Home / ಲೇಖನಗಳು / ಹಲಾಲ್- ಹರಾಮ್

ಹಲಾಲ್- ಹರಾಮ್

ಅವರು ಪ್ರತಿದಿನ ಪ್ರಭಾತ ನಮಾಝ್ ಮಾಡಿದ ಕೂಡಲೇ ಮಸೀದಿಯಿಂದ ಗಡಿಬಿಡಿಯಲ್ಲಿ ಓಡಿ ಹೋಗುತ್ತಿದ್ದರು.ಇದನ್ನು ಗಮನಿಸುತ್ತಿದ್ದ ಪ್ರವಾದಿ(ಸ)ಯವರು ಒಂದು ದಿನ ಕೇಳಿದ್ರು. ನೀವು ನಮಾಝ್ ಆದ ಕೂಡಲೇ ಇಷ್ಟು ಅರ್ಜಂಟ್ ನಲ್ಲಿ ಯಾಕೆ ಹೋಗುವುದು. ಅದಕ್ಕವರು ಪ್ರವಾದಿವರ್ಯರೇ ಈಗ ಪ್ರಕೃತಿ ಫಲ ಕೊಡುವ ಸಮಯ. ನನ್ನ ಮನೆ ಪಕ್ಕದ ಮನೆಯವರ ಹಣ್ಣಿನ ಮರದಿಂದ ಹಣ್ಣು ನನ್ನ ಮನೆಯ ಅಂಗಳಕ್ಕೆ ಬಿದ್ದಿರುತ್ತವೆ. ಅದನ್ನು ನನ್ನ ಮಕ್ಕಳು‌ ತಿನ್ನುತ್ತಾರೋ ಎಂಬ ಹೆದರಿಕೆಯಿದೆ. ಅದು ಹಲಾಲ್ ಅಲ್ಲ. ಆ ಹಣ್ಣು ಅವರ ಅನುಮತಿಯಿಲ್ಲದೆ ತಿನ್ನುವುದು ಹರಾಮ್ ಆಗಿದೆ. ಅದಕ್ಕಾಗಿ ಅದನ್ನು ಹೆಕ್ಕಿ ಅವರ ಕೌಂಪೌಂಡು ಒಳಗೆ ಹಾಕಲು ಬೇಗನೆ ಮನೆಗೆ ಹೋಗುತ್ತೇನೆ.
…..
ಪ್ರವಾದಿವರ್ಯರು ಪ್ರತಿದಿನ ಮಾರ್ಕೆಟ್ಟಿಗೆ ಒಂದು ಸುತ್ತು ಬರುವ ವಾಡಿಕೆ ಇತ್ತು. ವ್ಯಾಪಾರಸ್ಥರ ಅಹವಾಲು ಕೇಳುತ್ತಿದ್ದರು. ಒಂದು ದಿನ ಒಂದು ಅಂಗಡಿಯ ಎದುರಿನಲ್ಲಿರಿಸಿದ್ದ ಚೀಲವನ್ನು ನೋಡಿದರು. ಅದಕ್ಕೆ ಕೈ ಹಾಕಿದಾಗ ಒಳಗಿನಿಂದ ಒದ್ದೆಯಾದ ದವಸ ಧಾನ್ಯ ಪ್ರವಾದಿಗಳ ಗಮನಕ್ಕೆ ಬಂತು. ನಿನ್ನೆ ಸುರಿದ ಮಳೆಯಿಂದಾಗಿ ದವಸ ಧಾನ್ಯ ಒದ್ದೆಯಾಗಿತ್ತು.
ಅಂಗಡಿಯಾತ ಅದು ಗೊತ್ತಾಗದಂತೆ ಅದರ ಮೇಲೆ ಒಣಗಿದ ದವಸ ಧಾನ್ಯ ಹಾಕಿದ್ದರು. ಪ್ರವಾದಿಗಳು ಅವನಿಗೆ ಉಪದೇಶ ನೀಡಿ ಈ ರೀತಿ ಮಾಡಬಾರದು ಇದು ಹರಾಮ್ ಎಂದು ಹೇಳಿದರು. ಇವು ಒಂದೆರಡು ಘಟನೆಗಳು. ಇಂತಹ ಹಲವಾರು ಘಟನೆಗಳು ಇಸ್ಲಾಮೀ ಇತಿಹಾಸ ಪುಟದಲ್ಲಿ ಕಾಣಸಿಗುತ್ತದೆ.
………
ಇಸ್ಲಾಮಿನಲ್ಲಿ ಹಲಾಲ್ ಎಂದರೆ ಸಕ್ರಮ, ನ್ಯಾಯಯುತವಾಗಿ ಸಂಪಾದಿಸಿ ತಿನ್ನುವುದು ಕುಡಿಯುವುದು, ಉಡುಪು ಧರಿಸುವುದು, ಮನೆ ಕಟ್ಟುವುದು, ದೇವ, ಧರ್ಮ ಬೇನ್ ಮಾಡಿದ ಸರ್ವ ಕಾರ್ಯಗಳನ್ನೂ ತ್ಯಜಿಸುವುದು ಎಂದಾಗಿದೆ.

