ಮರಣೋತ್ತರ ಜೀವನದ ವಸ್ತುಸ್ಥಿತಿಯನ್ನು ವಿಜ್ಞಾನದ ಪರಿಧಿಯಲ್ಲಿ ಅರಿಯಲು ಸಾಧ್ಯವಿಲ್ಲ, , ವಿಜ್ಞಾನ ಯುಗದಲ್ಲಿ ಎಲ್ಲವೂ ವೈಜ್ಞಾನಿಕವಾಗಿರಬೇಕೆಂಬುದು ಒಂದು ಅಭಿಲಾಷೆ. ಆದರೆ ವಿಜ್ಞಾನದ ಈ ವರೆಗಿನ ಸಾಧನೆಯು ಇನ್ನೂ ಸಾಧಿಸಲಿಕ್ಕಿರುವುದರ ಶತಕೋಟಿಯ ಒಂದಂಶವನ್ನೂ ದಾಟಿಲ್ಲ. ನಭೋಮಂಡಲದ ರಹಸ್ಯ ಕವಾಟಗಳನ್ನು ತೆರೆದಷ್ಟು ಅವು ಮತ್ತಷ್ಟು ವಿಸ್ತೀರ್ಣಗೊಂಡಾಗ ವಿಜ್ಞಾನವೇ ಪ್ರಕೃತಿಯೊಳಗಿನ ರಹಸ್ಯಕ್ಕೆ ವಿಸ್ಮಿತಗೊಂಡಿದೆ. ಹೀಗಿರುವಾಗ ಅಗೋಚರ ವಿಷಯಗಳಿಗೆ ವಿಜ್ಞಾನದ ಬೆನ್ನುಹತ್ತಿ ಪ್ರಯೋಜವಿಲ್ಲ.
“ಪರಲೋಕ”ದ ವಸ್ತುಸ್ಥಿತಿಗೆ ಆಧ್ಯಾತ್ಮಿಕ ಶಿಕ್ಷಣದಲ್ಲಿ ಧಾರಾಳ ಪಾಠವಿದೆ. ಜಗತ್ತಿಗೆ ಪ್ರವಾದಿಗಳ ಮೂಲಕ ಅವತೀರ್ಣಗೊಂಡ ಎಲ್ಲ ವೇದಗ್ರಂಥಗಳಲ್ಲಿ ‘ಪರಲೋಕ’ ಜೀವನದ ಉಲ್ಲೇಖವಿದೆ. ವೇದಗ್ರಂಥಗಳ ಪೈಕಿ ದೇವನ ಅಂತಿಮ ವಾಣಿಯಾಗಿರುವ ಪವಿತ್ರ ಕುರ್ಆನ್; ಒಬ್ಬ ಸತ್ಯವಿಶ್ವಾಸಿಗೆ ಐಹಿಕ ಜೀವನವನ್ನು ಪರಲೋಕ ಮೋಕ್ಷಕ್ಕಾಗಿ ದುಡಿಯುವ ಕರ್ಮಭೂಮಿಯಾಗಿ ಅನಿವಾರ್ಯಗೊಳಿಸಿದೆ.
“ಪರಲೋಕ ಚಿತ್ರಣ ಕುರ್’ಆನಿನಲ್ಲಿ” ಎಂಬ ಕೃತಿಯು ಮಾನವನ ದೇಹದಿಂದ ಬೇರ್ಪಟ್ಟ ಆತ್ಮವು ಪರಲೋಕ ಸಾನಿಧ್ಯ ಸೇರುವ ಹಂತಗಳನ್ನು ಪವಿತ್ರ ಕುರ್’ಅನ್ನ ಬೆಳಕಿನಲ್ಲಿ ವಸ್ತುನಿಷ್ಠವಾಗಿ ವಿವರಿಸಿರುವ ಆವೃತಿಯಾಗಿದೆ. ಲೇಖಕರಾದ ಕೆ.ಸಿ. ಅಬ್ದುಲ್ಲಾ ಮೌಲವಿಯವರ ‘ಪರಲೋಕಮ್ ಕುರ್ಅನಿಲ್’ ಎಂಬ ಕೃತಿಯನ್ನು ಪಿ. ನೂರ್ ಮುಹಮ್ಮದ್ ಕನ್ನಡಕ್ಕೆ ಅನುವಾದಿಸಿದ್ದಾರೆ.
IslamKannada News Portal
