ಕಾಶಿಪುರ: 20 ವರ್ಷಗಳ ಹಿಂದೆ ನಿಧನರಾದ ಬ್ರಜನಂದನ್ ಪ್ರಸಾದ್ ರಸ್ತೋಗಿ ಅವರು ತಮ್ಮ ಕೃಷಿ ಭೂಮಿಯಲ್ಲಿ ನಾಲ್ಕು ಬಿಘಾ (0.80 ಎಕರೆ) ಸ್ಥಳವನ್ನು ಈದ್ಗಾ ವಿಸ್ತರಣೆಗಾಗಿ ದಾನ ಮಾಡಲು ಬಯಸುವುದಾಗಿ ತಮ್ಮ ನಿಕಟ ಸಂಬಂಧಿಗಳಿಗೆ ತಿಳಿಸಿದ್ದರು. ಆದರೆ, ತಂದೆಯ ಕೊನೆಯ ಆಸೆಯನ್ನು 20 ವರ್ಷಗಳ ಬಳಿಕ ಮಕ್ಕಳು ಈಡೇರಿಸಿದ ಘಟನೆಯೊಂದು ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಕಾಶಿಪುರದಲ್ಲಿ ವರದಿಯಾಗಿದೆ.
ತಮ್ಮ ತಂದೆಯ ಕೊನೆಯ ಆಸೆಯಂತೆ ಇಬ್ಬರು ಹಿಂದೂ ಸಹೋದರಿಯರು ಇಲ್ಲಿನ ಈದ್ಗಾ ವಿಸ್ತರಣೆಗೆ 1.5 ಕೋಟಿ ರೂ. ಗೂ ಹೆಚ್ಚು ಮೌಲ್ಯದ ಭೂಮಿಯನ್ನು ದೇಣಿಗೆಯಾಗಿ ನೀಡಿದ್ದಾರೆ.
ಈದ್ಗಾ ವಿಸ್ತರಣೆಗಾಗಿ ದಾನ ಮಾಡಲು ಬಯಸುವುದಾಗಿ ಬ್ರಜನಂದನ್ ಪ್ರಸಾದ್ ರಸ್ತೋಗಿಯವರು ತಮ್ಮ ನಿಕಟ ಸಂಬಂಧಿಗಳಿಗೆ ತಿಳಿಸಿದ್ದರು. ಆದರೆ, ತಮ್ಮ ಕೊನೆಯ ಆಸೆಯನ್ನು ತಮ್ಮ ಮಕ್ಕಳೊಂದಿಗೆ ಹಂಚಿಕೊಳ್ಳುವ ಮೊದಲೇ, ಜನವರಿ 2003ರಲ್ಲಿ ಅವರು ನಿಧನರಾದರು.
ದೆಹಲಿ ಮತ್ತು ಮೀರತ್ನಲ್ಲಿ ವಾಸಿಸುವ ಅವರ ಇಬ್ಬರು ಪುತ್ರಿಯರಾದ ಸರೋಜ್ ಮತ್ತು ಅನಿತಾ ಅವರಿಗೆ ಇತ್ತೀಚೆಗೆ ಸಂಬಂಧಿಕರ ಮೂಲಕ ತಮ್ಮ ತಂದೆಯ ಕೊನೆಯ ಆಸೆ ತಿಳಿದಿದ್ದು, ತಕ್ಷಣವೇ ಕಾಶಿಪುರದಲ್ಲಿ ವಾಸಿಸುವ ಅವರ ಸಹೋದರ ರಾಕೇಶ್ ರಸ್ತೋಗಿ ಅವರನ್ನು ಸಂಪರ್ಕಿಸಿ ಒಪ್ಪಿಗೆಯನ್ನು ಪಡೆದು ತಕ್ಷಣವೇ ತಂದೆಯ ಕೊನೆಯ ಆಸೆ ಈಡೇರಿಸಿದ್ದಾರೆ.
ತಂದೆಯ ಕೊನೆಯ ಆಸೆಯನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿತ್ತು. ನನ್ನ ಸಹೋದರಿಯರು ಅವರ ಆತ್ಮಕ್ಕೆ ಶಾಂತಿ ನೀಡುವಂತಹ ಕೆಲಸವನ್ನು ಮಾಡಿದ್ದಾರೆ ಎಂದು ಸಹೋದರ ರಾಕೇಶ್ ರಸ್ತೋಗಿ ಹೇಳಿದ್ದಾರೆ. ದೇಶದ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಕೋಮು ಉದ್ವಿಗ್ನತೆ ವರದಿಯಾಗುತ್ತಿರುವ ಬೆನ್ನಲ್ಲೇ ಸರೋಜ್ ಮತ್ತು ಅನಿತಾ ಎಂಬ ಈ ಯುವತಿಯರ ನಿರ್ಧಾರ ಪ್ರಶಂಸೆಗೆ ಪಾತ್ರವಾಗಿದೆ.
IslamKannada News Portal
