ಇಂದು ಭೂಮಿಯಲ್ಲಿ ಸುಮಾರು 750 ಕೋಟಿ ಮನುಷ್ಯರು ವಾಸಿಸುತ್ತಿದ್ದಾರೆ, ಈ ಎಲ್ಲಾ ಮನುಷ್ಯರ ಆಕಾರ ಒಂದೇ ರೀತಿಯಲ್ಲಿಯಾಗಿದೆ. ಎರಡು ಕಾಲುಗಳು, ಎರಡು ಕೈಗಳು, ಅತ್ಯಂತ ಮೇಲ್ಬಾಗದಲ್ಲಿ ಮುಖಗಳು. ಇದಾಗಿದೆ ಮನುಷ್ಯ ರೂಪ.ಮಾನವನ ಮುಖದ ಗಾತ್ರ ಸುಮಾರು ಮುಕ್ಕಾಲು ಚದುರ ಅಡಿ ಆಗಿದೆ, ಈ ಮುಕ್ಕಾಲು ಚದುರ ಅಡಿ ವಿಸ್ತೀರ್ಣದಲ್ಲಿ ಸರಿಯಾದ ಸ್ಥಳದಲ್ಲಿ ಎರಡು ಕಣ್ಣುಗಳು ಒಂದು ಮೂಗು ಎರಡು ತುಟಿಗಳು ಮತ್ತು ಎರಡು ಬದಿಗಳಲ್ಲಿ ಕಿವಿಗಳನ್ನು ಹೊಂದಿದೆ.
ಆದರೆ ಕೇವಲ ಮುಕ್ಕಾಲು ಚದುರ ಅಡಿ ಜಾಗದಲ್ಲಿ ಪ್ರತಿಯೊಂದು ಸ್ಥಳಗಳಲ್ಲಿ ಸಂಪೂರ್ಣ ರೀತಿಯಲ್ಲಿ ಪ್ರತಿಯೊಂದು ಅಂಗಾಂಗಗಳನ್ನು ಸೇರಿಸಿಕೊಂಡು ಇಂದು ಭೂಮಿಯಲ್ಲಿ ಬದುಕುತ್ತಿರುವ 750 ಕೋಟಿ ಮನುಷ್ಯರ ಮುಖಗಳನ್ನು ವಿವಿದ ರೀತಿಯಲ್ಲಿ ರಚಿಸಿದ ಸೃಷ್ಟಿಕರ್ತನ ಸೃಷ್ಟಿ ಮಹಾತ್ಮೆಯನ್ನು ನಮಗೆ ಯಾವುದರ ಜೊತೆ ಹೋಲಿಕೆ ಮಾಡಲು ಸಾದ್ಯ ?
ಹಾಗಾದರೆ ನಮಗಿಂತ ಮುಂಚೆ ಗತಿಸಿಹೋದ ಕೋಟಿಗಟ್ಟಲೆ ಮನುಷ್ಯರು, ನಮಗಿಂತ ನಂತರ ಬರುವ ಕೋಟಿಗಟ್ಟಲೆ ಮನುಷ್ಯರ ಮುಖಗಳನ್ನು ಕೇವಲ ಮುಕ್ಕಾಲು ಚದುರ ಅಡಿಭಾಗದಲ್ಲಿ, ಸೃಷ್ಟಿಸಿದ ಮುಖಗಳೆಲ್ಲವೂ ಒಂದಕ್ಕೊಂದು ವಿಭಿನ್ನವಾಗಿದೆ ಎಂಬ ಸತ್ಯವನ್ನು ಅರ್ಥಮಾಡಿಕೊಂಡಾಗ ಆ ಸೃಷ್ಟಿಕರ್ತನ ಸೃಷ್ಟಿ ಮಾಹತ್ಮೆವನ್ನು ನಮಗೆ ಹೇಗೆ ನಿರಾಕರಿಸಲು ಸಾದ್ಯ
ಅದೇರೀತಿ ಒಂದೇ ತಂದೆ ತಾಯಿಗೆ ಜನಿಸುವ ಒಂದೇ ತಾಯಿಯ ಗರ್ಭಪಾತ್ರದಿಂದ ಪ್ರತಿಯೊಂದು ಭಾರಿಯೂ ಹೊರ ಬರುವ ಅವರ ಮಗುವಿನ ಅಕಾರದಲ್ಲಿ ಸ್ವಭಾವಗಳಲ್ಲಿ ತುಂಬಾನೇ ವ್ಯತ್ಯಾಸಗಳನ್ನು ಕಾಣಬಹುದು. ಮಾತ್ರವಲ್ಲ ಆ ಮನುಷ್ಯನ ಮುಖದ ಎರಡು ತುಟಿಗಳ ನಡುವಿನಿಂದ ಹೊರಬರುವ ಅಕಾರವಿಲ್ಲದ ಧ್ವನಿಯನ್ನು ಪ್ರತಿಯೊಬ್ಬರಲ್ಲೂ ವಿಭಿನ್ನವಾಗಿ ವ್ಯವಸ್ಥಿತ ಗೊಳಿಸಿದ ಆ ಸೃಷ್ಟಿಕರ್ತನ ಸೃಷ್ಟಿ ವೈಭವವನ್ನು ವಂದಿಸೂದಲ್ಲದೆ ಇನ್ನೇನು ಹೇಳಲು ಸಾದ್ಯ.
