Home / ಲೇಖನಗಳು / ‘ಹಲಾಲ್’ ಕೆಲವು ಮಾಹಿತಿಗಳು.

‘ಹಲಾಲ್’ ಕೆಲವು ಮಾಹಿತಿಗಳು.

1. ಹಲಾಲ್ ಎಂದರೆ ಶುದ್ಧ, ಉಪಯೋಗಿಸಲು ಯೋಗ್ಯವಾದದ್ದು ಎಂದು ಅರ್ಥ.

2. ಹಲಾಲ್ ಎಂದರೆ ಪ್ರಾಣಿಯನ್ನು ಮಾಂಸಕ್ಕಾಗಿ ಕೊಲ್ಲುವ ಒಂದು ಕ್ರಮ ಎಂಬ ನಂಬಿಕೆಯಿದೆ. ಅದು ಪೂರ್ತಿ ನಿಜ ಅಲ್ಲ.  ಹಲಾಲ್ ಮಾಂಸ ಎಂದರೆ ತಿನ್ನಲು ಯೋಗ್ಯವಾದ ಮಾಂಸ ಎಂದು ಅರ್ಥ. ಕೋಳಿ ಅಂಗಡಿಯ ಮಾಲಕರು ಇದನ್ನು ಹಲಾಲ್ ಕಟ್ ಎಂದು ಸೀಮಿತವಾಗಿ ವ್ಯಾಖ್ಯಾನಿಸುತ್ತಿದ್ದಾರೆ ಅಷ್ಟೇ. ಮೀನನ್ನು ಯಾರೂ ಹಲಾಲ್ ಕಟ್ ಮಾಡಿ ತಿನ್ನುವುದಿಲ್ಲ.

3. ಹಲಾಲ್ ಮಾಂಸ ಎಂದರೆ, ಅದನ್ನು ತಿನ್ನುವುದಕ್ಕಾಗಿಯೇ ಕೊಯ್ದಿರಬೇಕು. ಅನಾರೋಗ್ಯದಿಂದ ಅಥವಾ ಇನ್ನಿತರ ಕಾರಣದಿಂದ ಸತ್ತ ಯಾವುದೇ ಪ್ರಾಣಿ ಪಕ್ಷಿ ಹಲಾಲ್ ಅಲ್ಲ.

4. ಸಾಯಿಸುವಾಗ ಮಾಂಸದಲ್ಲಿ ರಕ್ತ ಹೆಪ್ಪುಗಟ್ಟಿರಬಾರದು. ರಕ್ತ ಸಂಪ್ಪೂರ್ಣ ಹೊರ ಹೋಗಿರಬೇಕು. ಅದು ಹಲಾಲ್.

5. ಯಾವುದೇ ಪ್ರಾಣಿಯನ್ನು ಕದ್ದು ತಂದಿರಬಾರದು. ಕದ್ದು ತಂದ ಪ್ರಾಣಿ, ಪಕ್ಷಿಗಳು ಹಲಾಲ್ ಅಲ್ಲ .

6. ಮುಸ್ಲಿಮರ ಪ್ರಕಾರ ಅವರಿಗೆ ಅನಾರೋಗ್ಯಕರ ಎಂಬ ಕಾರಣ ಒಡ್ಡಿ ಕೆಲವು ಪ್ರಾಣಿಗಳ ಮಾಂಸ ನಿಷೇಧಿಸಲಾಗಿದೆ. ಅವರ ಪಾಲಿಗೆ ಅದು ಹಲಾಲ್ ಅಲ್ಲ.

7. ಮೀನು ಹಲಾಲ್ ಮಾಂಸ . ಹಂದಿ ಮುಸ್ಲಿಮರಿಗೆ ಹಲಾಲ್ ಅಲ್ಲ.

8. ಇಸ್ಲಾಮ್ ಧರ್ಮದಲ್ಲಿ ಹಲಾಲ್ ಎನ್ನುವುದು ಮಾಂಸಕ್ಕೆ ಅಷ್ಟೇ ಅನ್ವಯ ಆಗುವುದಲ್ಲ. ಇತರ ಆಹಾರಗಳಿಗೂ ಅನ್ವಯ ಆಗುತ್ತದೆ.

9. ಒಬ್ಬ ಬಡ್ಡಿ ವ್ಯಾಪಾರಿ ಬಡ್ಡಿಯ ಹಣದಿಂದ ಕೊಡುವ ಆಹಾರ ಹಲಾಲ್ ಅಲ್ಲ. ಬಡ್ಡಿ ವ್ಯಾಪಾರಿಯ ಹಣ ಹಲಾಲ್ ಅಲ್ಲದೆ ಇರುವುದರಿಂದ ಆ ಹಣದಿಂದ ನಾವು ಉಣ್ಣುವ ಯಾವುದೇ ಆಹಾರಗಳು ಹಲಾಲ್ ಅಲ್ಲ.

10. ಮದ್ಯ ಮತ್ತು ಲಾಟರಿಯಿಂದ ಬಂದ ಹಣ ಹಲಾಲ್ ಅಲ್ಲ. ಆದುದರಿಂದ ಅದರಿಂದ ಬಂದ ಹಣದಿಂದ ಕೊಂಡು ತಿನ್ನುವ ಆಹಾರ ಹಲಾಲ್ ಅಲ್ಲ.

11. ಜೂಜಾಟದಿಂದ ಸಿಕ್ಕಿದ ಹಣ ಮತ್ತು ಆಹಾರ ಹಲಾಲ್ ಅಲ್ಲ.

12. ಒಬ್ಬ ಝಕಾತ್ ನೀಡದೆ ಉಳಿಸಿದ ಹಣದಿಂದ ತಿನ್ನುವ ಆಹಾರ ಹಲಾಲ್ ಅಲ್ಲ. ಒಬ್ಬನ ಸಂಪತ್ತಿನ ಶೇ . 2.5 ರಷ್ಟು ಹಣ ಅವನದಲ್ಲ. ಆ ಹಣವನ್ನು ಕೊಡದೆ ಉಳಿಸಿದರೆ ಅದು ಹಲಾಲ್ ಹಣ ಅಲ್ಲ.

13. ವರದಕ್ಷಿಣೆಯ ಹಣ ಹಲಾಲ್ ಹಣ ಅಲ್ಲ.

14. ಕದ್ದು ತಂದ ಯಾವುದೇ ಆಹಾರ ಹಲಾಲ್ ಅಲ್ಲ.

ಹಲಾಲ್ ಎನ್ನುವ ಪದಕ್ಕೆ ಅತ್ಯಂತ ವಿಶಾಲ ಅರ್ಥವಿದೆ. ಕೇವಲ ಹಲಾಲ್ ಕಟ್ ಎನ್ನುವ ಕೋಳಿ ಮಾಂಸ ಮಾರಾಟಗಾರರ ಪದಗಳಿಗೆ ಜೋತು ಬಿದ್ದು ಹಲಾಲ್ ಮಾಂಸ ಪದವನ್ನು ಸಂಕುಚಿತಗೊಳಿಸಬಾರದು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …