ಅಲ್ಲಾಹನ ಅಪಾರವಾದ ಅನುಗ್ರಹದಿಂದ ಅವನು ಅನುಗ್ರಹಿಸಿದ ಉಸಿರಾಟದಿಂದ ಇನ್ನೊಂದು ಹೊಸ ವರುಷಕ್ಕೆ ನಾವೆಲ್ಲರೂ ಕಾಲಿರಿಸಿದ್ದೇವೆ. ಅಲ್ಲಾಹನ ಷಹರ್(ಷಹರುಲ್ಲಾಹ್) ಷಹರುಲ್ ಮುಹರ್ರಮ್ ಎಂದು ಅಲ್ಲಾಹನು ಗೌರವಿಸಿದ ಗೌರವಾನ್ವಿತ ತಿಂಗಳಲ್ಲಿ ಹೊಸ ಹುರುಪಿನೊಂದಿಗೆ, ದೃಢ ನಿರ್ಧಾರದೊಂದಿಗೆ, ಪ್ರಬುದ್ಧತೆಯೊಂದಿಗೆ, ಸಮಯ ಪಾಲನೆಯೊಂದಿಗೆ ಶತ್ರುತ್ವದ ವಿರುದ್ಧ, ಶೈತಾನನ ವಿರುದ್ಧ, ದೇಹೇಚ್ಛೆಯ ವಿರುದ್ಧ, ಹೋರಾಡುತ್ತಾ ಆಶಾಭಾವನೆ ಯೊಂದಿಗೆ, ಸೃಷ್ಟಿಕರ್ತನೊಂದಿಗಿರುವ ಬಲವಾದ ನಂಬಿಕೆ ಯೊಂದಿಗೆ, ಹೊಸ ವರುಷದಿಂದ ಹೊಸದಾದ, ಬದಲಾವಣೆಯಿಂದ ಕೂಡಿದ ಕರ್ತವ್ಯ ಪ್ರಜ್ಞೆಯೊಂದಿಗೆ ಹೊಸ ಜೀವನಕ್ಕೆ ನಾಂದಿಯಾಗಲಿ ಎಂಬ ಪ್ರಾರ್ಥನೆಯೊಂದಿಗೆ ಮುಂದಕ್ಕೆ ಹೆಜ್ಜೆ ಇರಿಸೋಣ. ಪ್ರತಿ ಹೆಜ್ಜೆಯೊಂದಿಗೆ ಸೃಷ್ಟಿ ಕರ್ತನಿದ್ದಾನೆ, ಅವನು ನಮ್ಮ ಕರೆಗೆ ಉತ್ತರಿಸಲು ಆತುರನಿಗಿದ್ದಾನೆ,. ಆದ್ದರಿಂದ ನಮ್ಮನ್ನಗಲಿದ ನಮ್ಮ ಆಪ್ತರಿಗಾಗಿ ಪ್ರಾರ್ಥಿಸುತ್ತಾ ……..
ಕ್ರಮಬದ್ಧವಾದ ಶಿಸ್ತಿನ ಜೀವನ ನಮ್ಮದಾಗಲಿ. ಪ್ರತಿ ಕ್ಷಣವೂ ಕೆಡುಕಿನ ನಿರ್ಮೂಲನೆ ಮತ್ತು ಒಳಿತಿನ ಸಂಸ್ಥಾಪನೆಗಾಗಿ ಆಯ್ಕೆಗೊಂಡವರು ನಾವು ಎಂಬ ಜವಾಬ್ದಾರಿಯ ಪ್ರಜ್ಞೆ ಇರಲಿ .
ಬದಕಿಗೊಂದು ಲಿಖಿತ ದಿನಚರಿ ಇರಲಿ. ಅದು ಅಚ್ಚುಕಟ್ಟಾಗಿರಲಿ.
ಸರ್ವ ಶಕ್ತನು ನಮ್ಮ ನ್ನೂ ನಮ್ಮ ಮಕ್ಕಳನ್ನೂ ನಮ್ಮನ್ನಗಲಿದವರನ್ನೂ ಇಹಪರ ವಿಜಯಿಗಳನ್ನಾಗಿಸಲಿ. ನಮ್ಮ ಮಾತಾಪಿತರ ಮೇಲೆ ಕರುಣಿ ತೋರಲಿ. ಪ್ರತಿ ಹೊಸ ಉಸಿರು ಬದಲಾವಣೆ ತರಲಿ
✍️ ರೈಹಾನ್.ವಿ.ಕೆ
IslamKannada News Portal
