ನಾವಿನ್ನೂ ಬಿಂದಿ, ಕುಂಕುಮ, ಹಿಜಾಬ್ ನಲ್ಲಿದ್ದೇವೆ..
ಹಸಿವು ಸೂಚ್ಯಂಕ ದಲ್ಲಿ ಭಾರತ ನೆರೆಯ ಪಾಕಿಸ್ತಾನ,ನೇಪಾಳ ,ಬಾಂಗ್ಲಾದೇಶಕ್ಕಿಂತಲೂ
ಕೆಳಸ್ಥಾನದಲ್ಲಿದೆ.
ಬನ್ನಿ ಇತಿಹಾಸ ಅರಿಯೋಣ…
ಅವರು ಹೀಗೆ ಸುತ್ತಾಡುತ್ತಿರುವಾಗ ಒಂದು ಗುಡಿಸಲಲ್ಲಿ ಸಣ್ಣ ಮಕ್ಕಳು ಅಳುವುದು ಕೇಳಿಸುತ್ತದೆ. ಮಕ್ಕಳು ಯಾಕೆ ಅಳುತ್ತಿದ್ದಾರೆಂದು ಅವರು ಅಲ್ಲಿಗೆ ಹೋಗುತ್ತಾರೆ. ಮಕ್ಕಳ ಅಮ್ಮ ಒಲೆಯಲ್ಲಿ ಏನೋ ಬೇಯಿಸುತ್ತಿದ್ದಾಳೆ. ಮಕ್ಕಳು ಅಳುತ್ತಿದ್ದಾರೆ.
ದಾರಿ ಹೋಕ ಅಮ್ಮನಲ್ಲಿ ಕೇಳುತ್ತಾರೆ.”ಮಕ್ಕಳು ಯಾಕೆ ಈ ರೀತಿ ಒಂದೇ ಸವನೆ ಅಳುತ್ತಿದ್ದಾರೆ.?
“ಅವರಿಗೆ ಹಸಿವು ತಡೆಯಲಾಗುತ್ತಿಲ್ಲ ಎಂದು ಅಮ್ಮ ಹೇಳುತ್ತಾರೆ.
ನೀವೇನೂ ಬೇಯಿಸುತ್ತಿದ್ದೀರಿ ? ಎಂದು ದಾರಿ ಹೋಕ ಕೇಳಿದಾಗ
“ಏನೂ ಇಲ್ಲ, ನೀರನ್ನು ಬೇಯುಸುತ್ತಿದ್ದೇನೆ. ಮಕ್ಕಳು ತಿನ್ನಲು ಅಮ್ಮ ಏನೋ ತಯಾರಿಸುತ್ತಿದ್ದಾರೆಂದು ಭಾವಿಸಿ ಅತ್ತು ಮಲಗುತ್ತದೆ.” ಎಂದು ಹೇಳುತ್ತಾರೆ.
ಜತೆಗೆ ಅಲ್ಲಿನ ಅಂದಿನ ಅವರ ಪ್ರಧಾನಿಗೆ ಹಿಡಿಶಾಪ ಹಾಕುತ್ತಾರೆ.
……..
ಇದನ್ನು ಕೇಳಿದ ದಾರಿ ಹೋಕ ಕೂಡಲೇ ಅಲ್ಲಿಂದ ತೆರಳುತ್ತಾರೆ. ತುಸು ಹೊತ್ತಿನ ಬಳಿಕ ಒಂದು ಚೀಲ ಧಾನ್ಯ ಹೆಗಲಲ್ಲಿ ಹೊರುತ್ತಾ ಬರುತ್ತಾರೆ. ಮಕ್ಕಳೆಲ್ಲಾ ಅತ್ತೂ ಅತ್ತೂ ಹಸಿದ ಹೊಟ್ಟೆಯಲ್ಲಿ ನಿದ್ರಾ ಪರವಶವಾಗಿತ್ತು. ಹೆಗಲ ಮೇಲಿನ ಚೀಲವನ್ನು ಇಳಿಸಿ ತಾವೇ ಖುದ್ದು ರೋಟಿ ಮಾಡಲು ಪ್ರಾರಂಭಿಸಿದರು. ರೋಟಿ ಎಲ್ಲಾ ಆದ ಬಳಿಕ ಮಕ್ಕಳನ್ನು ಎಬ್ಬಿಸಿ ತನ್ನ ಕೈಗಳಿಂದಲೇ ಅವರಿಗೆ ತಿನ್ನಿಸಿದರು.
ಇದನ್ನೆಲ್ಲಾ ಗಮನಿಸುತ್ತಿದ್ದ ಅಮ್ಮ ನೀನು ನಮ್ಮ ನಾಡಿನ ಪ್ರಧಾನಿ ಆಗಬೇಕಿತ್ತು” ಎಂದು ಹೇಳಿದರು.
….
ಅಮ್ಮ ನಾನು ಬರುತ್ತಾ ಇರುತ್ತೇನೆ. ನೀವೇನೂ ತಲೆಬಿಸಿ ಮಾಡಬೇಡಿ ಎಂದು ಹೇಳುತ್ತಾ ಲೋಕ ಕಂಡ ಅತ್ಯುತ್ತಮ ಆಡಳಿತಗಾರ ಅಂದಿನ ಪ್ರಧಾನಿಯಾಗಿದ್ದ ಹ.ಉಮರುಲ್ ಖತ್ತಾಬ್ (ರ.ಅ) ನಗುತ್ತಾ ತನ್ನ ದಾರಿ ಹಿಡಿದರು…
…..
ಹ.ಉಮರ್ ಖತ್ತಾಬ್ (ರ.ಅ) ಪ್ರತಿನಿತ್ಯ ಊರು ಕೇರಿಗಳಲ್ಲಿ ಸುತ್ತಿ ಪ್ರಜೆಗಳ ಕಷ್ಟ ಕಾರ್ಪಣ್ಯಗಳನ್ನು ಸ್ವತಹ ಪರಿಶೀಲಿಸಿ ತಕ್ಷಣ ಪರಿಹಾರ ಮಾಡುತ್ತಿದ್ದವರು. ಗಾಂಧೀ ತಾತನೂ ಇದೇ ಉಮರ್ ಆಡಳಿತ ಬೇಕು ಎಂದು ಕನಸು ಕಂಡಿದ್ದರು….
- ಜಮುಕ್ರಿ
IslamKannada News Portal