ಇನ್ನೊಬ್ಬರಿಗೆ ಕಿಂಚಿತ್ತೂ ಅನ್ಯಾಯ ಆಗದೆ ಬದುಕುವುದು ಹಲಾಲ್ ಆಗಿದೆ. ಅದರ ವಿರುದ್ದ ಪದವೇ ಹರಾಮ್. ಕೇವಲ ಕೋಳಿಯನ್ನು ಚೂರಿಯಿಂದ ಕೊಯ್ಯುವುದು ಮಾತ್ರವೇ ಹಲಾಲ್ ಅಲ್ಲ. ಅನ್ಯಾಯವಾಗಿ ಸಂಪಾದಿಸಿ ಕೋಳಿಯನ್ನು ಚೂರಿ ಹಾಕಿ ಕೊಂದು ತಿಂದರೂ ಅದು ಹಲಾಲ್ ಆಗುವುದಿಲ್ಲ. ಕೋಳಿ ಮೊದಲೇ ಸತ್ತಿದ್ದರೆ ಅದನ್ನು ಚೂರಿ ಹಾಕಿದರೂ ಅದು ಹಲಾಲ್ ಆಗುವುದಿಲ್ಲ. ಅದೂ ಹರಾಮೇ ಆಗಿದೆ.

ಹಲಾಲ್ ಕೇವಲ ಆಹಾರಕ್ಕೆ ಮಾತ್ರ ಸೀಮಿತವಲ್ಲ. ಬಡ್ಡಿ ವ್ಯವಹಾರ, ವ್ಯಭಿಚಾರ, ವಂಚನೆ, ಲಂಚ, ಭೃಷ್ಟಾಚಾರ, ಮದ್ಯಪಾನ ಹೀಗೆ ಮನುಷ್ಯನ ಶರೀರಕ್ಕೆ ಮತ್ತು ಸಾಮಾಜಿಕ ಸ್ವಾಸ್ಥ್ಯ ಕ್ಕೆ ಕಂಟಕವಾಗುವ, ಎಲ್ಲವೂ ಹರಾಮ್ ಪಟ್ಟಿಯಲ್ಲಿ ಬರುತ್ತವೆ.
…….
ಹಲಾಲ್ ಅಂದ್ರೆ ಒಬ್ಬನಿಗೂ ಅನ್ಯಾಯ, ಅಕ್ರಮ ಮಾಡದ ಬದುಕು. ಹರಾಮ್ ಅಂದರೆ ದೇವನಿಗೆ ಪ್ರೀತಿಯಿಲ್ಲದ, ಪ್ರಿಯವಿಲ್ಲದ, ದೇವನು ನಿಷಿದ್ದಗೊಳಿಸಿದ ಬದುಕು.

ಹಲಾಲ್ – ಹರಾಮ್ ಬಗ್ಗೆ ಇಸ್ಲಾಮ್ ಬಹಳಷ್ಟು ಕಲಿಸಿಕೊಟ್ಟಿದೆ. ಪ್ರವಾದಿ.(ಸ.ಅ)ಯವರು ತಮ್ಮ ಜೀವನದಲ್ಲಿ ನಡೆದು ತೋರಿಸಿದ್ದಾರೆ. ಇನ್ನು ಅಧಿಕಾರ, ಹಣಕ್ಕಾಗಿ ತಮ್ಮನ್ನೇ ಸೇಲ್ ಮಾಡಿದ ರವಿ, ಮುತಾಲಿಕ್, ಕಾಳಿ ಮುಂತಾದ ಅನ್ಪಡ್ ಜನರು ಕಲಿಸಲಿಕ್ಕೇನಿಲ್ಲ. ಅವರೇ ಕಲಿತು ಕೊಂಡರಾಯಿತು.
…….
ಕೊನೆಯ ಮಾತು:- ಇಂತಹ ವಿಚಾರಗಳನ್ನು ಮತಾಂಧತೆಯಲ್ಲಿ ಮುನ್ನೆಲೆಗೆ ತಂದುದರಿಂದ ಪ್ರೀತಿಯ ಸಜ್ಜನ ಹಿಂದೂ ಬಾಂಧವರಿಗೆ ಈ ಬಗ್ಗೆ ಮನದಟ್ಟು ಮಾಡಿಕೊಡಲು ಅವಕಾಶ ಮಾಡಿಕೊಟ್ಟದ್ದಕ್ಕೆ ಈ ಮತಾಂಧ ಜನರನ್ನು ಅಭಿನಂದಿಸಲೇಬೇಕು. ಥೇಂಕ್ಸ್ ಹೇಳಲೇ ಬೇಕು.

ಜಮುಕ್ರಿ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …