ಮಕ್ಕಾದ ಪ್ರವೇಶ ದ್ವಾರಗಳಲ್ಲಿ 5 ಪಾರ್ಕಿಂಗ್ ಕೇಂದ್ರಗಳನ್ನು ತಯಾರಿಸಲಾಗಿದೆ. ಖಾಸಗಿಯಾಗಿ ಹಜ್ ಕರ್ಮ ನಿರ್ವಹಿಸಲು ಬರುವ ಯಾತ್ರಿಕರು ಈ ಪಾರ್ಕಿಂಗ್ ಕೇಂದ್ರಗಳಲ್ಲಿ ತಮ್ಮ ವಾಹನವನ್ನು ನಿಲುಗಡೆಗೊಳಿಸಬೇಕು. ಇಲ್ಲಿಂದ ಹೊರಗೆ ಹೋಗುವುದಕ್ಕೆ ಬಸ್ ವ್ಯವಸ್ಥೆ ಇದೆ. ಹಜ್ ಸಂದರ್ಭದಲ್ಲಿ ಇಲ್ಲಿಗೆ ಬರುವ ಇತರ ವಾಹನಗಳನ್ನು ಕೂಡ ಇಲ್ಲಿಯೇ ಪಾರ್ಕಿಂಗ್ ಮಾಡಬೇಕು.
ಈ ಪಾರ್ಕಿಂಗ್ ಸ್ಥಳದಲ್ಲಿ ವಿವಿಧ ಸೌಲಭ್ಯಗಳಿದ್ದು ಟಾಯ್ಲೆಟ್ ಗಳು, ಯಾತ್ರಿಕರಿಗೆ ಆರಾಮ ಮಾಡುವುದಕ್ಕೆ ಮತ್ತು ಕಾಯುವುದಕ್ಕೆ ಬೇಕಾದ ವ್ಯವಸ್ಥೆಗಳು, ಮಸೀದಿಗಳು ಕೂಡ ಇಲ್ಲಿವೆ.
ಹಜ್ ಗೆ ಸೌದಿ ಅರೇಬಿಯಾ ಭಾರಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ. ಹಜ್ ನ ಭಾಗವಾಗಿ ಮಕ್ಕಾದ ಪ್ರವೇಶ ದ್ವಾರಗಳಲ್ಲಿ ಪಾರ್ಕಿಂಗ್ ಗೆ ಭಾರಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಐದು ಪಾರ್ಕಿಂಗ್ ಕೇಂದ್ರಗಳಲ್ಲಿ 50,000 ಕ್ಕಿಂತಲೂ ಹೆಚ್ಚು ವಾಹನಗಳ ಪಾರ್ಕ್ ಮಾಡುವುದಕ್ಕೆ ಬೇಕಾದ ಸೌಲಭ್ಯಗಳನ್ನು ಸಜ್ಜೀಕರಿಸಲಾಗುತ್ತಿದೆ.
IslamKannada News Portal
