Home / ಇಸ್ಲಾಮ್ ಇವರ ದೃಷ್ಟಿಯಲ್ಲಿ / ದಿನೇಶ್ ಕುಕ್ಕುಜಡ್ಕರವರ ದೃಷ್ಟಿಯಲ್ಲಿ ಮುಸ್ಲಿಮರು

ದಿನೇಶ್ ಕುಕ್ಕುಜಡ್ಕರವರ ದೃಷ್ಟಿಯಲ್ಲಿ ಮುಸ್ಲಿಮರು

ನಾನು ಗಮನಿಸಿದ ಮಟ್ಟಿಗೆ ಮುಸ್ಲಿಂ ಗೆಳೆಯರು ಆತ್ಮಹತ್ಯೆಯಂಥ ತಮ್ಮನ್ನು ತಾವು ಕೊಂದುಕೊಳ್ಳುವ ಅಪಾಯಗಳಿಗೆ ತೊಡಗುವುದು ಬಹಳವೇ ಕಮ್ಮಿ. ಅಥವಾ ಇಲ್ಲವೇ ಇಲ್ಲ ಎನ್ನುವಷ್ಟು ಕಮ್ಮಿ. ಆತ್ಮಹತ್ಯೆ ಹರಾಮ್ ಎಂಬ ಪಾಠ ಅವರಿಗೆ ಬಾಲ್ಯದಿಂದಲೂ ಬೋಧೆಯಾಗಿರುವ ಜತೆಜತೆಗೇ, ತುಂಬ ಪ್ರಾಕ್ಟಿಕಲ್ ಆಗಿ ಬದುಕುವ ನಿಜವಾದ ಜೀವನ ಪ್ರೀತಿಯ ಜೀವಿಗಳಿವರು ಎಂಬುದನ್ನೂ ಗಮನಿಸಬೇಕು. ಎಂಥದೇ ಕಷ್ಟ ನಷ್ಟ ತೊಂದರೆ ತಾಪತ್ರಯಗಳೇ ಬರಲಿ, ಇವತ್ತು ಹಡಗಿನ ಮಾಲೀಕನಾಗಿದ್ದವ ನಾಳೆ ಗುಜರಿ ಹೆಕ್ಕಲಿಕ್ಕೂ ತಯ್ಯಾರು. ಹಾಗಾಗಿ ಬದುಕಿನಲ್ಲಿ ಈ ಗೆಳೆಯರು ಸೋಲುವುದಿಲ್ಲ.

ಕಡಿಮೆ ದುಡಿಮೆ ಮಾಡಿ ಹೆಚ್ಚು ಸಂಪಾದಿಸುವ ಉಪಾಯ ಇತ್ತೀಚಿನ ಟ್ರೆಂಡು. ಆದರೆ ಕಂಪ್ಯಾರಿಟೀವ್ಲೀ ಮುಸ್ಲಿಂ ಸೋದರರು ಆ ಪ್ರಯೋಗಕ್ಕೆ ಕೈಹಾಕಿರುವುದು ಬಹಳವೇ ಕಡಿಮೆಯೇ. ಮೈಮುರಿದು ದುಡಿಯಬೇಕು. ಹೆಚ್ಚು ಸಂಪಾದಿಸಬೇಕು ಎಂಬುದು ಇವರ ಧ್ಯೇಯ.

ಅಕಸ್ಮಾತ್ ಯಾವುದೋ ಅಚಾತುರ್ಯದಿಂದಲೋ ಕಾಯಿಲೆ ಕಸಾಲೆಯಿಂದಲೋ ಒಬ್ಬ ಸೋತರೂ ಸಮುದಾಯದೊಳಗೇ ಒಬ್ಬರನ್ನೊಬ್ಬರು ಆಧರಿಸಿ ಆತುಕೊಳ್ಳುವ ಅಪ್ಪಟ ಪ್ರೀತಿಯ ವಿಶಾಲ ಪ್ರಜ್ಞೆಯ ಮಾನವೀಯ ತಳಹದಿಯಲ್ಲೇ ಒಟ್ಟಾಗಿ ಬದುಕುತ್ತಿರುತ್ತಾರೆ. ಇದು ಸಮಾಜದ ಇತರರಿಗೂ ಮಾದರಿಯಾಗಬೇಕು.

ಕುಟಿಲ ತಂತ್ರಗಳಿಂದ ಈ ಸಮುದಾಯವನ್ನು ಐಸೊಲೇಟ್ ಮಾಡುವುದು ಸುಲಭಸಾಧ್ಯವಲ್ಲ ಮತ್ತು ಆಗಲೂಬಾರದು. ಜಾತ್ರೆ ವ್ಯಾಪಾರ ಅಲ್ಲದಿದ್ದರೆ ಇನ್ನೆಂತದೋ ನೀತಿಗೆಡದ ದಾರಿಗಳು…. ಸೋಲುವುದು ಸೋಮಾರಿಗಳು ಮಾತ್ರ.

– ದಿನೇಶ್ ಕುಕ್ಕುಜಡ್ಕ
Facebook Wall ನಿಂದ

SHARE THIS POST VIA

About editor

Check Also

ಲೋಕದ ನಾಗರಿಕತೆಯನ್ನು ಉಳಿಸಿದವರು ಮುಹಮ್ಮದ್(ಸ) – ಜೆ.ಎಚ್. ಡಿನಿಸನ್ ಮುಹಮ್ಮದ್(ಸ)

ಲೋಕದ ನಾಗರಿಕತೆಯನ್ನು ಉಳಿಸಿದವರು ಐದನೇ ಮತ್ತು ಆರನೇ ಶತಮಾನದಲ್ಲಿ ನಾಗರಿಕ ಲೋಕವು ಅವ್ಯವಸ್ಥೆಯ ಅಂಚಿನಲ್ಲಿತ್ತು. ನಾಗರಿಕತೆಯನ್ನು ಹುಟ್ಟು ಹಾಕುವ, ಮತ್ತು …

Leave a Reply

Your email address will not be published. Required fields are marked *