ಆದುದರಿಂದಲೇ ಕೇವಲ ಧ್ವನಿಯಿಂದ ಮಾತ್ರ ನಮಗೆ ಆ ಧ್ವನಿಯ ವ್ಯಕ್ತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಫೋನ್ ತೆಗೆದು ಹಲೋ ಎಂಬ ಪದ ಕೇಳಿದ ಕೂಡಲೇ ಅದು ಯಾರೆಂದು ತಿಳಿದುಕೊಳ್ಳಲು, ಅದೇರೀತಿ ಸಿನಿಮಾ ತಾರೆಯರ ವಾರ್ತಾ ನಿರೂಪಕರ ಧ್ವನಿಯಿಂದ ಅವರನ್ನು ನೋಡದೇನೆ ಅದು ಯಾರೆಂದು ತಿಳಿದುಕೊಳ್ಳಲು ಸಾದ್ಯವಾಗುತ್ತಿರುವುದು. ಅಕಾರವಿಲ್ಲದ ಶಬ್ದವನ್ನು ಪ್ರತಿಯೊಬ್ಬರಲ್ಲೂ ವಿಭಿನ್ನವಾಗಿ ವ್ಯವಸ್ಥಿತಗೊಳಿಸಿದ ಸಾಟಿಯಿಲ್ಲದ ಸೃಷ್ಟಿ ಮಾಹತ್ಮೆದಿಂದ ಮಾತ್ರವಾಗಿರುತ್ತದೆ.
ಅದೇರೀತಿ ಮನಷ್ಯನ ವಾಸನೆ ಕೂಡ ಪ್ರತಿಯೊಬ್ಬರಲ್ಲೂ ವಿಭಿನ್ನವಾಗಿದೆ.ಆದುದರಿಂದಲೇ ಪರಿಶೀಲೆನೆ ಲಭಿಸಿದ ಪೋಲೀಸ್ ನಾಯಿಗಳು ಮನುಷ್ಯ ವಾಸನೆಯಿಂದ ಆರೋಪಿಗಳನ್ನು ಗುರುತಿಸುವುದನ್ನು ಕಾಣಬಹುದು. ಪವಿತ್ರ ಕುರ್ ಆನ್ ಹೇಳುತ್ತದೆ
“ನಾವು ಅವನ ಎಲುಬುಗಳನ್ನು ಒಟ್ಟುಗೂಡಿಸಲಾರೆವೆಂದು ಮಾನವನು ಭಾವಿಸುತ್ತಿರುವನೇ ಯಾಕಿಲ್ಲ? ನಾವಂತು ಅವನ ಬೆರಳುಗಳ ತುದಿಗಳನ್ನು ಕೂಡಾ ಸರಿಯಾಗಿ ರಚಿಸಲು ಶಕ್ತರಾಗಿದ್ದೇವೆ”.( ಅಧ್ಯಾಯ 75: 3,4)
ಇನ್ನು ಮನುಷ್ಯನ ಕಾಲು ಪಾದಗಳನ್ನು ನೋಡೋಣ.ನಾವು ಇಂದು ದರಿಸುವ ಚಪ್ಪಲಿಗಳಲ್ಲಿ ಅತ್ಯುತ್ತಮ ಬ್ರಾಂಡ್ ತೆಗೆದುಕೊಳ್ಳೋಣ ಅದನ್ನು ದರಿಸಿ ಎಷ್ಟುದಿನ ನಡೆದು ಕೊಳ್ಳಬಹುದು. ಹೆಚ್ಚೆಂದರೆ ಎರಡು ಮೂರುವರ್ಷ ನಂತತ ಅದರ ಅಡಿಭಾಗ ಸವೆದು ಹೋಗಬಹುದು. ಅಥವಾ ಎರಡು ಬದಿಗಳು ತುಂಡಾಗಬಹುದು
ಆದರೆ ಸೃಷ್ಟಿಕರ್ತನು ನಮಗೆ ನೀಡಿದ ಪಾದಗಳನ್ನು ನಾವು ಎಷ್ಟು ವರ್ಷಗಳಿಂದ ಬಳಸುತ್ತಿದ್ದೇವೆ. ನೂರು ವರ್ಷಗಳ ಕಾಲ ಬದುಕುತ್ತಿರುವ ಒಬ್ಬ ಮನುಷ್ಯ ಅದೇ ಕಾಲುಗಳನ್ನು ಬಳಸುತ್ತಿದ್ದಾನೆ. ನಮ್ಮ ಪೂರ್ವಿಕರು ನಗ್ನ ಪಾದಗಳಿಂದ ಅದೆಷ್ಟೋ ಬೆಟ್ಟಗಳನ್ನು ಗುಡ್ಡೆಗಳನ್ನು ಬಂಡೆಕಲ್ಲುಗಳೆನ್ನೆಲ್ಲಾ ದಾಟಿಯಾಗಿತ್ತು ಹಲವು ವರ್ಷಗಳ ಕಾಲ ನಡೆದು ಮುಗಿಸಿದ್ದು.
ಹಾಗೆಯೇ ನಾವು ಆಹಾರ ಮಾಡಲು ಬಳಸುವ ಚಮಚ, ಸ್ಟೀಲ್ ಪಾತ್ರೆಗಳು ಇವುಗಳೆನ್ನೆಲ್ಲಾ ನಾವು ಎಷ್ಟುಬಾರಿ ನಾವು ಹೊಸತಾಗಿ ಖರೀದಿಸುತ್ತಿದ್ದೇವೆ. ಆದರೆ ಸೃಷ್ಟಿಕರ್ತನು ನಮಗೆ ನೀಡಿದ ಕೈಗಳು ಓರ್ವ ನೂರು ವರ್ಷ ಬದುಕಿದರೂ ಒಮ್ಮೆಯೂ ಬದಲಾಯಿಸುವುದನ್ನು ಕಾಣಲು ಸಾದ್ಯವಿಲ್ಲ, ಬದಲಾಯಿಸಬೇಕಾಗಿ ಬರುವುದು ಇಲ್ಲ.ಎಷ್ಟು ಕಠಿಣವಾದ ಕೆಲಸಗಳು ಓರ್ವ ಮನುಷ್ಯಾಯುಸ್ಸಿನಲ್ಲಿ ನಾವು ನಮ್ಮ ಕೈಗಳಿಂದ ಮಾಡಿ ಮುಗಿಸುತ್ತಿದ್ದೇವೆ.
ಅದೇರೀತಿ ನಾವು ಶಾಪಿಂಗ್ ಮಾಲುಗಳಲ್ಲಿ, ದೊಡ್ಡ ದೊಡ್ಡ ರೆಸ್ಟೋರೆಂಟ್ ಗಳಲ್ಲಿ ಕಾಣುವ ಎರಡು ದೃಶ್ಯಗಳಾಗಿವೆ, ಒಂದು ನಾವು ನಡೆದುಕೊಂಡು ಹೋಗುವಾಗ ತನ್ನಷ್ಟಕ್ಕೆ ತೆರೆಯುವ ಗ್ಲಾಸ್ ಡೋರ್ ಇನ್ನೊಂದು ಕೈ ತೋರಿಸುವಾಗ ತನ್ನಷ್ಟಕ್ಕೆ ನಲ್ಲಿಯಿಂದ ನೀರು ಬರುವ ಸೆನ್ಸರ್ ಟ್ಯಾಪ್ ಗಳು
ಅಧುನಿಕ ಟೆಕ್ನಾಲಜಿಯ ಕಂಡು ಹಿಡಿತವಾದ ಅಂತಹ ದೃಶ್ಯಗಳು ನಾವು ಆಶ್ಚರ್ಯದಿಂದ ನೋಡುತ್ತೇವೆ, ಅದರ ಹಿಂದೆಯಿರುವ ಶಾಸ್ತ್ರಜ್ಞರ ಬುದ್ದಿಯನ್ನು ಆಕಾಶದೆತ್ತರಕ್ಕೆ ಏರಿಸಿಬಿಡುತ್ತೇವೆ.
ಆದರೆ ಇದಕ್ಕಿಂತ ಎಷ್ಟೋ ದೊಡ್ಡ ಸೆನ್ಸೆರ್ ಸಂವಿಧಾನ ನಮ್ಮ ಶರೀರದಲ್ಲಿ ವ್ಯವಸ್ಥಿತವಾಗಿ ನಮ್ಮ ಸೃಷ್ಟಿಕರ್ತನು ಅಳವಡಿಸಿದ್ದಾನೆ ಆದರೂ ಅದರ ಬಗ್ಗೆ ಚಿಂತಿಸಲು ನಮಗೆ ಸಾಧ್ಯವಾಗುತ್ತಿಲ್ಲ.
ಇನ್ನು ನಮ್ಮ ಕಣ್ಣುಗಳನ್ನು ತೆಗೆದುಕೊಳ್ಳೋಣ. ಎಷ್ಟು ವೇಗವಾಗಿ ಕ್ಷಣ ಮಾತ್ರದಲ್ಲಿ ನಮ್ಮ ಕಣ್ಣಮುಂದೆ ಯಾವ ವಸ್ತು ಹಾರಿ ಬಂದರೂ ನಿಮಿಷಾರ್ದದಲ್ಲಿ ಪ್ರಪಂಚದಲ್ಲಿ ಯಾವ ಸೆನ್ಸೆರಿಗೂ ಸಾದಿಸದ ವೇಗದಲ್ಲಿ ಕಣ್ಣರೆಪ್ಪೆಗಳು ಕಣ್ಣುಗಳನ್ನು ರಕ್ಷಿಸುತ್ತದೆ.
ಅದೇರೀತಿ ನಾವು ಮಲಮೂತ್ರ ವಿಸರ್ಜನೆ ಮಾಡುವುದರ ಕುರಿತು ಚಿಂತಿಸಿ ನೋಡಿ. ನಾವು ಸೌಚಾಲಯಕ್ಕೆ ಪ್ರವೇಶಿಸಿ ಮೂತ್ರ ಮಾಡಲು ಉದ್ದೇಶಿಸುವಾಗ ಆ ನಿಮಿಷದಲ್ಲಿ ಮೂತ್ರನಾಲ ತೆರೆಯುತ್ತದೆ ಮುಗಿದರೆ ಮೂತ್ರನಾಲವು ಮುಚ್ಚುವುದನ್ನು ಕಾಣಬಹುದು ಯಾವ ವ್ಯಕ್ತಿಯೂ ಮಲಮೂತ್ರ ದ್ವಾರದಲ್ಲಿ ಮುಚ್ಚಲು ಸ್ಥಾಪಿಸಿಲಿಲ್ಲ ಅಗತ್ಯ ವಿದ್ದಾಗ ತೆರೆಯಲು ಮತ್ತು ಅಗತ್ಯವಿಲ್ಲದಿದ್ದಾಗ ಮುಚ್ಚಲು. ಅದೇರೀತಿ ಯಾವುದೇ ರೀತಿಯ ಯಂತ್ರ ಸಹಾಯವೂ ವಿದ್ಯುತ್ ಸೌಲಭ್ಯವನ್ನು ನಮ್ಮ ದೇಹದಲ್ಲಿ ನಡೆಯುವುದುಯಿಲ್ಲ. ಮಾತ್ರವಲ್ಲ ಈ ಸೆನ್ಸೆರ್ ತಂತ್ರಜ್ಞಾನವೂ ಮನುಷ್ಯ ಸೃಷ್ಟಿಯ ಆರಂಭದಿಂದ ಇಂದು ಜನಿಸುವ ಮಗುವಿನವರೆಗೂ ಯಾವುದೇ ಬದಲಾವಣೆಗೆ ಒಳಪಡಿಸದೆ ಮುಂದುವರಿಯುತ್ತಾಯಿದೆ.
ಆದರೆ ಅದರ ಬಗ್ಗೆ ಯೋಚಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಮನುಷ್ಯನ ಸಂಶೋಧನೆಯ ಬಗ್ಗೆ ಉತ್ಸಾಹಗೊಳ್ಳುವ ನಾವು ಮನುಷ್ಯನೆಂಬ ಅದ್ಭುತ ಸೃಷ್ಟಿಯನ್ನು ಸೃಷ್ಟಿಸಿದ ಸೃಷ್ಟಿ ವೈಭವದ ಕುರಿತು ನಾವು ಯೋಚಿಸುವುದಿಲ್ಲವೆಂಬುವುದು ವಿಷಾದನೀಯವಾಗಿದೆ.
ಮನುಷ್ಯ ಸೃಷ್ಟಿಯ ಬಾಹ್ಯವಾಗಿ ನಮಗೆ ನಮ್ಮ ಕಣ್ಣುಗಳಿಂದ ಕಾಣುವ ಮತ್ತು ಕಿವಿಗಳಿಂದ ಕೇಳಲು ಸಾಧ್ಯವಾಗುವ ವಿಷಯಗಳಾಗಿವೆ ನಾನು ಇಲ್ಲಿ ವಿವರಿಸಿದ್ದು ಇದಕ್ಕಿಂತ ಸಾವಿರಪಟ್ಟು ಅದ್ಭುತವಾದ ಬಂಡಾರವಾಗಿದೆ ಮನುಷ್ಯ ಶರೀರದ ಒಳ ಭಾಗದ ಕಾರ್ಯ ಚಟುವಟಿಕೆಗಳು. ಇದರ ಕರಿತು ಆಳವಾಗಿ ಅರಿತುಕೊಲ್ಲುವಾಗ ಸೃಷ್ಟಿಕರ್ತನ ಸೃಷ್ಟಿ ವೈಭವದ ಮುಂದೆ ಸೃಷ್ಟಿಗಳಾದ ನಾವು ತಲೆ ಭಾಗಲೇ ಬೇಕು ಅದಾಗಿದೆ ಅರ್ಥಪೂರ್ಣವಾದ ನಿಜವಾದ ಸುಜೂದ್ (ಸಾಷ್ಟಾಂಗ) ಪವಿತ್ರ ಕುರ್ ಆನ್ ಹೇಳುತ್ತದೆ.
“ನಾವು ಮಾನವನನ್ನು ಮಣ್ಣಿನ ಸತ್ವದಿಂದ ಸೃಷ್ಟಿಸಿದೆವು.ತರುವಾಯ ಅದನ್ನು ಒಂದು ಸುರಕ್ಷಿತ ಸ್ಥಳದಲ್ಲಿ ತೊಟ್ಟಿಕ್ಕಿದ ಹನಿಯಾಗಿ ಮಾರ್ಪಡಿಸಿದೆವು.ಅನಂತರ ಆ ಹನಿಗೆ ಮಾಂಸಪಿಂಡದ ರೂಪ ಕೊಟ್ಟೆವು. ಬಳಿಕ ಮಾಂಸಪಿಂಡವನ್ನು ಮಾಂಸಖಂಡವನ್ನಾಗಿ ಮಾಡಿದೆವು. ಆಮೇಲೆ ಮಾಂಸಖಂಡವನ್ನು ಎಲುಬುಗಳಾಗಿ ಮಾಡಿದೆವು. ತರುವಾಯ ಎಲುಬುಗಳ ಮೇಲೆ ಮಾಂಸ ತೊಡಿಸಿದೆವು.ಆ ಬಳಿಕ ಅದನ್ನೊಂದು ಬೇರೆಯೇ ಸೃಷ್ಟಿಯನ್ನಾಗಿ ಮಾಡಿ ನಿಲ್ಲಿಸಿದೆವು. ಅಲ್ಲಾಹನು ಮಹಾ ಸಮೃದ್ಧನು; ಸಕಲ ಶಿಲ್ಪಿಗಳಿಗಿಂತ ಶ್ರೇಷ್ಠ ಶಿಲ್ಪಿ.ಅದಾದ ಬಳಿಕ ನಿಮಗೆ ಖಂಡಿತವಾಗಿಯೂ ಸಾಯಲಿಕ್ಕಿದೆ.ಮತ್ತೆ ಪುನರುತ್ಥಾನದ ದಿನ ಖಂಡಿತವಾಗಿಯೂ ನೀವು ಎಬ್ಬಿಸಲ್ಪಡುವಿರಿ.”( ಅಧ್ಯಾಯ 23,12-16)
IslamKannada News Portal
