತೆ ಇನ್ನೂ ಬಾಕಿಯಿದೆಯೆಂದು ಈ ಘಟನೆ ಸಾರಿತ್ತು. ಬಸ್ ಚಾಲಕರಿಗೆ ನಾನು ಮುಸ್ಲಿಂ ಎಂದು ನಮ್ಮನ್ನು ಕಾಣುವಾಗಲೇ ಗೊತ್ತಿತ್ತು. ಅಲ್ಲದೆ ಇದು ಚಾಲಕನ ಜವಾಬ್ದಾರಿ ಕೂಡ ಅಲ್ಲ. ಆದರೂ ಕೂಡ ನಮಗೆ ಸೀಟು ಸಿಗಲು ಪ್ರಯತ್ನಿಸಿದ್ದು, ಹಿಂದೂ ಮತ್ತು ಕ್ರಿಸ್ಟಿಯನ್ ಸಹೋದಿಯರ ತ್ಯಾಗ ನಮಗೆ ಒಂದು ಐಕ್ಯತೆಯ ಸಂದೇಶದಂತಿತ್ತು.

  • ಝ ಗಂಜಿಮಠ
SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …