Home / ಲೇಖನಗಳು / ನಾನು, ನನಗೆ, ನನ್ನದು

ನಾನು, ನನಗೆ, ನನ್ನದು

– ಅಬೂ ಝೀಶಾನ್

ಸಂಜೆಯ ಹೊತ್ತಾಗಿತ್ತು. ಆ ಅಂಗಡಿಗೆ ಒಬ್ಬ ಯಹೂದಿ ಆಗಮಿಸಿದ. ಆತನಿಗೆ ದಿನಸಿ ಬೇಕಾಗಿತ್ತು. ಆ ಅಂಗಡಿಯವ ನಯವಾಗಿ ಹೇಳಿದ, “ನೋಡು, ನನಗೆ ಬೆಳಿಗ್ಗಿನಿಂದ ವ್ಯಾಪಾರ ಆಗಿದೆ. ಆದರೆ ಎದುರಿನ ಅಂಗಡಿಯವನಿಗೆ ಬೆಳಿಗ್ಗಿನಿಂದ ಯಾವುದೇ ವ್ಯಾಪಾರವೂ ಆಗಿಲ್ಲ. ನನ್ನ ಅಂಗಡಿಯಲ್ಲಿ ಸಿಗುವುದೆಲ್ಲವೂ ಅಲ್ಲಿಯೂ ಸಿಗುತ್ತದೆ. ತಾವು ದಯವಿಟ್ಟು ಆ ಅಂಗಡಿಯಿಂದ ಸಾಮಾನುಗಳನ್ನು ಖರೀದಿಸಿ.”

ಇಂದು ಈ ಲೋಕವು “ನಾನು, ನನಗೆ, ನನ್ನದು” ಎಂಬ ಸಿದ್ಧಾಂತದೊಂದಿಗೆ ಜೀವಿಸುತ್ತಿದೆ. ಎಷ್ಟು ಸಿಕ್ಕಿದರೂ ಸಾಲದು, ಎಲ್ಲವೂ ನನಗೆ ಸಿಗಬೇಕು ಎಂಬುದು ಹೆಚ್ಚಿನವರ ಭಾವನೆ. ಕೆಲವರಂತೂ ಒಂದು ಹೆಜ್ಜೆ ಮುಂದೆ ಹೋಗಿ ಇತರರಿಗೆ ದೊರಕುವುದನ್ನು ತಡೆದು ತನಗೆ ಅದು ಸಿಗಬೇಕೆಂದು ವಕ್ರ ಮಾರ್ಗವನ್ನು ಹಿಡಿಯುತ್ತಾರೆ. ಆದರೆ ನಿಜವಾದ ಸತ್ಯವಿಶ್ವಾಸಿ ಎಂದೂ ಹೀಗೆ ಆಲೋಚಿಸಲಾರ. ಮಾಡಲಾರ.

ಏಕೆಂದರೆ ಪ್ರವಾದಿ(ಸ) ಹೇಳಿದರು, ಮಗು ಹುಟ್ಟಿದಾಗಲೇ ಅದರ ರಿಝ್ಕ್(ಆಹಾರವನ್ನು) ಅನ್ನು ಅಲ್ಲಾಹನು ಬರೆದಿಟ್ಟಿರುತ್ತಾನೆ. ಹಾಗಾಗಿ ನಮಗೆ ನಷ್ಟ ಸಂಭವಿಸುವ ಬಗ್ಗೆ ಯಾವುದೇ ಭಯ ಅಥವಾ ವ್ಯಥೆ ಇರುವುದಿಲ್ಲ. ನಾವು ಹಲಾಲ್ ರೀತಿಯಲ್ಲಿ ಮಾಡುವ ಪ್ರಯತ್ನ ಮಾಡಿ ನಂತರ ನಮಗೆ ಏನು ಸಿಗುವುದೋ ಅದುವೇ ಅಲ್ಲಾಹನು ನಮಗೆ ನಿಗದಿಪಡಿಸಿದ ರಿಝ್ಕ್ ಆಗಿದೆ ಎಂದು ತೃಪ್ತಿ ಪಡಬೇಕು.

ಇಂದು ಭಯ ಯಾವ ರೀತಿ ಮೂಡಿದೆಯೆಂದರೆ ಒಬ್ಬನ ಅಂಗಡಿಯ ಎದುರು ಅಂತಹದೇ ಅಂಗಡಿಯನ್ನು ಬೇರೆ ಯಾರಾದರೂ ತೆರೆದರೆ, ನಮ್ಮ ಲಾಭ ಅವನಿಗೆ ಹೋಗುತ್ತದೋ ಎಂಬುದಾಗಿರುತ್ತದೆ. ಆದರೆ ಅಂತಹ ಹತ್ತು ಅಂಗಡಿಗಳು ನಮ್ಮ ಅಂಗಡಿಯ ಎದುರು ತೆರೆದರೂ ಅಲ್ಲಾಹನು ನಮಗೆ ನಿಗದಿಪಡಿಸಿದ ಲಾಭ ಸಿಕ್ಕಿಯೇ ತಿರುವುದು ಎಂದು ಆಲೋಚಿಸುವಾಗ ನಾವು ನಿಶ್ಚಿಂತರಾಗುತ್ತೇವೆ.

ಇಂತಹ ಆಲೋಚನೆಗಳು ಮನದಲ್ಲಿ ಬಂದಾಗ, “ನಾನು, ನನಗೆ, ನನ್ನದು” ಎಂಬ ವಿಚಾರವನ್ನು ಕೈ ಬಿಟ್ಟು “ನಾವು, ನಮಗೆ, ನಮ್ಮದು” ಎಂಬ ವಿಚಾರಧಾರೆಯಲ್ಲಿ ಜೀವನ ನಡೆಸಲು ತೊಡಗುತ್ತೇವೆ. ಹೀಗಾದಾಗ ನಮ್ಮ ಸಮಾಜವೂ ಸುಧಾರಣೆಯಾಗುವುದು ಹಾಗೂ ಸಹೋದರತೆ ನಮ್ಮ ನಡುವೆ ಬೆಳೆಯುವುದು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …